AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಳಿ ಮತ್ತು ಖಾರವನ್ನು ಸಿಹಿಮಾಡುವ ಶಕ್ತಿ ಈ ಹಣ್ಣಿಗಿದೆ, ಯಾವುದು ಈ ಹಣ್ಣು?

ನೀವು ಈ ಹಣ್ಣನ್ನು ತಿನ್ನುವಾಗ ಯಾವುದೇ ರುಚಿಯನ್ನು ನೀಡುವುದಿಲ್ಲ. ಇದು ಯಾವುದೇ ರುಚಿಯನ್ನು ಹೊಂದಿಲ್ಲ. ಆದರೆ ಈ ಹಣ್ಣನ್ನು ನೀವು ಸೇವಿಸಿದ 10 ನಿಮಿಷದ ನಂತರ ಲಿಂಬೆ ಹಣ್ಣು, ನೆಲ್ಲಿ ಕಾಯಿ, ಅಥವಾ ಯಾವುದೇ ಹುಳಿ ಅಥವಾ ಖಾರದ ಪದಾರ್ಥಗಳನ್ನು ಸೇವಿಸಿದರೂ ಕೂಡ ನಿಮಗೆ ಸಿಹಿ ರುಚಿಯನ್ನು ನೀಡುತ್ತದೆ.

ಹುಳಿ ಮತ್ತು ಖಾರವನ್ನು ಸಿಹಿಮಾಡುವ ಶಕ್ತಿ ಈ ಹಣ್ಣಿಗಿದೆ, ಯಾವುದು ಈ ಹಣ್ಣು?
ಮಿರಾಕಲ್​​ ಫ್ರೂಟ್ಸ್ Image Credit source: IndiaMART
TV9 Web
| Edited By: |

Updated on: Feb 24, 2023 | 10:08 AM

Share

ಹೆಸರೇ ಹೇಳುವಂತೆ ಒಂದು ಮಿರಾಕಲ್​​ ಸೃಷ್ಟಿಸುವ ಹಣ್ಣು ಇದಾಗಿದೆ. ಇದನ್ನು ತಿಂದ ನಂತರ ನೀವು ಯಾವುದೇ ಹುಳಿ ಅಥವಾ ಖಾರದ ಪದಾರ್ಥವನ್ನು ಸೇವಿಸಿದರೂ ನಿಮಗೆ ಸಿಹಿಯನ್ನು ನೀಡುತ್ತದೆ. ಹಸಿರ ಎಲೆಗಳ ಮಧ್ಯೆ ಚಿಕ್ಕದಾದ ಕೆಂಪು ಬಣ್ಣದಲ್ಲಿ ಈ ಹಣ್ಣುಗಳನ್ನು ಕಾಣಬಹುದು. ಈ ಮಿರಾಕಲ್​​  ಹಣ್ಣಿನಿಂದ ಸಾಕಷ್ಟು ಅಚ್ಚರಿಯ ಸಂಗತಿಯನ್ನು ನೀವು ತಿಳಿದುಕೊಳ್ಳಬೇಕಿದೆ. ಜೊತೆಗೆ ಇದು ಕ್ಯಾನ್ಸರ್​ ಹಾಗೂ ಮಧುಮೇಹದಂತಹ ಕಾಯಿಲೆಗಳ ರೋಗಿಗಳಿಗೆ ಈ ಹಣ್ಣು ಬಹಳ ಉತ್ತಮವಾಗಿದೆ.

ಮಿರಾಕಲ್​​ ಫ್ರೂಟ್ಸ್​​ ವಿಶೇಷತೆಗಳು:

ನೀವು ಈ ಹಣ್ಣನ್ನು ತಿನ್ನುವಾಗ ಯಾವುದೇ ರುಚಿಯನ್ನು ನೀಡುವುದಿಲ್ಲ. ಈ ಹಣ್ಣು ಯಾವುದೇ ರುಚಿಯನ್ನು ಹೊಂದಿಲ್ಲ. ಆದರೆ ಈ ಹಣ್ಣನ್ನು ನೀವು ಸೇವಿಸಿದ 10 ನಿಮಿಷದ ನಂತರ ಲಿಂಬೆ ಹಣ್ಣು, ನೆಲ್ಲಿ ಕಾಯಿ, ಅಥವಾ ಯಾವುದೇ ಹುಳಿ ಅಥವಾ ಖಾರದ ಪದಾರ್ಥಗಳನ್ನು ಸೇವಿಸಿದರೂ ಕೂಡ ನಿಮಗೆ ಸಿಹಿ ರುಚಿಯನ್ನು ನೀಡುತ್ತದೆ. ಉದಾಹರಣೆಗೆ ನೀವು ಈ ಹಣ್ಣನ್ನು ತಿಂದ ನಂತರ ನಿಂಬೆ ಹಣ್ಣನ್ನು ತಿಂದರೆ ಯಾವುದೇ ಸಿಹಿ ಹಣ್ಣನ್ನು ತಿಂದಂತೆ ಅನುಭವವಾಗುತ್ತದೆ. ಅಂದರೆ ಸಕ್ಕರೆಗಿಂತ ಹೆಚ್ಚಿನ ಸಿಹಿಯನ್ನು ಇದು ನೀಡುತ್ತದೆ.

ಮಿರಾಕಲ್​​ ಫ್ರೂಟ್ಸ್​​ನ ಆರೋಗ್ಯ ಪ್ರಯೋಜನಗಳು ಇಲ್ಲಿವೆ:

ಈ ಹಣ್ಣು ನಿಮ್ಮ ಆರೋಗ್ಯದ ಮೇಲೂ ಸಾಕಷ್ಟು ಪ್ರಯೋಜನವನ್ನು ನೀಡುವ ಔಷಧಿಯ ಗುಣಗಳನ್ನು ಹೊಂದಿದೆ. ಇತ್ತೀಚೆಗೆ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್​ ಹಾಗೂ ಮಧುಮೇಹಕ್ಕೆ ಇದು ಯಾವ ರೀತಿ ಪ್ರಯೋಜನಕಾರಿಯಾಗಿದೆ ಎಂದು ತಿಳಿದುಕೊಳ್ಳಿ.

ಕ್ಯಾನ್ಸರ್​​ ರೋಗಿಗಳಿಗಾಗಿ:

ಕ್ಯಾನ್ಸರ್​​ ರೋಗಿಗಳಿಗೆ ಕಿಮೋಥೆರಪಿ ಮಾಡಿಸಿದ ನಂತರ ರೋಗಿಗೆ ಯಾವುದೇ ಆಹಾರದ ರುಚಿಯನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕಿಮೋಥೆರಫಿ ಮಾಡಿಸಿದ ರೋಗಿಗಳಿಗೆ ಈ ಹಣ್ಣನ್ನು ಅವರಿಗೆ ತಿನ್ನಲು ಕೊಡಲಾಗುತ್ತದೆ. ಇದು ಬೇರೆ ಆಹಾರವನ್ನು ರೋಗಿಗಳು ಸೇವಿಸಿದಾಗ ರುಚಿಯನ್ನು ನೀಡುವಲ್ಲಿ ಸಹಾಯಕವಾಗಿದೆ.

ಇದನ್ನೂ ಓದಿ: ಸುಡು ಬೇಸಿಗೆಯಲ್ಲಿ ಲಿಚಿ ತಿನ್ನಿರಿ, ಇದರ ಪ್ರಯೋಜನಗಳು ಹೀಗಿವೆ

ಮಧುಮೇಹಿ ರೋಗಿಗಳಿಗಾಗಿ:

ಪ್ರತಿ ಬಾರಿ ಯಾವುದೇ ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ದಿನಗಳಲ್ಲಿ ಸಿಹಿ ತಿಂಡಿಗಳನ್ನು ಮಾಡಿದಾಗ ಮಧುಮೇಹಿಗಳನ್ನು ಸಿಹಿಯಿಂದ ದೂರವಿರಿಸುತ್ತಾರೆ. ಆದ್ದರಿಂದ ರೋಗಿಗಳಿಗೆ ಸಕ್ಕರೆ ತಿನ್ನುವ ಬಯಕೆ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಹಣ್ಣು ಆರೋಗ್ಯಕರವಾದ ಸಕ್ಕರೆಯ ಅಂಶವನ್ನು ಒದಗಿಸುತ್ತದೆ. ಆದ್ದರಿಂದ ಮಧುಮೇಹಿಗಳಿಗೂ ಈ ಹಣ್ಣು ಆತ್ಯಂತ ಪ್ರಯೋಜನಕಾರಿಯಾಗಿದೆ.

ಮಿರಾಕಲ್​ ಹಣ್ಣಿನ ಗಿಡ ಬೆಳೆಸುವ ವಿಧಾನ:

ಪಶ್ಚಿಮ ಆಫ್ರಿಕಾದಲ್ಲಿ ಈ ಹಣ್ಣಿನ ಗಿಡವನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ. ಆದರೆ ನೀವಿದನ್ನು ಭಾರತದಲ್ಲೂ ಬೆಳೆಸಬಹುದು. ಈ ಹಣ್ಣಿನ ಬೀಜದಿಂದ ಗಿಡ ಮಾಡಬಹುದು. ಈ ಗಿಡ ಮೊಳಕೆಯೊಡೆಯಲು ಸುಮಾರು 16 ವಾರಗಳು ಬೇಕಾಗುತ್ತವೆ. ಕೆಲವೊಮ್ಮೆ ಇನ್ನೂ ಹೆಚ್ಚು ದಿನಗಳಾಗಬಹುದು. ಗಿಡ ಬೆಳಸಿದ ಮೂರು ನಾಲ್ಕು ತಿಂಗಳಲ್ಲಿ ಕಾಯಿ ಬಿಡಲು ಪ್ರಾರಂಭಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Follow Us
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!