AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಗಿ ರೊಟ್ಟಿ ತಿಂದ್ರೆ ಎಲುಬು ಗಟ್ಟಿಯಾಗಿರುತ್ತೆ ಅನ್ನೋದು ನಿಜವೇ? ಯಾವ ಆರೋಗ್ಯ ಸಮಸ್ಯೆಗೆ ಒಳ್ಳೆಯದು?

ರಾಗಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಫೈಬರ್ ಕೂಡ ಹೇರಳವಾಗಿದೆ. ಅದಕ್ಕಾಗಿಯೇ ಜನರು ಈ ರಾಗಿಯಿಂದ ಮಾಡಿದ ಆಹಾರವನ್ನು ಪ್ರಾಚೀನ ಕಾಲದಿಂದಲೂ ಸೇವಿಸುತ್ತಿದ್ದಾರೆ. ಇದು ಒಟ್ಟಾರೆ ದೇಹದ ಆರೋಗ್ಯಕ್ಕೆ ನಿಜವಾಗಿಯೂ ಒಳ್ಳೆಯದು. ಆದರೆ ರಾಗಿ ರೊಟ್ಟಿ ತಿಂದ್ರೆ ಎಲುಬು ಗಟ್ಟಿಯಾಗಿರುತ್ತೆ ಎನ್ನುವ ಮಾತು ನಿಜಾನಾ, ದೈನಂದಿನ ಆಹಾರದಲ್ಲಿ ರಾಗಿ ರೊಟ್ಟಿ ಸೇವನೆ ಮಾಡಿದರೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ, ಇದು ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಾಗಿ ರೊಟ್ಟಿ ತಿಂದ್ರೆ ಎಲುಬು ಗಟ್ಟಿಯಾಗಿರುತ್ತೆ ಅನ್ನೋದು ನಿಜವೇ? ಯಾವ ಆರೋಗ್ಯ ಸಮಸ್ಯೆಗೆ ಒಳ್ಳೆಯದು?
Ragi Roti BenefitsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 20, 2026 | 9:21 PM

Share

ರಾಗಿ (Finger millet) ನಮ್ಮ ಸಾಂಪ್ರದಾಯಿಕ ಆಹಾರಗಳಲ್ಲಿ ಒಂದಾಗಿದ್ದು, ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಧಾನ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇದು ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಫೈಬರ್ ಹಾಗೂ ಹಲವು ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ. ಆದರೆ ರಾಗಿ ರೊಟ್ಟಿ ತಿಂದ್ರೆ ಎಲುಬು ಗಟ್ಟಿಯಾಗಿರುತ್ತೆ ಎನ್ನುವ ಮಾತು ನಿಜಾನಾ, ದೈನಂದಿನ ಆಹಾರದಲ್ಲಿ ರಾಗಿ ರೊಟ್ಟಿ ಸೇವನೆ ಮಾಡಿದರೆ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಾಗಿ ರೊಟ್ಟಿಯ ಆರೋಗ್ಯ ಪ್ರಯೋಜನಗಳು:

  • ಸಾಮಾನ್ಯವಾಗಿ ರಾಗಿ ರೊಟ್ಟಿಯ ಸೇವನೆ ಎಲುಬುಗಳನ್ನು ಗಟ್ಟಿ ಮಾಡುತ್ತದೆ ಎಂಬುದು ಸತ್ಯ. ಏಕೆಂದರೆ ಇದರಲ್ಲಿ ಇರುವಹೆಚ್ಚಿನ ಕ್ಯಾಲ್ಸಿಯಂ ಅಂಶವು ಎಲುಬುಗಳು ಮತ್ತು ಹಲ್ಲುಗಳನ್ನು ಬಲಪಡಿಸಿ, ಆಸ್ಟಿಯೋಪೊರೋಸಿಸ್‌ನಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
  • ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆಯನ್ನು ತಡೆಯಲು ನೆರವಾಗುತ್ತದೆ. ಜೊತೆಗೆ ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಅನಗತ್ಯ ಹಸಿವನ್ನು ನಿಯಂತ್ರಿಸಿ ತೂಕ ನಿರ್ವಹಣೆಗೆ ಸಹಕಾರಿ. ಜೊತೆಗೆ ಇದರಲ್ಲಿನ ಕಬ್ಬಿಣಾಂಶವು ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
  • ರಾಗಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಮಧುಮೇಹಿಗಳಿಗೂ ಇದು ಉತ್ತಮ ಆಹಾರವಾಗಿದೆ.
  • ಹೃದಯದ ಆರೋಗ್ಯ ಕಾಪಾಡುವುದರ ಜೊತೆಗೆ ದೇಹಕ್ಕೆ ದಿನಪೂರ್ತಿ ಶಕ್ತಿ ನೀಡುವ ಗುಣವೂ ರಾಗಿಯಲ್ಲಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟದಲ್ಲಿ ರಾಗಿ ರೊಟ್ಟಿ ಸೇವಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬಹುದು.

ಇದನ್ನೂ ಓದಿ: ವಿಶ್ವ ಅಪ್ಪಂದಿರ ದಿನದಂದು ನಿಮ್ಮ ತಂದೆಗಾಗಿ ಮಾಡಿ ಆರೋಗ್ಯಕರ ರಾಗಿ ಕೇಕ್‌

ರಾಗಿ ರೊಟ್ಟಿ ಎಲ್ಲರಿಗೂ ಸೂಕ್ತವೇ? ಯಾರು ಎಚ್ಚರಿಕೆಯಿಂದ ಸೇವಿಸಬೇಕು?

ರಾಗಿ ರೊಟ್ಟಿ ಆರೋಗ್ಯಕರ ಆಹಾರವಾಗಿದ್ದರೂ, ಕೆಲವು ಆರೋಗ್ಯ ಪರಿಸ್ಥಿತಿಗಳಲ್ಲಿ ಮಿತವಾಗಿ ಅಥವಾ ವೈದ್ಯರ ಸಲಹೆಯೊಂದಿಗೆ ಸೇವಿಸುವುದು ಉತ್ತಮ.

ಕಿಡ್ನಿ ಸ್ಟೋನ್ (Kidney Stones) ಸಮಸ್ಯೆ ಇರುವವರು: ರಾಗಿಯಲ್ಲಿ ಆಕ್ಸಲೇಟ್ (Oxalate) ಪ್ರಮಾಣ ಸ್ವಲ್ಪ ಹೆಚ್ಚಿರುತ್ತದೆ. ಈಗಾಗಲೇ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ರಾಗಿಯನ್ನು ಅತಿಯಾಗಿ ಸೇವಿಸಬಾರದು.

ಥೈರಾಯ್ಡ್ ಸಮಸ್ಯೆ ಇರುವವರು: ರಾಗಿಯಲ್ಲಿ ಇರುವ ಕೆಲವು ಸಂಯುಕ್ತಗಳು ಥೈರಾಯ್ಡ್ ಗ್ರಂಥಿಯ ಕಾರ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಹೈಪೋಥೈರಾಯ್ಡಿಸಮ್ ಇರುವವರು ರಾಗಿಯನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಅತಿಯಾದ ಜೀರ್ಣಕ್ರಿಯೆ ಸಮಸ್ಯೆ ಇರುವವರು: ರಾಗಿಯಲ್ಲಿ ಫೈಬರ್ ಅಧಿಕವಾಗಿರುವುದರಿಂದ ಕೆಲವರಿಗೆ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಅಜೀರ್ಣ ಸಮಸ್ಯೆ ಉಂಟಾಗಬಹುದು. ಇಂತಹವರು ಆರಂಭದಲ್ಲಿ ಕಡಿಮೆ ಪ್ರಮಾಣದಿಂದ ಸೇವನೆ ಆರಂಭಿಸಬೇಕು.

ಕಡಿಮೆ ತೂಕ ಇರುವವರು: ರಾಗಿ ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಸಮಯ ನೀಡುತ್ತದೆ. ಆದ್ದರಿಂದ ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ರಾಗಿಯನ್ನು ಮಾತ್ರ ಅವಲಂಬಿಸದೆ ಸಮತೋಲನ ಆಹಾರವನ್ನು ಸೇವಿಸಬೇಕು.

ರಾಗಿಯ ಸೇವನೆಯಿಂದ ಅಲರ್ಜಿ ಇರುವವರು: ಕೆಲವರಿಗೆ ರಾಗಿ ಸೇವನೆಯಿಂದ ಅಲರ್ಜಿ, ಚರ್ಮದ ತುರಿಕೆ ಅಥವಾ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us