AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೇಮ್​ ಚೇಂಜರ್​ ಬಿಡುಗಡೆ: ಹೇಗಿದೆ ರಾಮ್ ಚರಣ್ ಸಿನಿಮಾದ ಫಸ್ಟ್​ ಹಾಫ್​?

ನಿರ್ದೇಶಕ ಶಂಕರ್​ ಮತ್ತು ಟಾಲಿವುಡ್​ ನಟ ರಾಮ್​ ಚರಣ್ ಅವರ ಕಾಂಬಿನೇಷನ್​ನಲ್ಲಿ ‘ಗೇಮ್ ಚೇಂಜರ್​’ ಸಿನಿಮಾ ಮೂಡಿಬಂದಿದೆ. ಅದ್ದೂರಿಯಾಗಿ ನಿರ್ಮಾಣವಾದ ಈ ಸಿನಿಮಾದಲ್ಲಿ ರಾಮ್ ಚರಣ್ ಅವರು ಹಲವು ಶೇಡ್​ ಇರುವ ಪಾತ್ರ ಮಾಡಿದ್ದಾರೆ. ಟ್ರೇಲರ್ ಗಮನ ಸೆಳೆದಿತ್ತು. ಈಗ ಸಿನಿಮಾ ತೆರೆಕಂಡಿದ್ದು, ಮೊದಲಾರ್ಧದ ವಿಮರ್ಶೆ ಇಲ್ಲಿದೆ.

ಗೇಮ್​ ಚೇಂಜರ್​ ಬಿಡುಗಡೆ: ಹೇಗಿದೆ ರಾಮ್ ಚರಣ್ ಸಿನಿಮಾದ ಫಸ್ಟ್​ ಹಾಫ್​?
Game Changer
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on: Jan 10, 2025 | 11:30 AM

Share

ನಟ ರಾಮ್ ಚರಣ್​ ಅವರು ‘ಆರ್​ಆರ್​ಆರ್​’ ಸಿನಿಮಾದ ಯಶಸ್ಸಿನ ಬಳಿಕ ಅಭಿನಯಿಸಿದ ಸಿನಿಮಾ ‘ಗೇಮ್​ ಚೇಂಜರ್​’. ಈ ಸಿನಿಮಾದ ಮೂಲಕ 2025ರಲ್ಲಿ ಅವರು ಖಾತೆ ತೆರೆಯುತ್ತಿದ್ದಾರೆ. ಇಂದು (ಜನವರಿ 10) ‘ಗೇಮ್​ ಚೇಂಜರ್​’ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗಿದೆ. ಖ್ಯಾತ ನಿರ್ದೇಶಕ ಶಂಕರ್​ ಅವರು ಆ್ಯಕ್ಷನ್-ಕಟ್​ ಹೇಳಿದ ಸಿನಿಮಾ ಎಂಬ ಕಾರಣದಿಂದ ನಿರೀಕ್ಷೆ ಜಾಸ್ತಿ ಆಗಿದೆ. ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾಣಿ ಅವರು ರಾಮ್ ಚರಣ್​ಗೆ ಈ ಸಿನಿಮಾದಲ್ಲಿ ಜೋಡಿ ಆಗಿದ್ದಾರೆ. ಚಿತ್ರದ ಫಸ್ಟ್​ ಹಾಫ್​ ಹೀಗಿದೆ..

  1. ರಾಜಕೀಯದ ಕಥಾಹಂದರವನ್ನು ‘ಗೇಮ್ ಚೇಂಜರ್’ ಸಿನಿಮಾ ಹೊಂದಿದೆ. ಚಿತ್ರದ ಆರಂಭದಲ್ಲೇ ರಾಮ್ ಚರಣ್ ಆ್ಯಕ್ಷನ್ ಅಬ್ಬರ ಶುರು ಮಾಡುತ್ತಾರೆ.
  2. ಐಎಎಸ್ ಆಫೀಸರ್ ಪಾತ್ರದಲ್ಲಿ ರಾಮ್ ಚರಣ್ ಪಾತ್ರದ ಎಂಟ್ರಿ ಆಗುತ್ತದೆ. ಜಿಲ್ಲಾಧಿಕಾರಿಯಾಗಿ ಸಖತ್ ಕ್ಲಾಸ್ ಆಗಿ ಕಾಣಿಸಿದ ರಾಮ್ ಚರಣ್.
  3. ಫ್ಲ್ಯಾಶ್‌ಬ್ಯಾಕ್ ಕಥೆಯಲ್ಲಿ ರಾಮ್ ಚರಣ್‌ಗೆ ಸ್ಟೈಲಿಶ್ ಮತ್ತು ಮಾಸ್ ಗೆಟಪ್ ಇದೆ. ರಫ್ ಆ್ಯಂಡ್ ಟಫ್ ಪಾತ್ರದಲ್ಲಿ ರಾಮ್ ಚರಣ್ ರಂಜಿಸುತ್ತಾರೆ.
  4. ಸೀರಿಯಸ್ ಕಥೆಯ ನಡುವೆ ಲವಲವಿಕೆಯ ಲವ್ ಟ್ರ್ಯಾಕ್ ಕೂಡ ಇದೆ. ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಜೋಡಿ ತುಂಬಾ ಕ್ಯೂಟ್ ಆಗಿದೆ.
  5. ಸಿಕ್ಕಾಪಟ್ಟೆ ಕಲರ್‌ಫುಲ್ ಆದಂತಹ ಹಾಡುಗಳು ಫಸ್ಟ್ ಹಾಫ್‌ನಲ್ಲಿ ಇದೆ. ಡ್ಯಾನ್ಸ್ ಮೂಲಕ ಕಿಯಾರಾ ಹಾಗೂ ರಾಮ್ ಚರಣ್ ಮನರಂಜನೆ ನೀಡಿದ್ದಾರೆ.
  6. ಜಿಲ್ಲಾಧಿಕಾರಿ ಪಾತ್ರದಲ್ಲಿ ಗತ್ತು ತೋರಿಸಿದ ರಾಮ್ ಚರಣ್ ಅವರು ಅಭಿಮಾನಿಗಳಿಗೆ ಇಷ್ಟ ಆಗುತ್ತಾರೆ. ಭ್ರಷ್ಟಾಚಾರದ ವಿರುದ್ಧ ಈ ಪಾತ್ರ ಯುದ್ಧ ಸಾರುತ್ತದೆ.
  7. ನಟ ಎಸ್.ಜೆ. ಸೂರ್ಯ ಅವರಿಗೆ ಗೇಮ್ ಚೇಂಜರ್ ಚಿತ್ರದಲ್ಲಿ ಉತ್ತಮ‌ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ವಿಲನ್ ಆಗಿ ಅವರು ರಾಮ್ ಚರಣ್ ವಿರುದ್ಧ ನಿಂತು ಗುಡುಗಿದ್ದಾರೆ.
  8. ಭರ್ಜರಿ ಆ್ಯಕ್ಷನ್ ಬಯಸುವ ಪ್ರೇಕ್ಷಕರಿಗೆ ಫಸ್ಟ್ ಹಾಫ್ ಕೊನೆಯಲ್ಲಿ ಸಖತ್ ಮನರಂಜನೆ ಇದೆ‌‌. ಬಿಗ್ ಟ್ವಿಸ್ಟ್ ಮೂಲಕ ಇಂಟರ್‌ವಲ್ ನೀಡಿದ್ದಾರೆ ನಿರ್ದೇಶಕ ಶಂಕರ್.
  9. ಡೈರೆಕ್ಟರ್ ಶಂಕರ್ ಮತ್ತು ನಟ ರಾಮ್ ಚರಣ್ ಅವರ ಚಾರ್ಮ್‌ಗೆ ಸೂಕ್ತವಾಗಿ ಸಾಥ್ ನೀಡಿದೆ ಥಮನ್ ಅವರ ಹಿನ್ನೆಲೆ ಸಂಗೀತ.
  10. ಅದ್ಧೂರಿ ಮೇಕಿಂಗ್ ಕಾರಣದಿಂದಲೂ ಗೇಮ್ ಚೇಂಜರ್ ಸಿನಿಮಾ ಗಮನ ಸೆಳೆಯುತ್ತದೆ. ಮೊದಲಾರ್ಧದಲ್ಲೇ ಪ್ರೇಕ್ಷಕರಿಗೆ ಮನರಂಜನೆಯ ಪ್ಯಾಕೇಜ್ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ