Medicine Packaging: ಮಾತ್ರೆಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಏಕೆ ಪ್ಯಾಕ್​​ ಮಾಡಲಾಗುತ್ತದೆ ಎಂದು ತಿಳಿದಿದೆಯೇ?

|

Updated on: Jan 03, 2024 | 12:23 PM

ಸಾಮಾನ್ಯವಾಗಿ ಯಾವುದೇ ಮಾತ್ರೆಗಳನ್ನು ಖರೀದಿಸಿದಾಗ ಅದನ್ನು ಅಲ್ಯೂಮಿನಿಯಂ ಫಾಯಿಲ್​​ನಲ್ಲಿ ಪ್ಯಾಕ್​​ ಮಾಡಿರುವುದನ್ನು ಕಾಣಬಹುದು. ಆದರೆ ಈ ರೀತಿಯಾಗಿ ಯಾಕೆ ಪ್ಯಾಕ್​​​ ಮಾಡಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಇನ್ನಷ್ಟು ವಿವರ ಇಲ್ಲಿ ತಿಳಿದುಕೊಳ್ಳಿ

Medicine Packaging: ಮಾತ್ರೆಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಏಕೆ ಪ್ಯಾಕ್​​ ಮಾಡಲಾಗುತ್ತದೆ ಎಂದು ತಿಳಿದಿದೆಯೇ?
Pharmaceutical Packaging
Follow us on

ಬ್ಲಿಸ್ಟರ್ ಪ್ಯಾಕ್ ಎನ್ನುವುದು ಔಷಧೀಯ ಉದ್ಯಮದಲ್ಲಿ ಬಳಸಲಾಗುವ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಆಗಿದೆ. ಪ್ರತ್ಯೇಕ ಪ್ರತ್ಯೇಕವಾಗಿ ಮಾತ್ರೆಗಳಿಗೆ ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂ ಫಾಯಿಲ್‌ನಿಂದ ಪ್ಯಾಕ್​​ ಮಾಡಲಾಗುತ್ತದೆ. ಇದನ್ನು ಬ್ಲಿಸ್ಟರ್ ಫಿಲ್ಮ್ ಅಥವಾ ಲಿಡ್ ಫಿಲ್ಮ್ ಎಂದು ಕರೆಯಲಾಗುತ್ತದೆ . ಇದರಿಂದಾಗಿ ಕ್ಯಾಪ್ಸುಲ್ಗಳು ಮತ್ತು ಮಾತ್ರೆಗಳು ಸ್ವಚ್ಛವಾಗಿರುತ್ತವೆ ಮತ್ತು ದೀರ್ಘಕಾಲದ ವರೆಗೆ ಬಳಸಲಾಗುತ್ತದೆ. ಔಷಧೀಯ ಉದ್ಯಮದಲ್ಲಿ, ಪ್ಯಾಕೇಜಿಂಗ್ ವಸ್ತುಗಳ ಆಯ್ಕೆಯು ಔಷಧಿಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಅಲ್ಯೂಮಿನಿಯಂ ಅದರ ಅಸಾಧಾರಣ ಗುಣಗಳಿಂದಾಗಿ ಔಷಧ ಪ್ಯಾಕೇಜಿಂಗ್‌ಗೆ ಸೂಕ್ತವಾದ ವಸ್ತು ಎಂದು ಪರಿಗಣಿಸಲಾಗಿದೆ. ಅಲ್ಯೂಮಿನಿಯಂ ತುಕ್ಕುಗೆ ಪ್ರತಿರೋಧವಾಗಿದ್ದು, ಇದಲ್ಲದೇ ತೇವಾಂಶ ಮತ್ತು ತಾಪಮಾನದಲ್ಲಿನ ಏರಿಳಿತಗಳನ್ನು ತಡೆದುಕೊಳ್ಳಬಲ್ಲದು. ಜೊತೆಗೆ ನೇರಳಾತೀತ ಕಿರಣ, ನೀರಿನ ಆವಿ, ತೈಲ, ಕೊಬ್ಬು, ಆಮ್ಲಜನಕ ಮತ್ತು ಸೂಕ್ಷ್ಮಾಣುಜೀವಿಗಳು ಮಾತ್ರೆಯೊಳಗೆ ಸೇರದಂತೆ ತಡೆಯುತ್ತದೆ. ಆದ್ದರಿಂದಲೇ ಮಾತ್ರೆಗಳ ಪ್ಯಾಕೇಜಿಂಗ್​​​ನಲ್ಲಿ ಅಲ್ಯೂಮಿನಿಯಂ ಬಳಸಲಾಗುತ್ತದೆ.

ಇದನ್ನೂ ಓದಿ: ಕಾರ್ಖಾನೆಗಳ ಮೇಲ್ಛಾವಣಿಯ ಮೇಲೆ ಈ ರೀತಿಯ ತಿರುಗುವ ಮಷೀನ್ ಗಳನ್ನು ಯಾಕೆ ಇಟ್ಟಿರುತ್ತಾರೆ ಗೊತ್ತಾ?

ಔಷಧಿಗಳ ಹೊರತಾಗಿ ಇತ್ತೀಚಿನ ದಿನಗಳಲ್ಲಿ ಆಹಾರ ಸಂಗ್ರಹಿಸಲು ಅಲ್ಯೂಮಿನಿಯಂ ಕವರ್​​ಗಳನ್ನು ಹೆಚ್ಚು ಬಳಸಲಾಗುತ್ತದೆ. ಆಫೀಸ್ ಬಾಕ್ಸ್ ಇರಲಿ, ಮಕ್ಕಳ ಟಿಫಿನ್ ಬಾಕ್ಸ್ ಇರಲಿ. ಇತ್ತೀಚಿನ ದಿನಗಳಲ್ಲಿ ಅಲ್ಯೂಮಿನಿಯಂ ಫಾಯಿಲ್ ನಲ್ಲಿ ಆಹಾರ ಇಡುತ್ತಾರೆ.ರೆಸ್ಟೋರೆಂಟಟ್​ಗಳು, ಟಿಫಿನ್ ಸೆಂಟರ್​ಗಳು ಮತ್ತು ಫಾಸ್ಟ್ ಫುಡ್ ಸೆಂಟರ್​ಗಳಲ್ಲಿಯೂ ಅವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಈ ಕವರ್​ಗಳಲ್ಲಿ ಆಹಾರವನ್ನು ಪ್ಯಾಕ್ ಮಾಡುವುದರಿಂದ ದೀರ್ಘಕಾಲದವರೆಗೆ ತಾಜಾ ಮತ್ತು ಬಿಸಿಯಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ