AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟವೆಲ್ ಸ್ಕರ್ಟ್: ಅಬ್ಬಬ್ಬಾ ಈ ವಿಚಿತ್ರ ಬಟ್ಟೆಯ ಬೆಲೆ ಎಷ್ಟು ಗೊತ್ತಾ?  

ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಹೆಸರಿನಲ್ಲಿ ಪ್ರಸಿದ್ಧ  ಕಂಪೆನಿಗಳು ಚಿತ್ರವಿಚಿತ್ರ ವಸ್ತುಗಳನ್ನು  ಮಾರಾಟ ಮಾಡಲು ಪ್ರಾರಂಭಿಸಿವೆ. ಅದರಲ್ಲೂ ಕೆಲವೊಂದು ವಸ್ತುಗಳು ಕಾಣಲು ಹಾಸ್ಯಾಸ್ಪದವಾಗಿರುತ್ತವೆ. ಅದೇ ರೀತಿ ಇದೀಗ ಐಷಾರಾಮಿ ಬ್ರ್ಯಾಂಡ್ ಕಂಪೆನಿಯೊಂದು ʼಟವೆಲ್ ಸ್ಕರ್ಟ್ʼ  ಎಂಬ ಹೊಸ ಬಗೆಯ  ಉಡುಪನ್ನು ಬಿಡುಗಡೆ ಮಾಡಿದ್ದು, ಇದು ಪುರುಷರು ಸ್ನಾನದ ಬಳಿಕ ಸೊಂಟಕ್ಕೆ ಸುತ್ತಿಕೊಳ್ಳುವ ಟವೆಲ್ನಂತಿದ್ದು, ಈ ಉಡುಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಂಗ್ಗೆ ಬಲಿಯಾಗಿದೆ. 

ಟವೆಲ್ ಸ್ಕರ್ಟ್: ಅಬ್ಬಬ್ಬಾ ಈ ವಿಚಿತ್ರ ಬಟ್ಟೆಯ ಬೆಲೆ ಎಷ್ಟು ಗೊತ್ತಾ?  
ಟವೆಲ್ ಸ್ಕರ್ಟ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2023 | 5:14 PM

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಫ್ಯಾಷನ್ ಕೂಡಾ ಬದಲಾಗುತ್ತಿರುತ್ತವೆ.  ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿ ಕಂಪೆನಿಗಳು ಚಿತ್ರವಿಚಿತ್ರ ವಸ್ತುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿವೆ. ಅದರಲ್ಲೂ  ಐಷಾರಾಮಿ ಫ್ಯಾಷನ್ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಏನಾದರೂ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿರುತ್ತವೆ. ಇತ್ತೀಚಿಗೆ  ಪ್ರಸಿದ್ಧ  ಕಂಪೆನಿಯಾದ  ಲೂಯಿ ವಿಟಾನ್  ಜಗತ್ತಿನ ಅತ್ಯಂತ ಚಿಕ್ಕದಾದ ಮೈಕ್ರೋ  ಬ್ಯಾಗ್ ತಯಾರಿಸಿ ಬಹಳ ಸುದ್ದಿಯಾಗಿತ್ತು. ಈ ಪ್ರಸಿದ್ಧ  ಕಂಪೆನಿಗಳು ತಯಾರಿಸುವ ಚಿತ್ರವಿಚಿತ್ರ ವಸ್ತುಗಳನ್ನು  ಖರೀದಿಸುವ ಅನೇಕ ಜನರಿದ್ದಾರೆ. ಅದರಲ್ಲೂ ಈ ಬ್ರ್ಯಾಂಡ್ಗಳು ತಯಾರಿಸುವ ಕೆಲವೊಂದು ಉತ್ಪನ್ನಗಳು ನೋಡಲು ಹಾಸ್ಯಾಸ್ಪದವಾಗಿರುತ್ತವೆ.  ಇದೀಗ ಅಂತಹದ್ದೇ ವಿಚಿತ್ರ ಬಟ್ಟೆಯೊಂದು ಫ್ಯಾಶನ್ ಲೋಕದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದು ನೋಡಲು ಥೇಟ್ ಪುರುಷರು ಸ್ನಾನದ ಬಳಿಕ ಸೊಂಟಕ್ಕೆ ಕಟ್ಟಿಕೊಳ್ಳುವ ಟವೆಲ್ನಂತಿದ್ದು, ಈ ಉಡುಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಂಗ್ಗೆ ಬಲಿಯಾಗಿದೆ.  ಅಷ್ಟೆ ಅಲ್ಲದೆ ಈ ಬಟ್ಟೆಯ ಬೆಲೆಯನ್ನು ಕಂಡು ಹಲವರು ದಂಗಾಗಿದ್ದಾರೆ. ಏಕೆಂದರೆ ಅದರ ಬೆಲೆ ಸುಮಾರು 77 ಸಾವಿರ ರೂಪಾಯಿಗಳು.

ʼಟವೆಲ್ ಸ್ಕರ್ಟ್ʼ ಎಂಬ ಹೆಸರಿನ ಈ ಉಡುಗೆಯನ್ನು ಪ್ರಸಿದ್ಧ ಫ್ರೆಂಚ್ ಕಂಪನಿ ಬಾಲೆನ್ಸಿಯಾಗ ಪರಿಚಯಿಸಿದೆ. ಸೊಂಟಕ್ಕೆ ಕಟ್ಟಿಕೊಳ್ಳುವ ಸ್ನಾನದ ಟವೆಲ್ನಂತೆ ಕಾಣುವ ಈ ಸ್ಕರ್ಟ್ ಅನ್ನು ಇತ್ತೀಚಿಗೆ ಪ್ಯಾರಿಸ್ನಲ್ಲಿ ನಡೆದ ಸ್ಪ್ರಿಂಗ್ 2024 ಶೋನಲ್ಲಿ ಬಿಡುಗಡೆ ಮಾಡಲಾಯಿತು. ಬಟ್ಟೆಯ ಬದಲಿಗೆ ಇದರ ಬೆಲೆಯನ್ನು ಕಂಡೇ ಹಲವರು ಆಶ್ಚರ್ಯಚಕಿತರಾಗಿದ್ದಾರೆ. ಏಕೆಂದರೆ  ಈ  ಸ್ಕರ್ಟ್ ಬೆಲೆ  $925 ಡಾಲರ್ ಅಂದರೆ ಭಾರತೀಯ  ಕರೆನ್ಸಿಯಲ್ಲಿ ಸುಮಾರು 77,000 ರೂ.ಗಳು.

ಇದನ್ನೂ ಓದಿ: ಸೀರೆಯಿಂದ ಹಿಡಿದು ವೆಸ್ಟ್ರನ್ ಡ್ರೆಸ್ ವರೆಗೆ ರಶ್ಮಿಕಾ ಫ್ಯಾಷನ್​​​​​ ಸೆನ್ಸ್​​ ಹೇಗಿದೆ ನೋಡಿ

ಎಕ್ಸ್​​​​​ ಫೊಸ್ಟ್​ ಇಲ್ಲಿದೆ ನೋಡಿ:

ಬಾಲೆನ್ಸಿಯಾಗ ಬ್ರ್ಯಾಂಡ್ನ ಡಿಸೈನರ್  ಡೆಮ್ನಾ ಗ್ವಾಸಾಲಿಯಾ  ಅವರು ಟವೆಲ್ ಸ್ಕರ್ಟ್ ಬಟ್ಟೆಯನ್ನು ತಯಾರಿಸಿದ್ದು,  ಈ ಉಡುಗೆ ಮೊಣಕಾಲಿನವರೆಗೆ ವಿನ್ಯಾಸವನ್ನು ಹೊಂದಿದೆ ಮತ್ತು ಎರ್ರಿ-ಕಾಟನ್ ಟವೆಲ್ನಿಂದ ಈ ಉಡುಗೆಯನ್ನು ಮಾಡಲಾಗಿದೆ. ಸದ್ಯ ಈ ವಿಚಿತ್ರ ಉಡುಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: