AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Most Expensive Fruits: ವಿಶ್ವದ ಅತ್ಯಂತ ದುಬಾರಿ ಹಣ್ಣುಗಳು ಇಲ್ಲಿದೆ 

ರುಚಿಕರವಾದ ಹಣ್ಣುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸಾಮಾನ್ಯವಾಗಿ ಎಲ್ಲರೂ ಹಣ್ಣುಗಳನ್ನು ಸೇವನೆ ಮಾಡುತ್ತಾರೆ. ಹೆಚ್ಚೆಂದರೆ ನೂರರಿಂದ ಸಾವಿರ, ಎರಡು ಸಾವಿರ ರೂಪಾಯಿ ಬೆಲೆಗಳ  ಹಣ್ಣುಗಳನ್ನು ನಾವು ತಿಂದಿರುತ್ತೇವೆ. ಆದರೆ ನೀವು ಎಂದಾದರೂ ಲಕ್ಷಗಟ್ಟಲೆ ಬೆಲೆ ಬಾಳುವ ಹಣ್ಣುಗಳನ್ನು ತಿಂದಿದ್ದೀರಾ?  ಅಥವಾ ಅವುಗಳ ಬಗ್ಗೆ ಕೇಳಿದ್ದೀರಾ? ಇಲ್ಲಿ ಕೆಲವೊಂದು ಹಣ್ಣುಗಳಿವೆ. ಅವುಗಳನ್ನು  ಜಗತ್ತಿನ ಅತ್ಯಂತ ದುಬಾರಿ ಬೆಲೆಯ ಹಣ್ಣುಗಳೆಂದು ಪರಿಗಣಿಸಲಾಗಿದೆ.

Most Expensive Fruits: ವಿಶ್ವದ ಅತ್ಯಂತ ದುಬಾರಿ ಹಣ್ಣುಗಳು ಇಲ್ಲಿದೆ 
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 18, 2023 | 6:30 PM

Share

ದೇಹದಾರೋಗ್ಯವನ್ನು ಕಾಪಾಡಿಕೊಳ್ಳಲು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವನೆ ಮಾಡಬೇಕೆಂದು ಆರೋಗ್ಯ ತಜ್ಞರು ಹೇಳುತ್ತಾರೆ.  ತರಕಾರಿಗಳನ್ನು ಇಷ್ಟಪಟ್ಟು ತಿನ್ನದಿದ್ದರೂ, ಹಣ್ಣುಗಳನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಈ ಜಗತ್ತಿನಲ್ಲಿ ವಿವಿಧ ರೀತಿಯ ಹಣ್ಣುಗಳು ಲಭ್ಯವಿದೆ.  ಕೆಲವು ಹಣ್ಣುಗಳು ಕಡಿಮೆ ಬೆಲೆಯಲ್ಲಿ ಸುಲಭವಾಗಿ ಲಭ್ಯವಿದ್ದರೆ, ಕೆಲವು ಹಣ್ಣುಗಳು  ಅತ್ಯಂತ ದುಬಾರಿಯಾಗಿರುತ್ತವೆ. ನಾವು ಸಾಮಾನ್ಯವಾಗಿ ನೂರರಿಂದ ಸಾವಿರ, ಎರಡು ಸಾವಿರ ರೂಪಾಯಿ ಬೆಲೆಯ ಹಣ್ಣುಗಳನ್ನು ತಿಂದಿರುತ್ತೇವೆ. ಇದನ್ನೇ ಅತೀ ದುಬಾರಿ ಎಂದು ಹೇಳುವ ಹಲವರಿದ್ದಾರೆ. ಆದರೆ ಇದಕ್ಕಿಂತ ದುಬಾರಿ, ಲಕ್ಷಗಟ್ಟಲೆ ಬೆಲೆ ಬಾಳುವ ಹಣ್ಣುಗಳಿವೆ ಎಂಬ ಬಗ್ಗೆ ನಿಮಗೆ ಗೊತ್ತಾ? ಇಂತಹ ಕೆಲವೊಂದು ಹಣ್ಣುಗಳಿವೆ, ಅವುಗಳನ್ನು ಈ ಜಗತ್ತಿನ ಅತ್ಯಂತ ದುಬಾರಿ ಹಣ್ಣುಗಳೆಂದು ಪರಿಗಣಿಸಲಾಗಿದೆ.

ಈ ಜಗತ್ತಿನ ಅತ್ಯಂತ ದುಬಾರಿ ಬೆಲೆಯ ಹಣ್ಣುಗಳಿವು:

ರೂಬಿ ರೋಮನ್ ದ್ರಾಕ್ಷಿ:

ರೂಬಿ ರೋಮನ್ ದ್ರಾಕ್ಷಿಯನ್ನು ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದನ್ನು ಜಪಾನಿನ ಇಶಿಕಾವಾದಲ್ಲಿ ಬೆಳೆಯಲಾಗುತ್ತದೆ. ಆದ್ದರಿಂದ ಈ ಹಣ್ಣನ್ನು “ಟ್ರೆಷರ್ ಆಫ್ ಇಶಿಕಾವಾʼ ಎಂದೂ ಕರೆಯಲಾಗುತ್ತದೆ. ಗಾತ್ರದಲ್ಲಿ ಇದು ಇತರ ದ್ರಾಕ್ಷಿಗಳಿಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ಅಲ್ಲದೆ ಇದು ಇತರ ದ್ರಾಕ್ಷಿಗಳಿಗಿಂತ ಸಿಹಿ ಮತ್ತು ರಸಭರಿತವಾಗಿದೆ. ಇದರ ಒಂದು ಗೊಂಚಲಿನಲ್ಲಿ 24 ರಿಂದ 26 ದ್ರಾಕ್ಷಿಗಳಿವೆ.  ವರದಿಗಳ ಪ್ರಕಾರ ರೋಮನ್ ದ್ರಾಕ್ಷಿಯ ಒಂದು ಗೊಂಚಲಿನ ಬೆಲೆ  ಸುಮಾರು 10 ಲಕ್ಷ ರೂಪಾಯಿಗಳು.  ಈ ಹಣ್ಣು ತನ್ನ ಬೆಲೆಯ ಕಾರಣಕ್ಕಾಗಿ ವಿಶ್ವದ ಅತ್ಯಂತ ದುಬಾರಿ ಹಣ್ಣು ಎಂಬ ವಿಶ್ವ ದಾಖಲೆಯನ್ನು ಕೂಡಾ ಮಾಡಿದೆ.

ತೈಯೊ ನೋ ಟಮಗೊ ಮಾವು:

ತೈಯೊ ನೋ ಟಮಗೊ ತಳಿಯ  ಮಾವು ಎಷ್ಟು ದುಬಾರಿಯಾಗಿದೆ ಎಂದರೆ ಸಾಮಾನ್ಯರು ಈ ಮಾವನ್ನು ಖರೀದಿಸುವ ಕನಸು ಕೂಡಾ ಕಾಣುವುದಿಲ್ಲ.  ಈ ಮಾವು ಮುಖ್ಯವಾಗಿ ಜಪಾನಿನ ಕ್ಯುಶು ಪ್ರಾಂತ್ಯದ ಮಿಯಾಜಾಕಿಯಲ್ಲಿ ಬೆಳೆಯಲಾಗುತ್ತದೆ. ಈ ಮಾವು ಸಂಪೂರ್ಣವಾಗಿ ಹಣ್ಣಾದಾಗ ಅದರ ತೂಕ 900 ಗ್ರಾಂ ತಲುಪುತ್ತದೆ.  ಇದರ ಬಣ್ಣವು ತಿಳಿ ಕೆಂಪು ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಮಾವು ವಿಶೇಷವಾಗಿ ರುಚಿ ಮತ್ತು ಮಾಧುರ್ಯಕ್ಕೆ ಹೆಸರುವಾಸಿಯಾಗಿದೆ.  ಇದಲ್ಲದೆ ಇತರ ಮಾವಿನ ಹಣ್ಣುಗಳಿಗೆ ಹೋಲಿಸಿದರೆ ಇದರಲ್ಲಿ ಯಾವುದೇ ಫೈಬರ್ ಅಂಶ ಕಂಡುಬರುವುದಿಲ್ಲ. ಈ ಮಾವಿನ ಹಣ್ಣಿನ ಬೆಲೆ ಕೆ.ಜಿಗೆ 2.7 ಲಕ್ಷ ರೂಪಾಯಿಗಳು.

ಡೆನ್ಸುಕೆ ಕಲ್ಲಂಗಡಿ:

ಕಲ್ಲಂಗಡಿಯನ್ನು ಸಾಮಾನ್ಯವಾಗಿ ಅಗ್ಗದ ಹಣ್ಣುಗಳೆಂದು ಪರಿಗಣಿಸಲಾಗುತ್ತದೆ.  ಆದರೆ ಜಪಾನಿನಲ್ಲಿ ಬೆಳೆಯಲಾಗುವ ಡೆನ್ಸುಕೆ ಕಲ್ಲಂಗಡಿ ಮಾತ್ರ ಜಗತ್ತಿನ  ಅತ್ಯಂತ ದುಬಾರಿ ಹಣ್ಣಾಗಿದೆ. ಇದನ್ನು ಕಪ್ಪು ಕಲ್ಲಂಗಡಿ ಎಂದೂ ಕರೆಯುತ್ತಾರೆ.  ಇದು ಬಲು ಅರೂಪದ ಕಲ್ಲಂಗಡಿ ತಳಿಯಾಗಿದ್ದು, ವರ್ಷದಲ್ಲಿ ಕೇವಲ 100 ಕಾಯಿಗಳನ್ನು ಮಾತ್ರ ಬಳೆಯಲಾಗುತ್ತದೆ. ಆ ಕಾರಣ ಈ ಹಣ್ಣು ದುಬಾರಿಯಾಗಿದೆ. 2019 ರಲ್ಲಿ ಈ ಕಲ್ಲಂಗಡಿ ಹಣ್ಣು ಹರಾಜಿಲ್ಲಿ 45 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು.

ಯೂಬಾರಿ ಮೆಲನ್:

ಜಪಾನಿನಲ್ಲಿ ಬೆಳೆಯಲಾಗುವ ಈ  ಹಣ್ಣನ್ನು ವಿಶ್ವದ ಅತ್ಯತ ದುಬಾರಿ ಹಣ್ಣುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರ ಬೆಲೆ ಕೆಜಿಗೆ    20 ಲಕ್ಷ ರೂಪಾಯಿಗಳು. ಯೂಬಾರಿ ಕಲ್ಲಂಗಡಿಯನ್ನು ಸೂರ್ಯನ ಬೆಳಕಿನಡಿಯಲ್ಲಿ ಹಸಿರು  ಮನೆಗಳಲ್ಲಿ ಬೆಳೆಯಲಾಗುತ್ತದೆ.   ಅಲ್ಲದೆ ಈ ಹಣ್ಣನ್ನು ಬೆಳೆಯಲು  ರೈತರಿಗೆ ಸುಮಾರು 100 ದಿನಗಳು ಬೇಕಾಗುತ್ತವೆ. ಮತ್ತು ಇದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆ ಕಾರಣ ಈ ಹಣ್ಣು ಅಷ್ಟೊಂದು ದುಬಾರಿಯಾಗಿದೆ.

ಇದನ್ನೂ ಓದಿ:  ಸ್ಟಾರ್ ಫ್ರೂಟ್ ತಿನ್ನುವ ಮೊದಲು ಅದರ ಅಪಾಯದ ಬಗ್ಗೆಯೂ ತಿಳಿದಿರಲಿ

ಲಾಸ್ಟ್ ಗಾರ್ಡನ್ ಆಫ್ ಹೆಲಿಗಾನ್ ಅನಾನಸ್:

ಇಂಗ್ಲೆಂಡಿನಲ್ಲಿ ಬೆಳೆಯುವ ಲಾಸ್ಟ್ ಗಾರ್ಡನ್ ಆಫ್ ಹೆಲಿಗಾನ್ ಅನಾನಸ್ ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ.  ವಿಶೇಷವೆಂದರೆ ಈ ಹಣ್ಣು ಹಣ್ಣಾಗಲು ಸುಮಾರು 2 ವರ್ಷ ತೆಗೆದುಕೊಳ್ಳುತ್ತದೆ. ಈ ಅನಾನಸ್  ಬೆಳೆಯನ್ನು ಬೆಳೆಯುವುದು ತುಂಬಾ ಶ್ರಮದಾಯಕ ಮತ್ತು ವೆಚ್ಚದಾಯಕವಾಗಿರುವುದರ ಕಾರಣ ಈ ಹಣ್ಣು ದುಬಾರಿಯಾಗಿದೆ. ಈ ಅನಾನಾಸ್ ಬೆಲೆ ಸುಮಾರು 1 ಲಕ್ಷ ರೂಪಾಯಿಗಳು.

ಸ್ಕ್ವೇರ್ ಕಲ್ಲಂಗಡಿ:

ಜಪಾನಿನಲ್ಲಿ ಬೆಳೆಯಲಾಗುವ ಈ ಕಲ್ಲಂಗಡಿ ಹಣ್ಣು ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ.  ಆಧುನಿಕ ಕೃಷಿ ತಂತ್ರಜ್ಞಾನದ ಮೂಲಕ ಸ್ಕ್ವೇರ್ ಕಲ್ಲಂಗಡಿಯನ್ನು ಬೆಳೆಸಲಾಗುತ್ತದೆ.  ಈ ಒಂದು ಕಲ್ಲಂಗಡಿ ಹಣ್ಣಿನ ಬೆಲೆ $100 ಡಾಲರ್  ಅಂದರೆ ಸುಮಾರು 6,500 ರೂಪಾಯಿಯಿಂದ  ಪ್ರಾರಂಭವಾಗಿ ಸರಾಸರಿ ಬೆಲೆ ಸುಮಾರು 16 ಸಾವಿರ ರೂಪಾಯಿಗಳವರೆಗೆ ಇದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ