Mahindra Thar: ಮಹೀಂದ್ರ ಥಾರ್ ಮಾರಾಟದಲ್ಲಿ ಹೆಚ್ಚಳ: ಈ ದೇಸಿ ಎಸ್‌ಯುವಿಗೆ ಭರ್ಜರಿ ಡಿಮ್ಯಾಂಡ್
ಕಳೆದ ತಿಂಗಳು, ಅಂದರೆ ಡಿಸೆಂಬರ್ 2024 ರಲ್ಲಿ, ಮಹೀಂದ್ರ ಥಾರ್ ಮತ್ತು ಥಾರ್ ರಾಕ್ಸ್‌ನ ಒಟ್ಟು 7,659 ಯುನಿಟ್‌ಗಳು ಮಾರಾಟವಾಗಿವೆ, ಇದು ಒಂದು ವರ್ಷದ ಹಿಂದೆ ಡಿಸೆಂಬರ್ 2023 ರಲ್ಲಿ 5,793 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 32 ರಷ್ಟು ಹೆಚ್ಚಾಗಿದೆ. ಕಳೆದ ವರ್ಷ 5-ಬಾಗಿಲಿನ ಥಾರ್ ರಾಕ್ಸ್ ಅನ್ನು ಪ್ರಾರಂಭಿಸಿದ ಇದರ ಬೇಡಿಕೆ ಮತ್ತಷ್ಟು ಹೆಚ್ಚಿದೆ.
Mahindra Thar SUV Sale In India: ಭಾರತದಲ್ಲಿನ ಎಸ್‌ಯುವಿ ಪ್ರಿಯರಿಗೆ ನಮ್ಮ ಸ್ಥಳೀಯ ಎಸ್‌ಯುವಿಗಳ ಮೇಲೆ ವಿಭಿನ್ನ ರೀತಿಯ ಕ್ರೇಜ್ ಇದೆ. ಇದರಲ್ಲಿ ಬಹುತೇಕ ಜನರ ಮೊದಲ ಆಯ್ಕೆ ಮಹೀಂದ್ರಾ ಮತ್ತು ಮಹೀಂದ್ರಾದ ಥಾರ್ ಕಾರು. ಹೌದು, 5 ಡೋರ್ ಥಾರ್ ರಾಕ್ಸ್ ಅನ್ನು ಬಿಡುಗಡೆ ಮಾಡಿದ ನಂತರ, ಈ ಬ್ರ್ಯಾಂಡ್ ಜನರಲ್ಲಿ ಹೆಚ್ಚು ಹಿಡಿಸಿದೆ. ಕಳೆದ ವರ್ಷ 2024 ರ ಕೊನೆಯ ತಿಂಗಳಿನಲ್ಲಿಯೂ ಸಹ, ಥಾರ್ ಎಸ್ ಯು ವಿ ಮಾರಾಟದಲ್ಲಿ ವಾರ್ಷಿಕ 32 ಪ್ರತಿಶತದಷ್ಟು ಹೆಚ್ಚಳವಾಗಿದೆ. ಇದು ಈ ಕಾರಿನ ಜನಪ್ರಿಯತೆಯನ್ನು ತೋರಿಸುತ್ತದೆ.
ಡಿಸೆಂಬರ್ 2024 ರಲ್ಲಿ ಥಾರ್ ವಾರ್ಷಿಕ ಮತ್ತು ಮಾಸಿಕ ಮಾರಾಟ:
ಕಳೆದ ತಿಂಗಳು, ಅಂದರೆ ಡಿಸೆಂಬರ್ 2024 ರಲ್ಲಿ, ಮಹೀಂದ್ರ ಥಾರ್ ಮತ್ತು ಥಾರ್ ರಾಕ್ಸ್‌ನ ಒಟ್ಟು 7,659 ಯುನಿಟ್‌ಗಳು ಮಾರಾಟವಾಗಿವೆ, ಇದು ಒಂದು ವರ್ಷದ ಹಿಂದೆ ಡಿಸೆಂಬರ್ 2023 ರಲ್ಲಿ 5,793 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 32 ರಷ್ಟು ಹೆಚ್ಚಾಗಿದೆ. ಕಳೆದ ವರ್ಷ 5-ಬಾಗಿಲಿನ ಥಾರ್ ರಾಕ್ಸ್ ಅನ್ನು ಪ್ರಾರಂಭಿಸಿದ ಇದರ ಬೇಡಿಕೆ ಮತ್ತಷ್ಟು ಹೆಚ್ಚಿದೆ.
ಮಹೀಂದ್ರ ಥಾರ್ ಬೆಲೆ ಮತ್ತು ವೈಶಿಷ್ಟ್ಯಗಳು:
ಭಾರತದಲ್ಲಿ 3-ಬಾಗಿಲಿನ ಮಹೀಂದ್ರ ಥಾರ್‌ನ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆ 11.35 ಲಕ್ಷ ರೂ. ಯಿಂದ ಪ್ರಾರಂಭವಾಗುತ್ತದೆ ಮತ್ತು 17.60 ಲಕ್ಷದ ವರೆಗೆ ಇದೆ. ಈ ಎಸ್ ಯು ವಿ 4WD ಮತ್ತು RWD ಆಯ್ಕೆಯಲ್ಲಿ ಲಭ್ಯವಿದೆ ಮತ್ತು ಇದು 1497 cc ನಿಂದ 2184 cc ವರೆಗಿನ ಎಂಜಿನ್‌ಗಳನ್ನು ಹೊಂದಿದೆ, ಇದು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಿದೆ. ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಮಾರಾಟವಾಗುವ ಮಹೀಂದ್ರ ಥಾರ್ ಶಕ್ತಿಶಾಲಿ ನೋಟ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ :
ಮಹೀಂದ್ರ ಥಾರ್ ರಾಕ್ಸ್ ಬೆಲೆ ಮತ್ತು ವೈಶಿಷ್ಟ್ಯಗಳು:
ಮಹೀಂದ್ರಾ & ಮಹೀಂದ್ರಾ 15 ಆಗಸ್ಟ್ 2024 ರಂದು ಭಾರತೀಯ ಮಾರುಕಟ್ಟೆಯಲ್ಲಿ 5 ಬಾಗಿಲುಗಳ ಥಾರ್ ರಾಕ್ಸ್ ಅನ್ನು ಬಿಡುಗಡೆ ಮಾಡಿತು, ಇದು ಬುಕಿಂಗ್ ನಲ್ಲಿ ದಾಖಲೆಯನ್ನೇ ಸೃಷ್ಟಿಸಿತು. ಥಾರ್‌ಗೆ ಹೋಲಿಸಿದರೆ ರಾಕ್ಸ್ ಉತ್ತಮ ನೋಟ, ಇತ್ತೀಚಿನ ವೈಶಿಷ್ಟ್ಯಗಳು ಮತ್ತು ವಿಶಾಲವಾದ ಕ್ಯಾಬಿನ್‌ನೊಂದಿಗೆ ಬರುತ್ತದೆ. ಮಾರಾಟದ ವಿಷಯದಲ್ಲಿ ಕೂಡ ಕ್ರಮೇಣ ವೇಗವನ್ನು ಪಡೆಯುತ್ತಿದೆ.
ಥಾರ್ ರಾಕ್ಸ್ ಕಾರಿನಲ್ಲಿ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ಇಎಸ್ಇ, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಆಟೋ ಹೆಡ್ ಲೈಟ್ ಅಂಡ್ ವೈಪರ್ಸ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ ನೀಡಲಾಗಿದೆ. ಹೊಸ ಕಾರಿನ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸೌಲಭ್ಯವಿದ್ದು, ಇದು ಹಲವಾರು ಆಕ್ಟಿವ್ ಸೇಫ್ಟಿ ಫೀಚರ್ಸ್ ಗಳೊಂದಿಗೆ ಸಂಭಾವ್ಯ ಅಪಘಾತಗಳನ್ನು ತಡೆಯುತ್ತದೆ.
ಥಾರ್ ರಾಕ್ಸ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ ಮತ್ತು ಅವುಗಳ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆಗಳು ರೂ. 12.99 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ರೂ. 22.49 ಲಕ್ಷ ವರೆಗೆ ಇದೆ.
ಆಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ