ದೀಪಾವಳಿ ಹಬ್ಬದ ಸಮಯದಲ್ಲಿ ಮಾತೆ ಮಹಾಲಕ್ಷ್ಮಿ ಕುರಿತಾದ ಅನೇಕ ವಿಸ್ಮಯಕಾರಿ ಸಂಗತಿಗಳು ಇಲ್ಲಿವೆ

ಲಕ್ಷ್ಮಿಯ ಬಗ್ಗೆ ದೇಶದ ಬೇರೆ ಬೇರೆ ಕಡೆ ಯಾವ ಯಾವ ತರಹದ ನಂಬಿಕೆಗಳಿವೆ ಎಂದು ತಿಳಿದುಕೊಳ್ಳೋಣ. ಲಕ್ಷ್ಮಿಗೆ ಎಷ್ಟೊಂದು ಹೆಸರುಗಳಿವೆ. ಲಕ್ಷ್ಮಿಯ ನೆರಳನ್ನು 'ಅಲಕ್ಷ್ಮಿ' ಎಂದು ಕರೆಯುತ್ತಾರೆ. ಬಂಗಾಳದ ಕೆಲವು ಕಡೆ ದೀಪಾವಳಿ ಹಬ್ಬದಲ್ಲಿ 'ಅಲಕ್ಷ್ಮಿ'ಗೂ ಪೂಜೆ ಮಾಡುವ ವಾಡಿಕೆ ಇದೆ. ಕೋಲ್ಕತಾದ ಕಾಳಿಘಾಟ್‍ನಲ್ಲಿರುವ ಕಾಳಿಯನ್ನು ದೀಪಾವಳಿ ಸಮಯದಲ್ಲಿ ಮಹಾಲಕ್ಷ್ಮೀ ರೂಪದಲ್ಲಿ ಪೂಜಿಸುತ್ತಾರೆ.

ದೀಪಾವಳಿ ಹಬ್ಬದ ಸಮಯದಲ್ಲಿ ಮಾತೆ ಮಹಾಲಕ್ಷ್ಮಿ ಕುರಿತಾದ ಅನೇಕ ವಿಸ್ಮಯಕಾರಿ ಸಂಗತಿಗಳು ಇಲ್ಲಿವೆ
ಮಾತೆ ಮಹಾಲಕ್ಷ್ಮಿ ಕುರಿತಾದ ಅನೇಕ ವಿಸ್ಮಯಕಾರಿ ಸಂಗತಿಗಳು
Follow us
| Edited By: ಸಾಧು ಶ್ರೀನಾಥ್​

Updated on: Nov 13, 2023 | 9:40 AM

ಲಕ್ಷ್ಮಿಯ ಬಗ್ಗೆ ದೇಶದ ಬೇರೆ ಬೇರೆ ಕಡೆ ಯಾವ ಯಾವ ತರಹದ ನಂಬಿಕೆಗಳಿವೆ ಎಂದು ತಿಳಿದುಕೊಳ್ಳಿ. ಲಕ್ಷ್ಮಿ (Goddess Mahalakshmi) ಎನ್ನುವ ಪದ ಸಂಸ್ಕೃತದ ‘ಲಕ್ಷ್’ ಎನ್ನುವ ಪದದಿಂದ ಬಂದಿದೆ; ಲಕ್ಷ್ ಅಂದ್ರೆ ‘ಗುರಿ’ ಅಂತ ಅರ್ಥ ಸಂಸ್ಕೃತದಲ್ಲಿ ಇದರರ್ಥ ‘ಗಮನಿಸುವುದು’ ಅಥವಾ ‘ಅಂದುಕೊಳ್ಳುವುದು’. ಇದಕ್ಕೆ ‘ಗುರಿ’ ಎನ್ನುವ ಅರ್ಥ ಸಹ ಇದೆ. ಲಕ್ಷ್ಮಿಗೆ ಎಷ್ಟೊಂದು ಹೆಸರುಗಳಿವೆ. ಲಕ್ಷ್ಮಿಯ ನೆರಳನ್ನು ‘ಅಲಕ್ಷ್ಮಿ’ ಎಂದು ಕರೆಯುತ್ತಾರೆ. ಬಂಗಾಳದ ಕೆಲವು ಕಡೆ ದೀಪಾವಳಿ ಹಬ್ಬದಲ್ಲಿ ‘ಅಲಕ್ಷ್ಮಿ’ಗೂ ಪೂಜೆ ಮಾಡುವ ವಾಡಿಕೆ ಇದೆ. ಕೋಲ್ಕತಾದ ಕಾಳಿಘಾಟ್‍ನಲ್ಲಿರುವ ಕಾಳಿಯನ್ನು ದೀಪಾವಳಿ ಸಮಯದಲ್ಲಿ (Deeepavali festival) ಮಹಾಲಕ್ಷ್ಮೀ ರೂಪದಲ್ಲಿ ಪೂಜಿಸುತ್ತಾರೆ.

* ಲಕ್ಷ್ಮೀಗೆ ಇರುವ ನೂರಾರು ಹೆಸರುಗಳೂ ತಾವರೆ ಹೂವಿಂದಾನೇ ಬಂದಿರುವುದು. ನಮ್ಮಲ್ಲಿ ಲಕ್ಷ್ಮಿಗೂ ತಾವರೆ ಹೂವಿಗೂ ನೇರವಾದ ಹೋಲಿಕೆಗಳನ್ನು ಕೊಡುತ್ತೇವೆ. ಲಕ್ಷ್ಮೀ ಗೆ ಈ ಹೆಸರುಗಳು ಬಂದಿರುವುದೇ ತಾವರೆ ಹೂವಿನಿಂದ: ‘ಪದ್ಮ’, ‘ಕಮಲ’ ಅಂದರೆ ತಾವರೆ ಹೂವಲ್ಲಿ ನೆಲೆಸಿರುವವಳು. ‘ಪದ್ಮಪ್ರಿಯೆ’ ಅಂದರೆ ತಾವರೆ ಹೂವನ್ನು ಇಷ್ಟ ಪಡುವವಳು. ‘ಪದ್ಮಮಾಲಾಧರಾದೇವಿ’ : ಅಂದರೆ ತಾವರೆ ಹೂವಿನ ಹಾರ ಧರಿಸಿರುವವಳು. ‘ಪದ್ಮಾಕ್ಷಿ’ : ತಾವರೆಯಂತಹ ಕಣ್ಣುಗಳನ್ನು ಹೊಂದಿರುವವಳು, ಹೀಗೇ.

* ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಇಡುವ ಸುಮಾರು ಹೆಸರುಗಳು ಲಕ್ಷ್ಮೀಯದೇ. ಲಕ್ಷ್ಮಿಗಿರುವ ಬೇರೆ ಬೇರೆ ಹೆಸರುಗಳು. ಮನುಶ್ರೀ, ಚಕ್ರಿಕ, ಕಮಲಿಕ, ಐಶ್ವರ್ಯ, ಲಲಿಮ, ಕಲ್ಯಾಣಿ, ನಂದಿಕ, ರಜುಲ, ವೈಷ್ಣವಿ, ಸಮೃದ್ಧಿ, ನಾರಾಯಣಿ, ಭಾರ್ಗವಿ, ಶ್ರೀದೇವಿ, ಚಂಚಲ, ಜಲಜ, ಮಾಧವಿ, ಸುಜಾತ, ಶ್ರೇಯ, ರಮಾ, ಯಶಸ್ವಿನಿ.

* ಲಕ್ಷ್ಮಿ ಪೂಜೆಗೆ ತಾವರೆ ಹೂವು, ಶ್ರೀಗಂಧ, ಕುಂಕುಮ, ಎಲೆ – ಅಡಿಕೆ ಇರಬೇಕು. ತೆಂಗಿನಕಾಯಿ, ಹಣ್ಣುಗಳು, ಬೆಲ್ಲದಲ್ಲಿ ಮಾಡಿದ ಸಿಹಿ ತಿಂಡಿಗಳು, ಅನ್ನ ಇವು ಲಕ್ಷ್ಮಿಯ ಪೂಜೆಯಲ್ಲಿ ಮಾಡುವ ನೈವೇದ್ಯಗಳು.

* ಲಕ್ಷ್ಮಿ ಫೋಟೋದಲ್ಲಿ ಲಕ್ಷ್ಮೀ ಕೈಯಿಂದ ನಾಣ್ಯಗಳು ಬೀಳುತ್ತಾ ಇರುತ್ತದಲ್ಲ ಅದು ಏಳಿಗೆಯ ಸಂಕೇತ. ಲಕ್ಷ್ಮೀ ಆನೆಗಳು ಲಕ್ಷ್ಮಿಯ ಶಕ್ತಿ. ಕೆಲವೊಂದು ಪುರಾಣದಲ್ಲಿ ಲಕ್ಷ್ಮೀ ಮುಖದಲ್ಲಿ ಯಾವಾಗಲೂ ನಗು ಇರುತ್ತದೆ. ನಾರಾಯಣನ ಹೊಕ್ಕಳಿಂದ ಬಂದ ಬಳ್ಳಿಯಲ್ಲಿ ಬಿಟ್ಟಿರುವ ತಾವರೆ ಹೂ ಮೇಲೆ ಕುಳಿತಿರುವ ಲಕ್ಷ್ಮೀ, ಮನುಷ್ಯನ ಜೈವಿಕ ಬೆಳವಣಿಗೆಯನ್ನು ತೋರಿಸುತ್ತದೆ.

* ಅಷ್ಟ ಲಕ್ಷ್ಮಿ ಅಂದರೆ ನಮಗೆ ಹಣವನ್ನು ಪಡೆಯಲಿಕ್ಕೆ ಇರುವ ಬೇರೆ ಬೇರೆ ಮೂಲಗಳನ್ನು ಪ್ರತಿನಿಧಿಸುವ ಲಕ್ಷ್ಮಿಯ ಎಂಟು ವಿವಿಧ ರೂಪಗಳು. ಮಹಾಲಕ್ಷ್ಮಿ ಅಂದರೆ 18 ರೀತಿಯ ಸಂಪತ್ತಿಗೆ ಒಡತಿ ಅಂತ ಅರ್ಥ. ಆ 18ರಲ್ಲಿ 8 ಸಂಪತ್ತುಗಳನ್ನು ಅಷ್ಟ ಸಿದ್ಧಿಗಳು ಅಂತಾರೆ; ಒಂಬತ್ತನೆಯದು ಜ್ಞಾನ ಮತ್ತು ಹತ್ತನೇದು ಯಾರಲ್ಲೂ ಭೇದ ಭಾವ ಮಾಡದೇ ಜಗತ್ತಿಗೆ ಜ್ಞಾನವನ್ನು ಹಂಚುವುದು.

* ಅಷ್ಟೇ ಅಲ್ಲದೇ, ಇನ್ನೂ 16 ಸಂಪತ್ತುಗಳನ್ನು ಕೊಡುತ್ತಾಳಂತೆ. ಕೀರ್ತಿ, ಜ್ಞಾನ, ಧೈರ್ಯ, ಶಕ್ತಿ, ಗೆಲುವು, ಒಳ್ಳೆಯ ಮಕ್ಕಳು, ಪರಾಕ್ರಮ, ಚಿನ್ನ, ಹೇರಳವಾದ ಧಾನ್ಯ, ಸಂಪತ್ತು, ಸಂತೋಷ, ಆನಂದ, ಬುದ್ಧಿ, ಅಂದ, ಯಶಸ್ಸು, ಚಿಂತನೆ, ಧ್ಯಾನ ಶಕ್ತಿ, ಒಳ್ಳೆತನ, ಆರೋಗ್ಯ, ಆಯಸ್ಸು.

* ಲಕ್ಷ್ಮಿಗೆ ಕೋಟ್ಯಾಂತರ ರೂಪಗಳಿವೆಯಂತೆ. ಅವಳ ದಯೆ ಇಲ್ಲದೇ ಈ ಪ್ರಪಂಚದಲ್ಲಿ ಏನೂ ಇರಲಾರದಂತೆ. ಒಂದೊಂದು ಯುಗದಲ್ಲೂ ಒಂದೊಂದು ಹಿಂದೂ ಗ್ರಂಥಗಳಲ್ಲೂ ಬೇರೆ ಬೇರೆ ಉಲ್ಲೇಖ ಇರುವುದಕ್ಕೆ ಇದೇ ಕಾರಣವಂತೆ! ಗಾಳಿ, ಅನ್ನ, ನೀರು, ಏನೂ ಇರಲಾರದಂತೆ, ದುಡ್ಡಿಲ್ಲದೇ ಏನೂ ಇಲ್ಲ ಈ ಜಗತ್ತಲ್ಲಿ. ವೇದಾಂತಿಗಳನ್ನು ಬಿಟ್ಟರೆ ಉಳಿದವರಿಗೆಲ್ಲಾ ಜೀವನದಲ್ಲಿ ತುಂಬಾ ದುಡ್ಡು ಬೇಕೇಬೇಕು. ತಿರುಪೆ ಎತ್ತುವವನಿಗೂ ಯಾರಾದರೂ ನಾಲ್ಕು ಕಾಸು ಹಾಕಬೇಕಾದರೂ ಅದಕ್ಕೆ ಲಕ್ಷ್ಮಿಯ ದಯೆ ಇರಲೇಬೇಕು. ಸ್ವರ್ಗದಲ್ಲಿರುವ ದೇವೇಂದ್ರನಿಗೂ ಅಷ್ಟೊಂದು ಸಂಪತ್ತು ಸಿಕ್ಕಿದ್ದು ಈ ತಾಯಿ ದಯದಿಂದಲೇ ಅನಿಸುತ್ತದೆ ಪುರಾಣಗಳು.

* ಮಹಾಲಕ್ಷ್ಮಿಗೆ ಹಲವು ರೂಪಗಳಿವೆ: ಶ್ರೀದೇವಿ, ಭೂದೇವಿ, ನೀಲಾದೇವಿ ಇವುಗಳು ತುಂಬಾ ಹೆಚ್ಚು ಕೇಳಲ್ಪಡುವುದು ಶ್ರೀದೇವಿ ಎನ್ನುವ ಹೆಸರು. ಅಲೆದಾಡುವ ಸಂಪತ್ತನ್ನು ತೋರುವಂತದ್ದು (ಸಂಸ್ಕೃತದಲ್ಲಿ ಅದನ್ನ ಚಂಚಲ ಅಂತಾರೆ). ಭೂದೇವಿ ಎನ್ನುವ ಹೆಸರು ಅಲೆದಾಡದೇ ಒಂದೆಡೆ ಇರುವ ಸಂಪತ್ತನ್ನು ತೋರುವಂತದ್ದು. ಸುಮಾರು 50 ವರ್ಷಗಳ ಹಿಂದೆ ತಮಿಳುನಾಡಲ್ಲಿದ್ದ ಆಂಡಾಳ್ ಎನ್ನುವ ಒಬ್ಬ ಸನ್ಯಾಸಿನಿ ಮಹಾಲಕ್ಷ್ಮಿಯ ಅವತಾರ ಅಂತ ನಂಬಿಕೆ. ಚಂಚಲವಾಗಿರುವವರ ಹತ್ತಿರ ಲಕ್ಷ್ಮೀ ಇರುವುದಿಲ್ಲ ಎಂದು ನಂಬಿಕೆ.

* ಲಕ್ಷ್ಮಿಗೆ ಸಂಬಂಧಿಸಿದ 2 ದೊಡ್ಡ ಹಬ್ಬಗಳನ್ನು ನಮ್ಮಲ್ಲಿ ಆಚರಿಸುತ್ತಾರೆ. ಒಂದು ವರಮಹಾಲಕ್ಷ್ಮಿ ಪೂಜೆ, ಇನ್ನೊಂದು ದೀಪಾವಳಿ ಲಕ್ಷ್ಮಿ ಪೂಜೆ.

* ‘ಶ್ರೀ’ ಅಂದರೆ ನೆಮ್ಮದಿ – ಸಂತೋಷ ತರುವಂತದ್ದು ಎಂದು ಅರ್ಥ. ಅದಕ್ಕೇ ಯಾರನ್ನಾದರೂ ಆದರ – ಗೌರವದಿಂದ ಕರೆಯ ಬೇಕಾದರೆ (ಅಥವಾ ಹೆಸರು ಬರೆಯ ಬೇಕಾದರೆ) ಹೆಸರಿಗೆ ಮೊದಲು ಶ್ರೀ ಅಂತ ಸೇರಿಸುವುದು. ಅದೇ ತರಹ ಹೆಂಗಸರ ಹೆಸರಿಗೆ ಶ್ರೀಮತಿ ಅಂತ ಸೇರಿಸುತ್ತಾರೆ. 🌷 ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನೆಲೆಸಿರುವ ದೇವಿ ಹೆಸರು ಕರವೀರ ನಿವಾಸಿನಿ ಮಹಾಲಕ್ಷ್ಮೀ. ಅಂಬಾ ಬಾಯಿ ಎಂದು ಕರೆಯುತ್ತಾರೆ.

* ಲಕ್ಷ್ಮಿಗೆ ಗೂಬೆ ವಾಹನ ಎನ್ನುವ ನಂಬಿಕೆ ಇದೆ. ಲಕ್ಷ್ಮಿಗೆ ದಿನಾ ಪೂಜೆ ಮಾಡುತ್ತಾರೆ. ಆದರೂ ಶರದ್ ಋತುವಿನಲ್ಲಿ ವಿಶೇಷ ಪೂಜೆ, ನೈವೇದ್ಯ, ಸಹಸ್ರನಾಮ ಪಾರಾಯಣ ಎಲ್ಲಾ ನಡೆಯುತ್ತದೆ. ಬಂಗಾಳದಲ್ಲಿ ಅಕ್ಟೋಬರ್ ನ ಸಮಯದಲ್ಲಿ ಹುಣ್ಣಿಮೆ ಇದ್ದಾಗ ಲಕ್ಷ್ಮಿ ಪೂಜೆ ಮಾಡುವ ಪದ್ದತಿ ಇದೆ. ವಾಹನ ಗೂಬೆ ಎನ್ನುವ ನಂಬಿಕೆ ಇಲ್ಲಿದೆ. ನಮ್ಮ ಲೋಕಕ್ಕೆ ಹುಣ್ಣಿಮೆಯ ರಾತ್ರಿ ಬಂದು ನಮ್ಮ ಕತ್ತಲು (ಕಷ್ಟ, ನೋವುಗಳು, ಕೋಪ, ಸೋಮಾರಿತನ) ಇದನ್ನೆಲ್ಲಾ ತೆಗೆದುಕೊಂಡು ಹೋಗುತ್ತಾಳೆ ಅನ್ನುವ ನಂಬಿಕೆ ಇಲ್ಲಿದೆ. ಗೂಬೆಯನ್ನು ಇಲ್ಲಿ ತೀಕ್ಷ್ಣ ಕಣ್ಣುಳ್ಳ, ವೈಭೋಗದ ಮತ್ತೆ ಬುದ್ಧಿವಂತಿಕೆಯ ಸಂಕೇತ ಅಂತ ನೋಡುತ್ತಾರೆ. ಇದೇ ಹಬ್ಬವನ್ನು ಒಡೀಶಾದಲ್ಲಿ ‘ಕುಮಾರ ಪೂರ್ಣಿಮಾ’ ಅಂತಾರೆ. ಅಲ್ಲಿರುವ ಎಲ್ಲಾ ವ್ಯಾಪಾರಿಗಳೂ ತುಂಬಾ ಜೋರಾಗಿ ಮಾಡುವ ಹಬ್ಬ ಇದು. ಅಲ್ಲಿ ಆ ದಿನ ‘ಆಸ್ಪೂಚಿ’ ಅನ್ನುವ ಆಟ ಆಡುವುದು ವಿಶೇಷವಂತೆ!

* ಲಕ್ಷ್ಮಿಗೆ ಎಲ್ಲಾ ಫೋಟೋಗಳಲ್ಲೂ ಕೆಂಪು ಬಟ್ಟೆ ಹಾಕಿರುತ್ತಾರೆ. ಇದು ಅರ್ಥ ಸತತವಾಗಿ ನಡೆಯುವ ಕ್ರಿಯೆ ಅಂತ ತೋರಿಸುತ್ತದೆ. ಚಿನ್ನದ ಒಡವೆಗಳ ಅಲಂಕಾರ ವರವನ್ನು ಈಡೇರಿಸುವ ಗುಣವನ್ನು ತೋರಿಸುತ್ತದೆ.

* ಲಕ್ಷ್ಮೀಯನ್ನು ಒಲಿಸಿಕೊಳ್ಳಲಿಕ್ಕೆ ಅಷ್ಟೋತ್ತರ, ಸಹಸ್ರನಾಮಗಳನ್ನು, ಹಾಡುಗಳನ್ನು ಹೇಳಬೇಕು.

ಲೇಖನ – ಡಾ. ಬಸವರಾಜ್ ಗುರೂಜಿ

ತಾಜಾ ಸುದ್ದಿ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ