ಒಡಿಶಾದಲ್ಲಿ ಹೊಸ ವೈರಸ್​​​​​​​​​ ‘ಸ್ಕ್ರಬ್ ಟೈಫಸ್’ ಪ್ರಕರಣ 200ಕ್ಕೆ ಏರಿಕೆ; ಬೆಂಗಳೂರಿನಲ್ಲೂ ಸೋಂಕಿನ ಭೀತಿ

|

Updated on: Sep 21, 2023 | 10:43 AM

Scrub Typhus: ಸ್ಕ್ರಬ್ ಟೈಫಸ್‌ನಿಂದ ಸೋಂಕಿಗೆ ಒಳಗಾದ ಜನರ ಸಾವಿನ ಬಗ್ಗೆ ತನಿಖೆ ನಡೆಸಲು ಜಂಟಿ ನಿರ್ದೇಶಕರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರನ್ನು ಸುಂದರ್‌ಗಢ ಮತ್ತು ಬರ್ಗಢ ಜಿಲ್ಲೆಗಳಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಹೊಸ ಬ್ಯಾಕ್ಟೀರಿಯಾ ಸೋಂಕು ಬೇರೆ ಬೇರೆ ರಾಜ್ಯಗಳಲ್ಲಿ ವೇಗವಾಗಿ ಹರಡುತ್ತಿದ್ದು,ಬೆಂಗಳೂರಿನಲ್ಲೂ ಸೋಂಕಿನ ಭೀತಿ ಹೆಚ್ಚಾಗಿದೆ.

ಒಡಿಶಾದಲ್ಲಿ ಹೊಸ ವೈರಸ್​​​​​​​​​ ಸ್ಕ್ರಬ್ ಟೈಫಸ್ ಪ್ರಕರಣ 200ಕ್ಕೆ ಏರಿಕೆ; ಬೆಂಗಳೂರಿನಲ್ಲೂ ಸೋಂಕಿನ ಭೀತಿ
Scrub Typhus in Odisha
Image Credit source: i stock
Follow us on

ಸ್ಕ್ರಬ್ ಟೈಫಸ್(Scrub Typhus) ಹೆಚ್ಚುತ್ತಿರುವ ಘಟನೆಗಳು ಒಡಿಶಾದಲ್ಲಿ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಸೋಂಕಿಗೆ ಒಳಗಾದ ಜನರ ಸಾವಿನ ಬಗ್ಗೆ ತನಿಖೆ ನಡೆಸಲು ಜಂಟಿ ನಿರ್ದೇಶಕರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರನ್ನು ಸುಂದರ್‌ಗಢ ಮತ್ತು ಬರ್ಗಢ ಜಿಲ್ಲೆಗಳಿಗೆ ಕಳುಹಿಸಲಾಗಿದ್ದು, ಸ್ಕ್ರಬ್ ಟೈಫಸ್‌ನ ಒಟ್ಟು ಪ್ರಕರಣಗಳ ಸಂಖ್ಯೆ ಈಗ ಸುಂದರ್‌ಗಢ್ ಜಿಲ್ಲೆಯಲ್ಲಿ 200 ಕ್ಕೆ ತಲುಪಿದೆ. ಸ್ಕ್ರಬ್ ಟೈಫಸ್ ಹೊಸ ಬ್ಯಾಕ್ಟೀರಿಯಾ ಸೋಂಕು ಬೇರೆ ಬೇರೆ ರಾಜ್ಯಗಳಲ್ಲಿ ವೇಗವಾಗಿ ಹರಡುತ್ತಿದೆ. ಇದು ಬ್ಯಾಕ್ಟೀರಿಯಾ ಸೋಂಕಿತ ಸಣ್ಣ ಹುಳಗಳು ಮನುಷ್ಯರಿಗೆ ಕಚ್ಚುವುದರ ಮೂಲಕ ಹರಡುತ್ತಿದ್ದು ಆತಂಕ ಹೆಚ್ಚಿಸಿದೆ. ಇದೀಗಾ ಬೆಂಗಳೂರಿನಲ್ಲೂ ಸೋಂಕಿನ ಭೀತಿ ಹೆಚ್ಚಾಗಿದೆ.

ಸುಂದರ್‌ಗಢ್ ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ (ಸಿಡಿಎಂಒ) ಕನ್ಹು ಚರಣ್ ನಾಯಕ್ ಅವರ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಪರೀಕ್ಷಿಸಲಾದ ಅನೇಕ ಮಾದರಿಗಳಲ್ಲಿ, ಏಳು ಮಂದಿ ಸ್ಕ್ರಬ್ ಟೈಫಸ್‌ ಇರುವುದು ಪತ್ತೆಯಾಗಿದೆ. ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಂದರ್‌ಗಢ ಮತ್ತು ಬರ್ಗಢ ಜಿಲ್ಲೆಗಳಿಗೆ ವಿಶೇಷ ತಂಡವನ್ನು ಕಳುಹಿಸಲಾಗಿದೆ. ಹೆಚ್ಚುವರಿಯಾಗಿ, ವರದಿಗಳ ಪ್ರಕಾರ, ಸ್ಕ್ರಬ್ ಟೈಫಸ್ ಸೋಂಕಿಗೆ ಒಳಗಾದ ಜನರ ಸಾವಿನ ಬಗ್ಗೆ ತನಿಖೆ ನಡೆಸಲು ಜಂಟಿ ನಿರ್ದೇಶಕರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರನ್ನು ಎರಡೂ ಜಿಲ್ಲೆಗಳಿಗೆ ಕಳುಹಿಸಲಾಗಿದೆ.

ಸ್ಕ್ರಬ್ ಟೈಫಸ್ ಎಂದರೇನು?

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಸ್ಕ್ರಬ್ ಟೈಫಸ್ ಅನ್ನು ಬುಷ್ ಟೈಫಸ್ ಎಂದೂ ಕರೆಯುತ್ತಾರೆ, ಇದು ಓರಿಯೆಂಟಿಯಾ ಸುಟ್ಸುಗಮುಶಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆಯಾಗಿದೆ. ಈ ಬ್ಯಾಕ್ಟೀರಿಯಾ ಕಚ್ಚುವಿಕೆಯ ಮೂಲಕ ಸಾಂಕ್ರಾಮಿಕ ರೋಗವು ಜನರಿಗೆ ಹರಡುತ್ತದೆ ಎಂದು ಯುಎಸ್​​​​​​​ ಆರೋಗ್ಯ ಸಂಸ್ಥೆ ತಿಳಿಸಿದೆ. ಸಿಡಿಸಿ ಪ್ರಕಾರ, ಆಗ್ನೇಯ ಏಷ್ಯಾ, ಇಂಡೋನೇಷ್ಯಾ, ಚೀನಾ, ಜಪಾನ್, ಭಾರತ ಮತ್ತು ಉತ್ತರ ಆಸ್ಟ್ರೇಲಿಯಾದ ಗ್ರಾಮೀಣ ಪ್ರದೇಶಗಳಲ್ಲಿ ಸ್ಕ್ರಬ್ ಟೈಫಸ್ನ ಹೆಚ್ಚಿನ ಪ್ರಕರಣಗಳು ಕಂಡುಬರುತ್ತವೆ.

ಸ್ಕ್ರಬ್ ಟೈಫಸ್‌ನ ಲಕ್ಷಣಗಳೇನು?

ಸಿಡಿಸಿ ಪ್ರಕಾರ, ಚಿಹ್ನೆಗಳು ಮತ್ತು ರೋಗಲಕ್ಷಣಗಳು ಒಳಗೊಂಡಿರಬಹುದು:

  • ಜ್ವರ ಮತ್ತು ಶೀತ
  • ತಲೆನೋವು
  • ದೇಹದ ನೋವು ಮತ್ತು ಸ್ನಾಯು ನೋವು
  • ಬ್ಯಾಕ್ಟೀರಿಯಾ  ಕಚ್ಚಿದ ದೇಹದ ಭಾಗ ಕಪ್ಪಾಗಾಗುವುದು
  • ಗೊಂದಲದಿಂದ ಕೋಮಾದವರೆಗೆ ಮಾನಸಿಕ ಬದಲಾವಣೆಗಳು
  • ತುರಿಕೆ

ಇದನ್ನೂ ಓದಿ: ರಾಜ್ಯದ ಮೊದಲ ಹೆಲ್ತ್ ಎಟಿಎಂ ಕಲಬುರಗಿಯಲ್ಲಿ ಆರಂಭ; ಹತ್ತೇ ನಿಮಿಷದಲ್ಲಿ ಸಿಗುತ್ತೆ ಐವತ್ತು ಪರೀಕ್ಷೆಗಳ ವರದಿ!

ತಜ್ಞರ ಪ್ರಕಾರ, ಸ್ಕ್ರಬ್ ಟೈಫಸ್‌ನ ಲಕ್ಷಣಗಳು ಸಾಮಾನ್ಯವಾಗಿ ಕಚ್ಚಿದ 10 ದಿನಗಳಲ್ಲಿ ಪ್ರಾರಂಭವಾಗುತ್ತದೆ. ರೋಗದ ತೀವ್ರ ಸ್ವರೂಪವನ್ನು ಹೊಂದಿರುವ ಜನರು ಅಂಗಗಳ ವೈಫಲ್ಯ ಮತ್ತು ರಕ್ತಸ್ರಾವವನ್ನು ಅಭಿವೃದ್ಧಿಪಡಿಸಬಹುದು, ಇದು ಚಿಕಿತ್ಸೆ ನೀಡದೆ ಬಿಟ್ಟರೆ ಮಾರಕವಾಗಬಹುದು.

ಸ್ಕ್ರಬ್ ಟೈಫಸ್ ಸೋಂಕನ್ನು ತಡೆಯುವುದು ಹೇಗೆ?

ಪ್ರಸ್ತುತ, ಸ್ಕ್ರಬ್ ಟೈಫಸ್ ಅನ್ನು ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ಸಿಡಿಸಿ ಪ್ರಕಾರ, ಸೋಂಕಿತ ಚಿಗ್ಗರ್‌ ಅಥವಾ ಮಿಟೆ ಇದನ್ನು ಸಣ್ಣ ಹುಳ ಎಂದು ಕರೆಯುತ್ತಾರೆ. ಇದರ ಕಚ್ಚುವಿಕೆಯನ್ನು ತಪ್ಪಿಸುವ ಮೂಲಕ ನೀವು ಸ್ಕ್ರಬ್ ಟೈಫಸ್ ಪಡೆಯುವ ಅಪಾಯವನ್ನು ಕಡಿಮೆ ಮಾಡಬಹುದು.ನೀವು ಯಾವುದೇ ಪ್ರದೇಶಕ್ಕೆ ಹೋದ ವಿಶೇಷವಾಗಿ ಅಧಿಕ ಹುಲ್ಲುಗಳಿಂದ ಕೂಡಿರುವ ಪ್ರದೇಶದದಿಂದ ದೂರವಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: