MonkeyPox: ಮಂಕಿಪಾಕ್ಸ್​​ ರೋಗಿಗಳಿಗೆ ಆಯುರ್ವೇದ ವೈದ್ಯರು ನೀಡಿದ ಸಲಹೆಗಳು ಇಲ್ಲಿವೆ

| Updated By: Rakesh Nayak Manchi

Updated on: Aug 03, 2022 | 6:30 AM

ಮಂಕಿಪಾಕ್ಸ್​ ಕಾಯಿಲೆಯನ್ನು ಆಯುರ್ವೇದದ ಮೂಲಕ ಚಿಕಿತ್ಸೆ ನೀಡಬಹುದು. ರೋಗಿಗಳಿಗೆ ಯಾವ ಔಷಧಿ ನೀಡಲಾಗುತ್ತದೆ, ಯಾವ ಆಹಾರ ಸೇವಿಸಬೇಕು, ಯಾವ ಆಹಾರ ಸೇವಿಸಬಾರದು ಎಂಬೂದರ ಬಗ್ಗೆ ದೆಹಲಿಯ ಎಐಐಎ ವಿಭಾಗದ ಮುಖ್ಯಸ್ಥ ಪ್ರೊ. ಡಾ.ಆನಂದ್​ ಮೋರೆ ಅವರು ಮಾಹಿತಿ ನೀಡಿದ್ದಾರೆ.

MonkeyPox: ಮಂಕಿಪಾಕ್ಸ್​​ ರೋಗಿಗಳಿಗೆ ಆಯುರ್ವೇದ ವೈದ್ಯರು ನೀಡಿದ ಸಲಹೆಗಳು ಇಲ್ಲಿವೆ
ಸಾಂಕೇತಿಕ ಚಿತ್ರ
Follow us on

ಭಾರತದಲ್ಲೂ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿದ್ದು, ಕೇರಳದಲ್ಲಿ ಐದು ಮತ್ತು ದೆಹಲಿಯಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ. ರೋಗದ ಕಾವು ಅವಧಿಯು 6 ರಿಂದ 13 ದಿನಗಳು ಎಂದು ಅಂದಾಜಿಸಲಾಗಿದ್ದು, ರೋಗ ಲಕ್ಷಣಗಳು ತೀವ್ರತೆ ಹೊಂದಿದ್ದರೆ 2 ರಿಂದ 4 ವಾರಗಳ ಕಾಲ ಇರಲಿದೆ. ಇಂತಹ ಮಂಕಿಪಾಕ್ಸ್​ ರೋಗಕ್ಕೆ ಹೋಮಿಯೋಪತಿ ಔಷಧಿ ಹೊರತಾಗಿ ಆಯುರ್ವೇದದಲ್ಲೂ ಚಿಕಿತ್ಸೆ ನೀಡಲಾಗುತ್ತದೆ. ದೆಹಲಿಯ ಎಐಐಎ ವಿಭಾಗದ ಮುಖ್ಯಸ್ಥ ಪ್ರೊ. ಡಾ.ಆನಂದ್​ ಮೋರೆ ಅವರು ಮಂಕಿಪಾಕ್ಸ್‌ಗೆ ಚಿಕಿತ್ಸೆ ನೀಡಲು ಅಥವಾ ನಿರ್ವಹಿಸಲು ಏನು ಸೇವಿಸಬೇಕು, ಏನು ಸೇವಿಸಬಾರದು ಎಂಬುದನ್ನು ತಿಳಿಸಿದ್ದಾರೆ. ಅವುಗಳು ಈ ಕೆಳಗಿನಂತಿವೆ.

ಮಂಕಿಪಾಕ್ಸ್ ನಿರ್ವಹಿಸಲು ಆಯುರ್ವೇದ ಸಲಹೆಗಳು

ಡಾ.ಆನಂದ್ ಮೋರೆ ಹೇಳುವಂತೆ, ರೋಗಲಕ್ಷಣಗಳನ್ನು ಪರಿಗಣಿಸಿ ಮಂಕಿಪಾಕ್ಸ್ ಕಾಯಿಲೆಯನ್ನು ಮಸೂರಿಕಾ ವ್ಯಾಧಿ ಎಂದು ವರ್ಗೀಕರಿಸಬಹುದು. ಆಯುರ್ವೇದದ ಪ್ರಕಾರ, ಮಸುರಿಕಾ ಪ್ರಧಾನವಾಗಿ ಪಿತ್ತ- ರಕ್ತ ದುಷ್ಟಿ ಜನ್ಯ ವ್ಯಾಧಿ.

“ಮಸೂರಿಕಾವನ್ನು ವಿವಿಧ ರೀತಿಯ ಪಾಕ್ಸ್, ದಡಾರ, ಚಿಕನ್​ಪಾಕ್ಸ್, ಸಿಡುಬು ಮತ್ತು ಮಂಕಿಪಾಕ್ಸ್ ಕಾಯಿಲೆಗೆ ರೋಗಲಕ್ಷಣದ ಆಧಾರದ ಮೇಲೆ ದೋಷಜಾ ಎಂದು ವರ್ಗೀಕರಿಸಲಾಗಿದೆ” ಎಂದು ಡಾ.ಮೋರೆ ಹೇಳುತ್ತಾರೆ. ಹಾಗಾದರೆ ಆಯುರ್ವೇದಿಕ್ ಮೂಲಕ ಮಂಕಿಪಾಕ್ಸ್‌ಗೆ ಚಿಕಿತ್ಸೆ ನೀಡಲು ಅಥವಾ ನಿರ್ವಹಿಸಲು ಏನು ಮಾಡಬಹುದು? ಡಾ.ಮೋರೆಯವರು ನೀಡಿದ ಸಲಹೆಗಳು ಇಲ್ಲಿವೆ:

  • ರೋಗಿಗಳನ್ನು ಉಪವಾಸದಲ್ಲಿ ಇರಿಸಬಹುದು. ಇದರರ್ಥ ಆಹಾರವನ್ನು ತೆಗೆದುಕೊಳ್ಳದಿರುವುದು ಅಥವಾ
    ಸಣ್ಣ ಪ್ರಮಾಣದ ಆಹಾರವನ್ನು ತೆಗೆದುಕೊಳ್ಳುವುದು.
  • ಪಂಚಕರ್ಮ ಚಿಕಿತ್ಸೆ ಪದ್ಧತಿ ಭಾಗವಾಗಿರುವ ಮೃದು ವಿವೇಚನದ ಮೂಲಕ ಇದಕ್ಕೆ ಚಿಕಿತ್ಸೆ ನೀಡಬಹುದು. ಇದಕ್ಕಾಗಿ ತ್ರಿವೃತ, ಅಶ್ವಗಂಧ, ತ್ರಿಫಲ ಇತ್ಯಾದಿ ಔಷಧಿಗಳನ್ನು ನೀಡುತ್ತಾರೆ. ಶರೀರದ ಶುದ್ಧೀಕರಣಕ್ಕಾಗಿ ವಿವೇಚನ ನೆರವಾಗುತ್ತದೆ.
  • ಮಂಕಿಪಾಕ್ಸ್ ಅನ್ನು ಆಯುರ್ವೇದ ಔಷಧಿಗಳೊಂದಿಗೆ ರೋಗಲಕ್ಷಣಕ್ಕೆ ಚಿಕಿತ್ಸೆ ನೀಡಬಹುದು. ಜ್ವರಕ್ಕೆ ನಾವು ಮಹಾ ಸುದರ್ಶನ ಘನ ವತಿ, ಲಕ್ಷ್ಮೀವಿಲಾಸ್ ರಾಸ್, ಸಂಶಮಣಿ ವತಿ ಮತ್ತು ಅಮೃತಾರಿಷ್ಟವನ್ನು ನೀಡಬಹುದು. ರಕ್ತ ಮತ್ತು ಪಿತ್ತದ ಧೂಳಿಗಾಗಿ ಪಂಚನಿಂಬಾದಿ ವತಿ ಅಥವಾ ಚೂರ್ಣ, ಹರಿದ್ರಾ ಖಂಡ, ಆರಗ್ವಧರಿಷ್ಟ ಮತ್ತು ಮಂಜಿಷ್ಠದಿ ಕ್ವಾತ್ ಬಳಸಬಹುದು.
  • ಮೈಯಲ್ಲಿ ಬಿದ್ದ ಗುಳ್ಳೆಗಳನ್ನು ಅಥವಾ ದದ್ದುಗಳನ್ನು ಸ್ವಚ್ಛಗೊಳಿಸಲು, ತೊಳೆಯಲು ನೀಂಪತ್ರ ಕ್ವಾತ್, ತ್ರಿಫಲ ಕ್ವಾತ್  ಬಳಸಬಹುದು.
  • ರೋಗನಿರೋಧಕ ಶಕ್ತಿಗಾಗಿ, ಚ್ಯವನಪ್ರಾಶ ಅವಲೇಹ, ಬ್ರಹ್ಮ ರಸಾಯನ, ಅಶ್ವಗಂಧ ದಿಲೇಹ್ಯ, ಕೂಷ್ಮಾಂಡ ರಸಾಯನ ಮುಂತಾದ ಇಮ್ಯುನೊ ಬೂಸ್ಟರ್ ಔಷಧಗಳನ್ನು ಬಳಸಬಹುದು.

ಆಯುರ್ವೇದದ ಪ್ರಕಾರ ಮಂಕಿಪಾಕ್ಸ್ ರೋಗಿಗಳು ಯಾವ ಆಹಾರವನ್ನು ಸೇವಿಸಬಹುದು?

  • ರೋಗಿಗಳು ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು.
  • ಹಳೇ ಕಂದು ಅಕ್ಕಿ, ಬೆಂಗಾಲಿ ಗ್ರಾಂ, ಷಡಂಗ ಪನೀಯ, ಮೂಂಗ್ ದಾಲ್ ಮತ್ತು ಅಕ್ಕಿಯಿಂದ ಮಾಡಿದ ಗಂಜಿ, ಮಸೂರ್ ದಾಲ್, ಯವ, ಶಿಗ್ರು, ದ್ರಾಕ್ಷಿಗಳು, ದಾಳಿಂಬೆ ಸೇವನೆ ಮಾಡಬಹುದು.
  • ಅನುಲೋಮ, ವಿಲೋಮ ಮತ್ತು ಭಸ್ತ್ರಿಕಾ ಮುಂತಾದ ಯೋಗ ಮತ್ತು ಪ್ರಾಣಾಯಾಮ ಅಭ್ಯಾಸಗಳನ್ನು ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಡಬೇಕು.

ತಪ್ಪಿಸಬೇಕಾದ ಆಹಾರಗಳು

  • ಎಣ್ಣೆಯುಕ್ತ ಮತ್ತು ಜಂಕ್ ಆಹಾರಗಳು, ಹೊಸದಾಗಿ ಕೊಯ್ಲು ಮಾಡಿದ ಅಕ್ಕಿ, ಎಲೆ ತರಕಾರಿಗಳು, ಹೆಚ್ಚುವರಿ ಉಪ್ಪು,  ಹುಳಿ ಆಹಾರಗಳನ್ನು ತ್ಯಜಿಸಬೇಕು.
  • ಧೂಮಪಾನ, ಮದ್ಯ ಸೇವನೆ ಮತ್ತು ತಂಬಾಕು ಸೇವನೆ ತ್ಯಜಿಸಬೇಕು.
  • ಮಂಕಿಪಾಕ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ಅತಿಯಾದ ಪರಿಶ್ರಮ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮತ್ತು ನೈಸರ್ಗಿಕ ಪ್ರಚೋದನೆಗಳನ್ನು ನಿಗ್ರಹಿಸುವುದನ್ನು ತಪ್ಪಿಸಬೇಕು.