AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fear: ಭಯ ನಿವಾರಿಸುವುದು ಹೇಗೆ? ಇಲ್ಲಿವೆ ಆರೋಗ್ಯ ತಜ್ಞರಿಂದ ಸಲಹೆಗಳು!

ಒಳಗಿನಿಂದ ಸ್ವಲ್ಪ ಇಚ್ಛಾಶಕ್ತಿ ಮತ್ತು ಮಾನಸಿಕ ಚುರುಕುತನವನ್ನು ಹೊರಗೆಳೆಯುವ ಮೂಲಕ ಭಯವನ್ನು ಜಯಿಸಬಹುದು. ಹಾಗಾದರೆ ಇದರಿಂದ ಹೊರಬರುವುದು ಹೇಗೆ? ಈ ಬಗ್ಗೆ ಶಿಕ್ಷಣ ತಜ್ಞ ಡಾ. ಅನ್ನಿ ಸಿಂಗ್ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಜ್ಞರ ಸಲಹೆಯೊಂದಿಗೆ ಭಯವನ್ನು ನಿವಾರಿಸುವುದು ಹೇಗೆ ಎಂದು ತಿಳಿಯಿರಿ!

Fear: ಭಯ ನಿವಾರಿಸುವುದು ಹೇಗೆ? ಇಲ್ಲಿವೆ ಆರೋಗ್ಯ ತಜ್ಞರಿಂದ ಸಲಹೆಗಳು!
overcome fear
ಪ್ರೀತಿ ಭಟ್​, ಗುಣವಂತೆ
| Edited By: |

Updated on: Nov 03, 2023 | 6:59 PM

Share

ಭಯ ಎನ್ನುವುದು ಜೀವನದ ಅನುಭವಗಳನ್ನು ಅವು ಇರುವಂತೆಯೇ ಸ್ವಾಗತಿಸದಂತೆ ನಮ್ಮನ್ನು ತಡೆಯುತ್ತದೆ. ‘ಭಯ’ ಎಂಬುದು ಜೀವನದಲ್ಲಿ ನಮ್ಮನ್ನು ಅಪರಿಚಿತ ನೀರಿಗೆ ಜಿಗಿಯುವುದನ್ನು ತಪ್ಪಿಸು ಎಂದು ಹೇಳುತ್ತದೆ. ಏಕೆಂದರೆ ಅದೊಂದು ಸಣ್ಣ ಅಂಜಿಕೆ ನಮ್ಮೊಳಗೆ ಹುದುಗಿರುತ್ತದೆ. ಅಲ್ಲದೆ ನಮ್ಮೊಳಗಿನ ಸಣ್ಣ ಭಯದ ಭಾವನೆಯನ್ನು ಸಹ ಪ್ರಚೋದಿಸುವ ಪ್ರತಿಯೊಂದು ಪರಿಸ್ಥಿತಿಗೆ ನಾವು ಹೆದರುತ್ತೇವೆ. ಇದು ನಮಗೆ ಹುಟ್ಟಿನಿಂದ ಬಂದ ವಿಷಯವಲ್ಲ. ಆದರೆ ನೆನಪಿಡಿ, ನಾವು ಮಕ್ಕಳಾಗಿದ್ದಾಗ, ಜೀವನವು ಏನನ್ನು ನೀಡುತ್ತದೆಯೋ ಅದನ್ನು ಅನುಭವಿಸಲು ನಾವು ಯಾವಾಗಲೂ ಉತ್ಸುಕರಾಗಿರುತ್ತೇವೆ. ಜೊತೆಗೆ ನಾವು ಬೆಳೆದಂತೆ ಕೆಲವು ವಿಷಯಗಳ ಬಗ್ಗೆ ಭಯ ಬೆಳೆಸಿಕೊಂಡಿರುತ್ತೇವೆ. ವಾಸ್ತವದಲ್ಲಿ, ನಮ್ಮ ಇಚ್ಛಾಶಕ್ತಿಯು ಎಲ್ಲ ಭಯಕ್ಕಿಂತ ದೊಡ್ಡದಾಗಿದೆ, ಏಕೆಂದರೆ ಇದು ನಮ್ಮ ಮನಸ್ಸಿನಲ್ಲಿದೆ. ಇದು ಭಯಾನಕ ಸನ್ನಿವೇಶಗಳ ಚಿತ್ರಿಸುತ್ತದೆ ಅದರಿಂದ ನಾವು ಆ ಕ್ಷಣವನ್ನು ಅನುಭವಿಸಲು ಹೆದರುತ್ತೇವೆ. ಹಾಗಾದರೆ ಇದರಿಂದ ಹೊರಬರುವುದು ಹೇಗೆ? ಈ ಬಗ್ಗೆ ಶಿಕ್ಷಣ ತಜ್ಞ ಡಾ. ಅನ್ನಿ ಸಿಂಗ್ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು ಭಯವನ್ನು ನಿವಾರಿಸಲು ಸಲಹೆ ನೀಡಿದ್ದಾರೆ.

ಭಯ ನಿವಾರಿಸುವುದು ಹೇಗೆ?

ಭಯವು ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ಇದು ಹೆಚ್ಚಿದ ಹೃದಯ ಬಡಿತ, ಉಸಿರಾಟ ಏರಿಳಿತ ಮತ್ತು ಶಾರೀರಿಕ ಮತ್ತು ಮಾನಸಿಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ. ಜೊತೆಗೆ ಭಯವು ಅಪಾಯಕ್ಕೆ ಪ್ರತಿಕ್ರಿಯಿಸಲು ನಮಗೆ ಸಹಾಯ ಮಾಡುವ ಒಂದು ಕಾರ್ಯ ವಿಧಾನವಾಗಿದೆ ಎಂದು ಡಾ. ಸಿಂಗ್ ವಿವರಿಸುತ್ತಾರೆ. ಆದರೆ ಫೋಬಿಯಾಗಳು ವಿಭಿನ್ನವಾಗಿವೆ. ಅವು ಭಯದ ಒಂದು ಉಪವರ್ಗವಾಗಿದೆ. ನಿರ್ದಿಷ್ಟ ಸಂದರ್ಭ, ವಸ್ತುಗಳು ಅಥವಾ ಚಟುವಟಿಕೆಗಳ ಹೆಚ್ಚು ತೀವ್ರವಾದ, ಅಂದರೆ ತರ್ಕ ಬದ್ಧವಲ್ಲದ ಭಯಗಳು ಎನ್ನಬಹುದು. ಇವು ಸಾಮಾನ್ಯ ಭಯಗಳಿಗಿಂತ ಭಿನ್ನವಾಗಿರುತ್ತದೆ. ಇಂತಹ ಭಯಗಳಲ್ಲಿ ಎತ್ತರಗಳ ಭಯ (ಅಕ್ರೋಫೋಬಿಯಾ), ಜೇಡಗಳು (ಅರಾಕ್ನೋಫೋಬಿಯಾ), ಹಾರಾಟ (ಅವಿಯೋಫೋಬಿಯಾ) ಮತ್ತು ಸಾರ್ವಜನಿಕ ಭಾಷಣ (ಗ್ಲೋಸೊಫೋಬಿಯಾ) ಸೇರಿವೆ.

ಭಯವನ್ನು ಎದುರಿಸಲು ಕೆಲವು ಸರಳ ದೈನಂದಿನ ಮಾರ್ಗಗಳು ಇಲ್ಲಿವೆ:

1. ನಿಮ್ಮ ಆಲೋಚನೆಗಳಿಗೆ ಸವಾಲು ಮಾಡಿ:

“ತರ್ಕ ರಹಿತ ಅಥವಾ ನಕಾರಾತ್ಮಕ ಆಲೋಚನೆಗಳು ನಿಮ್ಮ ಭಯವನ್ನು ಯಾವಾಗ ಹೆಚ್ಚಿಸುತ್ತವೆ ಎಂಬುದನ್ನು ಗುರುತಿಸಿ. ಈ ನಿಮ್ಮ ಆಲೋಚನೆಗಳು, ಪುರಾವೆಗಳು ಅಥವಾ ಊಹೆಗಳನ್ನು ಆಧರಿಸಿವೆಯೇ ಎಂದು ತಿಳಿದುಕೊಳ್ಳುವ ಮೂಲಕ ಅವುಗಳಿಗೆ ಸವಾಲು ಹಾಕಿ. ಸತ್ಯಾಧಾರಿತ ಆಲೋಚನಾ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ಸತ್ಯವನ್ನು ಮಾತ್ರ ನಂಬಿ” ಎಂದು ಡಾ. ಅನ್ನಿ ಸಿಂಗ್ ಹೇಳುತ್ತಾರೆ. ನಿಮ್ಮ ಭಯವನ್ನು ಎದುರಿಸುವುದು ನೀವು ಭಯದ ವಿರುದ್ಧ ಇಡಬಹುದಾದ ಅತ್ಯಂತ ದಿಟ್ಟ ಹೆಜ್ಜೆಯಾಗಿದೆ. ಜೊತೆಗೆ ಇದು ದೀರ್ಘಾವಧಿಯಲ್ಲಿಯೂ ಅತ್ಯಂತ ಲಾಭದಾಯಕವಾಗಿದೆ. ಅಲ್ಲದೆ ಇದು ನಿಮಗೆ ನಿಮ್ಮ ಮನಸ್ಸಿನ ಶಕ್ತಿಯನ್ನು ಅರಿತುಕೊಳ್ಳುವಂತೆ ಮಾಡುತ್ತದೆ.

2. ಜಾಗರೂಕತೆಯನ್ನು ಬೆಳೆಸಿಕೊಳ್ಳಿ:

ನಿಮ್ಮ ಆಲೋಚನೆಗಳು ಮತ್ತು ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳ ನಡುವೆ ಅಂತರವನ್ನು ಸೃಷ್ಟಿಸಲು ಬುದ್ಧಿವಂತಿಕೆ ತಂತ್ರಗಳನ್ನು ಅಭ್ಯಾಸ ಮಾಡಿ. ಇದು ಭಯಕ್ಕೆ ಹೆಚ್ಚು ಶಾಂತವಾಗಿ ಮತ್ತು ತರ್ಕಬದ್ಧವಾಗಿ ಪ್ರತಿಕ್ರಿಯಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

3. ಬೆಂಬಲ ಪಡೆಯಿರಿ:

“ಮಾರ್ಗದರ್ಶನ ಮತ್ತು ಭಾವನಾತ್ಮಕ ಬೆಂಬಲಕ್ಕಾಗಿ ಸ್ನೇಹಿತರು, ಕುಟುಂಬ ಅಥವಾ ಮಾನಸಿಕ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನಿಮ್ಮ ಭಯದ ಬಗ್ಗೆ ಮಾತನಾಡುವುದು ಹೊಸ ದೃಷ್ಟಿಕೋನಗಳನ್ನು ಒದಗಿಸುತ್ತದೆ” ಎಂದು ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ರಾತ್ರಿ ಸಮಯದಲ್ಲಿ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ, ಇಲ್ಲಿದೆ ಕಾರಣ

4. ವೈಫಲ್ಯದಿಂದ ಕಲಿಯಿರಿ:

ವೈಫಲ್ಯವನ್ನು ವೈಯಕ್ತಿಕ ಬೆಳವಣಿಗೆಯ ಮೆಟ್ಟಿಲು ಎಂದು ಸ್ವೀಕರಿಸಿ. ಹಿನ್ನಡೆಗಳು ಪ್ರಯಾಣದ ಭಾಗವಾಗಿದೆ ಮತ್ತು ನಿಮ್ಮ ಮೌಲ್ಯದ ಪ್ರತಿಬಿಂಬವಲ್ಲ ಎಂದು ಅರ್ಥಮಾಡಿಕೊಳ್ಳಿ.

5. ಸ್ವಯಂ ಸಹಾನುಭೂತಿಯನ್ನು ಅಭ್ಯಾಸ ಮಾಡಿಕೊಳ್ಳಿ:

ಸ್ವಯಂ ಸಹಾನುಭೂತಿಯು ಭಯವನ್ನು ಜಯಿಸಲು ಹಾಗೂ ನಿಮ್ಮ ಸವಾಲುಗಳನ್ನು ಭರವಸೆಯೊಂದಿಗೆ ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಅದೇ ಸವಾಲುಗಳನ್ನು ಎದುರಿಸುತ್ತಿರುವ ನಿಮ್ಮ ಆತ್ಮೀಯ ಸ್ನೇಹಿತನೊಂದಿಗೆ ನೀವು ಹೇಗೆ ಮಾತನಾಡುತ್ತೀರೋ ಹಾಗೆಯೇ ನಿಮ್ಮೊಂದಿಗೆ ನೀವು ಮಾತನಾಡಿಕೊಳ್ಳಿ.

6. ನಿರಂತರವಾಗಿರಿ:

ಭಯವನ್ನು ನಿವಾರಿಸುವುದು ಒಂದು ಪ್ರಯಾಣ ಎಂದು ಅರ್ಥಮಾಡಿಕೊಳ್ಳಿ. ಭಯವನ್ನು ಜಯಿಸುವ ನಿಮ್ಮ ಆರಂಭಿಕ ದಿನಗಳಲ್ಲಿ ನೀವು ಎಡವಬಹುದು, ಆದರೆ ನಿಮ್ಮ ಉತ್ಸಾಹವನ್ನು ಎಂದಿಗೂ ಬಿಡಬೇಡಿ. ಪ್ರಗತಿಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದುಕೊಂಡು ನಿಮ್ಮ ಪ್ರಯತ್ನಗಳಲ್ಲಿ ಬದ್ಧರಾಗಿರಿ ಮತ್ತು ನಿರಂತರವಾಗಿ ಮುಂದುವರಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ