Gynaecologic Cancers: ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ನ ಆರಂಭಿಕ ಲಕ್ಷಣಗಳನ್ನು ತಿಳಿದುಕೊಳ್ಳಿ
ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಏನಾದರೂ ಆರೋಗ್ಯ ಸಮಸ್ಯೆಗಳು ಕಂಡು ಬಂದರೆ ತಕ್ಷಣ ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಯಾವುದೇ ಮುಜುಗರ ಬೇಡ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
ಕೆಲವು ರೋಗ ಲಕ್ಷಣಗಳು ನಿಮಗೆ ಸಾಮಾನ್ಯವಾಗಿ ಎಂದೆನಿಸಿದರೂ ಕೂಡ ಕಾಲ ಕ್ರಮೇಣ ಇದು ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಅಸಹಜ ಗರ್ಭಾಶಯದ ರಕ್ತಸ್ರಾವ, ಯೋನಿಯಲ್ಲಿನ ತೊಂದರೆ, ಋತುಬಂಧ ಸಮಯದಲ್ಲಿ ಅತಿಯಾದ ರಕ್ತಸ್ರಾವ, ಶ್ರೋಣಿಯ ನೋವು ಅಥವಾ ಒತ್ತಡ, ಕಿಬ್ಬೊಟ್ಟೆಯ ಹಿಗ್ಗುವಿಕೆ, ಮೂತ್ರ ಸಂಬಂಧಿತ ಸಮಸ್ಯೆಗಳು ಮತ್ತು ಮಲಬದ್ಧತೆ, ನಿರಂತರವಾದ ಯೋನಿಯ ತುರಿಕೆ ಮುಂತಾದ ಲಕ್ಷಣಗಳು ಕಂಡು ಬಂದರೆ ಎಂದಿಗೂ ನಿರ್ಲಕ್ಷ್ಯಿಸದಿರಿ. ಇಂತಹ ಸಮಸ್ಯೆಗಳು ಕಂಡು ಬಂದರೆ ತಕ್ಷಣ ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಯಾವುದೇ ಮುಜುಗರ ಬೇಡ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಆರಂಭಿಕ ಹಂತದಲ್ಲಿಯೇ ಗುರುತಿಸಿ ಯಾವುದೇ ವಿಳಂಬ ಮಾಡದೆ ಚಿಕಿತ್ಸೆ ನೀಡಿದರೆ ಕ್ಯಾನ್ಸರ್ ಗಳನ್ನು ಗುಣಪಡಿಸಬಹುದು.
ಸ್ತ್ರೀರೋಗ ಕ್ಯಾನ್ಸರ್ ತಡೆಗಟ್ಟಲು ಈ ಅಂಶಗಳನ್ನು ಪಾಲಿಸಿ:
- ತಂಬಾಕು, ಸಿಗರೇಟ್ ಮತ್ತು ಆಲ್ಕೋಹಾಲ್ ಸೇವನೆಯನ್ನು ತಪ್ಪಿಸಿ.
- ಆರೋಗ್ಯಕರ ತೂಕವನ್ನು ಇಟ್ಟುಕೊಳ್ಳಿ.
- ನಿಯಮಿತವಾಗಿ ವ್ಯಾಯಾಮ ಮಾಡಿ.
- ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಸೇವಿಸಿ. ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಿ.
- ಹೆಪಟೈಟಿಸ್ ಬಿ ಮತ್ತು ಎಚ್‌ಪಿವಿ ತಡೆಗಟ್ಟಲು ವ್ಯಾಕ್ಸಿನೇಷನ್ ತೆಗೆದುಕೊಳ್ಳಿ.
- 6 ತಿಂಗಳಿಗೊಮ್ಮೆಯಾದರೂ ವೈದ್ಯಕೀಯ ಆರೋಗ್ಯ ತಪಾಸಣೆಗಳನ್ನು ಪಡೆಯಿರಿ.
ಇದನ್ನೂ ಓದಿ: ಗರ್ಭಿಣಿಯರು ಪ್ಯಾರೆಸಿಟಮಾಲ್ ಯಾಕೆ ತೆಗೆದುಕೊಳ್ಳಬಾರದು?
ಸ್ತ್ರೀರೋಗ ಕ್ಯಾನ್ಸರ್ ಗರ್ಭಕಂಠ, ಅಂಡಾಶಯ, ಗರ್ಭಾಶಯದ ಕಾರ್ಪಸ್ ಮತ್ತು ಯೋನಿ ಕ್ಯಾನ್ಸರ್ ಸೇರಿದಂತೆ ಸ್ತ್ರೀ ಸಂತಾನೋತ್ಪತ್ತಿ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಸ್ತ್ರೀರೋಗ ಕ್ಯಾನ್ಸರ್ ತಡೆಗಟ್ಟಲು ಎಚ್ ಪಿವಿ ಲಸಿಕೆ ಹಾಕಿಸುವಂತೆ ತಜ್ಞರು ಸೂಚಿಸುತ್ತಾರೆ. ನಿಯಮಿತ ತಪಾಸಣೆ ಮಾಡಿಸಿ, ಚಿಕಿತ್ಸೆ ಪಡೆಯಬೇಕು. ಇದಲ್ಲದೇ ಹಾರ್ಮೋನ್ ಬದಲಾವಣೆ ಚಿಕಿತ್ಸೆಯನ್ನು ಪಡೆದುಕೊಳ್ಳಲು ಅಥವಾ ಗರ್ಭನಿರೋಧಕ ಗುಳಿಗೆಗಳ ಸೇವನೆ ಮಾಡಲು ನಿಮಗೆ ಹೇಳಲಾಗಿದ್ದರೆ, ಅದರಲ್ಲಿನ ಸಂಭವನೀಯ ಅಪಾಯಗಳ ಕುರಿತು ನಿಮ್ಮ ವೈದ್ಯರಲ್ಲಿ ವಿಚಾರಿಸಿ ಮುಂದುವರಿಯಿರಿ. ಇಲ್ಲದಿದ್ದರೆ ಇದು ಕೂಡ ಕ್ಯಾನ್ಸರ್ಗೆ ಕಾರಣವಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: