ಭಾರತ ಈ ವಿಶ್ವದ ಹೊಸ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಲಿದೆ: ಫಾಕ್ಸ್​ಕಾನ್ ವಿಶ್ವಾಸ

Foxconn on India: ಸೆಮಿಕಂಡಕ್ಟರ್ ಚಿಪ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸುವ ಮಹಾ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಈ ಮಧ್ಯೆ ಭಾರತದಲ್ಲಿ ಐಫೋನ್ ಫ್ಯಾಕ್ಟರಿ ಹೊಂದಿದ್ದು, ಇದೀಗ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲು ಮುಂದಾಗಿರುವ ಫಾಕ್ಸ್​ಕಾನ್ ಸಂಸ್ಥೆ, ಭಾರತ ಈ ವಿಶ್ವದ ಹೊಸ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಬಹುದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದೆ.

ಭಾರತ ಈ ವಿಶ್ವದ ಹೊಸ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಲಿದೆ: ಫಾಕ್ಸ್​ಕಾನ್ ವಿಶ್ವಾಸ
ತಯಾರಕಾ ಉದ್ಯಮ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 07, 2023 | 5:36 PM

ಕೇಂದ್ರ ಸರ್ಕಾರ ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆ (PLI Scheme) ಜಾರಿಗೆ ತಂದ ಬಳಿಕ ಭಾರತದ ತಯಾರಕಾ ಕ್ಷೇತ್ರ ಮಿರಮಿರ ಮಿಂಚತೊಡಗಿದೆ. ಅನೇಕ ವಲಯಗಳಿಗೆ ಪಿಎಲ್​ಐ ಸ್ಕೀಮ್​ನ ವ್ಯಾಪ್ತಿ ವಿಸ್ತರಣೆ ಮಾಡಲಾಗಿರುವುದು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ (Manufacturing Sector) ಅಮೂಲಾಗ್ರ ಬೆಳವಣಿಗೆಗೆ ಸಹಾಯಕವಾಗಲಿದೆ. ಭಾರತದಲ್ಲಿ ದಶಕಗಳಿಂದ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿರುವ ಫಾಕ್ಸ್​ಕಾನ್ ಈಗ ಭಾರತ ಭವಿಷ್ಯದ ಹೊಸ ತಯಾರಿಕಾ ಅಡ್ಡಿಯಾಗಿ ಬೆಳೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಫಾಕ್ಸ್​ಕಾನ್​ನ ಅಧಿಕೃತ ಹೆಸರಾದ ಹೋನ್ ಹೋಯ್ ಟೆಕ್ನಾಲಜೀಸ್​ನ ಛೇರ್ಮನ್ ಯಂಗ್ ಲಿಯು ಅವರು, ಭಾರತ ಈ ವಿಶ್ವದ ತಯಾರಕಾ ಅಡ್ಡೆಯಾದರೆ, ತೈವಾನ್ ಭಾರತದ ಅತ್ಯಂತ ವಿಶ್ವಾಸಾರ್ಹ ಜೊತೆಗಾರನಾಗಿರುತ್ತದೆ ಎಂದು ಹೇಳಿದ್ದಾರೆ.

ಚೀನಾಗೆ 30 ವರ್ಷ ಬೇಕಾಯಿತು; ಭಾರತಕ್ಕೆ ಅಷ್ಟು ಅವಧಿ ಬೇಕಿಲ್ಲ…

ತಯಾರಕಾ ಉದ್ಯಮ ನಿರ್ಮಾಣವಾಗಲು ಸಪ್ಲೈ ಚೈನ್ ವ್ಯವಸ್ಥೆ ಅವಶ್ಯಕತೆ ಇರುತ್ತದೆ. ಈ ಇಕೋಸಿಸ್ಟಂ ಅನ್ನು ನಿರ್ಮಿಸಲು ಚೀನಾಗೆ 30 ವರ್ಷಕ್ಕೂ ಹೆಚ್ಚು ಕಾಲ ಬೇಕಾಯಿತು. ಈ ಇಕೋಸಿಸ್ಟಂ ತಯಾರಿಸಲು ಭಾರತಕ್ಕೂ ಸಮಯ ಹಿಡಿಯುತ್ತದೆ. ಆದರೆ ಚೀನಾಗೆ ತೆಗೆದುಕೊಂಡಷ್ಟು ಸಮಯ ಭಾರತಕ್ಕೆ ಬೇಕಾಗುವುದಿಲ್ಲ. ಸ್ಥಳೀಯ ಎಲೆಕ್ಟ್ರಾನಿಕ್ಸ್ ಉದ್ಯಮ ಬೆಳೆಯಲು ಹೇರಳ ಅವಕಾಶಗಳಿವೆ ಎಂದು ಫಾಕ್ಸ್​ಕಾನ್ ಮುಖ್ಯಸ್ಥ ಯಂಗ್ ಲಿಯು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಹಲೋ ಯುಪಿಐ, ಬಿಲ್​ಪೇ ಕನೆಕ್ಟ್, ಕ್ರೆಡಿಟ್ ಲೈನ್, ಲೈಟ್ ಎಕ್ಸ್ ಸೇರಿ ಆರು ಪೇಮೆಂಟ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಆರ್​ಬಿಐ ಗವರ್ನರ್

ಫಾಕ್ಸ್​ಕಾನ್ ಭಾರತದಲ್ಲಿ 2005ರಿಂದಲೂ ಇದೆ. ಆದರೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉತ್ಪನ್ನಗಳ ಅಸೆಂಬ್ಲಿಂಗ್ ಕಾರ್ಯಗಳನ್ನು ಫಾಕ್ಸ್​ಕಾನ್ ಮಾಡುತ್ತಾ ಬಂದಿದೆ. ಆದರೆ, ಈ ಸರ್ಕಾರದ ಆದ್ಯತೆ ಸಂಪೂರ್ಣ ತಯಾರಿಕೆಯ ಮೇಲೆ ನೆಟ್ಟಿರುವ ಹಿನ್ನೆಲೆಯಲ್ಲಿ ಉತ್ಪನ್ನದ ಮುಖ್ಯ ಬಿಡಿಭಾಗಗಳ ತಯಾರಿಕೆಯತ್ತಲೂ ಫಾಕ್ಸ್​ಕಾನ್ ಅಸ್ಥೆ ವಹಿಸುತ್ತಿದೆ.

ಫಾಕ್ಸ್​ಕಾನ್ ಸದ್ಯಕ್ಕೆ ಭಾರತದಲ್ಲಿ ಐಫೋನ್​ಗಳ ಅಸೆಂಬ್ಲಿಂಗ್ ಹೆಚ್ಚಾಗಿ ಮಾಡುತ್ತಿದೆ. ಈಗ ಸೆಮಿಕಂಡಕ್ಟರ್ ಚಿಪ್​ಗಳನ್ನು ತಯಾರಿಸಲು ಸೂಕ್ತ ಜೊತೆಗಾರಿಕೆಗೆ ಹುಡುಕಾಡುತ್ತಿದೆ. ಚಿಪ್ ತಯಾರಿಸಲು ಕೆಲ ಮುಖ್ಯ ಬಿಡಿಭಾಗಗಳೂ ಬೇಕಾಗುತ್ತದೆ. ಆ ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳನ್ನೂ ಭಾರತಕ್ಕೆ ಕರೆತರುವುದು ಫಾಕ್ಸ್​ಕಾನ್​ನ ಉದ್ದೇಶವಾಗಿದೆ.

ಇದನ್ನೂ ಓದಿ: ವಂಚಕ ಜಾಹೀರಾತುಗಳ ವಿರುದ್ಧ ಕೇಂದ್ರ ಕರಡು ನಿಯಮಾವಳಿ; ಸಾರ್ವಜನಿಕ ಅಭಿಪ್ರಾಯಕ್ಕೆ ಆಹ್ವಾನ; ಡಾರ್ಕ್ ಪ್ಯಾಟರ್ನ್ಸ್ ಎಂದರೇನು?

ಕರ್ನಾಟಕ ಸೇರಿದಂತೆ ಭಾರತದ ವಿವಿಧೆಡೆ ಫಾಕ್ಸ್​ಕಾನ್ 9 ಕ್ಯಾಂಪಸ್​ಗಳನ್ನು ಹೊಂದಿದೆ. ಒಟ್ಟು 30 ಫ್ಯಾಕ್ಟರಿಗಳನ್ನು ಅದು ಸ್ಥಾಪಿಸಿದೆ. ಫಾಕ್ಸ್​ಕಾನ್​ನ ಒಟ್ಟೂ ಭಾರತೀಯ ಘಟಕಗಳನ್ನು ಸೇರಿಸಿದರೆ 500 ಫುಟ್ಬಾಲ್ ಮೈದಾನಗಳಷ್ಟಾಗುತ್ತದೆ. ಇಷ್ಟೂ ಘಟಕಗಳಿಂದ ಒಂದು ವರ್ಷದಲ್ಲಿ ಆಗುವ ವ್ಯವಹಾರ 10 ಬಿಲಿಯನ್ ಡಾಲರ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ