AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Winter Skin Care: ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ; ಒಣ ಚರ್ಮಕ್ಕೆ ಮನೆಮದ್ದು ಇಲ್ಲಿದೆ

ಒಣ ಚರ್ಮದ ದದ್ದುಗಳಿಂದ ಬಳಲುತ್ತಿರುವವರಿಗೆ ಅರಿಶಿನ ಉತ್ತಮ ಔಷಧಿಯಾಗಿದೆ. ಅರಿಶಿನವು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಒಣ ಚರ್ಮದ ಹಾನಿಯಿಂದ ರಕ್ಷಿಸುತ್ತದೆ. ಆದ್ದರಿಂದ ವಿಶೇಷವಾಗಿ ಚಳಿಗಾಲದಲ್ಲಿ ಅರಿಶಿನವನ್ನು ಜೇನುತುಪ್ಪದೊಂದಿಗೆ ಬೆರೆಸಿ ವಾರಕ್ಕೊಮ್ಮೆ ನಿಮ್ಮ ತ್ವಚೆಗೆ ಹಚ್ಚಿ.

Winter Skin Care: ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ; ಒಣ ಚರ್ಮಕ್ಕೆ ಮನೆಮದ್ದು ಇಲ್ಲಿದೆ
Dry Skin
ಅಕ್ಷತಾ ವರ್ಕಾಡಿ
|

Updated on:Nov 18, 2023 | 4:27 PM

Share

ಚಳಿಗಾಲದಲ್ಲಿ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಂತ ಅಗತ್ಯ. ಯಾಕೆಂದರೆ ಚಳಿಗಾಲದಲ್ಲಿ ಚರ್ಮ ವೇಗವಾಗಿ ಶುಷ್ಕ ಮತ್ತು ಒರಟಾಗುತ್ತದೆ. ಆದ್ದರಿಂದ ಪ್ರತೀ ಬಾರಿ ಸ್ನಾನದ ಬಳಿಕ ಬಾಡಿ ಲೋಷನ್ ಹಚ್ಚುವುದು ಅತ್ಯಂತ ಅವಶ್ಯಕ. ಚಳಿಗಾಲದಲ್ಲಿ ಬಹುತೇಕ ಎಲ್ಲರೂ ಒಣ ತ್ವಚೆಯಿಂದ ಬಳಲುತ್ತಾರೆ. ಒಣ ತ್ವಚೆಯ ಜೊತೆಗೆ ತುರಿಕೆ, ದದ್ದುಗಳು, ತುಟಿ ಒಡೆಯುವುದು ಈ ಸಮಯದಲ್ಲಿ ಸಾಮಾನ್ಯ. ಆದ್ದರಿಂದ ಚಳಿಗಾಲದಲ್ಲಿ ನಿಮ್ಮ ತ್ವಚೆಯ ಆರೈಕೆ ಈ ರೀತಿಯಾಗಿರಲಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ಅರಶಿನ: ಒಣ ಚರ್ಮದ ದದ್ದುಗಳಿಂದ ಬಳಲುತ್ತಿರುವವರಿಗೆ ಅರಿಶಿನ ಉತ್ತಮ ಔಷಧಿಯಾಗಿದೆ. ಅರಿಶಿನವು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಒಣ ಚರ್ಮದ ಹಾನಿಯಿಂದ ರಕ್ಷಿಸುತ್ತದೆ. ಆದ್ದರಿಂದ ವಿಶೇಷವಾಗಿ ಚಳಿಗಾಲದಲ್ಲಿ ಅರಿಶಿನವನ್ನು ಜೇನುತುಪ್ಪದೊಂದಿಗೆ ಬೆರೆಸಿ ವಾರಕ್ಕೊಮ್ಮೆ ನಿಮ್ಮ ಮುಖ ಹಾಗೂ ತ್ವಚೆಗೆ ಹಚ್ಚಿ.

ಇದನ್ನೂ ಓದಿ: ಬಿಳಿ ಕೂದಲ ಸಮಸ್ಯೆಗೆ ತೆಂಗಿನ ಕಾಯಿಯ ನಾರು ಉತ್ತಮ ಔಷಧಿ; ಹೇಗೆ ಗೊತ್ತಾ?

ಸನ್ ಸ್ಕ್ರೀನ್ ಮರೆಯದಿರಿ:

ಚಳಿಗಾಲದಲ್ಲಿ ಸನ್ ಸ್ಕ್ರೀನ್ ಹಚ್ಚದಿದ್ದರೆ ತ್ವಚೆ ಹಾಳಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿಯೂ ಸನ್‌ಸ್ಕ್ರೀನ್ ಇಲ್ಲದೆ ಹೊರಗೆ ಹೋಗಬೇಡಿ. ಸನ್‌ಸ್ಕ್ರೀನ್ ಬಳಸುವುದರಿಂದ ಚರ್ಮದ ವಯಸ್ಸಾಗುವಿಕೆಯನ್ನು ತಡೆಯಬಹುದು. ಜೊತೆಗೆ ಚಳಿಗಾಲದಲ್ಲಿ ಚರ್ಮವು ತನ್ನ ಹೊಳಪನ್ನು ಕಳೆದುಕೊಳ್ಳುವುದರಿಂದ ಕೋಲ್ಡ್ ಕ್ರೀಮ್ ಬಳಸಿ. ಇದಲ್ಲದೇ ನೀವು ಮನೆ ಮದ್ದುಗಳನ್ನು ಕೂಡ ಪ್ರಯತ್ನಿಸಬಹುದು. ಓಟ್ಸ್ ಅನ್ನು ಹಾಲಿನೊಂದಿಗೆ ಬೆರೆಸಿ ಸ್ಕ್ರಬ್ ಮಾಡಿ ಚರ್ಮಕ್ಕೆ ಹಚ್ಚುವುದರಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಲಿಪ್ ಬಾಮ್ ಅಗತ್ಯ:

ಶುಷ್ಕ ವಾತಾವರಣದಲ್ಲಿ ನಿಮ್ಮ ತುಟಿಗಳು ಬಿರುಕು ಬಿಟ್ಟರೆ ಪ್ರತಿದಿನ ಲಿಪ್ ಬಾಮ್ ಹಚ್ಚುವುದನ್ನು ಮರೆಯದಿರಿ. ಲಿಪ್ ಬಾಮ್ ತುಟಿಗಳನ್ನು ತೇವಾಂಶದಿಂದ ಇಡುತ್ತದೆ. ಇದಲ್ಲದೇ ರಾತ್ರಿಯಲ್ಲಿ ತುಟಿಗಳಿಗೆ ತುಪ್ಪ ಹಚ್ಚಿಕೊಂಡು ಮಲಗಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:24 pm, Sat, 18 November 23