ಒಡಿಶಾದ ಚಂಡಿಪುರದಲ್ಲಿ ಪೃಥ್ವಿ-II ಮತ್ತು ಅಗ್ನಿ-I ಬ್ಯಾಲಿಸ್ಟಿಕ್ ಕ್ಷಿಪಣಿಗಳ ಯಶಸ್ವಿ ಉಡಾವಣೆ
ಲಡಾಖ್‌ನಲ್ಲಿ ಆಕಾಶ್ ಪ್ರೈಮ್ ಪ್ರಯೋಗದ ಬೆನ್ನಲ್ಲೇ ಇಂದು ಒಡಿಶಾದ ಚಂಡಿಪುರದಲ್ಲಿ ಪೃಥ್ವಿ-II, ಅಗ್ನಿ-I ಶಾರ್ಟ್-ರೇಂಜ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ತಿಳಿಸಿದೆ. ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಅಡಿಯಲ್ಲಿ ನಡೆಸಲಾದ ಪರೀಕ್ಷೆಗಳು ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ನಿಯತಾಂಕಗಳಲ್ಲಿ ಉತ್ತಮ ಪ್ರದರ್ಶನ ನೀಡಿವೆ.

ನವದೆಹಲಿ, ಜುಲೈ 17: ಭಾರತ ಇಂದು (ಜುಲೈ 17) ಒಡಿಶಾದ ಚಂಡಿಪುರದಲ್ಲಿರುವ (Chandipur) ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಪೃಥ್ವಿ-II ಮತ್ತು ಅಗ್ನಿ-1 ಶಾರ್ಟ್-ರೇಂಜ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಸಚಿವಾಲಯ (Defence Ministry) ಘೋಷಿಸಿದೆ. ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ನೇತೃತ್ವದಲ್ಲಿ ನಡೆಸಲಾದ ಪರೀಕ್ಷೆಗಳು ಶಸ್ತ್ರಾಸ್ತ್ರ ವ್ಯವಸ್ಥೆಗಳ ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ನಿಯತಾಂಕಗಳನ್ನು ಮೌಲ್ಯೀಕರಿಸಿವೆ ಎಂದು ಅದು ಹೇಳಿದೆ.
“ಜುಲೈ 17ರಂದು ಒಡಿಶಾದ ಚಂಡಿಪುರದಲ್ಲಿರುವ ಸಮಗ್ರ ಪರೀಕ್ಷಾ ಶ್ರೇಣಿಯಿಂದ ಪೃಥ್ವಿ-II ಮತ್ತು ಅಗ್ನಿ-I ಎಂಬ ಕಿರು-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು” ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
Short-Range Ballistic Missiles, Prithvi-II and Agni-I, were successfully test-fired from the Integrated Test Range in Chandipur, Odisha on July 17, 2025. The launches validated all operational and technical parameters. These tests were conducted under the aegis of the Strategic… pic.twitter.com/WIzsbO6J1i
— ANI (@ANI) July 17, 2025
ಅಬ್ದುಲ್ ಕಲಾಂ ದ್ವೀಪದಿಂದ ಪರೀಕ್ಷಾರ್ಥ ಉಡಾವಣೆ ಮಾಡಲಾದ ಮೊದಲ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-I ಆಗಿತ್ತು. ಅದಾದ ಸ್ವಲ್ಪ ಸಮಯದ ನಂತರ ಚಂಡಿಪುರದ ಐಟಿಆರ್‌ನ ಉಡಾವಣಾ ಪ್ಯಾಡ್ ಸಂಖ್ಯೆ-IIIರಿಂದ ಪೃಥ್ವಿ-II ಅನ್ನು ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು.
A press release by the Ministry of Defence reads, “Short-Range Ballistic Missiles – Prithvi-II and Agni-I – were successfully test-fired from the Integrated Test Range in Chandipur, Odisha on July 17, 2025. The launches validated all operational and technical parameters. These… pic.twitter.com/D5lirAlzfu
— Press Trust of India (@PTI_News) July 17, 2025
ಇದನ್ನೂ ಓದಿ: ಭಾರತದ ವಿರುದ್ಧ ಚೀನಾ ಗೌಪ್ಯ ಮಾಹಿತಿ ನೀಡಿದ್ದನ್ನು ಒಪ್ಪಿಕೊಂಡ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್
Successful test-firing of Short-Range Ballistic Missile Prithvi-II & Agni-1 was carried out from the Integrated Test Range in Chandipur today. All operational and technical parameters have been validated. The launches were conducted under the aegis of Strategic Forces Command. pic.twitter.com/ZJXrmWQNZq
— Baba Banaras™ (@RealBababanaras) July 17, 2025
ನಿನ್ನೆ (ಜುಲೈ 16) ಭಾರತವು ಲಡಾಖ್‌ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆಕಾಶ್ ಪ್ರೈಮ್ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾವಣೆ ಮಾಡಿತ್ತು. ಇದನ್ನು 4,500 ಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿ ಕಾರ್ಯನಿರ್ವಹಿಸಲು ಕಸ್ಟಮೈಸ್ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಾಯು ರಕ್ಷಣಾ ವ್ಯವಸ್ಥೆಗಳ “ಅಸಾಧಾರಣ ಕಾರ್ಯಕ್ಷಮತೆ”ಯನ್ನು ಅನುಸರಿಸುವುದರಿಂದ ಆಕಾಶ್ ಪ್ರೈಮ್‌ನ ಪರೀಕ್ಷಾರ್ಥ ಉಡಾವಣೆಯು ಹೆಚ್ಚಿನ ಮಹತ್ವವನ್ನು ಹೊಂದಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:08 pm, Thu, 17 July 25




