Health Tips: ಈ ಔಷಧೀಯ ಸಸ್ಯಗಳು ನಿಮ್ಮ ಗಾರ್ಡನ್​​ನಲ್ಲಿ ಇರಲಿ; ಅಡುಗೆಗೂ ಆಯಿತು.. ಆರೋಗ್ಯಕ್ಕೂ ಒಳ್ಳೆಯದು

|

Updated on: Apr 04, 2021 | 6:15 PM

ನಮ್ಮ ಸುತ್ತಮುತ್ತಲೂ ಇರುವ ಔಷಧೀಯ ಸಸ್ಯಗಳ ಬಗ್ಗೆ ನಮ್ಮ ಗಮನವೇ ಇರುವುದಿಲ್ಲ. ಆದರೆ ತುಳಸಿ, ಪುದೀನಾದಂತ ಕೆಲವು ಔಷಧೀಯ ಸಸ್ಯಗಳನ್ನು ಮನೆಯಲ್ಲೇ ಬೆಳೆಸಿ, ನಿಯಮಿತವಾಗಿ ಸೇವನೆ ಮಾಡಿದರೆ ಅದೆಷ್ಟೋ ರೋಗಗಳಿಂದ ದೂರ ಇರಬಹುದು.

Health Tips: ಈ ಔಷಧೀಯ ಸಸ್ಯಗಳು ನಿಮ್ಮ ಗಾರ್ಡನ್​​ನಲ್ಲಿ ಇರಲಿ; ಅಡುಗೆಗೂ ಆಯಿತು.. ಆರೋಗ್ಯಕ್ಕೂ ಒಳ್ಳೆಯದು
ಔಷಧೀಯ ಸಸ್ಯ ತುಳಸಿ
Follow us on

ನವದೆಹಲಿ: ಮನುಷ್ಯನ ಅದೆಷ್ಟೋ ರೋಗಗಳಿಗೆ ಪ್ರಕೃತಿಯಲ್ಲೇ ಔಷಧಿಯಿದೆ. ಆದರೆ ನಾವದನ್ನು ಕಡೆಗಣಿಸುತ್ತೇವೆ. ಅದೆಷ್ಟೋ ಔಷಧೀಯ ಸಸ್ಯಗಳು ಕಣ್ಣೆದುರಲ್ಲೇ ಇದ್ದರೂ ಅನೇಕರಿಗೆ ಅದರ ಉಪಯೋಗಗಳೇ ಗೊತ್ತಿರುವುದಿಲ್ಲ. ಇನ್ನೂ ಕೆಲವರು ಅಂಥ ಗಿಡಗಳನ್ನು ಬೆಳೆಸಲೂ ಹೋಗುವುದಿಲ್ಲ. ಆದರೆ ನಾವೀಗ ಇಲ್ಲಿ ಹೇಳುತ್ತಿರುವ ಐದು ಸಸ್ಯಗಳನ್ನು ಸಾಧ್ಯವಾದರೆ ನಿಮ್ಮ ಗಾರ್ಡನ್​ನಲ್ಲಿ ಬೆಳೆಸಿಕೊಳ್ಳಿ. ಇವು ಆರೋಗ್ಯಕ್ಕೆ ಹಲವು ರೀತಿಯ ಉಪಯೋಗ ಕೊಡಬಲ್ಲವು. ಈ ಔಷಧೀಯ ಸಸ್ಯಗಳನ್ನು ಪುರಾತನ ಕಾಲದಿಂದಲೂ ಆರೋಗ್ಯಕ್ಕಾಗಿ ಬಳಕೆ ಮಾಡಲಾಗುತ್ತಿದೆ.

ಅರಿಶಿಣ: ಇದನ್ನು ಹಳದಿ ಎಂದೂ ಕರೆಯಲಾಗುತ್ತದೆ. ಮನೆಯಲ್ಲೇ ಬೆಳೆಯಬಹುದು. ಇದು ಗಡ್ಡೆಯ ರೂಪದಲ್ಲಿ ಇರುತ್ತದೆ. ಅರಿಶಿಣ ಉರಿಯೂತ ನಿಯಂತ್ರಕ ಆಗಿದೆ. ಆ್ಯಂಟಿ ಬ್ಯಾಕ್ಟೀರಿಯಲ್, ಉತ್ಕರ್ಷಣ ನಿರೋಧಿ ಗುಣವನ್ನು ಹೊಂದಿದೆ. ಅಲ್ಲದೆ, ಕ್ಯಾನ್ಸರ್​ನಂತಹ ಮಾರಣಾಂತಿಕ ರೋಗವನ್ನೂ ತಡೆಯುವ ಶಕ್ತಿಯನ್ನು ಹೊಂದಿದೆ. ಅಷ್ಟೇ ಅಲ್ಲ, ಹಲವು ಬಗೆಯ ಹೃದಯ, ಮಿದುಳು ಸಂಬಂಧಿ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡುತ್ತದೆ. ನೀವಿದನ್ನು ಅಡುಗೆಯಲ್ಲೂ ಬಳಸಬಹುದು ಅಥವಾ ಹಾಲಿನೊಂದಿಗೆ ಸೇರಿಸಿಯೂ ಕುಡಿಯಬಹುದು. ಮನೆಯಲ್ಲೇ ಬೆಳೆದರೆ ಇನ್ನೂ ಉತ್ತಮ.

ತುಳಸಿ: ಈ ಗಿಡ ಸಾಮಾನ್ಯವಾಗಿ ದೇಶದ ಹಿಂದೂಗಳ ಮನೆ ಎದುರು ಇದ್ದೇ ಇರುತ್ತದೆ. ಇದು ಪೂಜನೀಯ ಸಸ್ಯವೂ ಹೌದು. ಔಷಧಿಯೂ ಹೌದು. ತುಳಸಿಯಿಂದ ಆರೋಗ್ಯಕ್ಕೆ ಅನೇಕ ರೀತಿಯ ಉಪಯೋಗಗಳು ಇರುವುದು ಈಗಾಗಲೇ ಸಾಬೀತಾಗಿದೆ. ತುಳಸಿ ಬ್ಯಾಕ್ಟೀರಿಯಾ ನಿವಾರಕ ಆಗಿದ್ದು, ಉತ್ಕರ್ಷಣ ನಿರೋಧಕವೂ ಹೌದು. ತುಳಸಿಯ ನಿಯಮಿತ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ರೋಗನಿರೋಧಕ ಶಕ್ತಿ, ಚಯಾಪಚಯ ಕ್ರಿಯೆಯನ್ನು ಉತ್ತೇಜನಗೊಳಿಸುವ ಜತೆ, ಒತ್ತಡವನ್ನು ಕಡಿಮೆ ಮಾಡುತ್ತದೆ. ಆಹಾರದಲ್ಲಿಯೂ ಬಳಸಬಹುದು. ಇಲ್ಲವೇ ನೀರಿನಲ್ಲಿ ಸೇರಿಸಿಯೂ ಕುಡಿಯಬಹುದು.

ಸ್ಟೀವಿಯಾ (ಸಿಹಿ ಪುದೀನಾ): ಇದನ್ನು ಸಕ್ಕರೆ ಎಲೆ ಎಂದೂ ಕರೆಯಲಾಗುತ್ತದೆ. ಸ್ಟೀವಿಯಾದ ಎಲೆಗಳು ಸಕ್ಕರೆಗಿಂತಲೂ ಸಿಹಿಯಾಗಿರುತ್ತವೆ. ಸಿಹಿಯಾಗಿದ್ದರೂ ಅದು ಸಕ್ಕರೆ ಅಂಶವಲ್ಲದ ಕಾರಣ ಮಧುಮೇಹದಿಂದ ಬಳಲುತ್ತಿರುವವರು ಇದನ್ನು ಬಳಸಬಹುದಾಗಿದೆ. ಎಲೆಗಳನ್ನು ಪುಡಿ ಅಥವಾ ಹನಿಗಳನ್ನು ಆಹಾರದಲ್ಲಿ, ಪಾನೀಯದಲ್ಲಿ ಹಾಕಿ ಸೇವಿಸಬಹುದು.

ಬೆಳ್ಳುಳ್ಳಿ: ಇದರ ಬಗ್ಗೆ ಗೊತ್ತೇ ಇದೆ. ಬೆಳ್ಳುಳ್ಳಿಯನ್ನು ಮನೆಯಲ್ಲೇ ಬಳಸಬಹುದು. ಚಿಕ್ಕಚಿಕ್ಕ ಸಸಿಗಳಾಗಿದ್ದು, ಇದೂ ಸಹ ಬೇರಿನಲ್ಲಿಯೇ ಬಿಡುತ್ತದೆ. ಬೆಳ್ಳುಳ್ಳಿಯ ನಿಯಮಿತ ಸೇವನೆಯಿಂದ ಜೀರ್ಣಕ್ರಿಯೆ ಸರಾಗ ಆಗುತ್ತದೆ. ಬಿಪಿ, ಕೊಲೆಸ್ಟ್ರಾಲ್​ಗಳನ್ನು ಇದು ನಿಯಂತ್ರಣ ಮಾಡುತ್ತದೆ. ಮಿದುಳಿನ ಆರೋಗ್ಯಕ್ಕೂ ತುಂಬ ಒಳ್ಳೆಯದು. ಬೆಳ್ಳುಳ್ಳಿಯನ್ನು ಹಾಗೇ ಸೇವಿಸಬಹುದು ಅಥವಾ ನಿಮ್ಮ ಆಹಾರದಲ್ಲಿ ಬೇಯಿಸಿದ ರೂಪದಲ್ಲಿ ತಿನ್ನಬಹುದು.

ಪುದೀನಾ: ಪುದೀನಾ ಸಹ ಆರೋಗ್ಯಕ್ಕೆ ತುಂಬ ಒಳ್ಳೆಯದು. ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುವುದಲ್ಲದೆ, ಆ್ಯಸಿಡಿಟಿ, ಗ್ಯಾಸ್ಟ್ರಿಕ್​ ಸಮಸ್ಯೆಗಳನ್ನು ದೂರ ಮಾಡುತ್ತದೆ. ತಲೆನೋವು, ಅಲರ್ಜಿಗೆ ಅತ್ಯುತ್ತಮ ಮದ್ದು. ಹಾಗೇ ಬಾಯಿಯ ದುರ್ವಾಸನೆಯನ್ನೂ ಹೋಗಲಾಡಿಸುತ್ತದೆ. ಚಹಾದೊಂದಿಗೆ ಕೂಡ ಪುದೀನಾ ಬಳಕೆ ಮಾಡಬಹುದು.

ಇದನ್ನೂ ಓದಿ: Health: ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆ ಬಳಿಕ ಜೀವನಕ್ರಮ ಹೇಗಿರಬೇಕು? ಜನರ ಸಹಜ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ತಮಿಳುನಾಡಿನ ‘ಇಡ್ಲಿ ಅಮ್ಮ’ನಿಗಾಗಿ ಕೆಲವೇ ತಿಂಗಳಲ್ಲಿ ಹೊಸ ಮನೆ, ಕ್ಯಾಂಟೀನ್​ ನಿರ್ಮಾಣ; ಭೂಮಿ ಖರೀದಿ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ

Published On - 6:14 pm, Sun, 4 April 21