AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ಮನೆ, ಜಾಗ ಖರೀದಿಸುವ ಯೋಚನೆ ಇದ್ದರೆ, ಈ ಮುಖ್ಯ ವಾಸ್ತು ಸಲಹೆ ಮರೆಯದಿರಿ

ಮನೆ ಖರೀದಿಸುವ ಯೋಚನೆ ಇದ್ದರೆ, ಕೆಲವು ಮುಖ್ಯ ವಾಸ್ತು ನಿಯಮಗಳನ್ನು ಗಮನದಲ್ಲಿಡುವುದು ಅಗತ್ಯ. ಮನೆ ಖರೀದಿಸುವಾಗ ಅದರ ಸುತ್ತಮುತ್ತ ಸ್ಮಶಾನ, ಕಸದ ರಾಶಿ, ಪಾಳು ಬಾವಿ ಅಥವಾ ಉತ್ತರದಲ್ಲಿ ಬೆಟ್ಟದಂತಹ ಪ್ರದೇಶ ಇರದಂತೆ ನೋಡಿಕೊಳ್ಳಿ. ಇವು ವಾಸ್ತು ದೋಷಗಳಿಗೆ ಕಾರಣವಾಗಿ ಕುಟುಂಬದ ಶಾಂತಿ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗೆ ಅಡ್ಡಿಯಾಗಬಹುದು.

Vastu Tips: ಮನೆ, ಜಾಗ ಖರೀದಿಸುವ ಯೋಚನೆ ಇದ್ದರೆ, ಈ ಮುಖ್ಯ ವಾಸ್ತು ಸಲಹೆ  ಮರೆಯದಿರಿ
ವಾಸ್ತು ಸಲಹೆ
ಅಕ್ಷತಾ ವರ್ಕಾಡಿ
|

Updated on: Feb 21, 2026 | 12:57 PM

Share

ಹಿಂದೂ ಸಂಪ್ರದಾಯಗಳಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ಭೂಮಿಯನ್ನು ಖರೀದಿಸುವುದರಿಂದ ಆರಂಭಿಸಿ, ಮನೆ ನಿರ್ಮಾಣ, ಗೃಹಪ್ರವೇಶ ಹಾಗೂ ದೈನಂದಿನ ಜೀವನವರೆಗೂ ವಾಸ್ತು ನಿಯಮಗಳು ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ. ಈ ನಿಯಮಗಳನ್ನು ಪಾಲಿಸದೆ ನಿರ್ಮಿಸಲಾದ ಮನೆಗಳಲ್ಲಿ ವಾಸ್ತು ದೋಷಗಳು ಉಂಟಾಗಿ, ಕುಟುಂಬದ ಶಾಂತಿ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗೆ ಅಡಚಣೆ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ವಿಶೇಷವಾಗಿ ಮನೆ ಖರೀದಿಸುವ ಯೋಚನೆ ಇದ್ದರೆ, ಕೆಲವು ಮುಖ್ಯ ವಾಸ್ತು ನಿಯಮಗಳನ್ನು ಗಮನದಲ್ಲಿಡುವುದು ಅಗತ್ಯ.

ಮನೆ ಹತ್ತಿರ ಸ್ಮಶಾನ:

ಮೊದಲನೆಯದಾಗಿ, ಮನೆ ಅಥವಾ ಆಸ್ತಿಯನ್ನು ಆಯ್ಕೆಮಾಡುವಾಗ ಅದರ ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿ ಪರಿಶೀಲಿಸಬೇಕು. ಮನೆ ಹತ್ತಿರ ಸ್ಮಶಾನ ಇರಬಾರದು ಎಂದು ವಾಸ್ತು ಸೂಚಿಸುತ್ತದೆ. ಇಂತಹ ಪ್ರದೇಶಗಳು ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತವೆ ಎಂಬ ನಂಬಿಕೆ ಇದೆ. ಇದು ಮನೆಯ ಒಳಗಿನ ಶಾಂತಿ, ಸಮತೋಲನ ಮತ್ತು ಸಕಾರಾತ್ಮಕ ವಾತಾವರಣಕ್ಕೆ ಧಕ್ಕೆಯನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ.

ಮನೆಯ ಸುತ್ತ ಕಸದ ರಾಶಿ:

ಅದೇ ರೀತಿ, ಮನೆಯ ಸುತ್ತ ಕಸದ ರಾಶಿಗಳು ಅಥವಾ ಅಶುಚಿ ಪ್ರದೇಶಗಳು ಇರಬಾರದು. ಕಸದ ಗುಡ್ಡೆಗಳು ಕೇವಲ ಆರೋಗ್ಯ ಸಮಸ್ಯೆಗಳಿಗೆ ಮಾತ್ರವಲ್ಲ, ವಾಸ್ತು ದೃಷ್ಟಿಯಿಂದಲೂ ಅಶುಭವೆಂದು ಪರಿಗಣಿಸಲಾಗುತ್ತದೆ. ಸ್ವಚ್ಛ ಮತ್ತು ನಿರ್ಮಲ ಪರಿಸರವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಮನೆ ನಿರ್ಮಾಣ ಅಥವಾ ಖರೀದಿಸುವಾಗ ಸ್ವಚ್ಛತೆಯನ್ನು ವಿಶೇಷವಾಗಿ ಗಮನಿಸಬೇಕು.

ಮನೆಯ ಹತ್ತಿರ ಪಾಳು ಬಾವಿ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಹತ್ತಿರ ದೊಡ್ಡ ಗುಂಡಿ, ಹೊಂಡ ಅಥವಾ ಪಾಳು ಬಾವಿ ಇದ್ದರೆ ಅದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಇಂತಹ ಕುಳಿಗಳು ಅಥವಾ ತಗ್ಗು ಪ್ರದೇಶಗಳು ಮನೆಯ ಶಕ್ತಿಸಂತುಲನವನ್ನು ಹಾಳುಮಾಡಬಹುದು. ಹೀಗಾಗಿ ಮನೆ ಆಯ್ಕೆ ಮಾಡುವ ಮೊದಲು ಅದರ ಸುತ್ತಲಿನ ಭೂಆಕಾರವನ್ನು ಪರಿಶೀಲಿಸುವುದು ಒಳಿತು.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಮನೆಯ ಉತ್ತರ ದಿಕ್ಕಿನಲ್ಲಿ ಬೆಟ್ಟ:

ಇನ್ನೊಂದು ಪ್ರಮುಖ ನಿಯಮವೆಂದರೆ ಮನೆಯ ಉತ್ತರ ದಿಕ್ಕಿನಲ್ಲಿ ಬೆಟ್ಟ ಅಥವಾ ದೊಡ್ಡ ಅಡಚಣೆ ಇರಬಾರದು. ಉತ್ತರ ದಿಕ್ಕು ಧನ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆ ದಿಕ್ಕಿನಲ್ಲಿ ಅಡಚಣೆ ಇದ್ದರೆ ಗಾಳಿಯ ಹರಿವು ಮತ್ತು ಶಕ್ತಿಯ ಪ್ರಸರಣ ತಡೆಯಲ್ಪಟ್ಟು, ಮನೆಯ ಒಟ್ಟು ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.

ಆದರೆ, ಇವುಗಳೆಲ್ಲವೂ ಪರಂಪರೆಯ ನಂಬಿಕೆಗಳ ಮೇಲೆ ಆಧಾರಿತವಾಗಿದೆ. ಮನೆ ಖರೀದಿಸುವಾಗ ಕೇವಲ ವಾಸ್ತು ಮಾತ್ರವಲ್ಲದೆ, ಸ್ಥಳದ ಸುರಕ್ಷತೆ, ನೀರು–ವಿದ್ಯುತ್ ಸೌಲಭ್ಯಗಳು, ರಸ್ತೆ ಸಂಪರ್ಕ ಮತ್ತು ಕಾನೂನು ಸಂಬಂಧಿತ ದಾಖಲೆಗಳ ಪರಿಶೀಲನೆಯೂ ಕೂಡ ಮುಖ್ಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು