ಮಧುಮೇಹಿಗಳಿಗೆ ‘ಸಿಹಿ’ಸುದ್ದಿ, 14 ದಿನಗಳಲ್ಲಿ ಗುಣಮುಖವಾಗಬಹುದು! ಏನೀ ಪವಾಡ?

|

Updated on: Nov 04, 2023 | 12:05 PM

Diabetes: ಪಾಟ್ನಾ ಮೂಲದ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯು ಮಧುಮೇಹದ ಸಮಸ್ಯೆಯ ಮೇಲೆ ಪ್ರಯೋಗಗಳನ್ನು ನಡೆಸಿತು. ಅಲ್ಲಿನ ವೈದ್ಯ ಲೋಕ ಒಬ್ಬ ವ್ಯಕ್ತಿಯ ಮೇಲೆ ಪ್ರಯೋಗವನ್ನು ಕೇಂದ್ರೀಕರಿಸಿತು. ಆರೋಗ್ಯಕರ ವಾತಾವರಣದ ಜೊತೆಗೆ ಉತ್ತಮ ಆಹಾರವನ್ನು ಮಿತವಾಗಿ ಮತ್ತು ಸರಿಯಾದ ಸಮಯದಲ್ಲಿ ನೀಡಲಾಯಿತು. ಇದರಿಂದಾಗಿ...

ಮಧುಮೇಹಿಗಳಿಗೆ ‘ಸಿಹಿ’ಸುದ್ದಿ, 14 ದಿನಗಳಲ್ಲಿ ಗುಣಮುಖವಾಗಬಹುದು! ಏನೀ ಪವಾಡ?
ಮಧುಮೇಹಿಗಳಿಗೆ ‘ಸಿಹಿ’ಸುದ್ದಿ, 14 ದಿನಗಳಲ್ಲಿ ಗುಣಮುಖವಾಗಬಹುದು! ಏನೀ ಪವಾಡ?
Follow us on

ಮಧುಮೇಹವು ಜಗತ್ತನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಇದು ಆರಂಭಿಕ ಹಂತದಲ್ಲಿ ಕಂಡುಬಂದರೆ, ಸರಿಯಾದ ಆಹಾರ ಪದ್ಧತಿ ಮತ್ತು ವ್ಯಾಯಾಮದಿಂದ ನಿಯಂತ್ರಿಸಬಹುದು. ಅದೇ ರೀತಿ ಮುನ್ನೆಚ್ಚರಿಕೆ ವಹಿಸಿ, ನಿರಂತರ ಔಷಧ ಸೇವನೆಯನ್ನು ಕಡ್ಡಾಯ ಮಾಡಿಕೊಂಡರೂ ಮಧುಮೇಹ ಎಂಬ ಪೆಡಂಭೂತವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಆದರೆ ವಿಶ್ವದ ಇತರೆ ದೇಶಗಳಂತೆ ಪೈಪೋಟಿಗೆ ಬಿದ್ದು ಮಧುಮೇಹಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದಷ್ಟೇ ಅಲ್ಲ; ನಮ್ಮ ಭಾರತವೂ ಮಧುಮೇಹಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದೆ. ಇದರ ಫಲಿತಾಂಶಗಳಲ್ಲಿ ಕೆಲ ಯಶಸ್ಸುಗಳನ್ನೂ ಸಾಧಿಸುತ್ತಿದ್ದೇನೆ. ಮಧುಮೇಹವನ್ನು ಕೇವಲ 14 ದಿನಗಳಲ್ಲಿ ನಿಯಂತ್ರಿಸಬಹುದು ಎಂದು ಇತ್ತೀಚಿನ ಅಧ್ಯಯನವೊಂದು ಎತ್ತಿ ತೋರಿಸಿದೆ. ಸಂಪೂರ್ಣ ಆಯುರ್ವೇದ ಚಿಕಿತ್ಸೆಯಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರಬಹುದು ಎಂಬುದು ಬೆಳಕಿಗೆ ಬಂದಿದೆ. ವೈದ್ಯಕೀಯ ತಜ್ಞರು ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ.

ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರಿಯಾದ ಆಹಾರ ತೆಗೆದುಕೊಳ್ಳದಿರುವುದು ಮತ್ತು ದೇಹಕ್ಕೆ ಸರಿಯಾದ ವ್ಯಾಯಾಮ ನೀಡದಿರುವುದು ಇದಕ್ಕೆ ಕಾರಣ. ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಬೇಗ ಏಳುವುದು. ಪ್ರಸ್ತುತ ಐಟಿ ವಲಯದ ಬೆಳವಣಿಗೆಯ ಯುಗದಲ್ಲಿ, ನಿರಂತರವಾಗಿ 10 ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದು ಕಷ್ಟಕರವಾಗಿದೆ. ಇವೆಲ್ಲವೂ ಟೈಪ್ 1 ಮಧುಮೇಹಕ್ಕೆ ಕಾರಣಗಳು. ಆರಂಭಿಕ ಹಂತದಲ್ಲಿ ಅದನ್ನು ಗುರುತಿಸದೆ, ರೋಗದ ತೀವ್ರತೆಯು ಹೆಚ್ಚಾಗುತ್ತಿದೆ. ಆದರೆ, ಪಾಟ್ನಾದಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನವು ಕೇವಲ 14 ದಿನಗಳಲ್ಲಿ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ತೋರಿಸಿದೆ.

ಪಾಟ್ನಾ ಮೂಲದ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯು (Patna-based Government Ayurvedic College and Hospital) ಮಧುಮೇಹದ ಸಮಸ್ಯೆಯ ಮೇಲೆ ಪ್ರಯೋಗಗಳನ್ನು ನಡೆಸಿತು. ಅಲ್ಲಿನ ವೈದ್ಯ ಲೋಕ (Assistant Professor Prabhas Chandra Pathak) ಒಬ್ಬ ವ್ಯಕ್ತಿಯ ಮೇಲೆ ಪ್ರಯೋಗವನ್ನು ಕೇಂದ್ರೀಕರಿಸಿತು. ಆರೋಗ್ಯಕರ ವಾತಾವರಣದ ಜೊತೆಗೆ ಉತ್ತಮ ಆಹಾರವನ್ನು ಮಿತವಾಗಿ ಮತ್ತು ಸರಿಯಾದ ಸಮಯದಲ್ಲಿ ನೀಡಲಾಯಿತು. ಇದರಿಂದಾಗಿ ಶುಗರ್ ಲೆವೆಲ್ ಕಂಟ್ರೋಲ್ ಮಾಡುವ (anti-diabetic properties) ಬಿಜಿಆರ್ 34 (Daruharidra, Giloe, Vijaysar, Gudmar, Methi and Majishtha in BGR-34) ಎಂಬ ಔಷಧಿಯ ಜೊತೆಗೆ, ಆರೋಗ್ಯವರ್ತಿನಿ ವಾತಿ, ಚಂದ್ರಪ್ರಭಾವತಿ ಮುಂತಾದ ಔಷಧಗಳನ್ನು ನೀಡಲಾಯಿತು. ( BGR-34, Arogyavardhani Vati, Chandraprabhavati, cholesterol-reducing drugs, lifestyle adjustments and a specific diet for two weeks.)

ಇದನ್ನೂ ಓದಿ: ಈ 5 ತರಕಾರಿಗಳ ಸಿಪ್ಪೆ ಸುಲಿಯಬೇಡಿ! ಇದರಲ್ಲಿದೆ ಆರೋಗ್ಯ ಪ್ರಯೋಜನ

14 ದಿನಗಳ ಚಿಕಿತ್ಸೆಯ ನಂತರ ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಯಿತು. ಅದರಲ್ಲಿ ಅತ್ಯುತ್ತಮ ಫಲಿತಾಂಶಗಳು ಕಂಡು ಬಂದವು. ಚಿಕಿತ್ಸೆಯ ಮೊದಲು ಸಂಗ್ರಹಿಸಲಾದ ರಕ್ತದ ಮಾದರಿಯು 254 ಮಿ ಗ್ರಾಂ ಹೊಂದಿತ್ತು, ಚಿಕಿತ್ಸೆಯ ನಂತರ ಸಕ್ಕರೆಯ ಪ್ರಮಾಣ 124 ಮಿ ಗ್ರಾಂ ಗೆ ಇಳಿಯಿತು. ಅಲ್ಲದೆ, ಕಡಿಮೆ ಬಲದ, ದುರ್ಬಲಗೊಳಿಸಿದ ನಂತರ ಸಂಗ್ರಹಿಸಿದ ಮಾದರಿಗಳಲ್ಲಿ ಅದು 413 ಎಂಜಿ ಇದ್ದಿದ್ದು, ಚಿಕಿತ್ಸೆಯ ನಂತರ 154 ಎಂ.ಜಿ.ಗೆ ಕುಸಿದಿತ್ತು. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸಲಾಗುವುದು ಎಂದು ಅಲ್ಲಿನ ವೈದ್ಯ ತಜ್ಞರು ತಿಳಿಸಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ