Hanuman Worship: ಮಹಿಳೆಯರು ಹನುಮಂತನ ಪಾದವನ್ನು ಮುಟ್ಟಬಾರದು ಎಂದು ಹೇಳುವುದೇಕೆ?
ಮಂಗಳವಾರ ಹನುಮಂತನ ಪೂಜೆಗೆ ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಆದರೆ ಆಂಜನೇಯನನ್ನು ಪೂಜಿಸುವಾಗ ಮಹಿಳೆಯರು ಕೆಲವು ನಿಯಮಗಳನ್ನು ಪಾಲಿಸಬೇಕು. ಪಾದ ಸ್ಪರ್ಶ ಮಾಡದಿರುವುದು, ಸಿಂಧೂರ ಅರ್ಪಿಸದಿರುವುದು ಮತ್ತು ತಲೆಬಾಗದಿರುವುದು ಮುಖ್ಯ. ಹನುಮಂತ ಮಹಿಳೆಯರನ್ನು ತಾಯಿಯಂತೆ ಪರಿಗಣಿಸುವುದರಿಂದ ಪಾದ ಮುಟ್ಟದೇ ಭಕ್ತಿಯಿಂದ ಕೈಮುಗಿದು ನಮಸ್ಕರಿಸುವುದು ಸೂಕ್ತ.

ಹಿಂದೂ ಧರ್ಮದಲ್ಲಿ ಪ್ರತಿನಿತ್ಯವೂ ಒಂದೊಂದು ದೇವರ ಆರಾಧನೆಯ ಪರಿಪಾಠವಿದೆ. ಮಂಗಳವಾರವನ್ನು ಹನುಮಂತನನ್ನು ಪೂಜಿಸಲು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಆದರೆ ಇದರ ಜೊತೆಗೆ, ಹನುಮಂತನನ್ನು ಪೂಜಿಸಲು ಹಲವು ನಿಯಮಗಳಿವೆ, ಅದನ್ನು ಪಾಲಿಸುವುದು ಕೂಡ ಅವಶ್ಯಕ.
ಹನುಮಂತನನ್ನು ಪೂಜಿಸುವಾಗ ಮಹಿಳೆಯರು ಕೆಲವು ನಿಯಮಗಳಿಗೆ ವಿಶೇಷ ಗಮನ ನೀಡಬೇಕು. ಅವುಗಳಲ್ಲಿ ಒಂದು ಪೂಜೆಯ ಸಮಯದಲ್ಲಿ ಭಗವಂತನ ಪಾದಗಳನ್ನು ಮುಟ್ಟಬಾರದು. ಮಹಿಳೆಯರು ಹನುಮಂತನ ಪಾದಗಳನ್ನು ಮುಟ್ಟಿ ಏಕೆ ಆಶೀರ್ವಾದ ಪಡೆಯಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಹನುಮಂತನ ಪಾದ ಮುಟ್ಟಲು ಪುರುಷರು ಮಾತ್ರ ಸಾಧ್ಯ. ಇದಕ್ಕೆ ಕಾರಣವೇನೆಂದರೆ, ಹನುಮಂತನು ಬಾಲ್ಯದಿಂದಲೂ ಬ್ರಹ್ಮಚಾರಿ. ಬ್ರಹ್ಮಚಾರಿ ಎಂದರೆ ಲೌಕಿಕ ಆಸೆಗಳಿಂದ ದೂರವಿರುವವನು. ಇದಲ್ಲದೆ, ಹನುಮಂತನು ಪ್ರತಿಯೊಬ್ಬ ಮಹಿಳೆಯನ್ನು ತನ್ನ ತಾಯಿಯೆಂದು ಪರಿಗಣಿಸುತ್ತಾನೆ ಮತ್ತು ಯಾವುದೇ ತಾಯಿ ತನ್ನ ಮಗನ ಪಾದಗಳನ್ನು ಮುಟ್ಟುವುದಿಲ್ಲ. ಇದೇ ಕಾರಣಕ್ಕಾಗಿ ಮಹಿಳೆಯರು ಹನುಮಂತನ ಪಾದಗಳನ್ನು ಮುಟ್ಟುವ ಬದಲು ಕೈಗಳನ್ನು ಜೋಡಿಸಿ ನಮಸ್ಕರಿಸಬೇಕು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಶಿವ ದೇವಾಲಯದಲ್ಲಿ ಮೂರು ಬಾರಿ ಚಪ್ಪಾಳೆ ತಟ್ಟುವುದೇಕೆ? ಹಿಂದಿನ ಕಾರಣವನ್ನು ತಿಳಿಯಿರಿ
ಇದಲ್ಲದೆ, ಮಹಿಳೆಯರು ಹನುಮಂತನನ್ನು ಪೂಜಿಸುವಾಗ ಸಿಂಧೂರವನ್ನು ಅರ್ಪಿಸಬಾರದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಕಲಿಯುಗದ ದೇವರು ಎಂದು ಕರೆಯಲ್ಪಡುವ ಆಂಜನೇಯ ಸ್ವಾಮಿಯ ಮುಂದೆ ಯಾವುದೇ ಮಹಿಳೆ ತನ್ನ ತಲೆಯನ್ನು ಬಗ್ಗಿಸಬಾರದು. ಇನ್ಮುಂದೆ ಮುಂದೆ ತಲೆ ಬಾಗದೆ, ಕೈಮುಗಿದು ನಮಸ್ಕರಿಸಬೇಕೆನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








