Q Fever: ಹೈದರಾಬಾದ್​ನಲ್ಲಿ Q ಜ್ವರ ಹೆಚ್ಚಳ, ಕಸಾಯಿಖಾನೆಗಳಿಂದ ದೂರವಿರುವಂತೆ ಮಾಂಸ ಮಾರಾಟಗಾರರಿಗೆ ಸೂಚನೆ

ತೆಲಂಗಾಣದಲ್ಲಿ ಕ್ಯೂ ಜ್ವರದ ಪ್ರಕರಣಗಳು ಹೆಚ್ಚಳವಾಗುತ್ತಿವೆ, ನಗರದ ಕಸಾಯಿಖಾನೆಗಳಿಂದ ದೂರವಿರುವಂತೆ ಮಾಂಸ ವ್ಯಾಪಾರಿಗಳಿಗೆ ಸಲಹೆ ನೀಡಲಾಗಿದೆ.

Q Fever: ಹೈದರಾಬಾದ್​ನಲ್ಲಿ Q ಜ್ವರ ಹೆಚ್ಚಳ, ಕಸಾಯಿಖಾನೆಗಳಿಂದ ದೂರವಿರುವಂತೆ ಮಾಂಸ ಮಾರಾಟಗಾರರಿಗೆ ಸೂಚನೆ
ಕ್ಯೂ ಜ್ವರ

Updated on: Jan 27, 2023 | 2:43 PM

ತೆಲಂಗಾಣದಲ್ಲಿ ಕ್ಯೂ ಜ್ವರದ ಪ್ರಕರಣಗಳು ಹೆಚ್ಚಳವಾಗುತ್ತಿವೆ, ನಗರದ ಕಸಾಯಿಖಾನೆಗಳಿಂದ ದೂರವಿರುವಂತೆ ಮಾಂಸ ವ್ಯಾಪಾರಿಗಳಿಗೆ ಸಲಹೆ ನೀಡಲಾಗಿದೆ. ದನ ಮತ್ತು ಮೇಕೆಗಳಿಂದ ಹರಡುವ ಈ ಬ್ಯಾಕ್ಟೀರಿಯಾದ ಸೋಂಕಿನಿಂದ, ರೋಗಿಗಳು ಜ್ವರ, ಆಯಾಸ, ತಲೆನೋವು, ಎದೆ ನೋವು ಮತ್ತು ಅತಿಸಾರದಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೈದರಾಬಾದ್ ಮೂಲದ ರಾಷ್ಟ್ರೀಯ ಸಂಶೋಧನಾ ಕೇಂದ್ರ (NRCM) 250 ಮಾದರಿಗಳ ಪೈಕಿ 5 ಮಾಂಸದ ವ್ಯಾಪಾರಿಗಳಿಗೆ ಕಾಕ್ಸಿಯೆಲ್ಲಾ ಬರ್ನೆಟೈ ಎಂಬ ಬ್ಯಾಕ್ಟೀರಿಯಂನಿಂದ Q ಜ್ವರ ಕಂಡುಬಂದಿದೆ ಎಂದು ಸಿರೊಲಾಜಿಕಲ್ ಪರೀಕ್ಷೆಗಳ ಮೂಲಕ ದೃಢಪಡಿಸಿದೆ.

ಶೇ.5 ಕ್ಕಿಂತ ಕಡಿಮೆ ಮಂದಿಯಲ್ಲಿ ರೋಗ ಪತ್ತೆಯಾದ ತಕ್ಷಣ ಅಧಿಕಾರಿಗಳು ಸೋಂಕಿತ ಮಾಂಸ ವ್ಯಾಪಾರಿಗಳನ್ನು ಕಸಾಯಿಖಾನೆಯಿಂದ ದೂರವಿಡುವಂತೆ ಆದೇಶಿಸಿದರು. ಇದರೊಂದಿಗೆ ಮುಂಗಡ ರೋಗನಿರ್ಣಯ ಪರೀಕ್ಷೆ ಮಾಡಿಸಿಕೊಳ್ಳುವಂತೆಯೂ ಸೂಚಿಸಲಾಗಿದೆ. ಆದರೆ, ಇದುವರೆಗೆ ಕೆಲವೇ ಮಾಂಸ ವ್ಯಾಪಾರಿಗಳಿಗೆ ಸೋಂಕು ತಗುಲಿರುವುದರಿಂದ ಗಾಬರಿಪಡುವ ಅಗತ್ಯವಿಲ್ಲ ಎಂದು ಜಿಎಚ್‌ಎಂಸಿ ಮುಖ್ಯ ಪಶುವೈದ್ಯಾಧಿಕಾರಿ ಅಬ್ದುಲ್ ವಕೀಲ್ ಸ್ಪಷ್ಟಪಡಿಸಿದ್ದಾರೆ.

ಈ ಸೋಂಕಿನ ವಿರುದ್ಧ ದೇಹದಲ್ಲಿ ಪ್ರತಿಕಾಯಗಳು ಇರುವುದನ್ನು ಸಿರೊಪೊಸಿಟಿವ್ ಪರೀಕ್ಷೆ ತೋರಿಸುತ್ತದೆ ಎಂದು ವೈದ್ಯರು ಹೇಳಿದರು. ಸೈಟಾಕೋಸಿಸ್ ಮತ್ತು ಹೆಪಟೈಟಿಸ್ ಇ ನಂತಹ ಝೂನೋಟಿಕ್ ಕಾಯಿಲೆಗಳು ಕಂಡುಬಂದಿವೆ ಎಂದು ವರದಿ ಹೇಳುತ್ತದೆ. ಸೋಂಕಿತ ಗಿಳಿಗಳಿಂದ ಸಿಟ್ಟಾಕೋಸಿಸ್ ಮನುಷ್ಯರಿಗೆ ಹರಡುತ್ತದೆ. ಕಸಾಯಿ ಖಾನೆಗಳಿಗೆ ಗಾಳಿಯ ಮೂಲಕ ಸೋಂಕು ತಗುಲುವ ಭೀತಿ ಎದುರಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us