Women Health: ಶಿಲ್ಪಾ ಶೆಟ್ಟಿ ತಂಗಿಗೆ ಎಂಡೊಮೆಟ್ರಿಯೊಸಿಸ್‌..! ಏನಿದು ಕಾಯಿಲೆ? ಇದರ ಲಕ್ಷಣಗಳೇನು?

Endometriosis: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಪ್ರಕಾರ, "ಎಂಡೊಮೆಟ್ರಿಯೊಸಿಸ್ ಎನ್ನುವುದು ಮಹಿಳೆಯರಲ್ಲಿ ಕಂಡುಬರುವ ಕಾಯಿಲೆಯಾಗಿದ್ದು , ಇದರಲ್ಲಿ ಎಂಡೊಮೆಟ್ರಿಯಮ್‌ನಲ್ಲಿರುವಂತಹ ಜೀವಕೋಶಗಳು , ಗರ್ಭಾಶಯದ ಒಳಭಾಗವನ್ನು ಆವರಿಸುವ ಪದರ ಹೊರಗೆ ಬೆಳೆಯುತ್ತದೆ". ಆದ್ದರಿಂದ ಇದು ಮಾರಣಾಂತಿಕ ಕಾಯಿಲೆಯೇ? ಮಹಿಳೆಯ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Women Health: ಶಿಲ್ಪಾ ಶೆಟ್ಟಿ ತಂಗಿಗೆ  ಎಂಡೊಮೆಟ್ರಿಯೊಸಿಸ್‌..! ಏನಿದು ಕಾಯಿಲೆ? ಇದರ ಲಕ್ಷಣಗಳೇನು?
ನಟಿ ಶಿಲ್ಪಾ ಶೆಟ್ಟಿಯವರ ತಂಗಿ ಶಮಿತಾ ಶೆಟ್ಟಿ
Follow us
ಅಕ್ಷತಾ ವರ್ಕಾಡಿ
|

Updated on: May 16, 2024 | 10:44 AM

ಖ್ಯಾತ ಬಾಲಿವುಡ್​​​ ನಟಿ ಶಿಲ್ಪಾ ಶೆಟ್ಟಿಯವರ ತಂಗಿ ಶಮಿತಾ ಶೆಟ್ಟಿ ಎಂಡೊಮೆಟ್ರಿಯೊಸಿಸ್‌ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕುರಿತು ಇತ್ತೀಚಿಗಷ್ಟೇ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ವಿಡಿಯೋದಲ್ಲಿ ಶಮಿತಾ ಶೆಟ್ಟಿ “ಮಹಿಳೆಯರೇ ದಯವಿಟ್ಟು ಎಂಡೊಮೆಟ್ರಿಯೊಸಿಸ್‌ ಬಗ್ಗೆ ಗೂಗಲ್​​ನಲ್ಲಿ ಸರ್ಚ್​​ ಮಾಡಿ, ಅದರ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ. ನಿರ್ಲಕ್ಷ್ಯಬೇಡ” ಹೇಳಿದ್ದಾರೆ. ಆದ್ದರಿಂದ ಎಂಡೊಮೆಟ್ರಿಯೊಸಿಸ್‌ ಎಂದರೇನು? ಇದು ಮಾರಣಾಂತಿಕ ಕಾಯಿಲೆಯೇ? ಮಹಿಳೆಯ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಮುಂತಾದ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.

ಏನಿದು ಎಂಡೊಮೆಟ್ರಿಯೊಸಿಸ್?

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಪ್ರಕಾರ, ಎಂಡೊಮೆಟ್ರಿಯೊಸಿಸ್ ಎನ್ನುವುದು ಮಹಿಳೆಯರಲ್ಲಿ ಕಂಡುಬರುವ ಕಾಯಿಲೆಯಾಗಿದ್ದು , ಇದರಲ್ಲಿ ಎಂಡೊಮೆಟ್ರಿಯಮ್‌ನಲ್ಲಿರುವಂತಹ ಜೀವಕೋಶಗಳು ,ಗರ್ಭಾಶಯದ ಒಳಭಾಗವನ್ನು ಆವರಿಸುವ ಪದರ ಹೊರಗೆ ಬೆಳೆಯುತ್ತದೆ. ಇದರಿಂದಾಗಿ ಗರ್ಭಾಶಯದ ಸುತ್ತಲಿನ ಅಂಗಾಂಶ, ಅಂಡಾಶಯಗಳು ( ಪೆರಿಟೋನಿಯಮ್ ), ಕರುಳು ಮತ್ತು ಮೂತ್ರಕೋಶಗಳಲ್ಲಿ ಗಾಯಗಳು ಕಂಡು ಬರುತ್ತದೆ.

ಎಂಡೊಮೆಟ್ರಿಯೊಸಿಸ್​​ನ ರೋಗ ಲಕ್ಷಣಗಳು:

  • ಶ್ರೋಣಿಯ ನೋವು
  • ಮುಟ್ಟಿನ ಸಮಯದ ನೋವು ಉಲ್ಬಣಗೊಳ್ಳುವುದು
  • ಕರುಳಿನ ಚಲನೆಯ ನೋವು
  • ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು
  • ಲೈಂಗಿಕ ಸಂಭೋಗದ ಸಮಯದಲ್ಲಿ ನೋವು
  • ಬಂಜೆತನ

ಅಮೇರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್ ವ್ಯಾಖ್ಯಾನಿಸಿದಂತೆ ಬಂಜೆತನ ಹೊಂದಿರುವ ಮಹಿಳೆಯರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಮಹಿಳೆಯರು ಎಂಡೊಮೆಟ್ರಿಯೊಸಿಸ್ ಸಮಸ್ಯೆಯನ್ನು ಹೊಂದಿರುತ್ತಾರೆ ಎಂದು ಬಹಿರಂಗಪಡಿಸಿದೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಗೆ ಅನಾರೋಗ್ಯ, ಶಸ್ತ್ರಚಿಕಿತ್ಸೆಗೊಳಗಾದ ನಟಿ

ಎಂಡೊಮೆಟ್ರಿಯೋಸಿಸ್​ಗೆ ಚಿಕಿತ್ಸೆ ಏನು?

ಎಂಡೊಮೆಟ್ರಿಯೋಸಿಸ್, ಚಿಕಿತ್ಸೆ ನೀಡದಿದ್ದರೆ, ಸಮಸ್ಯೆ ಉಲ್ಬಣಗೊಳ್ಳಬಹುದು ಮತ್ತು ಬಂಜೆತನಕ್ಕೆ ಕಾರಣವಾಗಬಹುದು. ಅಪರೂಪದ ಸಂದರ್ಭಗಳಲ್ಲಿ, ಎಂಡೊಮೆಟ್ರಿಯೋಸಿಸ್ ಕೆಲವು ಕ್ಯಾನ್ಸರ್ಗಳ ಅಪಾಯವನ್ನು ಹೆಚ್ಚಿಸುತ್ತದೆ. ಎಂಡೊಮೆಟ್ರಿಯೋಸಿಸ್ ಸ್ಥಿತಿಯನ್ನು ದೃಢೀಕರಿಸಲು ರೋಗಲಕ್ಷಣಗಳು ಸಾಕಾಗಿದ್ದರೂ, ಡಯಾಗ್ನೋಸ್ಟಿಕ್ ಲ್ಯಾಪರೋಸ್ಕೋಪಿ ಮೂಲಕ ಸಮಸ್ಯೆಯನ್ನು ಪತ್ತೆ ಹಚ್ಚಲಾಗುತ್ತದೆ. ಹೆಸರೇ ಸೂಚಿಸುವಂತೆ, ಇದನ್ನು ಲ್ಯಾಪರೋಸ್ಕೋಪ್ ಬಳಸಿ ನಡೆಸಲಾಗುತ್ತದೆ, ಅದರ ತುದಿಯಲ್ಲಿ ಕ್ಯಾಮೆರಾ ಮತ್ತು ಲೆನ್ಸ್ ಹೊಂದಿರುವ ಸಣ್ಣಉಪಕರಣ. ಈ ಮೂಲಕ ಸಮಸ್ಯೆಯನ್ನು ಪತ್ತೆ ಹಚ್ಚಿ ಶಸ್ತ್ರ ಚಿಕಿತ್ಸೆಯ ಮೂಲಕ ಬೇರಿನಿಂದಲೇ ಎಂಡೊಮೆಟ್ರಿಯೋಸಿಸ್ ಅನ್ನು ತೆಗೆದುಹಾಕಲಾಗುತ್ತದೆ.

ಶಸ್ತ್ರಚಿಕಿತ್ಸೆಯ ನಂತರ ಚೇತರಿಕೆಯ ಅವಧಿಯಲ್ಲಿ, ವೈದ್ಯರು ಸಲಹೆ ನೀಡುವವರೆಗೆ ಬಾಗುವುದು, ಭಾರವಾದ ತೂಕವನ್ನು ಎತ್ತುವುದು, ಕಠಿಣ ವ್ಯಾಯಾಮದಲ್ಲಿ ತೊಡಗುವುದನ್ನು ತಪ್ಪಿಸಬೇಕು. ಇದಲ್ಲದೇ ವೈದ್ಯರು ಸಲಹೆ ನೀಡುವವರೆಗೆ ಲೈಂಗಿಕ ಸಂಭೋಗದಿಂದ ದೂರವಿರಬೇಕು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್