AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ರನ್ನಿಂಗ್ ಶೂಗಳನ್ನು ಯಾವಾಗ ಬದಲಿಸಬೇಕು, ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ

ಕೇವಲ 10 ನಿಮಿಷಗಳ ಕಾಲ ಓಡುವುದರಿಂದ ಹೃದ್ರೋಗದ ಅಪಾಯವನ್ನು ನಿವಾರಿಸಿ, ಮನಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಆದರೆ ಓಡುವ ಸಮಯದಲ್ಲಿ ನೀವು ಧರಿಸುವ ಬೂಟುಗಳು ಸಹ ಮುಖ್ಯವಾಗುತ್ತದೆ ಏಕೆಂದರೆ ಇವು ನಿಮ್ಮ ಕೀಲುಗಳು ಮತ್ತು ಸ್ನಾಯುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ ಜೊತೆಗೆ ಓಡುವಾಗ ಗಾಯಗಳಾಗುವುದನ್ನು ತಡೆಯಲು ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಶೂ ಚೆನ್ನಾಗಿದ್ದರೆ, ಕೀಲುಗಳಿಂದ ಬರುವ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಮೂಳೆ ಹಾಗೂ ಕೀಲುಗಳನ್ನು ಹಠಾತ್ ಕುಲುಕುವಿಕೆ ಅಥವಾ ಉಳುಕುವಿಕೆಯಿಂದ ರಕ್ಷಿಸುತ್ತದೆ. ಆದರೆ ನಿಮ್ಮ ಬೂಟುಗಳು ಹಾಳಾಗಿಲ್ಲ ಚೆನ್ನಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ನಿಮ್ಮ ಶೂ ನೀಡುವ ಸಂಕೇತಗಳೇನು? ಯಾವಾಗ ಬದಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ನಿಮ್ಮ ರನ್ನಿಂಗ್ ಶೂಗಳನ್ನು ಯಾವಾಗ ಬದಲಿಸಬೇಕು, ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 10, 2024 | 3:20 PM

Share

ಪ್ರತಿನಿತ್ಯ ಓಡುವ ಅಭ್ಯಾಸ ಹೃದಯಕ್ಕೆ ತುಂಬಾ ಒಳ್ಳೆಯದು. ಇದು ಅತ್ಯುತ್ತಮ ಚಟುವಟಿಕೆಗಳಲ್ಲಿ ಒಂದಾಗಿದೆ, ಅದರಲ್ಲಿಯೂ ಇದು ದೀರ್ಘಾಯುಷ್ಯವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ರಾತ್ರಿ ನಿದ್ರೆ ಸರಿಯಾಗಿ ಬರದಿದ್ದರೆ ಬೆಳಗ್ಗಿನ ಸಮಯದಲ್ಲಿ ರನ್ನಿಂಗ್ ಮಾಡುವುದರಿಂದ ನಿದ್ರಾಹೀನತೆ ದೂರವಾಗುತ್ತದೆ. ಕೇವಲ 10 ನಿಮಿಷಗಳ ಕಾಲ ಓಡುವುದರಿಂದ ಹೃದ್ರೋಗದ ಅಪಾಯವನ್ನು ನಿವಾರಿಸಿ, ಮನಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಆದರೆ ಓಡುವ ಸಮಯದಲ್ಲಿ ನೀವು ಧರಿಸುವ ಬೂಟುಗಳು ಸಹ ಮುಖ್ಯವಾಗುತ್ತದೆ ಏಕೆಂದರೆ ಇವು ನಿಮ್ಮ ಕೀಲುಗಳು ಮತ್ತು ಸ್ನಾಯುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ ಜೊತೆಗೆ ಓಡುವಾಗ ಗಾಯಗಳಾಗುವುದನ್ನು ತಡೆಯಲು ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಶೂ ಚೆನ್ನಾಗಿದ್ದರೆ, ಕೀಲುಗಳಿಂದ ಬರುವ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಮೂಳೆ ಹಾಗೂ ಕೀಲುಗಳನ್ನು ಹಠಾತ್ ಕುಲುಕುವಿಕೆ ಅಥವಾ ಉಳುಕುವಿಕೆಯಿಂದ ರಕ್ಷಿಸುತ್ತದೆ. ಆದರೆ ನಿಮ್ಮ ಬೂಟುಗಳು ಹಾಳಾಗಿಲ್ಲ ಚೆನ್ನಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ನಿಮ್ಮ ಶೂ ನೀಡುವ ಸಂಕೇತಗಳೇನು? ಯಾವಾಗ ಬದಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ನೀವು ದಿನನಿತ್ಯ ರನ್ನಿಂಗ್ ಅಥವಾ ವಾಕಿಂಗ್ ಗೆ ಬಳಸುವ ಶೂ ನ ಜೀವಿತಾವಧಿ ಸುಮಾರು 300- 500 ಮೈಲಿಗಳು ಮತ್ತು ನಿಮ್ಮ ರನ್ನಿಂಗ್ ಶೂ ಅನ್ನು ಬದಲಾಯಿಸಲು ಸರಿಯಾದ ಸಮಯ 9-12 ತಿಂಗಳುಗಳು. ಈ ನಡುವೆ ನೀವು ಶೂ ಬದಲಿಸುವುದು ಸೂಕ್ತ ಎಂದು ತಜ್ಞರು ಹೇಳುತ್ತಾರೆ.

1. ರನ್ನಿಂಗ್ ಅಥವಾ ವಾಕಿಂಗ್ ಹೋಗಿ ಬಂದ ನಂತರ ವಿಪರೀತ ಕೀಲು ನೋವು ಬರುತ್ತಿದ್ದರೆ ನಿಮ್ಮ ಶೂ ಬದಲಿಸುವ ಸಮಯ ಬಂದಿದೆ ಎಂದುಕೊಳ್ಳಬಹುದು. ಏಕೆಂದರೆ ಇದರ ಮುಖ್ಯ ಉದ್ದೇಶ ನಿಮ್ಮ ಕೀಲುಗಳು ಮತ್ತು ಸ್ನಾಯುಗಳನ್ನು ರಕ್ಷಿಸುವುದು. ಹಾಗಾಗಿ ಕೀಲು ನೋವು ಅಥವಾ ಸ್ನಾಯು ನೋವು, ವಿಪರೀತ ಆಯಾಸ ಅನುಭವಕ್ಕೆ ಬಂದರೆ, ನಿಮ್ಮ ರನ್ನಿಂಗ್ ಶೂಗಳು ಅವುಗಳ ಉಪಯೋಗದ ಮುಕ್ತಾಯ ಮಟ್ಟಕ್ಕೆ ಹೋಗಿದೆ. ನೀವು ಬೇರೆ ಬೂಟುಗಳನ್ನು ಖರೀದಿ ಮಾಡುವುದು ಒಳ್ಳೆಯದು.

2. ಶೂ ಬಳಸುವುದರಿಂದ ಕಾಲಿನಲ್ಲಿ ಗುಳ್ಳೆಗಳು ಮತ್ತು ಗಾಯಗಳಾಗುತ್ತಿದ್ದರೆ ನಿಮ್ಮ ಬೂಟುಗಳಿಗೆ ವಯಸ್ಸಾಗುತ್ತಿವೆ, ಅಲ್ಲದೆ ಇದನ್ನು ಬದಲಾಯಿಸುವ ಅಗತ್ಯವಿದೆ ಎಂಬುದರ ಸಂಕೇತವಾಗಿರಬಹುದು. ನಿಮ್ಮ ಬೂಟುಗಳು ಹಳೆಯದಾಗುತ್ತಾ ಅವುಗಳ ಮೆತ್ತನೆಯ ಭಾಗ ಸವೆದು ಪಾದಗಳು ನೆಲದೊಂದಿಗೆ ನಿಕಟವಾಗಿದ್ದಾಗ ಈ ರೀತಿ ಸಮಸ್ಯೆ ಬರಬಹುದು, ಇದು ಗುಳ್ಳೆಗಳಿಗೆ ಕಾರಣವಾಗಬಹುದು.

3. ಉತ್ತಮ ರನ್ನಿಂಗ್ ಶೂಗಳ ಜೀವಿತಾವಧಿ ಸುಮಾರು 9- 12 ತಿಂಗಳುಗಳು ಎಂದು ತಜ್ಞರು ಹೇಳುತ್ತಾರೆ. ನೀವು ನಿಯಮಿತವಾಗಿ ರನ್ನಿಂಗ್ ಮಾಡುತ್ತಿದ್ದರೆ ಒಂದು ವರ್ಷದೊಳಗೆ ಅವುಗಳನ್ನು ಬದಲಾಯಿಸುವುದು ಒಳ್ಳೆಯದು. ಸಾಮಾನ್ಯವಾಗಿ, ಉತ್ತಮ ರನ್ನಿಂಗ್ ಶೂ ನಿಮಗೆ 300 ರಿಂದ 500 ಮೈಲಿಗಳವರೆಗೆ ಓಡಲು ಸಹಾಯ ಮಾಡುತ್ತದೆ.

4. ನೀವು ಬಳಸುವ ಶೂ ಅವಧಿ ಮೀರಿದರೆ ಅವುಗಳಿಂದ ಆರಾಮ ಸಿಗುವ ಬದಲು ಹೆಚ್ಚು ಆಯಾಸವಾಗುತ್ತದೆ, ಒತ್ತಡವು ನಿಮ್ಮ ಕೀಲುಗಳು ಅಥವಾ ಮೊಣಕಾಲುಗಳ ಮೇಲೆ ಪರಿಣಾಮ ಬೀರಬಹುದು. ಒಣಗಿದ ಅಂಗಾಲುಗಳು ಗಾಯದ ಅಪಾಯಗಳನ್ನು ಉಂಟುಮಾಡಬಹುದು.

5. ಶೂ ಹಳೆಯದಾಗುತ್ತಾ ಬಂದಾಗ ಹೊಸ ಜೋಡಿ ರನ್ನಿಂಗ್ ಶೂಗಳನ್ನು ಖರೀದಿಸಲು ವಿಳಂಬ ಮಾಡಬೇಡಿ, ನಿಮ್ಮ ರನ್ನಿಂಗ್ ಅನುಭವ ಹೆಚ್ಚು ಆರಾಮದಾಯಕವಾಗಿರಲು ಮತ್ತು ಗಾಯಗಳನ್ನು ತಡೆಯಲು ಒಳ್ಳೆಯ ರನ್ನಿಂಗ್ ಶೂ ಹೊಂದಿರುವುದು ಕೂಡ ಮುಖ್ಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ