Personality Test : ನಿಮಗೆ ಯಾವ ತಳಿಯ ಶ್ವಾನ ಇಷ್ಟ ಅನ್ನೋದ್ರ ಮೇಲೆ ನಿಮ್ಮ ವ್ಯಕ್ತಿತ್ವ ರಿವೀಲ್ ಆಗುತ್ತೆ
ಶ್ವಾನಗಳೆಂದರೆ ಎಲ್ಲರಿಗೂ ಕೂಡ ಇಷ್ಟನೇ. ಈ ಪ್ರಾಣಿಯ ನಿಷ್ಕಲ್ಮಶ ಪ್ರೀತಿ, ಪ್ರಾಮಾಣಿಕತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ನೆಚ್ಚಿನ ತಳಿಯ ಶ್ವಾನವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಬಹುದು. ಇಲ್ಲಿ ಶಕ್ತಿಯುತ ಲ್ಯಾಬ್ರಡಾರ್‌ನಿಂದ ಆಕರ್ಷಕ ಚಿಹೋವಾವರೆಗೆ ವಿವಿಧ ಶ್ವಾನಗಳ ಚಿತ್ರವನ್ನು ನೀಡಲಾಗಿದ್ದು, ಇದರಲ್ಲಿ ನಿಮ್ಮ ನೆಚ್ಚಿನ ತಳಿಯ ಶ್ವಾನವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ನೈಜ ವ್ಯಕ್ತಿತ್ವವೇನು ಎನ್ನುವುದನ್ನು ಕಂಡುಕೊಳ್ಳಬಹುದು. ಹಾಗಾದ್ರೆ ಆ ಕುರಿತಾದ ಕುತೂಹಲಕಾರಿ ಸಂಗತಿ ಇಲ್ಲಿದೆ.
ಪ್ರಪಂಚದಲ್ಲಿರುವ ವ್ಯಕ್ತಿಗಳು ನೋಡುವುದಕ್ಕೆ ಮಾತ್ರವಲ್ಲ, ಗುಣಸ್ವಭಾವ, ವ್ಯಕ್ತಿತ್ವದಿಂದಲೂ ಭಿನ್ನವಾಗಿರುತ್ತಾರೆ. ಒಬ್ಬ ವ್ಯಕ್ತಿಯ ಪರಿಚಯವಾದಾಗ ಆ ವ್ಯಕ್ತಿ ಹೇಗೆ? ಎನ್ನುವ ಕುತೂಹಲವಿರುತ್ತದೆ. ಹೀಗಾದಾಗ ಆತನ ಜೊತೆ ಸ್ವಲ್ಪ ಸಮಯವಾದರೂ ಬೆರೆಯಬೇಕು. ಆದರೆ ವ್ಯಕ್ತಿಗೆ ಯಾವ ತಳಿಯ ನಾಯಿ ಇಷ್ಟ ಎನ್ನುವುದು ಮೇಲೆ ಆತನ ಗುಣ ಸ್ವಭಾವ ಹಾಗೂ ವ್ಯಕ್ತಿತ್ವ ಸೂಚಿಸುತ್ತದೆ. ಇಲ್ಲಿ ವಿವಿಧ ತಳಿಯ ಶ್ವಾನಗಳ ಚಿತ್ರವಿದ್ದು, ಇದರಲ್ಲಿ ಮೊದಲು ಯಾವ ಶ್ವಾನವನ್ನು ಆಯ್ಕೆ ಮಾಡಿಕೊಳ್ಳುವಿರಿ ಎನ್ನುವ ಆಧಾರದ ಮೇಲೆ ನಿಮ್ಮ ರಹಸ್ಯಮಯ ವ್ಯಕ್ತಿತ್ವವನ್ನು ತಿಳಿಯಬಹುದಂತೆ.
- ಲ್ಯಾಬ್ರಡಾರ್ ರಿಟ್ರೈವರ್ : ಲ್ಯಾಬ್ರಡಾರ್ ರಿಟ್ರೈವರ್ ತಳಿಯ ಶ್ವಾನವನ್ನು ಆಯ್ಕೆ ಮಾಡಿಕೊಂಡರೆ ಸದಾ ಬೆಚ್ಚಗಿರಲು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಈ ಜನರು ನಂಬಿಕೆಗೆ ಅರ್ಹರಾಗಿದ್ದು, ದೈಹಿಕ ಹಾಗೂ ಮಾನಸಿಕವಾಗಿ ಶಕ್ತಿಯುತರಾಗಿರುತ್ತಾರೆ. ಗುಂಪಿನಲ್ಲಿರುವಾಗ ಇತರರಿಗೆ ಸಲಹೆ ನೀಡುತ್ತ ಹಾಗೂ ಸ್ಫೂರ್ತಿ ತುಂಬುವ ವ್ಯಕ್ತಿಗಳಾಗಿರುತ್ತಾರೆ. ಆಶಾವಾದಿಗಳಾಗಿದ್ದು, ನಾಯಕತ್ವ ಗುಣಗಳು ಇವರಲ್ಲಿ ಅಧಿಕವಾಗಿರುತ್ತದೆ. ತಮ್ಮ ನಡವಳಿಕೆ ಹಾಗೂ ಸಹಾಯ ಮಾಡುವ ಗುಣಗಳಿಂದ ಎಲ್ಲರಿಗೂ ಹತ್ತಿರವಾಗುತ್ತಾರೆ.
- ಪಗ್ : ಈ ಚಿತ್ರದಲ್ಲಿ ತೋರಿಸುವಂತೆ ಪಗ್ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯು ಪ್ರೀತಿ, ಹಾಸ್ಯಮಯ ಸ್ವಭಾವ ಹೊಂದಿರುತ್ತಾರೆ. ಈ ಜನರು ಸರಳ ಸಂತೋಷದ ಜೀವನ ನಡೆಸುತ್ತಾರೆ. ಶಾಂತ, ಆರಾಮದಾಯಕ ಜೀವನಶೈಲಿಯನ್ನು ಹೊಂದಿರುತ್ತಾರೆ. ಚುರುಕಾದ ಬುದ್ಧಿಯು ಸ್ವಾಭಾವಿಕವಾಗಿ ಇತರರನ್ನು ಸೆಳೆಯುತ್ತದೆ. ಸಂಬಂಧವನ್ನು ಗೌರವಿಸುವ ಗುಣ ಇವರದ್ದು. ಅಂತರ್ಮುಖಿಗಳಾಗಿದ್ದು, ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುತ್ತಾರೆ. ಈ ವ್ಯಕ್ತಿಗಳ ಸಾಮರ್ಥ್ಯದಿಂದಾಗಿ ಇತರರಿಗೆ ಇವರ ಮೇಲಿರುವ ನಂಬಿಕೆಯು ಹೆಚ್ಚುತ್ತದೆ.
- ಮಿಶ್ರ ತಳಿ : ಮಿಶ್ರ ತಳಿಯನ್ನು ಆಯ್ಕೆ ಮಾಡಿಕೊಂಡರೆ ಹೊಂದಾಣಿಕೆ, ಸೃಜನಶೀಲ ಹಾಗೂ ಮುಕ್ತ ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ. ವೈವಿಧ್ಯತೆ ಹಾಗೂ ಹೊಸ ಹೊಸ ಅನುಭವಕ್ಕೆ ತೆರೆದುಕೊಳ್ಳುತ್ತಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸ್ವೀಕರಿಸುವ ಗುಣ ಇವರಾದ್ದಾಗಿರುತ್ತದೆ. ಸುತ್ತಲಿನ ವ್ಯಕ್ತಿಗಳಿಗೂ ಮಾರ್ಗದರ್ಶಕರಾಗಿರುತ್ತಾರೆ.
- ಸ್ಟ್ಯಾಂಡರ್ಡ್ ಷ್ನಾಜರ್ : ಚಿತ್ರದಲ್ಲಿ ತೋರಿಸುವಂತೆ ಸ್ಟ್ಯಾಂಡರ್ಡ್ ಷ್ನಾಜರ್ ತಳಿಯ ಶ್ವಾನವನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳು ಬುದ್ಧಿವಂತ, ಸ್ವತಂತ್ರರಾಗಿರುತ್ತಾರೆ. ಈ ಜನರು ಸವಾಲುಗಳನ್ನು ನಿಭಾಯಿಸುವಲ್ಲಿ ನಿಸ್ಸಿಮರು. ಎದುರಿಗಿರುವ ವ್ಯಕ್ತಿಯ ಸ್ವಾತಂತ್ರ್ಯವನ್ನು ಗೌರವಿಸುವ ಗುಣ ಇವರದ್ದಾಗಿರುತ್ತದೆ. ಆತ್ಮವಿಶ್ವಾಸದಿಂದ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುತ್ತಾರೆ. ತಮ್ಮ ಪ್ರೀತಿಪಾತ್ರರೊಂದಿಗೆ ನಿಷ್ಠೆ ಹಾಗೂ ಪ್ರಾಮಾಣಿಕರಾಗಿರುತ್ತಾರೆ.
- ಹಸ್ಕಿ : ಶ್ವಾನ ತಳಿಯಲ್ಲಿ ಒಂದಾದ ಹಸ್ಕಿ ಆಯ್ಕೆ ಮಾಡಿಕೊಂಡರೆ ಈ ವ್ಯಕ್ತಿಗಳು ಉತ್ಸಾಹಭರಿತ ಮತ್ತು ಸಾಹಸಮಯ ಗುಣವನ್ನು ಹೊಂದಿರುತ್ತಾರೆ. ಇವರು ತಮ್ಮ ದೈಹಿಕ ಮತ್ತು ಮಾನಸಿಕ ಮಿತಿಗಳನ್ನು ಮೀರಿ ವಿವಿಧ ಚಟುವಟಿಕೆಗಳಿಗೆ ಸವಾಲು ಹಾಕುತ್ತಾರೆ. ಎಲ್ಲರೊಂದಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದ್ದು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಬಹಿರ್ಮುಖ ಸ್ವಭಾವ ಹೊಂದಿದ್ದರೂ ತಮ್ಮ ಗುರಿಯನ್ನು ಸಾಧಿಸುವಲ್ಲಿ ಕಾರ್ಯ ಪ್ರವೃತ್ತರಾಗಿರುತ್ತಾರೆ. ಈ ವ್ಯಕ್ತಿಗಳು ತಮ್ಮ ಸುತ್ತಲಿನ ಜನರನ್ನು ಪ್ರೇರೇಪಿಸುವ ಮೂಲಕ ತಂಡವನ್ನು ಮುನ್ನಡೆಸುತ್ತಾರೆ.
- ಚಿಹೋವಾ : ಚಿಹೋವಾ ತಳಿಯನ್ನು ಆಯ್ಕೆ ಮಾಡಿಕೊಂಡರೆ ಈ ವ್ಯಕ್ತಿಗಳು ಧೈರ್ಯಶಾಲಿ, ಆತ್ಮವಿಶ್ವಾಸ ಹಾಗೂ ಬೋಲ್ಡ್ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಯ ತೀವ್ರ ನಿಷ್ಠೆ ಮತ್ತು ನಿರ್ಧಾರದಿಂದಲೇ ಬೇರೆಯವರಿಗಿಂತ ಭಿನ್ನವಾಗಿರುವಂತೆ ಮಾಡುತ್ತದೆ. ಇವರು ಸವಾಲಿನ ಸಂದರ್ಭಗಳಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಇದುವೇ ಈ ಜನರಲ್ಲಿ ನಾಯಕತ್ವ ಗುಣಯಿದೆ ಎನ್ನುವುದನ್ನು ತೋರಿಸುತ್ತದೆ. ಇವರು ಕಠಿಣ ಸಂದರ್ಭವನ್ನು ಸ್ವೀಕರಿಸುತ್ತಾರೆ. ಇತರರೊಂದಿಗೆ ಮುನ್ನಡೆಯಲು ಹಾಗೂ ಪ್ರೇರೇಪಿಸಲು ತಮ್ಮ ನೈಸರ್ಗಿಕ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ