Turbo Ventilators: ಕಾರ್ಖಾನೆಗಳ ಮೇಲ್ಛಾವಣಿಯ ಮೇಲೆ ಇರುವ ಈ ತಿರುಗುವ ಮಷೀನ್ ಕಾರ್ಯವೇನು?
ಈ ಮಷೀನ್ ಗಳನ್ನು ವಿಂಡ್ ಟರ್ಬೋ ವೆಂಟಿಲೇಟರ್ ಎಂದು ಕರೆಯುತ್ತಾರೆ. ಇದಲ್ಲದೇ ಏರ್ ವೆಂಟಿಲೇಟರ್, ಟರ್ಬೈನ್ ವೆಂಟಿಲೇಟರ್, ರೂಫ್ ಎಕ್ಸ್‌ಟ್ರಾಕ್ಟರ್ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ದೊಡ್ಡ ಕಾರ್ಖಾನೆಗಳು ಹಾಗೂ ಅನೇಕ ದೊಡ್ಡ ರೈಲು ನಿಲ್ದಾಣಗಳ ಮೇಲ್ಛಾವಣಿಗಳ ಮೇಲೆ ತಿರುಗುವುದನ್ನು ಸಹ ಕಾಣಬಹುದು.
ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ಸುತ್ತಲೂ ಇಂತಹ ಅನೇಕ ವಿಷಯಗಳನ್ನು ನೋಡುತ್ತೇವೆ, ಅದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇವೆ. ಅಂತಹ ವಿಷಯಗಳಲ್ಲಿ, ಫ್ಯಾಕ್ಟರಿಗಳ ಮೇಲೆ ಸ್ಟೀಲ್ ಪಾತ್ರೆಯಂತೆ ಕಾಣುವ ತಿರುಗುವ ಮಷೀನ್ ಕೂಡ ಒಂದು. ಹೌದು, ನೀವೂ ಕೂಡ ನಿಮ್ಮ ಸುತ್ತಲಿನ ಕಾರ್ಖಾನೆಗಳ ಮೇಲ್ಛಾವಣಿಯ ಮೇಲೆ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಿದ ಸಣ್ಣ ಪಾತ್ರೆಯಂತಹ ಆಕಾರವನ್ನು ನೋಡಿರಬಹುದು. ಸೂರ್ಯನ ಬೆಳಕಿನಲ್ಲಿ ಇದು ತುಂಬಾ ಪ್ರಕಾಶಮಾನವಾಗಿ ಕಾಣುತ್ತದೆ. ಆದರೆ ಈ ಮಷೀನ್ ಯಾಕೆ ಬಳಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಈ ಮಷೀನ್ ಗಳನ್ನು ವಿಂಡ್ ಟರ್ಬೋ ವೆಂಟಿಲೇಟರ್ ಎಂದು ಕರೆಯುತ್ತಾರೆ. ಇದಲ್ಲದೇ ಏರ್ ವೆಂಟಿಲೇಟರ್, ಟರ್ಬೈನ್ ವೆಂಟಿಲೇಟರ್, ರೂಫ್ ಎಕ್ಸ್‌ಟ್ರಾಕ್ಟರ್ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ದೊಡ್ಡ ಕಾರ್ಖಾನೆಗಳು ಹಾಗೂ ಅನೇಕ ದೊಡ್ಡ ರೈಲು ನಿಲ್ದಾಣಗಳ ಮೇಲ್ಛಾವಣಿಗಳ ಮೇಲೆ ತಿರುಗುವುದನ್ನು ಸಹ ಕಾಣಬಹುದು.
ಇದನ್ನೂ ಓದಿ: Most Expensive Fruits: ವಿಶ್ವದ ಅತ್ಯಂತ ದುಬಾರಿ ಹಣ್ಣುಗಳು ಇಲ್ಲಿದೆ
ಈ ತಿರುಗುವ ಮಷೀನ್ ಕಾರ್ಯವೇನು?
ಮೇಲ್ಛಾವಣಿಯಲ್ಲಿ ಅಳವಡಿಸಲಾಗಿರುವ ಟರ್ಬೊ ವೆಂಟಿಲೇಟರ್‌ಗಳ ಫ್ಯಾನ್‌ಗಳು ಮಧ್ಯಮ ವೇಗದಲ್ಲಿ ಚಲಿಸುತ್ತವೆ. ಕಾರ್ಖಾನೆಗಳು ಅಥವಾ ಆವರಣದೊಳಗೆ ಮಷೀನ್ ಗಳು ಹೆಚ್ಚು ಕೆಲಸ ಮಾಡುವುದರಿಂದ ಶಾಖ ಉತ್ಪತ್ತಿಯಾಗುತ್ತದೆ ಇದರಿಂದ ಕೆಲಸಗಾರರಿಗೆ ಬಿಸಿ ಎನಿಸುತ್ತದೆ ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಬಿಸಿ ಶಾಖವನ್ನು ಹೊರ ಹಾಕಲು ವಿಂಡ್ ಟರ್ಬೋ ವೆಂಟಿಲೇಟರ್ ಬಳಸಲಾಗುತ್ತದೆ. ಇದು ಬಿಸಿಗಾಳಿಯನ್ನು ಹೊರಹಾಕಿದಾಗ, ಕಿಟಕಿ ಮತ್ತು ಬಾಗಿಲುಗಳಿಂದ ಬರುವ ತಾಜಾ ಮತ್ತು ನೈಸರ್ಗಿಕ ಗಾಳಿಯು ಕಾರ್ಖಾನೆಗಳಲ್ಲಿ ದೀರ್ಘಕಾಲ ಉಳಿಯುತ್ತದೆ, ಇದು ಉದ್ಯೋಗಿಗಳಿಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಟರ್ಬೊ ವೆಂಟಿಲೇಟರ್ ಬಿಸಿ ಗಾಳಿಯನ್ನು ಹೊರಹಾಕುವುದು ಮಾತ್ರವಲ್ಲದೆ ಕಾರ್ಖಾನೆಗಳಿಂದ ಕೆಟ್ಟ ವಾಸನೆಯನ್ನು ಹೊರಹಾಕುತ್ತದೆ. ಅಷ್ಟೇ ಅಲ್ಲ ಹವಾಮಾನ ಬದಲಾದಾಗ ಒಳಗಿನ ತೇವಾಂಶವನ್ನೂ ಹೊರಹಾಕುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: