AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TATA New Car: ಸದ್ದಿಲ್ಲದೆ ಎರಡು ಹೊಸ ಕಾರುಗಳನ್ನು ಪರಿಚಯಿಸಿದ ಟಾಟಾ: ಯಾವುದು, ಬೆಲೆ ಎಷ್ಟು?

ಟಾಟಾ ಮೋಟಾರ್ಸ್ ತನ್ನ ಟಿಯಾಗೊ, ಟಿಯಾಗೊ ಇವಿ ಮತ್ತು ಟಿಗೊರ್‌ನ ಫೇಸ್‌ಲಿಫ್ಟ್ ಮಾದರಿಗಳನ್ನು ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಪ್ರಿಯರಿಗಾಗಿ 2025 ರ ಮೊದಲ ತಿಂಗಳಲ್ಲಿ ಬಿಡುಗಡೆ ಮಾಡಿದೆ. ಟಿಯಾಗೊವನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳಲ್ಲಿ ಪರಿಚಯಿಸಿದೆ. ಆದರೆ ಟಿಗೋರ್ ಸೆಡಾನ್ ಅನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಮಾತ್ರ ನೀಡಲಾಗಿದೆ.

TATA New Car: ಸದ್ದಿಲ್ಲದೆ ಎರಡು ಹೊಸ ಕಾರುಗಳನ್ನು ಪರಿಚಯಿಸಿದ ಟಾಟಾ: ಯಾವುದು, ಬೆಲೆ ಎಷ್ಟು?
2025 Tiago Tiago.ev And Tigor
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jan 10, 2025 | 11:14 AM

Share

ಟಾಟಾ ಮೋಟಾರ್ಸ್ ಹೊಸ ವರ್ಷದ ಆಗಮನದೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಪ್ರಾರಂಭಿಸಿದೆ. ಟಾಟಾ ಮೋಟಾರ್ಸ್ ತನ್ನ ಟಿಯಾಗೊ, ಟಿಯಾಗೊ ಇವಿ ಮತ್ತು ಟಿಗೊರ್‌ನ ಫೇಸ್‌ಲಿಫ್ಟ್ ಮಾದರಿಗಳನ್ನು ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಪ್ರಿಯರಿಗಾಗಿ 2025 ರ ಮೊದಲ ತಿಂಗಳಲ್ಲಿ ಬಿಡುಗಡೆ ಮಾಡಿದೆ. ಒಂದೆಡೆ ಕಂಪನಿಯು ಈ ಎರಡು ಕೈಗೆಟುಕುವ ಕಾರುಗಳಲ್ಲಿ ಉತ್ತಮ ವಿನ್ಯಾಸ ಮತ್ತು ಹೊಸ ಬಣ್ಣದ ಆಯ್ಕೆಗಳನ್ನು ನೀಡಿದರೆ, ಮತ್ತೊಂದೆಡೆ ಇದರಲ್ಲಿ ಹೊಸ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಸಹ ನೀಡಿದೆ. ಟಿಯಾಗೊ, ಟಿಯಾಗೊ ಇವಿ ಮತ್ತು ಟಿಗೊರ್‌ನ ಫೇಸ್‌ಲಿಫ್ಟ್ ಮಾದರಿಯ ಮೊದಲ ನೋಟವನ್ನು ಆಟೋ ಎಕ್ಸ್‌ಪೋ 2025 ರಲ್ಲಿ ನೋಡಬಹುದು.

ಟಾಟಾ ಮೋಟಾರ್ಸ್ ತನ್ನ 2025 ಟಿಯಾಗೊವನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳಲ್ಲಿ ಪರಿಚಯಿಸಿದೆ. ಆದರೆ ಟಿಗೋರ್ ಸೆಡಾನ್ ಅನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಮಾತ್ರ ನೀಡಲಾಗಿದೆ. ಇವೆಲ್ಲವೂ ಮ್ಯಾನ್ಯುಯೆಲ್ ಮತ್ತು ಅಟೊಮೆಟಿಕ್ ಆಯ್ಕೆಗಳೊಂದಿಗೆ ಬರುತ್ತವೆ. ಆಸಕ್ತಿದಾಯಕ ವಿಷಯವೆಂದರೆ, ಟಾಟಾ ಮೋಟಾರ್ಸ್ ಈ ಎರಡೂ ಕಾರುಗಳಿಗೆ ಹೊಸ ಬಣ್ಣದ ಆಯ್ಕೆಗಳನ್ನು ಪರಿಚಯಿಸಿದೆ, ಇದು ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ.

ಏನು ಬದಲಾಗಿದೆ?:

ಟಾಟಾ ಟಿಗೋರ್ ಅನ್ನು ನೋಡಿದಾಗ ಕಂಪನಿಯು ಇದರ ಆಕಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂಬುದು ಕಂಡುಬಂದಿದೆ. ಮುಂಭಾಗದ ಗ್ರಿಲ್ ಮತ್ತು ಬಂಪರ್‌ನಲ್ಲಿ ಸಣ್ಣ ಬದಲಾವಣೆಗಳಿದ್ದು, ಹಿಂಭಾಗದ ಬಂಪರ್ ಅನ್ನು ಕಂಪನಿಯು ಮರುವಿನ್ಯಾಸಗೊಳಿಸಿದೆಯಷ್ಟೆ.

2025 ಟಾಟಾ ಟಿಗೊರ್ ವೈಶಿಷ್ಟ್ಯಗಳು:

ಸ್ಮಾರ್ಟ್ ಸ್ಟೀರಿಂಗ್ ವೀಲ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಫೋಟೈನ್‌ಮೆಂಟ್ ಕ್ಲಸ್ಟರ್ ಅನ್ನು ಟಾಟಾ ಟಿಗೋರ್‌ನ ನವೀಕರಿಸಿದ ಮಾದರಿಯ ಮೂಲ ರೂಪಾಂತರದಲ್ಲಿ ಸಹ ನೀಡಬಹುದು. ಇದಲ್ಲದೇ, ಹೊಸ ಫ್ಯಾಬ್ರಿಕ್ ಸೀಟುಗಳು, ISOFIX ಬೆಂಬಲ, ಹಿಂಭಾಗದ ಪಾರ್ಕಿಂಗ್ ಸಂವೇದಕವನ್ನು ಬೇಸ್ ರೂಪಾಂತರದಲ್ಲಿ ನೀಡಬಹುದು.

2024 ರಲ್ಲಿ ಭಾರತದಲ್ಲಿ ಸೇಲ್ ಆಗಿದ್ದು ಬರೋಬ್ಬರಿ 2.61 ಕೋಟಿ ವಾಹನಗಳು: ಯಾವುದೆಲ್ಲ?, ಇಲ್ಲಿದೆ ಲಿಸ್ಟ್

ಅದೇ ಸಮಯದಲ್ಲಿ, ಈ ಕಾರಿನ ಟಾಪ್ ಮಾಡೆಲ್ ಎಕ್ಸ್‌ಝಡ್ ಪ್ಲಸ್‌ಗೆ 10.25 ಇಂಚಿನ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್​ ಪ್ಲೇ, ಆಂಡ್ರಾಯ್ಡ್ ಆಟೋ, 360 ಡಿಗ್ರಿ ಕ್ಯಾಮೆರಾ, ಸ್ವಯಂಚಾಲಿತ ತಾಪಮಾನ ನಿಯಂತ್ರಣ, ರೈನ್ ಸೆನ್ಸಿಂಗ್ ವೈಪರ್‌ಗಳು ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ನೀಡಬಹುದು.

ಎಂಜಿನ್ ವಿವರಗಳು:

ವಿನ್ಯಾಸ ಮತ್ತು ವೈಶಿಷ್ಟ್ಯಗಳ ನವೀಕರಣಗಳನ್ನು ಹೊರತುಪಡಿಸಿ, ಕಂಪನಿಯು ಈ ವಾಹನದ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಮೊದಲಿನಂತೆ, ಈ ಕಾಂಪ್ಯಾಕ್ಟ್ ಸೆಡಾನ್ 1.2 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆಯಬಹುದು.

ಟಿಯಾಗೊ ಮತ್ತು ಟಿಗೋರ್ ಬೆಲೆ:

ಬೆಲೆಗಳ ಬಗ್ಗೆ ಮಾತನಾಡುತ್ತಾ, 2025 ಮಾಡೆಲ್ ಟಾಟಾ ಟಿಯಾಗೊದ ಎಕ್ಸ್ ಶೋ ರೂಂ ಬೆಲೆ. 4.99 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ, ಟಿಯಾಗೊ EV ಯ ಆರಂಭಿಕ ಎಕ್ಸ್ ಶೋ ರೂಂ ಬೆಲೆ 7.99 ಲಕ್ಷದಿಂದ ಶುರುವಾಗುತ್ತದೆ. 2025 ಮಾದರಿಯ ಟಾಟಾ ಟಿಗೋರ್ ಸೆಡಾನ್‌ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 5.99 ಲಕ್ಷ ರೂ. ಆಗಿದೆ.