Kathika Deepotsava: ಕಾರ್ತಿಕ ಮಾಸದಲ್ಲಿ ದೀಪೋತ್ಸವದ ಇತಿಹಾಸ, ವಿಶೇಷತೆಗಳ ಬಗ್ಗೆ ತಿಳಿಯಿರಿ

ಕಾರ್ತಿಕ ಎಂದರೆ ಮಧ್ಯದ ತಿಂಗಳು ಈಗೀನ ಕ್ಯಾಲೆಂಡರ್ ಪ್ರಕಾರ ಅಂದಾಜು ಅಕ್ಟೋಬರ್-ನವೆಂಬರ್. ಹಿಂದೂಗಳಿಗೆ ಇದು ಒಂದು ವರ್ಷದ ಅತ್ಯಂತ ಪವಿತ್ರವಾದ ತಿಂಗಳು ಎಂದು ಪರಿಗಣಿಸಲಾಗಿದೆ.

Kathika Deepotsava: ಕಾರ್ತಿಕ ಮಾಸದಲ್ಲಿ ದೀಪೋತ್ಸವದ ಇತಿಹಾಸ, ವಿಶೇಷತೆಗಳ ಬಗ್ಗೆ ತಿಳಿಯಿರಿ
Karthika Deepotsava
Follow us
TV9 Web
| Updated By: ನಯನಾ ರಾಜೀವ್

Updated on: Nov 20, 2022 | 9:39 AM

ಕಾರ್ತಿಕ ಎಂದರೆ ಮಧ್ಯದ ತಿಂಗಳು ಈಗೀನ ಕ್ಯಾಲೆಂಡರ್ ಪ್ರಕಾರ ಅಂದಾಜು ಅಕ್ಟೋಬರ್-ನವೆಂಬರ್. ಹಿಂದೂಗಳಿಗೆ ಇದು ಒಂದು ವರ್ಷದ ಅತ್ಯಂತ ಪವಿತ್ರವಾದ ತಿಂಗಳು ಎಂದು ಪರಿಗಣಿಸಲಾಗಿದೆ. ಭಕ್ತರು ಈ ತಿಂಗಳಲ್ಲಿ ಮುಂಜಾನೆ ಸ್ನಾನ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಈ ಕಾರ್ತಿಕ ಪೂರ್ಣಿಮಾ. ಪುಣ್ಯ ಸ್ನಾನಕ್ಕೆ ವಿಶೇಷ ಮಹತ್ವವಿದೆ.

ನಮ್ಮ ಶಿರಸಿಯಲ್ಲಿ ಕೂಡ ನಾಡಿಗಗಲ್ಲಿಯಲ್ಲಿ ಇರುವಂತಹ ಪುರಾತನವಾದಂತಹ ಶ್ರೀಹನುಮಂತ ದೇವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರತಿ ಶನಿವಾರದಂದು ನಸುಕಿನಲ್ಲಿ ವಿಶೇಷ ಆರತಿಯನ್ನು ಮಾಡಲಾಗುತ್ತದೆ ಇದಕ್ಕೆ ಕಾಕಡಾರತಿ ಎಂದು ಹೆಸರು. ಈ ವಿಶೇಷ ಕಾಕಡಾರತಿ ಗೆ ಭಕ್ತರ ಜನಸ್ತೋಮವೇ ಹರಿದು ಬರುತ್ತದೆ.

ಭಕ್ತರು ತಂದಂತಹ ಆರತಿಯನ್ನು ಶ್ರೀ ದೇವರಿಗೆ ಬೆಳಗಲಾಗುತ್ತದೆ. ಅಲ್ಲದೆ ಹಲವು ದೇವಸ್ಥಾನಗಳಲ್ಲಿ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಪ್ರತಿದಿನ ಸಾಯಂಕಾಲ ದೀಪೋತ್ಸವವನ್ನು ಮಾಡಲಾಗುತ್ತದೆ.

ದೀಪೋತ್ಸವದ ಹಲವಾರು ವಿಶೇಷತೆಗಳು ನಂಬಿಕೆಗಳು ಪುರಾಣಗಳಲ್ಲಿ ನೋಡಲು ಸಿಗುತ್ತವೆ ಅದರಲ್ಲಿ ಮಹತ್ವದ ಒಂದು ಸಂಗತಿ ಎಂದರೆ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ವಿಜಯದ ಸಂಭ್ರಮ ಆಚರಣೆಯ ಭಾಗವಾಗಿ ಕಾರ್ತಿಕ ಮಾಸದಲ್ಲಿ ಸರಯೂ ನದಿದಡದಲ್ಲಿ ಒಂದು ತಿಂಗಳು ದೀಪೋತ್ಸವ ಮಾಡಲಾಗಿತ್ತು ,ಅದೇ ಮುಂದುವರೆದು ಈ ಆಚರಣೆ.

ಪುರಾಣದ ಪ್ರಕಾರ, ಕಾರ್ತಿಕ ಮಾಸದಲ್ಲಿ ಸಂಧ್ಯಾ ಸಮಯದಲ್ಲಿ (ಅಂದರೆ ಸಂಧ್ಯಾಕಾಲದಲ್ಲಿ) ಎಳ್ಳಿನ (ತಿಳ) ಎಣ್ಣೆಯ ದೀಪವನ್ನು ಬೆಳಗಿಸುವ ವ್ಯಕ್ತಿಯು ಸಮೃದ್ಧಿ, ಸೌಂದರ್ಯ, ಆಶೀರ್ವಾದ ಮತ್ತು ಸಂಪತ್ತನ್ನು ಪಡೆಯುತ್ತಾನೆ.

ಕಾರ್ತಿಕ ಮಾಸದಲ್ಲಿ ಆಚರಿಸಲಾಗುವ ಇನ್ನೊಂದು ವಿಶೇಷ ಆಕಾಶ ದೀಪವನ್ನು (ತೂಗು ದೀಪಗಳು) ಅರ್ಪಿಸುವ ಸಂಪ್ರದಾಯವಿದೆ. ಪುರಿ, ಮಥುರಾ, ವೃಂದಾಬನ್ ಮುಂತಾದ ನಗರಗಳಲ್ಲಿ, ಅನೇಕ ಭಕ್ತರು ಗಂಗಾ ನದಿಯ ದಡದಲ್ಲಿ ತೂಗುದೀಪಗಳನ್ನು ಅರ್ಪಿಸುತ್ತಾರೆ. ಇದು ಮಣ್ಣಿನ ಮಡಕೆಯೊಳಗೆ ಹಾಕಿ ಬಿದಿರು ಮತ್ತು ಹಗ್ಗವನ್ನು ಬಳಸಿ ಗಾಳಿಯಲ್ಲಿ ಹಾಕುವ ದೀಪವಾಗಿದೆ.

ಕಾರ್ತಿಕ ಮಾಸದಲ್ಲಿ ಬೆಳಗುವ ಸಾಂಪ್ರದಾಯಿಕ ಎಣ್ಣೆ ದೀಪಗಳ ದೀಪಗಳು ಪೂರ್ವಜರ ಆತ್ಮಗಳು ಸ್ವರ್ಗವನ್ನು ತಲುಪುವ ಮಾರ್ಗವನ್ನು ಬೆಳಗಿಸುತ್ತದೆ ಎಂದು ನಂಬಲಾಗಿದೆ.

ಮಹಾಭಾರತದ 18 ದಿನಗಳ ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಸೈನಿಕರ ಗೌರವಾರ್ಥವಾಗಿ ಜನರು ಮೊದಲು ಈ ತೂಗುದೀಪಗಳನ್ನು ಬೆಳಗಿಸಿದರು ಎಂದು ಪುರಾಣ ಹೇಳುತ್ತದೆ. ಇವತ್ತಿನ ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮ ಭಾರತಕ್ಕಾಗಿ ವೀರ ಮರಣವನ್ನು ಹೊಂದಿದ ಸೈನಿಕರ ನೆನಪಿಗಾಗಿ ಇದನ್ನ ಪ್ರತಿದಿನವೂ ಕಾರ್ತಿಕ ಮಾಸದಲ್ಲಿ ಹಚ್ಚಿ ನಮ್ಮ ಕೃತಜ್ಞತೆಯನ್ನು ಗೌರವವನ್ನು ಸಲ್ಲಿಸಬಹುದಾಗಿದೆ.

ಕಾರ್ತಿಕ ಮಾಸದಲ್ಲಿ ದೀಪಗಳ ಹಬ್ಬ ದೀಪಾವಳಿ ಬರುತ್ತದೆ, ಇದನ್ನು ಸಾಮಾನ್ಯವಾಗಿ ಭಾರತದಲ್ಲಿ ದೀಪಾವಳಿ ಎಂದು ಕರೆಯಲಾಗುತ್ತದೆ. ಈ ಹಬ್ಬದಲ್ಲಿ ಬಡವ ಶ್ರೀಮಂತರೆನ್ನದೆ ಎಲ್ಲರೂ ತಮ್ಮ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ.

ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ತುಳಸಿ ಕಟ್ಟೆಯ ಮುಂದೆ ಸೂರ್ಯಾಸ್ತಕ್ಕೂ ಮುನ್ನ ದೀಪ (lamp) ಹಚ್ಚಿಡಬೇಕು. ಇನ್ನು ಕಾರ್ತಿಕ ಮಾಸದಲ್ಲಿ ಈ ರೀತಿ ದೀಪ (diyas) ಹಚ್ಚಿಡುವುದರಿಂದ ಹಿಂದಿನ ಪಾಪ ಮತ್ತು ತಪ್ಪುಗಳಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ.

ಅನೇಕ ಪುರಾಣಗಳ ಪ್ರಕಾರ ದೀಪಗಳು ಶುದ್ಧತೆಯ ಪ್ರತಿರೂಪಕವಾಗಿದೆ. ಇದೇ ಕಾರಣಕ್ಕೆ ಯಾವುದೇ ಶುಭ ಸಮಾರಂಭದಲ್ಲಿ ದೀಪ ಹಚ್ಚುವುದು ವಾಡಿಕೆ. ಈ ದೀಪಗಳು ನಮ್ಮ ಆರೋಗ್ಯ ಮತ್ತು ಪರಿಸರಕ್ಕೆ (ಶಕ್ತಿಯ ಬೆಳಕಿನ ಮೂಲವಾಗಿ ಮತ್ತು ಕ್ರಿಮಿನಾಶಕವಾಗಿ ರೀತಿಕಾರ್ಯನಿರ್ವಹಿಸುತ್ತದೆ) ದೀಪಗಳು ನೈಸರ್ಗಿಕ ಭಾಗ ಕೂಡ. ಗರಿಷ್ಠಚಳಿ ಇರುವಂತಹ ಪ್ರದೇಶಗಳಲ್ಲಿ ಸಾಮೂಹಿಕವಾಗಿ ದೊಡ್ಡ ಪ್ರಮಾಣದಲ್ಲಿ ದೀಪಗಳನ್ನು ಹಚ್ಚುವುದರಿಂದ ಆ ವಾತಾವರಣದ ತಾಪಮಾನವು ಕೂಡ ಹೆಚ್ಚಲು ಸಹಾಯವಾಗುತ್ತದೆ.

ದೀಪಗಳು ನಮ್ಮೊಳಗಿನ ಜ್ಞಾನ ಮತ್ತು ದೈವಿಕ ಬೆಳಕನ್ನು ಜಾಗೃತಗೊಳಿಸಲು ಸಂಕೇತಿಸುತ್ತದೆ. ಪುರಾಣಗಳ ಪ್ರಕಾರ ದೀಪಗಳು ಎಲ್ಲಾ ಕಲ್ಮಶಗಳನ್ನು ತೊಡೆದುಹಾಕಲು ಅನುವು ಮಾಡಿಕೊಡುತ್ತದೆ. ಶಕ್ತಿಯ ಶ್ರೇಷ್ಠ ರೂಪವನ್ನು ಒದಗಿಸುತ್ತದೆ, ಬೆಳಕು. ಯಾವುದೇ ಪೂಜೆಯ ಕೊನೆಯಲ್ಲಿ ಆರತಿಯನ್ನು ಅರ್ಪಿಸುವಾಗ ದೀಪಗಳನ್ನು ಕೂಡ ಬಳಸಲಾಗುತ್ತದೆ.

ದೀಪಗಳು ದೈವಿಕ ಸೆಳವನ್ನು ಸಂಕೇತಿಸುತ್ತದೆ. ಇದರ ಮೂಲಕ ಭಕ್ತರು ದೇವರ ವಿಗ್ರಹದ ಮೇಲೆ ಸ್ಪಷ್ಟವಾದ ನೋಟವನ್ನು ಹೊಂದಲು ಸಹಾಯ ಮಾಡುತ್ತದೆ. ನಾವು ಸಾಮಾನ್ಯವಾಗಿ ನಮ್ಮ ಕೈಗಳನ್ನು ಜ್ವಾಲೆಯ ಸುತ್ತ ಚಲಿಸುವ ಮೂಲಕ ಆರತಿಯನ್ನು ತೆಗೆದುಕೊಳ್ಳುತ್ತೇವೆ ಮತ್ತು ಆದ್ದರಿಂದ ದೇವರ ದೈವಿಕ ಶಕ್ತಿಯನ್ನು ನಮ್ಮೊಳಗೆ ಪಡೆಯುತ್ತೇವೆ ಎಂದು ನಂಬುತ್ತೇವೆ.

ಇದು ಆತ್ಮ ಮತ್ತು ಪರಮಾತ್ಮ ಸಿದ್ಧಾಂತವನ್ನು ಪ್ರತಿಬಿಂಬಿಸುತ್ತದೆ. ದೀಪಗಳು ಲಕ್ಷ್ಮಿ ದೇವಿಯ ಶಕ್ತಿಯನ್ನು ಸಂಕೇತಿಸುತ್ತದೆ, ಅದು ನಮ್ಮನ್ನು ಮೌಢ್ಯದ ಕತ್ತಲೆಯಿಂದ ದೂರವಿಡುತ್ತದೆ. ನಮ್ಮನ್ನು ಜ್ಞಾನ ಪ್ರಪಂಚಕ್ಕೆ ಸ್ವಾಗತಿಸುತ್ತದೆ.

ಮಾಹಿತಿ: ಡಾ. ರವಿಕಿರಣ ಪಟವರ್ಧನ, ಶಿರಸಿ, ಆಯುರ್ವೇದ ವೈದ್ಯರು

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್