ಕಳೆದ ಎರಡು ವರ್ಷಗಳ ಹಿಂದೆ ನಾಗಲ್ಯಾಂಡ್ನ ನೋಕ್ಲಾಕ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಸ್ಕ್ರಬ್ ಟೈಫಸ್ ಸೋಂಕು ಇದೀಗ ಮೀರತ್ನಲ್ಲಿ ಓರ್ವ ಬಾಲಕನ ಸಾವಿಗೆ ಕಾರಣವಾಗಿ ಮತ್ತೊಮ್ಮೆ ಪ್ರಚಲಿತದಲ್ಲಿದೆ. 2020ರಲ್ಲಿ 600ಕ್ಕೂ ಅಧಿಕ ಮಂದಿಗೆ ಸ್ಕ್ರಬ್ ಟೈಫಸ್ ಕಾಣಿಸಿಕೊಂಡಿತ್ತು. 5 ಜನ ಈ ಸೋಂಕಿಗೆ ಬಲಿಯಾಗಿದ್ದರು.
ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಪ್ರಕಾರ, ಸ್ಕ್ರಬ್ ಟೈಫಸ್ ಸೋಂಕನ್ನು ಬುಷ್ ಟೈಫಸ್ ಎಂದು ಕರೆದಿದೆ.
ಓರಿಯೆಂಟಿಯಾ ಸುಸುಂಗಾಮುಶಿ ಬ್ಯಾಕ್ಟೀರಿಯಾ
ಇದು ಓರಿಯೆಂಟಿಯಾ ಸುಸುಂಗಾಮುಶಿ ಎಂಬ ಬ್ಯಾಕ್ಟೀರಿಯಾದಿಂದ ಈ ಸೋಂಕು ಹರಡುತ್ತದೆ.
ಎಲ್ಲೆಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು
ಚೀನಾ, ಜಪಾನ್, ಭಾರತ ಮತ್ತು ಆಗ್ನೇಯ ಏಷ್ಯಾ, ಇಂಡೋನೇಷ್ಯಾ, ಉತ್ತರ ಆಸ್ಟ್ರೇಲಿಯಾದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿತ್ತು.
ಸ್ಕ್ರಬ್ ಟೈಫಸ್ ಲಕ್ಷಣಗಳೇನು?
-ಸೋಂಕಿಗೆ ಒಳಗಾದ ಅಥವಾ ಹುಳ ಕಚ್ಚಿದ 10 ದಿನಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ.
-ಶೀತ, ಜ್ವರ, ತಲೆನೋವು, ಮೈ ಕೈ ನೋವು ಮತ್ತು ಸ್ನಾಯು ಸೆಳೆತ ಸೋಂಕು ಹರಡುವ ಹುಳ ಕಚ್ಚಿದ ಜಾಗದಲ್ಲಿ ಉಬ್ಬಿದ ರೀತಿಯಾಗಿ ಕಪ್ಪು ಕಲೆ ಕಾಣಿಸಿಕೊಳ್ಳುವುದು ಮಾನಸಿಕ ಬದಲಾವಣೆಗಳು, ಕೋಮಾದವರೆಗೂ ಹೋಗಬಹುದು.
ಯಾರಿಗೆ ಹೆಚ್ಚು ಅಪಾಯ
ಈಗಾಗಲೇ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರು, ರಕ್ತಸ್ರಾವ, ಅಂಗಾಂಗ ವೈಫಲ್ಯ ಮತ್ತು ಗಂಭೀರ ಸಮಸ್ಯೆಗೆ ತುತ್ತಾಗಬಹುದು ಎಂದು ಹೇಳಲಾಗಿದೆ. ಈ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಚಿಕಿತ್ಸೆ ಕುರಿತು ಮಾಹಿತಿ
-ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ನೀಡಿದರೆ ಆ್ಯಂಟಿ ಬಯೋಟಿಕ್ ಹೆಚ್ಚು ಪರಿಣಾಮ ಬೀರುತ್ತದೆ.
-ಡಾಕ್ಸಿಸೈಕ್ಲಿನ್ ಮೂಲಕ ಚಿಕಿತ್ಸೆ ನೀಡಬೇಕು.
-ಸ್ಕ್ರಬ್ ಟೈಪಸ್ ಸೋಂಕಿಗೆ ಆ್ಯಂಟಿ ಬಯೊಟಿಕ್ ಡಾಕ್ಸಿಸೈಕ್ಲಿನ್ ಯಾವುದೇ ವಯಸ್ಸಿನ ರೋಗಿಗಳಿಗೆ ಬಳಸಬಹುದು.
ರೋಗವನ್ನು ತಡೆಗಟ್ಟುವ ಕ್ರಮಗಳು
ಸ್ಕ್ರಬ್ ಟೈಫಸ್ ಸೋಂಕಿಗೆ ಯಾವುದೇ ಪ್ರತ್ಯೇಕ ಲಸಿಕೆ ಲಭ್ಯವಿಲ್ಲದ ಹಾಗಾಗಿ ಇದನ್ನು ತಡೆಗಟ್ಟುವ ಕೆಲ ಸಲಹೆಗಳು ಇಲ್ಲಿವೆ:
-ಈ ಸೋಂಕು ಕಾಣಿಸಿಕೊಂಡಿರುವ ಪ್ರದೇಶಗಳಿಗೆ ಪ್ರಯಾಣಿಸಬೇಡಿ. ಒಂದು ವೇಳೆ ಅಂತಹ ಪದೇಶಗಳಿಗೆ ಪ್ರಯಾಣಿಸಿದರೂ ಸಹ, ಅಲ್ಲಿನ ಅರಣ್ಯ ಪ್ರದೇಶಗಳಿಗೆ ತೆರಳಬೇಡಿ, ಕಾರಣ ಅಲ್ಲಿ ಸೋಂಕು ಹರಡುವ ಹುಳಗಳು ಇರುತ್ತವೆ.
-ವಸ್ತ್ರಗಳನ್ನು ಪರ್ಮೆಥ್ರಿನ್ ದ್ರಾವಣದಿಂದ ಶುದ್ದೀಕರಿಸಿ, ಅಥವಾ ಪರ್ಮೆಥ್ರಿನ್ನಿಂದ ಸಂಸ್ಕರಿಸಿದ ವಸ್ತುಗಳನ್ನೇ ಬಳಸಿ.
-ಪರ್ಮೆಥ್ರಿನ್ ಸೋಂಕು ಹರಡುವ ಹುಳಗಳನ್ನು ಕೊಲ್ಲುತ್ತದೆ. ಹಾಗೆಯೇ ಬಟ್ಟೆ, ಶೂ ಒಳಗೆ ಅದನ್ನು ಬಳಕೆ ಮಾಡಿ ಸೋಂಕು ಇಲ್ಲದಂತೆ ಮಾಡಬಹುದು.
-ಸೋಂಕು ನಿವಾರಕದಿಂದ ಸ್ವಚ್ಚಗೊಳಿಸಿದ ಬಟ್ಟೆಗಳು ರಕ್ಷಣೆಯನ್ನು ಒದಗಿಸುತ್ತವೆ.