ನಾಳೆ ಕಾರ್ತಿಕ ಮಾಸದ ಮೊದಲ ಸೋಮವಾರ; ಶಿವನ ಆರ್ಶೀವಾದ ಪಡೆಯಲು ನೀವು ಮಾಡಬೇಕಾಗಿರುವುದು ಇಷ್ಟೇ
ನಾಳೆ ಸೂರ್ಯೋದಯಕ್ಕೆ ಮುನ್ನ ಶಿವನ ದೇವಸ್ಥಾನಕ್ಕೆ ಹೋಗಿ ಶಿವನಿಗೆ ಅಭಿಷೇಕ ಮಾಡಿ ಉಪವಾಸ ಮಾಡಿ. ಸಂಜೆ ಪ್ರದೋಷಕಾಲದಲ್ಲಿ ಮನೆಯ ಪೂಜಾ ಕೊಠಡಿಯಲ್ಲಿ ದೀಪಾರಾಧನೆ ಮಾಡಿ ರಾತ್ರಿ ಚಂದ್ರ ಅಥವಾ ನಕ್ಷತ್ರಗಳು ಉದಯಿಸಿದ ನಂತರ ಶಿವಾಲಯಕ್ಕೆ ತೆರಳಿ ಪರಮೇಶ್ವರನ ದರ್ಶನ ಪಡೆದು ದೇವಸ್ಥಾನದಲ್ಲಿ ದೀಪಾರಾಧನೆ ಮಾಡಿ. ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು. ನಂತರ ಆಹಾರವನ್ನು ಸೇವಿಸಿ ಉಪವಾಸವನ್ನು ಮುರಿಯಿರಿ. ಹೀಗೆ ಮಾಡುವುದರಿಂದ ಕೋಟಿ ಸೋಮವಾರಗಳ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
2023 ರ ಕಾರ್ತಿಕ ಮಾಸವು ಭಾನುವಾರ, ನವೆಂಬರ್ 14 ರಿಂದ ಪ್ರಾರಂಭವಾಗಿ ಡಿಸೆಂಬರ್ 12 ರಂದು ಕೊನೆಗೊಳ್ಳುತ್ತದೆ. ಆದ್ದರಿಂದ ಕಾರ್ತಿಕ ಮಾಸದ ಮೊದಲ ಸೋಮವಾರ ಅಂದರೆ ನಾಳೆ (ನವೆಂಬರ್ 20) ಶಿವನ ಆರಾಧನೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸದಲ್ಲಿ ಮಾಡುವ ತೀರ್ಥ ಸ್ನಾನ, ಪೂಜೆ, ದೀಪ ದಾನ ವಿಶೇಷ ಫಲ ನೀಡುತ್ತದೆ ಎಂಬ ನಂಬಿಕೆ ಇದೆ. ಕಾರ್ತಿಕ ದಾಮೋದರ ಎಂದು ಸ್ತುತಿಸಿದರೂ ಒಳ್ಳೆಯ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಶಿವ ನಾಮಸ್ಮರಣೆ ಮತ್ತು ಪೂಜೆ ಅತ್ಯಂತ ಫಲಪ್ರದ. ಸೋಮವಾರ ಸ್ನಾನ, ಪೂಜೆ, ಜಪ ಮಾಡುವವರಿಗೆ ಅಶ್ವಮೇಥ ಯಾಗದ ಫಲ ಸಿಗುತ್ತದೆ. ಈ ವರ್ಷ ಕಾರ್ತಿಕ ಮಾಸದ ಮೊದಲ ಸೋಮವಾರ ನವೆಂಬರ್ 20 ರಂದು ಬರುತ್ತಿದೆ. ಶಿವ ಕೇಶವರಿಗೆ ಪ್ರಿಯವಾದ ಕೋಟಿ ಸೋಮವಾರದಂದು ಮಾಡುವ ಪೂಜೆಯು ಅತ್ಯಂತ ಫಲಪ್ರದವಾಗಿದೆ. ಅವರವರ ಸಾಮರ್ಥ್ಯಕ್ಕನುಗುಣವಾಗಿ ಶಿವನ ದೇವಾಲಯ ದರ್ಶನ, ಅಭಿಷೇಕ, ಉಪವಾಸ ಅಥವಾ ನಕ್ತಂ ಅಥವಾ ಏಕಭುಕ್ತಂ ಮಾಡುವುದು ಉತ್ತಮ ಎಂದು ಶಾಸ್ತ್ರ ಗ್ರಂಥ ಹೇಳುತ್ತದೆ. ನಾಳಿನ ದೀಪಾರಾಧನೆ, ಆಕಾಶದೀಪ ದರ್ಶನ, ದಾನ, ಧರ್ಮ ದ್ವಿಗುಣ ಫಲ ನೀಡುತ್ತದೆ ಎಂಬ ನಂಬಿಕೆ ಇದೆ.
ಕಾರ್ತಿಕ ಮಾಸವು ಶಿವನಿಗೆ ಅತ್ಯಂತ ಪ್ರಿಯವಾದುದು. ಒಂದು ತಿಂಗಳ ಕಾಲ ಪೂಜೆಯನ್ನು ಮಾಡಿದರೂ, ಅದರಲ್ಲೂ ಸೋಮವಾರ ಉಪವಾಸವಿದ್ದರೆ ತುಂಬಾ ಒಳ್ಳೆಯದು. ಕೆಲವರು ಸಂಜೆ ನಕ್ಷತ್ರ ದರ್ಶನದ ನಂತರ ಶಿವನಿಗೆ ಪೂಜೆ ಸಲ್ಲಿಸಿ ನಂತರ ಉಪವಾಸ ಮುರಿಯುತ್ತಾರೆ. ನಾಳೆ ಕೋಟಿ ಸೋಮವಾರ ಉಪವಾಸ ದೀಕ್ಷೆಯನ್ನು ಪಡೆದು ಆ ಪರಮಾತ್ಮನ ಕೃಪೆಗೆ ಪಾತ್ರರಾಗಿ.
ಉಪವಾಸ ಮಾಡುವುದು ಹೇಗೆ?
ನಾಳೆ ಸೂರ್ಯೋದಯಕ್ಕೆ ಮುನ್ನ ಶಿವನ ದೇವಸ್ಥಾನಕ್ಕೆ ಹೋಗಿ ಶಿವನಿಗೆ ಅಭಿಷೇಕ ಮಾಡಿ ಉಪವಾಸ ಮಾಡಿ. ಸಂಜೆ ಪ್ರದೋಷಕಾಲದಲ್ಲಿ ಮನೆಯ ಪೂಜಾ ಕೊಠಡಿಯಲ್ಲಿ ದೀಪಾರಾಧನೆ ಮಾಡಿ ರಾತ್ರಿ ಚಂದ್ರ ಅಥವಾ ನಕ್ಷತ್ರಗಳು ಉದಯಿಸಿದ ನಂತರ ಶಿವಾಲಯಕ್ಕೆ ತೆರಳಿ ಪರಮೇಶ್ವರನ ದರ್ಶನ ಪಡೆದು ದೇವಸ್ಥಾನದಲ್ಲಿ ದೀಪಾರಾಧನೆ ಮಾಡಿ. ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು. ನಂತರ ಆಹಾರವನ್ನು ಸೇವಿಸಿ ಉಪವಾಸವನ್ನು ಮುರಿಯಿರಿ. ಹೀಗೆ ಮಾಡುವುದರಿಂದ ಕೋಟಿ ಸೋಮವಾರಗಳ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ದೀಪಾವಳಿ ಹಬ್ಬದ ಸಮಯದಲ್ಲಿ ಮಾತೆ ಮಹಾಲಕ್ಷ್ಮಿ ಕುರಿತಾದ ಅನೇಕ ವಿಸ್ಮಯಕಾರಿ ಸಂಗತಿಗಳು ಇಲ್ಲಿವೆ
ಕಾರ್ತಿಕ ಮಾಸದ ವಿಶೇಷತೆ ಏನು?
ವಸಿಷ್ಠ ಮಹರ್ಷಿ ಜನಕ ಮಹಾರಾಜರಿಗೆ ಕಾರ್ತಿಕ ಮಾಸದ ಮಹತ್ವವನ್ನು ಮೊದಲು ವಿವರಿಸಿದರು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಈ ತಿಂಗಳ ಪ್ರತಿ ದಿನವೂ ಪುಣ್ಯದ ದಿನ. ನಿತ್ಯ ಸ್ನಾನ, ಪೂಜೆ, ಉಪವಾಸ, ದೀಪಾರಾಧನೆ, ದೀಪಾರ್ಪಣೆ, ಸಾಲಗ್ರಾಮ ಪೂಜೆ ಮತ್ತು ವನ ಮಹೋತ್ಸವ ಸಮಾರಂಭಗಳನ್ನು ಆಚರಿಸಲಾಗುತ್ತದೆ.
ಈ ಮಾಸದಲ್ಲಿ ವಿಷ್ಣುವು ನದಿಗಳಲ್ಲಿ ಮಾತ್ರವಲ್ಲದೆ ಕೊಳ, ಬಾವಿ, ಕಾಲುವೆಗಳಲ್ಲಿಯೂ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಈ ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿದರೆ ಗಂಗಾ, ಯಮುನಾ, ಗೋದಾವರಿ, ಕೃಷ್ಣಾ, ಕಾವೇರಿ, ನರ್ಮದಾ, ತಪತಿ, ಸಿಂಧು ಮೊದಲಾದ ನದಿಗಳಲ್ಲಿ ಸ್ನಾನ ಮಾಡಿದ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ಮಾಸದಲ್ಲಿ ಶಿವಕೇಶವ, ಶ್ರೀಕೃಷ್ಣ ಮತ್ತು ತುಳಸಿ ಪೂಜಿಸುವುದು ಅತ್ಯಂತ ಫಲಪ್ರದವಾಗಿದೆ. ಈ ತಿಂಗಳ ಪ್ರತಿ ದಿನವೂ ಮಂಗಳಕರ.
ಮತ್ತಷ್ಟು ಆಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: