ಹಲೋ ಯುಪಿಐ, ಬಿಲ್ಪೇ ಕನೆಕ್ಟ್, ಕ್ರೆಡಿಟ್ ಲೈನ್, ಲೈಟ್ ಎಕ್ಸ್ ಸೇರಿ ಆರು ಪೇಮೆಂಟ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಆರ್ಬಿಐ ಗವರ್ನರ್
New 6 UPI Features: ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಅಭಿವೃದ್ಧಿಪಡಿಸಿರುವ ಆರು ಹೊಸ ಯುಪಿಐ ಫೀಚರ್ಗಳನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಅನಾವರಣಗೊಳಿಸಿದ್ದಾರೆ. ಗ್ಲೋಬಲ್ ಫಿನ್ಟೆಕ್ ಫೆಸ್ಟ್ ಕಾರ್ಯಕ್ರಮದಲ್ಲಿ ಆರ್ಬಿಐ ಗವರ್ನರ್ ಬಿಡುಗಡೆ ಮಾಡಿದ ಈ ಫೀಚರ್ಗಳಲ್ಲಿ ಯುಪಿಐ ಕ್ರೆಡಿಟ್ ಲೈನ್, ಲೈಟ್ ಎಕ್ಸ್, ಟ್ಯಾಪ್ ಅಂಡ್ ಪೇ, ಬಿಲ್ ಕನೆಕ್ಟ್, ವಾಯ್ಸ್ ಕಮ್ಯಾಂಡ್ ಇತ್ಯಾದಿ ಸೇರಿವೆ.
ನವದೆಹಲಿ, ಸೆಪ್ಟೆಂಬರ್ 7: ಗ್ಲೋಬಲ್ ಫಿನ್ಟೆಕ್ ಫೆಸ್ಟ್ 2023 ಕಾರ್ಯಕ್ರಮದ ವೇಳೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಆರು ಯುಪಿಐ ಪೇಮೆಂಟ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (NPCI) ಸಂಸ್ಥೆ ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಯುಪಿಐಗೆ ಕ್ರೆಡಿಟ್ ಲೈನ್, ಯುಪಿಐ ಲೈಟ್ ಎಕ್ಸ್, ಟ್ಯಾಪ್ ಮಾಡಿ ಹಣ ಪಾವತಿಸುವುದು, ಹಲೋ ಯುಪಿಐ ಇತ್ಯಾದಿ ಆರು ಫೀಚರ್ಗಳು ಯುಪಿಐ ಬಳಕೆದಾರರಿಗೆ ಅನುಕೂಲವಾಗಬಹುದು. ಈ ಆರು ಫೀಚರ್ಗಳ ಬಗ್ಗೆ ಪರಿಚಯ ಇಲ್ಲಿದೆ.
ಯುಪಿಐ ಕ್ರೆಡಿಟ್ ಲೈನ್
ಕ್ರೆಡಿಟ್ ಕಾರ್ಡ್ಗಳಿಗೆ ನೀಡುವ ಮಿತಿ ಸಾಲ ಸೌಲಭ್ಯವನ್ನು ಯುಪಿಐ ಖಾತೆಗಳಿಗೆ ಕೊಡಲಾಗುತ್ತದೆ. ಯಾವ ಯುಪಿಐ ಖಾತೆಗೆ ಎಷ್ಟು ಕ್ರೆಡಿಟ್ ಮಿತಿ ಎಂಬುದನ್ನು ಆಯಾ ಬ್ಯಾಂಕ್ನವರು ನಿರ್ಧರಿಸುತ್ತಾರೆ.
ಯುಪಿಐ ಲೈಟ್ ಎಕ್ಸ್
ಇದರಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಇಲ್ಲದ ಅಥವಾ ಸಿಗ್ನಲ್ ದುರ್ಬಲ ಇರುವ ಸ್ಥಳಗಳಲ್ಲಿ ಆಫ್ಲೈನ್ ಮೂಲಕ ಹಣವನ್ನು ಕಳುಹಿಸಲು ಇಂಟರ್ನೆಟ್ ಲೈಟ್ ಎಕ್ಸ್ ಫೀಚರ್ ಸಹಾಯವಾಗುತ್ತದೆ.
ಇದನ್ನೂ ಓದಿ: ವಂಚಕ ಜಾಹೀರಾತುಗಳ ವಿರುದ್ಧ ಕೇಂದ್ರ ಕರಡು ನಿಯಮಾವಳಿ; ಸಾರ್ವಜನಿಕ ಅಭಿಪ್ರಾಯಕ್ಕೆ ಆಹ್ವಾನ; ಡಾರ್ಕ್ ಪ್ಯಾಟರ್ನ್ಸ್ ಎಂದರೇನು?
ಯುಪಿಐ ಟ್ಯಾಪ್ ಅಂಡ್ ಪೇ
ಕ್ಯೂಆರ್ ಕೋಡ್ ಅನ್ನು ಯುಪಿಐ ಆ್ಯಪ್ನಿಂದ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು ಸಾಮಾನ್ಯ ವಿಧಾನ. ಈಗ ಹೊಸ ಫೀಚರ್ ತರಲಾಗಿದ್ದು, ವರ್ತಕರ ಬಳಿ ಇರುವ ಎನ್ಎಫ್ಸಿ ಚಾಲಿತ ಕ್ಯುಅರ್ ಕೋಡ್ಗಳನ್ನು ಸ್ಕ್ಯಾನ್ ಮಾಡುವ ಅವಶ್ಯಕತೆ ಇಲ್ಲದೇ ಕೇವಲ ಒತ್ತಿದರೂ ಸಾಕು ಹಣ ಪಾವತಿಯಾಗುತ್ತದೆ. ನಿಯರ್ ಫೀಲ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿಯನ್ನು ಇಲ್ಲಿ ಬಳಸಲಾಗಿದೆ.
ಹಲೋ ಯುಪಿಐ
ಧ್ವನಿ ಮೂಲಕ ಯುಪಿಐ ಪೇಮೆಂಟ್ ಮಾಡಲು ಈ ಫೀಚರ್ ಸಹಾಯವಾಗುತ್ತದೆ. ಸದ್ಯ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಈ ಸೌಲಭ್ಯ ಇದೆ. ಮುಂದೆ ಕನ್ನಡ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳಲ್ಲಿ ಇದನ್ನು ನೀಡಬಹುದು.
ಬಿಲ್ಪೇ ಕನೆಕ್ಟ್
ಭಾರತದಾದ್ಯಂತ ಬಿಲ್ ಪೇಮೆಂಟ್ಸ್ಗಾಗಿ ರಾಷ್ಟ್ರೀಕೃತ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಸಂಖ್ಯೆಗೆ ಗ್ರಾಹಕರು ‘Hi’ ಎಂದು ಮೆಸೇಜ್ ಕಳುಹಿಸಿದರೆ ಬಿಲ್ ಪೇಮೆಂಟ್ ವ್ಯವಸ್ಥೆ ಪಡೆಯಬಹುದು. ಫೀಚರ್ ಫೋನ್ ಹೊಂದಿರುವವರು ಆ ನಂಬರ್ಗೆ ಮಿಸ್ಡ್ ಕಾಲ್ ಕೊಟ್ಟರೂ ಕೂಡ ಬಿಲ್ ಪೇಮೆಂಟ್ ಮಾಡುವ ಅವಕಾಶ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ