ಅತಿಯಾದ ಆಯಾಸ, ಹಠಾತ್​ ತೂಕ ನಷ್ಟ ಈ ಮಾರಣಾಂತಿಕ ರೋಗದ ಆರಂಭಿಕ ಲಕ್ಷಣ!

|

Updated on: Oct 10, 2024 | 4:23 PM

ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ದೀರ್ಘಕಾಲದ ಆಯಾಸವು ಲ್ಯುಕೇಮಿಯಾ, ಕರುಳಿನ ಕ್ಯಾನ್ಸರ್ ಮತ್ತು ಹೊಟ್ಟೆಯ ಕ್ಯಾನ್ಸರ್ಗೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಗುರುತಿಸಿ ಚಿಕಿತ್ಸೆ ಪಡೆಯುವ ಮೂಲಕ ಈ ಮಾರಣಾಂತಿಕ ರೋಗದಿಂದ ಮುಕ್ತಿ ಪಡೆಯಬಹುದು.

ಅತಿಯಾದ ಆಯಾಸ, ಹಠಾತ್​ ತೂಕ ನಷ್ಟ ಈ ಮಾರಣಾಂತಿಕ ರೋಗದ ಆರಂಭಿಕ ಲಕ್ಷಣ!
Follow us on

ಕ್ಯಾನ್ಸರ್ ಅತ್ಯಂತ ಅಪಾಯಕಾರಿ ಕಾಯಿಲೆಗಳಲ್ಲಿ ಒಂದಾಗಿದೆ. ಇದು ಕೊನೆಯ ಹಂತವನ್ನು ತಲುಪುವ ವೇಳೆಗೆ, ಸಾವು ಖಚಿತವೆಂದು ಪರಿಗಣಿಸುವಷ್ಟು ಮಾರಣಾಂತಿಕವಾಗಿದೆ. ವಾಸ್ತವವಾಗಿ, ಜೀವಕೋಶಗಳ ಅಸಹಜ ಬೆಳವಣಿಗೆಯಿಂದಾಗಿ ಕ್ಯಾನ್ಸರ್ ಸಂಭವಿಸುತ್ತದೆ. ಇದರ ಅಪಾಯವನ್ನು ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ನಾಲ್ಕು ಹಂತಗಳಿಗೆ ವಿವಿಧ ರೀತಿಯಲ್ಲಿ ಚಿಕಿತ್ಸೆಯನ್ನು ಸಹ ಮಾಡಲಾಗುತ್ತದೆ. ಈ ರೋಗವನ್ನು ಎಷ್ಟು ಬೇಗ ಪತ್ತೆ ಮಾಡಲಾಗುತ್ತದೆಯೋ ಅಷ್ಟು ಚೇತರಿಕೆಯ ಸಾಧ್ಯತೆಗಳು ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ಕ್ಯಾನ್ಸರ್ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಆದ್ದರಿಂದ ಕ್ಯಾನ್ಸರ್ನ ಆರಂಭಿಕ ಲಕ್ಷಣಗಳಾವುವು ಎಂಬುದನ್ನು ತಿಳಿದುಕೊಳ್ಳಿ.

ಕ್ಯಾನ್ಸರ್ನ ಆರಂಭಿಕ ಲಕ್ಷಣಗಳು:

1. ದಣಿದಿರುವುದು:

ಕೆಲಸದ ನಂತರ ಸುಸ್ತಾಗುವುದು ಸಹಜ, ಸ್ವಲ್ಪ ವಿಶ್ರಾಂತಿಯ ಮೂಲಕ ಅದನ್ನು ಹೋಗಲಾಡಿಸಬಹುದು. ಆದರೆ ವಿನಾಕಾರಣ ಆಯಾಸ ವಿಪರೀತವಾದಾಗ ಮತ್ತು ಮೆಟ್ಟಿಲು ಹತ್ತುವಾಗ ಅಥವಾ ಕುಳಿತುಕೊಳ್ಳುವಾಗ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಎಚ್ಚರದಿಂದಿರಬೇಕು. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ದೀರ್ಘಕಾಲದ ಆಯಾಸವು ಲ್ಯುಕೇಮಿಯಾ, ಕರುಳಿನ ಕ್ಯಾನ್ಸರ್ ಮತ್ತು ಹೊಟ್ಟೆಯ ಕ್ಯಾನ್ಸರ್ಗೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಗುರುತಿಸಿ ಚಿಕಿತ್ಸೆ ಪಡೆಯುವ ಮೂಲಕ ಇದನ್ನು ತಪ್ಪಿಸಬಹುದು.

2. ತೂಕ ನಷ್ಟ:

ಕ್ಯಾನ್ಸರ್ ನಿಂದಾಗಿ, ದೇಹದ ಜೀವಕೋಶಗಳು ವೇಗವಾಗಿ ಬೆಳೆಯುತ್ತವೆ, ಇದರಿಂದಾಗಿ ದೇಹಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಇದು ತೂಕ ನಷ್ಟದ ಸಮಸ್ಯೆಯನ್ನು ಉಂಟುಮಾಡಬಹುದು. ಯಾವುದೇ ಕಾರಣವಿಲ್ಲದೆ ಹಠಾತ್​ ತೂಕ ನಷ್ಟ ಅದು ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಆಹಾರ ಮತ್ತು ವ್ಯಾಯಾಮವಿಲ್ಲದೆ ಕೆಲವೇ ದಿನಗಳಲ್ಲಿ ತೂಕವನ್ನು ಕಳೆದುಕೊಳ್ಳುವುದು ಹೊಟ್ಟೆ ಮತ್ತು ಶ್ವಾಸಕೋಶದ ಕ್ಯಾನ್ಸರ್ನ ಲಕ್ಷಣವಾಗಿದೆ. ಈ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ವಹಿಸಬಾರದು.

3. ಕೆಮ್ಮು ಮತ್ತು ನೋವು:

ಆರೋಗ್ಯ ತಜ್ಞರ ಪ್ರಕಾರ ಕೆಮ್ಮು, ಮೂತ್ರ, ಮಲ, ಬಾಯಿ ಅಥವಾ ಮೂಗಿನಿಂದ ಪದೇ ಪದೇ ರಕ್ತ ಕಾಣಿಸಿಕೊಂಡರೆ ಎಚ್ಚರದಿಂದಿರಬೇಕು. ಇವು ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು. ದೇಹದ ನೋವು ಇದ್ದರೆ, ಅದು ಮೂಳೆ ಅಥವಾ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನ ಲಕ್ಷಣವಾಗಿರಬಹುದು.

4. ದೇಹದ ಮೇಲೆ ಕಲೆಗಳ ರಚನೆ:

ದೇಹದ ಮೇಲೆ ದೊಡ್ಡ ಮತ್ತು ವಿವಿಧ ಬಣ್ಣದ ಚುಕ್ಕೆಗಳು ಕಂಡುಬಂದರೂ ಎಚ್ಚರದಿಂದಿರಬೇಕು. ಬಾಯಿ ಅಥವಾ ಖಾಸಗಿ ಭಾಗಗಳಲ್ಲಿ ದೀರ್ಘಕಾಲದವರೆಗೆ ಗಾಯವಾಗಿದ್ದರೆ, ಅದನ್ನು ನಿರ್ಲಕ್ಷಿಸಬಾರದು. ಇದು ಕ್ಯಾನ್ಸರ್‌ನ ಲಕ್ಷಣವೂ ಆಗಿರಬಹುದು.

5. ತಿನ್ನುವಾಗ ತೊಂದರೆ, ವಾಂತಿ ಮತ್ತು ಭೇದಿ:

ಕ್ಯಾನ್ಸರ್ ನಿಂದಾಗಿ ತಿನ್ನಲು ತೊಂದರೆಯಾಗಬಹುದು. ಈ ಸಮಸ್ಯೆ ಎಷ್ಟು ತೀವ್ರವಾಗಿದೆಯೆಂದರೆ ಆಹಾರ ಸೇವಿಸುವುದೂ ಕಷ್ಟವಾಗುತ್ತದೆ. ಇದಲ್ಲದೆ, ಕ್ಯಾನ್ಸರ್ ವಾಂತಿ ಮತ್ತು ಭೇದಿಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಇದನ್ನು ಸಾಮಾನ್ಯ ಕಾಯಿಲೆ ಎಂದು ಪರಿಗಣಿಸಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Thu, 10 October 24