ಮಾವಿನಹಣ್ಣುಗಳನ್ನು ಇಷ್ಟಪಡದವರು ಯಾರಿದ್ದಾರೆ? ಅಲ್ಲದೆ ಮಾವಿನ ಹಣ್ಣಿನ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಬಿ 6, ಎ ಮತ್ತು ಸಿ ಇದ್ದು, ಆರೋಗ್ಯಕ್ಕೆ ಅವಶ್ಯಕವಾಗಿದೆ. ಇದಲ್ಲದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳು ಮಾವಿನ ಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ಮಧುಮೇಹದಿಂದ ಬಳಲುತ್ತಿರುವ ಗರ್ಭಿಣಿಯರು ಸಹ ಮಾವಿನ ಹಣ್ಣನ್ನು ಸೇವಿಸಬಹುದೇ? ಈ ಬಗ್ಗೆ ತಜ್ಞರು ಹೇಳುವುದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.
ಹೆಸರೇ ಹೇಳುವಂತೆ ಗರ್ಭಿಣಿಯರಲ್ಲಿ ಗರ್ಭಾವಸ್ಥೆಯ ಸಂದರ್ಭದಲ್ಲಿ ಕಂಡು ಬರುವ ಮಧುಮೇಹವನ್ನು ಗರ್ಭಾವಸ್ಥೆಯ ಮಧುಮೇಹ ಎಂದು ಕರೆಯುತ್ತಾರೆ. ಗರ್ಭಾವಸ್ಥೆಯಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟವು ಹೆಚ್ಚಾದಾಗ, ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಈ ಸಮಸ್ಯೆಯ ಸಮಯದಲ್ಲಿ ಗರ್ಭಿಣಿಯರು ಮಾವಿನಹಣ್ಣುಗಳನ್ನು ತಿನ್ನಬೇಕೇ ಅಥವಾ ಬೇಡವೇ ಎಂಬುದನ್ನು ತಿಳಿದುಕೊಳ್ಳಬೇಕು. ತಜ್ಞರು ಹೇಳುವ ಪ್ರಕಾರ ಗರ್ಭಿಣಿಯರು ಮಾವಿನ ಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಅದಕ್ಕೂ ಮೊದಲು ಅನೇಕ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ಡಾ. ದೀಪಕ್ ಸುಮನ್ ಅವರು ಹೇಳುವ ಪ್ರಕಾರ, ಗರ್ಭಿಣಿಯರು ಮಾವಿನ ಹಣ್ಣನ್ನು ಜ್ಯೂಸ್ ರೂಪದಲ್ಲಿ ಕುಡಿಯಬಾರದು. ಅದರ ಬದಲು ಮಾವಿನ ಹಣ್ಣನ್ನು ಕತ್ತರಿಸಿ ತಿನ್ನಬೇಕು. ಏಕೆಂದರೆ ಮಾವಿನ ಶೇಕ್ ಅಥವಾ ಜ್ಯೂಸ್ ನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಬಳಸಲಾಗುತ್ತದೆ, ಇದು ಗರ್ಭಿಣಿಯರ ಮೇಲೆ ನೇರ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಬೇಗ ಕೋಪ ಬರುತ್ತಾ? ಈ ಎಲ್ಲಾ ಕಾಯಿಲೆಯೂ ಬರುತ್ತೆ ಎಚ್ಚರ
ಗರ್ಭಾವಸ್ಥೆಯ ಮಧುಮೇಹದಿಂದ ಬಳಲುತ್ತಿರುವ ಮಹಿಳೆಯರು ಹೆಚ್ಚು ಮಾವಿನಹಣ್ಣು ತಿನ್ನುವುದನ್ನು ತಪ್ಪಿಸಬೇಕು. ಹೆಚ್ಚು ಹೆಚ್ಚು ಮಾವಿನಹಣ್ಣುಗಳ ಸೇವನೆಯು ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ನೀವು ದಿನಕ್ಕೆ ಒಂದು ಮಾವಿನ ಹಣ್ಣಿನಲ್ಲಿ ಒಂದು ಸಣ್ಣ ತುಂಡನ್ನು ತಿನ್ನಬಹುದು.
ಗರ್ಭಾವಸ್ಥೆಯ ಸಮಯದಲ್ಲಿ ಮಧುಮೇಹ ಹೊಂದಿರುವ ಮಹಿಳೆಯರು ಮಾವಿನಹಣ್ಣು ತಿನ್ನುವ ಮೊದಲು ಮತ್ತು ನಂತರ, ಒಮ್ಮೆ ತಮ್ಮ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮಾವು ತಿಂದ ನಂತರ ದೇಹದಲ್ಲಿ ಯಾವ ಬದಲಾವಣೆಗಳಾಗುತ್ತದೆ ಎಂಬುದು ತಿಳಿಯುತ್ತದೆ. ಮಾವಿನ ಹಣ್ಣನ್ನು ತಿಂದ ನಂತರ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತಿದ್ದರೆ ಮತ್ತು ಈ ಸಮಸ್ಯೆ ಮುಂದುವರಿದರೆ, ನೀವು ಮಾವಿನ ಹಣ್ಣಿನ ಸೇವನೆ ಮಾಡುವುದನ್ನು ತಪ್ಪಿಸಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Tue, 28 May 24