AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health: ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆ ಬಳಿಕ ಜೀವನಕ್ರಮ ಹೇಗಿರಬೇಕು? ಜನರ ಸಹಜ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಜಾಯಿಂಟ್ ರಿಪ್ಲೇಸ್​ಮೆಂಟ್ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಏನು ಮಾಡಬೇಕು? ನಮ್ಮ ಜೀವನಶೈಲಿ, ವ್ಯಾಯಾಮ ಹೇಗಿರಬೇಕು? ಜಾಯಿಂಟ್ ರಿಪ್ಲೇಸ್​ಮೆಂಟ್ ಬಗ್ಗೆ ಜನರಲ್ಲಿರುವ ಸಾಮಾನ್ಯ ಪ್ರಶ್ನೆಗಳೇನು? ಹೀಗೇ ಹಲವು ನಮ್ಮ ಮುಂದಿರುವುದು ಸಹಜ. ಅದೆಲ್ಲದಕ್ಕೂ ಉತ್ತರ ಇಲ್ಲಿದೆ.

Health: ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆ ಬಳಿಕ ಜೀವನಕ್ರಮ ಹೇಗಿರಬೇಕು? ಜನರ ಸಹಜ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಜಾಯಿಂಟ್ ರಿಪ್ಲೇಸ್​ಮೆಂಟ್ಸ್
ganapathi bhat
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Mar 30, 2021 | 7:32 PM

Share

ಗಂಟುಮೂಳೆ ನೋವು ಅಥವಾ ಸಂಧಿವಾತ ಬಹಳಷ್ಟು ವಯಸ್ಕರನ್ನು ಅಥವಾ ಕೆಲವು ಯುವಸಮುದಾಯದ ಜನರನ್ನೂ ಕಾಡುವ ಸಮಸ್ಯೆ. ಇದಕ್ಕೆ ಪರಿಹಾರವಾಗಿ ಏನು ಕ್ರಮ ಕೈಗೊಳ್ಳಬಹುದು? ಗಂಟುಮೂಳೆ ಬದಲಾವಣೆಯ ಶಸ್ತ್ರಚಿಕಿತ್ಸೆ (ಜಾಯಿಂಟ್ ರಿಪ್ಲೇಸ್​ಮೆಂಟ್) ಮಾಡಬಹುದೇ? ಈ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಏನು ಮಾಡಬೇಕು? ನಮ್ಮ ಜೀವನಶೈಲಿ, ವ್ಯಾಯಾಮ ಹೇಗಿರಬೇಕು? ಜಾಯಿಂಟ್ ರಿಪ್ಲೇಸ್​ಮೆಂಟ್ ಬಗ್ಗೆ ಜನರಲ್ಲಿರುವ ಸಾಮಾನ್ಯ ಪ್ರಶ್ನೆಗಳೇನು? ಹೀಗೇ ಹಲವು ನಮ್ಮ ಮುಂದಿರುವುದು ಸಹಜ. ಅದೆಲ್ಲದಕ್ಕೂ ಉತ್ತರವಾಗಿ ಬೆಂಗಳೂರಿನ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ. ನಾರಾಯಣ ಹುಳ್ಸೆ ‘ಜಾಯಿಂಟ್ ರಿಪ್ಲೇಸ್​ಮೆಂಟ್ಸ್’ (Joint Replacements- A Patient’s Handbook) ಎಂಬ ಕೃತಿ ರಚಿಸಿದ್ದಾರೆ.

ಜನಸಾಮಾನ್ಯರಿಗೆ ಅರ್ಥವಾಗುವಂತೆ ಗಂಟುಮೂಳೆ, ಜಾಯಿಂಟ್ ರಿಪ್ಲೇಸ್​ಮೆಂಟ್ ವಿವರಗಳನ್ನು ಬರೆದಿದ್ದಾರೆ. ಕೃತಿಯ ಆಯ್ದ ಭಾಗವನ್ನು ಟಿವಿ9 ಕನ್ನಡ ಡಿಜಿಟಲ್ ಓದುಗರ ಮುಂದೆ ಸರಣಿ ರೂಪದಲ್ಲಿ ತೆರೆದಿಡುತ್ತಿದೆ. ಅದರ ಮೂರನೇ ಭಾಗ ಇಲ್ಲಿದೆ. ಮೊದಲನೆಯ ಭಾಗದಲ್ಲಿ ಜಾಯಿಂಟ್ ರಿಪ್ಲೇಸ್​ಮೆಂಟ್ ಎಂದರೇನು? ಸಂಧಿವಾತ, ಗಂಟುಮೂಳೆ ನೋವು ಯಾಕಾಗುತ್ತದೆ? ಇದಕ್ಕೆಲ್ಲಾ ಜಾಯಿಂಟ್ ರಿಪ್ಲೇಸ್​ಮೆಂಟ್ ಸೂಕ್ತ ಪರಿಹಾರವೇ? ಎಂಬ ಬಗ್ಗೆ ತಿಳಿಸಿದ್ದೆವು. ಎರಡನೆಯ ಭಾಗದಲ್ಲಿ- ಸೊಂಟ ನೋವು, ಗಂಟು ನೋವಿಗೆ ಪರಿಹಾರವೇನು? ಜಾಯಿಂಟ್ ರಿಪ್ಲೇಸ್​ಮೆಂಟ್ ಮಾಡಬಹುದೇ? ಎಂದು ತಿಳಿಸಿಕೊಟ್ಟಿದ್ದೆವು. ಇದೀಗ, ಮೂರನೇ ಭಾಗ ಇಲ್ಲಿದೆ.

ಶಸ್ತ್ರಚಿಕಿತ್ಸೆ ಬಳಿಕ ವ್ಯಾಯಾಮ ಹೇಗಿರಬೇಕು? ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆ ಬಳಿಕ ವ್ಯಾಯಾಮ ಮಾಡುವುದು ಬಹುಮುಖ್ಯ. ನಿಗದಿತ ವ್ಯಾಯಾಮಗಳನ್ನು ದಿನಕ್ಕೆ ಮೂರರಿಂದ ನಾಲ್ಕು ಸಲ ಮಾಡಬೇಕು. ಹಲವು ತಿಂಗಳುಗಳ ಕಾಲ ಈ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಗಂಟುಮೂಳೆ ಬದಲಾವಣೆ ಬಳಿಕ ಮಾಡುವ ಬಹುತೇಕ ವ್ಯಾಯಾಮಗಳು ಸರಳವಾದವು ಹಾಗೂ ಮತ್ತೊಬ್ಬರ ಸಹಾಯವಿಲ್ಲದೆ ಮಾಡುವಂಥವುಗಳಾಗಿವೆ. ಸೂಚಿತ ವ್ಯಾಯಾಮ ಹೊರತುಪಡಿಸಿ ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ವಾಕಿಂಗ್ ಮಾಡುವುದು ಒಳ್ಳೆಯದು. ವಾಕಿಂಗ್ ಪ್ರಮಾಣವನ್ನು ಕೂಡ ದಿನೇದಿನೇ ಆಯಾ ವ್ಯಕ್ತಿಗಳ ಸಾಮರ್ಥ್ಯಕ್ಕನುಗುಣವಾಗಿ ಹೆಚ್ಚಿಸಿಕೊಳ್ಳುವುದು.

ಕಾಲು ಗಂಟುಮೂಳೆ ವ್ಯವಸ್ಥಿತವಾಗಿ ಜೋಡಣೆಯಾಗಲು ದೀರ್ಘಾವಧಿ ತೆಗೆದುಕೊಳ್ಳುತ್ತದೆ. ಕೆಲವರಿಗೆ ಎಂಟರಿಂದ ಹನ್ನೆರಡು ತಿಂಗಳುಗಳ ಕಾಲ ತೆಗೆದುಕೊಳ್ಳುವುದೂ ಇದೆ. ಚಿಕಿತ್ಸೆಯಾದ ನಂತರ ಮೂರು ತಿಂಗಳವರೆಗೆ ಫಿಸಿಯೋಥೆರಪಿ ಬೇಕಾಗುತ್ತದೆ ಎಂದು ಕೆಲವರು ಅಂದುಕೊಳ್ಳುತ್ತಾರೆ. ನೋವಿದ್ದರೂ ಫಿಸಿಯೋಥೆರಪಿ ಮಾಡಬೇಕು ಎಂಬುದು ಇನ್ನುಕೆಲವರ ಯೋಚನೆಯಾಗಿದೆ. ಆದರೆ, ಇದು ಜನರಲ್ಲಿರುವ ತಪ್ಪು ತಿಳುವಳಿಕೆಯಾಗಿದೆ. ಬಹಳಷ್ಟು ಜನರು ವ್ಯಾಯಾಮಗಳನ್ನು ತಮ್ಮಷ್ಟಕ್ಕೆ ತಾವು ಮಾಡಿಕೊಳ್ಳಬಹುದು. ಹಾಗೆಂದು, ತಮ್ಮ ಮಿತಿ ಮೀರಿ ವ್ಯಾಯಾಮ ಮಾಡಲೂ ಹೋಗಬಾರದು. ತಮ್ಮ ಶಕ್ತಿಗೂ ಮಿತಿ ಮೀರಿ ಒತ್ತಾಯಪೂರ್ವಕವಾಗಿ ವ್ಯಾಯಾಮ ಮಾಡಿದರೆ ಅದರಿಂದ ಸಮಸ್ಯೆಗಳು ಕೂಡ ಉಂಟಾಗಬಹುದು.

ಜಾಯಿಂಟ್ ರಿಪ್ಲೇಸ್​ಮೆಂಟ್ ಬಳಿಕ ಜೀವನ ಜಾಯಿಂಟ್ ರಿಪ್ಲೇಸ್​ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಜನರೂ ಕೂಡ ಆರೋಗ್ಯಪೂರ್ಣ ಜೀವನ ಸಾಗಿಸಬಹುದು. ನೋವು ನಿವಾರಣೆ ಮಾಡುವುದು ಈ ಚಿಕಿತ್ಸೆಯ ಮೂಲ ಉದ್ದೇಶವಾದರೂ ಹಲವರು ತಮ್ಮ ಚಟುವಟಿಕೆ, ಜೀವನದ ಗುಣಮಟ್ಟವನ್ನೂ ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ಇದೆಲ್ಲಕ್ಕೂ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಪರಿಗಣಿತವಾಗುತ್ತದೆ. ವಯಸ್ಸು, ಗುಣನಡತೆ, ಸಾಮಾಜಿಕ ಬೆಂಬಲ, ಮಾನಸಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಜೀವನ ಸುಧಾರಣೆ ಪ್ರಮಾಣ ಕಂಡುಬರುತ್ತದೆ.

ಜಾಯಿಂಟ್ ರಿಪ್ಲೇಸ್​ಮೆಂಟ್ ಮಾಡಿದರೆ ಎಷ್ಟು ಕಾಲದವರೆಗೆ ಆರಾಮ? ಸಾಧಾರಣ ಶೇ 80 ರಿಂದ ಶೇ 90ರಷ್ಟು ಜಾಯಿಂಟ್ ರಿಪ್ಲೇಸ್​ಮೆಂಟ್​ಗಳಲ್ಲಿ ಸುಮಾರು 20 ವರ್ಷದ ವರೆಗೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಇದನ್ನು ಸಾಬೀತುಪಡಿಸಲು ಕಳೆದ 70 ವರ್ಷಗಳಲ್ಲಿ ನಡೆದ ಲಕ್ಷದಷ್ಟು ಜಾಯಿಂಟ್ ರಿಪ್ಲೇಸ್​ಮೆಂಟ್ ಶಸ್ತ್ರಚಿಕಿತ್ಸೆ ವಿವರಗಳು ದಾಖಲಾಗಿದೆ. ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಶೇ 80 ಕ್ಕೂ ಅಧಿಕ ಕಾಲು ಗಂಟುಮೂಳೆ ಶಸ್ತ್ರಚಿಕಿತ್ಸೆಗಳು 25 ವರ್ಷಕ್ಕೂ ಹೆಚ್ಚು ಕಾಲ ಉತ್ತಮ ಸ್ಥಿತಿಯಲ್ಲಿರುತ್ತದೆ. ಹತ್ತು ವರ್ಷಗಳವರೆಗೆ ಮಾತ್ರ ಸರಿಯಾಗಿದ್ದ ಕಾಲು ಗಂಟುಮೂಳೆ ಶಸ್ತ್ರಚಿಕಿತ್ಸೆ ಪ್ರಮಾಣ ಶೇ 5ರಷ್ಟಿದೆ.

ವಿಫಲಗೊಂಡ ಜಾಯಿಂಟ್ ರಿಪ್ಲೇಸ್​ಮೆಂಟ್​ಗೆ ಏನು ಮಾಡಬೇಕು? ಒಂದು ವೇಳೆ ಜಾಯಿಂಟ್ ರಿಪ್ಲೇಸ್​ಮೆಂಟ್ ವಿಫಲವಾದರೆ ಜಗತ್ತೇ ಕಳೆದುಹೋದಂತೆ ಇರಬೇಕಾಗಿಲ್ಲ. ಅಂಕಿ ಅಂಶಗಳ ಪ್ರಕಾರ, ಜಾಯಿಂಟ್ ರಿಪ್ಲೇಸ್​ಮೆಂಟ್ ಶಸ್ತ್ರಚಿಕಿತ್ಸೆ ಮಾಡಿಕೊಂಡ ಶೇ. 90ರಷ್ಟು ಮಂದಿಗೆ ಮುಂದೆ ಯಾವುದೇ ಚಿಕಿತ್ಸೆಯ ಅಗತ್ಯ ಕಂಡುಬರುವುದಿಲ್ಲ. ಆದರೆ, ಜಾಯಿಂಟ್ ರಿಪ್ಲೇಸ್​ಮೆಂಟ್ ಶಸ್ತ್ರಚಿಕಿತ್ಸೆ ವಿಫಲವಾದರೆ ರಿವಿಷನ್ ಜಾಯಿಂಟ್ ರಿಪ್ಲೇಸ್​ಮೆಂಟ್ ಬೇಕಾಗಬಹುದು.

ಜಾಯಿಂಟ್ ರಿಪ್ಲೇಸ್​ಮೆಂಟ್ ಶಸ್ತ್ರಚಿಕಿತ್ಸೆ ಎಷ್ಟು ಸಹಜ? ಸದ್ಯದ ಪರಿಸ್ಥಿತಿಯಲ್ಲಿ ಜಾಯಿಂಟ್ ರಿಪ್ಲೇಸ್​ಮೆಂಟ್ ಶಸ್ತ್ರಚಿಕಿತ್ಸೆಯು ಮೂಳೆಗೆ ಸಂಬಂಧಿಸಿದ ಬಹು ಜನಪ್ರಿಯ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಜಾಯಿಂಟ್ ರಿಪ್ಲೇಸ್​ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಅಮೆರಿಕದಲ್ಲಿ ಪ್ರತಿ ವರ್ಷ ಸುಮಾರು 14 ಲಕ್ಷ ಮಂದಿ (1.4 ಮಿಲಿಯನ್) ಜಾಯಿಂಟ್ ರಿಪ್ಲೇಸ್​ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಸೊಂಟ ಗಂಟುಮೂಳೆ ಹಾಗೂ ಕಾಲು ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆಗೆ ಇಂಗ್ಲೆಂಡ್​ನಲ್ಲಿ ಸುಮಾರು 1 ಲಕ್ಷದಷ್ಟು ಜನರು ಜಾಯಿಂಟ್ ರಿಪ್ಲೇಸ್​ಮೆಂಟ್​ಗೆ ಒಳಗಾಗುತ್ತಿದ್ದಾರೆ.

ಭಾರತದಲ್ಲಿ ಪ್ರತಿ ವರ್ಷ ಸುಮಾರು 2 ಲಕ್ಷದಷ್ಟು ಜಾಯಿಂಟ್ ರಿಪ್ಲೇಸ್​ಮೆಂಟ್ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಈ ವಿಧಾನದ ಶಸ್ತ್ರಚಿಕಿತ್ಸೆ ಹೊಸದಲ್ಲದ ಕಾರಣ, ವೈದ್ಯರಿಗೆ ಬಹಳಷ್ಟು ಅನುಭವವೂ ಇದೆ.

ಈ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಇರುವ ಗರಿಷ್ಠ ವಯೋಮಾನ ಮಿತಿ ಏನು? ಜಾಯಿಂಟ್ ರಿಪ್ಲೇಸ್​ಮೆಂಟ್ ಶಸ್ತ್ರಚಿಕಿತ್ಸೆಗೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ. ತನ್ನ ದೈಹಿಕ ವಯಸ್ಸಿನ ಪರಿಗಣನೆಗಿಂತ ದೇಹದ ಸದೃಢತೆ ಪರಿಗಣಿಸುವುದು ಮುಖ್ಯವಾಗುತ್ತದೆ. ಶಸ್ತ್ರಚಿಕಿತ್ಸೆ ಹಾಗೂ ಅನಸ್ತೇಶಿಯಾ ಮಾಡಿಸಿಕೊಳ್ಳಲು ಸಮರ್ಥರಾಗಿರಬೇಕು. ಉಳಿದಂತೆ, ವೈದ್ಯರು ಪ್ರಕರಣವನ್ನು ಸೂಕ್ತವಾಗಿ ನಿರ್ವಹಿಸುತ್ತಾರೆ.

JOINT REPLACEMENT DR NARAYAN HULSE

JOINT REPLACEMENT ಪುಸ್ತಕದ ಜೊತೆ ಲೇಖಕ ಹಾಗೂ ವೈದ್ಯ ಡಾ. ನಾರಾಯಣ್ ಹುಳ್ಸೆ

ಇದನ್ನೂ ಓದಿ: Health Tips: ರಾತ್ರಿ ಮಲಗುವ ಮುಂಚೆ ಎಂಥಾ ಆಹಾರ ಸೇವಿಸಬೇಕು? ಇಲ್ಲಿದೆ ಮಾಹಿತಿ

https://www.ndtv.com/india-news/kerala-election-2021-priyanka-gandhi-vadra-slams-bjp-rss-for-harrassment-of-nuns-on-train-2402349

ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು