AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karkataka Sankramana Dakshinayana: ಕರ್ಕಾಟಕ ರಾಶಿಗೆ ರವಿ ಪ್ರವೇಶದಿಂದ ಶುರು ದಕ್ಷಿಣಾಯನ- ಏನಿದರ ವಿಶೇಷ?

ಪ್ರತಿ ಮಾಸದಲ್ಲಿಯೂ ಸಾಮಾನ್ಯವಾಗಿ ಒಂದೊಂದು ರಾಶಿಗೆ ರವಿ ಗ್ರಹದ ಪ್ರವೇಶ ಆದಾಗ ಆ ರಾಶಿಯ ಹೆಸರಲ್ಲಿ ಸಂಕ್ರಮಣ ಅಥವಾ ಸಂಕ್ರಾಂತಿ ಆಗುತ್ತದೆ. ಮಕರ ಹಾಗೂ ಕರ್ಕಾಟಕ ಸಂಕ್ರಾಂತಿ ಇದರಲ್ಲಿ ವಿಶೇಷ. ಮಕರ ಸಂಕ್ರಾಂತಿಯ ನಂತರ ಮದುವೆ ಮೊದಲಾದ ಶುಭ ಕಾರ್ಯಗಳು ಬಹಳ ವೇಗವಾಗಿ ಚಾಲನೆ ಪಡೆದುಕೊಂಡರೆ, ಕರ್ಕಾಟಕ ಸಂಕ್ರಾಂತಿಯಿಂದ ನಂತರ ಇಂಥ ಶುಭ ಕಾರ್ಯಗಳ ಪ್ರಮಾಣ ಇಳಿಕೆ ಆಗುತ್ತದೆ. ಜುಲೈ 16ನೇ ತಾರೀಕು ಕರ್ಕಾಟಕ ಸಂಕ್ರಮಣ ಆಗಿದ್ದು, ದಕ್ಷಿಣಾಯನ ಶುರುವಾಗಿದೆ. ಈ ಸಂದರ್ಭಕ್ಕೆ ಇಲ್ಲಿರುವ ಲೇಖನ ಮಾಹಿತಿ ನೀಡುವಂಥದ್ದಾಗಿದೆ.

Karkataka Sankramana Dakshinayana: ಕರ್ಕಾಟಕ ರಾಶಿಗೆ ರವಿ ಪ್ರವೇಶದಿಂದ ಶುರು ದಕ್ಷಿಣಾಯನ- ಏನಿದರ ವಿಶೇಷ?
Dakshinayana
ಸ್ವಾತಿ ಎನ್​ಕೆ
| Updated By: Digi Tech Desk|

Updated on:Jul 17, 2025 | 11:26 AM

Share

ಆಷಾಢ ಮಾಸದಿಂದ ಸಾಮಾನ್ಯವಾಗಿ ಶುಭ ಕಾರ್ಯಗಳು, ಅದರಲ್ಲೂ ವೃದ್ಧಿ ಕಾರ್ಯಗಳು ಎಂದು ಯಾವ್ಯಾವುದನ್ನು ಕರೆಯಲಾಗುತ್ತದೆ ಅವುಗಳನ್ನು ನಾಲ್ಕು ಮಾಸಗಳ ಪರ್ಯಂತ ಮಾಡುವುದಿಲ್ಲ. ಆದರೆ ಕಾಲ- ಸಮಯದ ಬದಲಾವಣೆ ಆದಂತೆ ಇದ್ದುದರಲ್ಲಿಯೇ ಒಳ್ಳೆ ಮುಹೂರ್ತ ಎಂದೆನಿಸಿದ್ದನ್ನು ನೋಡಿಕೊಂಡು, ತಮಗೆ ಅನುಕೂಲವಾಗುವಂತೆ ಮದುವೆ ಮೊದಲಾದವನ್ನು ಮಾಡುವ ಪರಿಪಾಠ ಬಂದಿದೆ. ಅದಕ್ಕೆ ಹಲವು ಕಾರಣಗಳಿವೆ. ಏನೆಂದರೆ ಕರ್ಕ ಸಂಕ್ರಮಣ ಆರಂಭವಾದ ಮೇಲೆ (ಈ ಬಾರಿ ಜುಲೈ ಹದಿನಾರನೇ ತಾರೀಕು) ದಕ್ಷಿಣಾಯನ ಶುರುವಾಗಿದೆ. ದಕ್ಷಿಣಾಯನವು ಯಾವುದೇ ಶುಭ ಕಾರ್ಯಗಳಿಗೆ ಪ್ರಶಸ್ತವಲ್ಲ ಎಂಬ ಶಾಸ್ತ್ರ ವಚನವಿದೆ. ಮದುವೆ, ಉಪನಯನಾದಿ ಕಾರ್ಯಕ್ರಮಗಳನ್ನು ಉತ್ತರಾಯಣದಲ್ಲಿ ಮಾಡಬೇಕು. ಒಂದು ವೇಳೆ ಆಗ ಸಾಧ್ಯವಾಗಲಿಲ್ಲ, ಅನಿವಾರ್ಯ ಎಂದ ಪಕ್ಷದಲ್ಲಿ ಕೆಲವನ್ನು ನವರಾತ್ರಿಯ ಸಂದರ್ಭದಲ್ಲಿ, ಮತ್ತೆ ಕೆಲವು ಶುಭ ಕಾರ್ಯಗಳನ್ನು ಕಾರ್ತೀಕ ಮಾಸದಲ್ಲಿ ಮಾಡುವ ರೂಢಿ ಇದೆ.

ವಿಷ್ಣು ಶಯನ

ಇನ್ನು ಮಹಾವಿಷ್ಣುವು ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ ದಿನ ಕ್ಷೀರಸಾಗರದಲ್ಲಿ ಶೇಷ ಶಯ್ಯೆಯ ಮೇಲೆ ಶಯನ ಮಾಡುತ್ತಾನೆ. ಆ ಭಗವಂತ ತನ್ನ ನಿದ್ದೆಯಿಂದ ಮತ್ತೆ ಏಳುವುದು ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿಯ ದಿನ. ಈ ಬಗ್ಗೆ ವಿಷ್ಣು ಧರ್ಮದಲ್ಲಿ ಹೀಗೆ ಹೇಳಲಾಗಿದೆ: ಅನೂರಾಧ ನಕ್ಷತ್ರದ ಮೊದಲನೇ ಪಾದದಲ್ಲಿ ಮಹಾವಿಷ್ಣುವು ಪವಡಿಸುತ್ತಾನೆ, ರೇವತಿ ನಕ್ಷತ್ರದ ನಾಲ್ಕನೇ ಪಾದದಲ್ಲಿ ನಿದ್ದೆಯಿಂದ ಏಳುತ್ತಾನೆ ಹಾಗೂ ಶ್ರವಣ ನಕ್ಷತ್ರದ ಮಧ್ಯದ ಪಾದದಲ್ಲಿ ತನ್ನ ಮಗ್ಗುಲು ಬದಲಾಯಿಸುತ್ತಾನೆ. ಅಂದಹಾಗೆ ಈ ಮಲಗುವ, ಏಳುವ ಹಾಗೂ ಮಗ್ಗುಲು ಬದಲಿಸುವ ಸಮಯದಲ್ಲಿ ಭೋಜನ ಮಾಡುವುದನ್ನು ನಿಷೇಧಿಸಲಾಗಿದೆ. ಹೀಗೆ ಮಹಾ ವಿಷ್ಣುವು ಶಯನದಲ್ಲಿ ಇರುವಾಗ ಯಾವುದೇ ಶುಭ- ವೃದ್ಧಿ ಕಾರ್ಯಗಳನ್ನು ಮಾಡಬಾರದು ಎಂಬ ಅಭಿಪ್ರಾಯ ಇದೆ. ಈ ಮಾತು ದೈನಂದಿನ ಪೂಜೆ, ಪುನಸ್ಕಾರ ಹಾಗೂ ವ್ರತಗಳಿಗೆ ಅನ್ವಯ ಆಗುವುದಿಲ್ಲ.

ಇದನ್ನೂ ಓದಿ
Image
ಗರ್ಭಿಣಿಯರು ದೇವಸ್ಥಾನಕ್ಕೆ ಹೋಗಬಹುದೇ?
Image
ಪೂಜಾ ಕೋಣೆಯಲ್ಲಿ ಎಂದಿಗೂ ಈ ವಿಗ್ರಹಗಳನ್ನು ಇಡಬೇಡಿ!
Image
ಕಾಶಿಯಿಂದ ಗಂಗಾಜಲವನ್ನು ಮನೆಗೆ ತರಬಾರದು ಎಂದು ಹೇಳುವುದೇಕೆ?
Image
ಗಣೇಶನ ಪೂಜೆಯಲ್ಲಿ ಸ್ವಸ್ತಿಕ ಚಿಹ್ನೆಯ ಮಹತ್ವವನ್ನು ತಿಳಿಯಿರಿ

ಚಾತುರ್ಮಾಸ್ಯದ ಅವಧಿ

ಇನ್ನು ಚಾತುರ್ಮಾಸ್ಯದ ಅವಧಿಯಲ್ಲಿ ಆಹಾರ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಯತಿಗಳಾದವರಿಗೆ ಈ ಚಾತುರ್ಮಾಸ್ಯದ ಸಮಯ ಮತ್ತೂ ವಿಶೇಷವಾಗಿರುತ್ತದೆ. ಅವರಿಗೆ ಸಂಚಾರದ ವಿಚಾರಕ್ಕೂ ನಿಯಮಗಳಿವೆ. ಪ್ರತಿ ಮಾಸದಲ್ಲೂ ಸಂಕ್ರಾಂತಿ ಆಗುತ್ತದೆ. ಅವುಗಳನ್ನು ರಾಶಿಯ ಹೆಸರಿನಿಂದ ಕರೆಯಲಾಗುತ್ತದೆ. ಕುಂಭ, ಕರ್ಕ, ಕನ್ಯಾ ಮತ್ತು ಧನು ಸಂಕ್ರಾಂತಿಗಳಲ್ಲಿ, ಅಂದರೆ ಆ ಸಂಕ್ರಮಣ ದಿನದಂದು ಗೃಹಸ್ಥರು ಒಂದು ವೇಳೆ ಕೂದಲು ಕತ್ತರಿಸಿಕೊಂಡಲ್ಲಿ (ಕಟ್ಟಿಂಗ್ ಮಾಡಿಸಿಕೊಂಡಲ್ಲಿ) ವ್ಯಕ್ತಿಯ ಪಿತೃಗಳಿಗೆ ಅವೇ ಕೂದಲುಗಳಿಂದ ಯಮನು ಊಟ ಮಾಡಿಸುತ್ತಾನೆ ಎಂದು ಹೇಳಲಾಗಿದೆ. ಅದರರ್ಥ, ಆ ಸಮಯದಲ್ಲಿ ಕಟ್ಟಿಂಗ್ ಮಾಡಿಸಲೇಬಾರದು ಎಂಬುದಾಗಿದೆ. ಶಾಸ್ತ್ರಗಳು ಸಂಕೇತವಾಗಿ- ಸೂಚ್ಯವಾಗಿ ತಿಳಿಸುತ್ತವೆ. ಅದನ್ನು ಪದಶಃ, ಅಕ್ಷರಶಃ ಅರ್ಥೈಸಲು ಹೊರಡುವುದು ತಪ್ಪು.

ನದಿಗಳು ರಜಸ್ವಲೆ

ಮತ್ತೊಂದು ಮುಖ್ಯ ವಿಚಾರ ಎಂದರೆ, ಅತ್ರಿ ಋಷಿಯು ಹೇಳಿರುವ ಪ್ರಕಾರ, ಸಿಂಹ ಮತ್ತು ಕರ್ಕ ಸಂಕ್ರಾಂತಿಯ ಮಧ್ಯೆ ಎಲ್ಲ ನದಿಗಳು ರಜಸ್ವಲೆ ಆಗುತ್ತವೆ. ಆದ್ದರಿಂದ ಆ ಸಮಯದಲ್ಲಿ ನದಿಗಳಲ್ಲಿ ಸ್ನಾನ ಮಾಡಬಾರದು ಎಂದು ತಿಳಿಸಲಾಗಿದೆ. ಆದರೆ ಇದು ಸಣ್ಣ ನದಿಗಳಿಗೆ ಮಾತ್ರ ಅನ್ವಯ ಆಗುತ್ತದೆ. ಸಮುದ್ರ ಸೇರುವಂಥ ನದಿಗಳಿಗೆ ಅನ್ವಯ ಆಗುವುದಿಲ್ಲ ಎಂಬ ಮಾತನ್ನು ಸಹ ಹೇಳಲಾಗಿದೆ. ಯಾವ ಸಣ್ಣ ನದಿಗಳು ಗ್ರೀಷ್ಮ ಋತುವಿನಲ್ಲಿ (ಬೇಸಿಗೆಯಲ್ಲಿ) ಒಣಗುತ್ತವೋ ಅವುಗಳಲ್ಲಿ ವರ್ಷ ಋತುವಿನಲ್ಲಿ ಹತ್ತು ದಿನ ಸ್ನಾನ ಮಾಡಬಾರದು ಎಂದು ತಿಳಿಸಲಾಗಿದೆ. ಕರ್ಕ ಸಂಕ್ರಾಂತಿಯ ಆರಂಭದ ಮೂರು ದಿನ ಪೂರ್ತಿಯಾಗಿ ಮಹಾ ನದಿಗಳು ಸಹ ರಜಸ್ವಲೆ ಆಗುತ್ತವೆ, ನಾಲ್ಕನೇ ದಿನದಂದು ಶುದ್ಧವಾಗುತ್ತವೆ ಎಂದು ಹೇಳಲಾಗಿದೆ. ಆದರೆ ಈ ವಾಕ್ಯವು ನದಿಯ ದಡದಲ್ಲಿಯೇ ವಾಸಿಸುವವರಿಗೆ ಅನ್ವಯ ಆಗುವುದಿಲ್ಲ ಎಂಬ ವಚನವೂ ಇದೆ.

ವ್ರತ- ಪೂಜಾದಿಗಳಿಗೆ ಅನ್ವಯ ಆಗಲ್ಲ

ಬಹಳ ಜನ ವ್ರತ- ಪೂಜಾದಿಗಳನ್ನು ಮದುವೆ ಉಪಯನಾದಿ ಕಾರ್ಯಗಳ ಜೊತೆಗೆ ಹೋಲಿಕೆ ಮಾಡಿಕೊಳ್ಳುವುದುಂಟು. ಅದು ತಪ್ಪು ಹೋಲಿಕೆ ಆಗುತ್ತದೆ. ದೇವರ ಪೂಜೆ ನಿತ್ಯವೂ ಮಾಡಬೇಕು (ಕೆಲವು ನಿಷಿದ್ಧ ಸಮಯವನ್ನು ಹೊರತುಪಡಿಸಿ). ಮದುವೆ, ಉಪನಯನ, ಗೃಹಪ್ರವೇಶ ಇಂಥವುಗಳಿಗೆಲ್ಲ ಉತ್ತರಾಯಣವೇ ಶ್ರೇಷ್ಠ. ದಕ್ಷಿಣಾಯನ ಆರಂಭವಾದ ಮೇಲೆ ಇವುಗಳನ್ನು ಮಾಡುವುದು ಪ್ರಾಶಸ್ತ್ಯವಲ್ಲ ಎಂದು ಹೇಳಲಾಗುತ್ತದೆ. ಮಾಡಲೇಬಾರದು ಎಂದು ಹೇಳುವ ಕಾಲ ಧರ್ಮ ಇದಲ್ಲ. ಚಂದ್ರನಿಗೆ ಬಲ ಇರುವಾಗ, ರವಿ ಗ್ರಹವು ಮುಹೂರ್ತ ಲಗ್ನಕ್ಕೆ ಉತ್ತಮ ಸ್ಥಿತಿಯಲ್ಲಿ ಇರುವಾಗ, ಕೇಂದ್ರ ಸ್ಥಾನಗಳಲ್ಲಿ ಶುಭ ಗ್ರಹಗಳು ಇರುವಾಗ, ಇಷ್ಟ ಕಾಲಕ್ಕೆ ಇರುವಂಥ ನಕ್ಷತ್ರವು ಆ ಯಜಮಾನನ ನಕ್ಷತ್ರಕ್ಕೆ ಅನುಕೂಲವಿರುವಾಗ, ತಿಥಿ, ವಾರ, ಯೋಗ, ಕರಣಗಳು ಅನುಕೂಲವಿದ್ದ ಪಕ್ಷದಲ್ಲಿ ಜ್ಯೋತಿಷಿಗಳ ಮಾರ್ಗದರ್ಶನದಲ್ಲಿ ಮುಹೂರ್ತವನ್ನು ನಿಗದಿ ಮಾಡಬಹುದು.

ಪ್ರಾದೇಶಿಕವಾದ ಪದ್ಧತಿ ಗಮನಿಸಿ

ಮಗುವನ್ನು ತೊಟ್ಟಿಲಿಗೆ ಹಾಕುವುದಕ್ಕೆ ಜನನ ಕಾಲದಿಂದ ಇಷ್ಟನೇ ದಿನ ಮಾಡಬೇಕು ಎಂಬ ಪದ್ಧತಿ- ಶಾಸ್ತ್ರ ಇದೆ. ಕೆಲವರು ಅದೇ ದಿನವೇ ನಾಮಕರಣವನ್ನೂ ಮಾಡಿಬಿಡುತ್ತಾರೆ. ಅಂಥ ಸಂದರ್ಭದಲ್ಲಿ ವಿಶೇಷವಾಗಿ ಮುಹೂರ್ತವನ್ನು ನೋಡಬೇಕು, ತಾರಾ ಬಲಾದಿಗಳು ಇರಬೇಕು ಎಂಬ ಕಡ್ಡಾಯ ಏನಿಲ್ಲ. ಇನ್ನು ಆಯಾ ಪ್ರಾದೇಶಿಕವಾಗಿ ಅನುಸರಿಸುವ ಕ್ರಮಗಳು ಇರುತ್ತವೆ. ಅದು ಕಾಲಾನುಕಾಲದಿಂದ ನಡೆದುಕೊಂಡು ಬಂದ ಪದ್ಧತಿ ಆಗಿದ್ದಲ್ಲಿ ಅದನ್ನೇ ಮುಂದುವರಿಸಿಕೊಂಡು ಹೋಗುವುದು ಸಮ್ಮತವಾಗುತ್ತದೆ.

ನವರಾತ್ರಿ ಹಾಗೂ ಕಾರ್ತೀಕ ಮಾಸ

ದಕ್ಷಿಣಾಯನದಲ್ಲಿ ನವರಾತ್ರಿಯ ಒಂಬತ್ತು ದಿನ ಹಾಗೂ ಕಾರ್ತೀಕ ಮಾಸದಲ್ಲಿ ಮದುವೆ ಮೊದಲಾದ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಆದರೆ ಆ ಸಮಯದಲ್ಲಿ ಗುರು- ಶುಕ್ರಾಸ್ತವನ್ನು ಗಮನಿಸಲೇ ಬೇಕು. ತಾರಾ ಬಲ, ಚಂದ್ರ ಬಲ (ರಾತ್ರಿಯಲ್ಲಿ ಇಡುವ ಮುಹೂರ್ತಕ್ಕೆ), ರವಿ ಬಲ (ಹಗಲಿನಲ್ಲಿ ಇಡುವ ಮುಹೂರ್ತಕ್ಕೆ) ಹಾಗೂ ಗುರು ಬಲ ಇವೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಉತ್ತರಾಯಣದಲ್ಲಿಯೇ ಶುಭ ಕಾರ್ಯಗಳು ಮಾಡಬೇಕು ಎಂದು ಕಾಯುವವರು ಉಂಟು. ಅದು ತಮ್ಮ ಸಾಧ್ಯಾಸಾಧ್ಯತೆಯನ್ನು ಗಮನಿಸಿ, ನಿರ್ಧರಿಸುವುದು ಆಯಾ ವ್ಯಕ್ತಿಗಳಿಗೆ ಬಿಟ್ಟ ವಿಚಾರ. ಆದರೆ ಉತ್ತರಾಯಣವು ಶ್ರೇಷ್ಠ, ಉತ್ತಮ ಅನ್ನುವುದು ಸತ್ಯ.

ಲೇಖನ- ಸ್ವಾತಿ ಎನ್.ಕೆ.

Published On - 8:57 am, Thu, 17 July 25

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ