2024 ರಲ್ಲಿ ಭಾರತದಲ್ಲಿ ಸೇಲ್ ಆಗಿದ್ದು ಬರೋಬ್ಬರಿ 2.61 ಕೋಟಿ ವಾಹನಗಳು: ಯಾವುದೆಲ್ಲ?, ಇಲ್ಲಿದೆ ಲಿಸ್ಟ್
ಕಳೆದ ವರ್ಷ 2024 ರಲ್ಲಿ, ಭಾರತದಲ್ಲಿ ಗರಿಷ್ಠ ಸಂಖ್ಯೆಯ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದ್ದು ಈ ಸಂಖ್ಯೆಯು 1,89,12,959 ಅಂಕಿಗಳನ್ನು ಮುಟ್ಟಿದೆ. ಈ ಪೈಕಿ ದ್ವಿಚಕ್ರವಾಹನ, ನಂತರ ಸ್ಕೂಟರ್ ಖರೀದಿಸುವವರ ಸಂಖ್ಯೆಯೇ ಹೆಚ್ಚು. 2024 ರಲ್ಲಿ, 2023 ಕ್ಕೆ ಹೋಲಿಸಿದರೆ ಸುಮಾರು 11 ಪ್ರತಿಶತ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ. 2023 ರಲ್ಲಿ 1,70,72,932 ದ್ವಿಚಕ್ರ ವಾಹನಗಳು ಸೇಲ್ ಆಗಿತ್ತು.
2024 ರ ವರ್ಷವು ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಪ್ರಚಂಡ ವರ್ಷವಾಗಿದ್ದು, ಹೆಚ್ಚಿನ ವಾಹನ ವಿಭಾಗಗಳು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ಕಂಡಿವೆ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (FADA) 2024 ರ ಎಲ್ಲಾ 12 ತಿಂಗಳ ಒಟ್ಟು ವಾಹನಗಳ ಸಂಪೂರ್ಣ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಇದು ಕಳೆದ ವರ್ಷ ದ್ವಿಚಕ್ರ ವಾಹನ, 3-ಚಕ್ರ ವಾಹನ, ಪ್ರಯಾಣಿಕ ಕಾರು, ಟ್ರಾಕ್ಟರ್ ಮತ್ತು ವಾಣಿಜ್ಯದ ಒಟ್ಟು ಮಾರಾಟವನ್ನು ಒಳಗೊಂಡಿದೆ. ಒಟ್ಟು 2,61,07,679 ಯುನಿಟ್ ವಾಹನಗಳು ಮಾರಾಟವಾಗಿವೆ. ಇದು 2023 ರಲ್ಲಿ ಒಟ್ಟು 2,39,28,293 ಯುನಿಟ್‌ಗಳಿಗಿಂತ 9.11 ಶೇಕಡಾವಾರು ಹೆಚ್ಚು ಆಗಿದೆ.
1.89 ಕೋಟಿ ಜನರು ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಖರೀದಿಸಿದ್ದಾರೆ:
ಕಳೆದ ವರ್ಷ 2024 ರಲ್ಲಿ, ಭಾರತದಲ್ಲಿ ಗರಿಷ್ಠ ಸಂಖ್ಯೆಯ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದ್ದು ಈ ಸಂಖ್ಯೆಯು 1,89,12,959 ಅಂಕಿಗಳನ್ನು ಮುಟ್ಟಿದೆ. ಈ ಪೈಕಿ ದ್ವಿಚಕ್ರವಾಹನ, ನಂತರ ಸ್ಕೂಟರ್ ಖರೀದಿಸುವವರ ಸಂಖ್ಯೆಯೇ ಹೆಚ್ಚು. 2024 ರಲ್ಲಿ, 2023 ಕ್ಕೆ ಹೋಲಿಸಿದರೆ ಸುಮಾರು 11 ಪ್ರತಿಶತ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ. 2023 ರಲ್ಲಿ 1,70,72,932 ದ್ವಿಚಕ್ರ ವಾಹನಗಳು ಸೇಲ್ ಆಗಿತ್ತು.
40 ಲಕ್ಷಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ:
ಕಳೆದ ವರ್ಷ ಭಾರತದಲ್ಲಿ ಒಟ್ಟು 40,73,843 ಕಾರುಗಳು ಮಾರಾಟವಾಗಿದ್ದು, ಇದು ವಾರ್ಷಿಕ ಶೇ. 5.18 ರಷ್ಟು ಹೆಚ್ಚಳವಾಗಿದೆ. 2023 ರಲ್ಲಿ ಒಟ್ಟು 38.73 ಲಕ್ಷ ಕಾರುಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಭಾರತದಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ ಮತ್ತು ನಂತರ ಹ್ಯುಂಡೈ, ಟಾಟಾ ಮತ್ತು ಮಹೀಂದ್ರಾ ಮುಂತಾದ ಕಂಪನಿಗಳಿವೆ.
3-ಚಕ್ರ ವಾಹನ ಖರೀದಿದಾರರ ಸಂಖ್ಯೆ 12 ಲಕ್ಷ ದಾಟಿದೆ:
ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 12,21,909 3-ಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಇದರಲ್ಲಿ ಎಲೆಕ್ಟ್ರಿಕ್ ರಿಕ್ಷಾ (ಪ್ಯಾಸೆಂಜರ್), ಎಲೆಕ್ಟ್ರಿಕ್ ರಿಕ್ಷಾ (ಕಾರ್ಟ್), 3-ವೀಲರ್ (ಗೂಡ್ಸ್), 3-ವೀಲರ್ (ಪ್ಯಾಸೆಂಜರ್) ಮತ್ತು ತ್ರಿಚಕ್ರ ವಾಹನಗಳು ಸೇರಿವೆ. 3-ವೀಲರ್ (ವೈಯಕ್ತಿಕ) ವಿಭಾಗಗಳ ವಾಹನಗಳು ಕೂಡ ಇದೆ. ಕಳೆದ ವರ್ಷ, 3-ಚಕ್ರ ವಾಹನಗಳ ಮಾರಾಟದಲ್ಲಿ ವಾರ್ಷಿಕ 10.49 ಶೇಕಡಾ ಹೆಚ್ಚಳವಾಗಿದೆ.
ಕಳೆದ ವರ್ಷ ಸುಮಾರು 9 ಲಕ್ಷ ಟ್ರ್ಯಾಕ್ಟರ್‌ಗಳು ಮಾರಾಟವಾಗಿವೆ:
ಕಳೆದ ವರ್ಷ, ಭಾರತದಲ್ಲಿ 8,94,112 ಟ್ರಾಕ್ಟರ್‌ಗಳನ್ನು ಮಾರಾಟ ಮಾಡಲಾಗಿತ್ತು, ಇದು 2023 ರಲ್ಲಿ 8,71,918 ಯುನಿಟ್‌ಗಳಿಗಿಂತ 2.55 ಶೇಕಡಾ ಹೆಚ್ಚಾಗಿದೆ.
ವಾಣಿಜ್ಯ ವಾಹನಗಳ ಮಾರಾಟವೂ ಹೆಚ್ಚಿದೆ:
ಕಳೆದ ವರ್ಷ, ಭಾರತೀಯ ಮಾರುಕಟ್ಟೆಯಲ್ಲಿ 10,04,856 ವಾಣಿಜ್ಯ ವಾಹನಗಳು ಮಾರಾಟವಾಗಿದ್ದು, ಅವು ವಿಭಿನ್ನ ಗಾತ್ರಗಳು ಮತ್ತು ತೂಕದ ವರ್ಗಗಳಾಗಿವೆ. CV ಮಾರಾಟವು ವರ್ಷದಿಂದ ವರ್ಷಕ್ಕೆ ಸ್ವಲ್ಪ ಹೆಚ್ಚಾಗಿದೆ.
ಇದನ್ನೂ ಓದಿ: ಮಹೀಂದ್ರ ಥಾರ್ ಮಾರಾಟದಲ್ಲಿ ಹೆಚ್ಚಳ: ಈ ದೇಸಿ ಎಸ್‌ಯುವಿಗೆ ಭರ್ಜರಿ ಡಿಮ್ಯಾಂಡ್
ಟಾಟಾ ಪಂಚ್ 2024 ರ ಬೆಸ್ಟ್ ಸೆಲ್ಲಿಂಗ್ ಕಾರ್:
ಮಾರುತಿ ಸುಜುಕಿ ಭಾರತದಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಕಳೆದ ವರ್ಷ 2024 ರಲ್ಲಿ, ಟಾಟಾ ಮೋಟಾರ್ಸ್ ಕಂಪನಿ ಮಾರುತಿ ಸುಜುಕಿಯನ್ನು ಸೋಲಿಸಿದೆ. ಇದು ಮಾರುತಿ ಸುಜುಕಿಯ ವ್ಯಾಗನ್‌ಆರ್, ಎರ್ಟಿಗಾ ಮತ್ತು ಬ್ರೆಝಾ ಮತ್ತು ಹ್ಯುಂಡೈ ಕ್ರೆಟಾದಂತಹ ಎಸ್‌ಯುವಿಗಳನ್ನು ಸೋಲಿಸುವ ಮೂಲಕ ನಂಬರ್ 1 ಸ್ಥಾನವನ್ನು ಸಾಧಿಸಿದೆ. ಟಾಟಾ ಮೋಟಾರ್ಸ್‌ನ ಅಗ್ಗದ ಕಾಂಪ್ಯಾಕ್ಟ್ SUV ಪಂಚ್ ಕಳೆದ ವರ್ಷ 2024 ರ 12 ತಿಂಗಳುಗಳಲ್ಲಿ 2,02,030 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಟಾಟಾ ಪಂಚ್ ಕಳೆದ ವರ್ಷ ಬಹುತೇಕ ಪ್ರತಿ ತಿಂಗಳು ಟಾಪ್ 5 ಕಾರುಗಳಲ್ಲಿ ಒಂದಾಗಿದೆ. ಟಾಟಾ ಪಂಚ್ ನ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆ ರೂ. 6 ಲಕ್ಷದಿಂದ ರೂ. 10.15 ಲಕ್ಷದವರೆಗೆ ಇದೆ.
ಆಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ