ನಿದ್ರೆ ಮಾತ್ರೆ ಸೇವಿಸುವುದರಿಂದ ಸಮಸ್ಯೆಗಳು ಒಂದಾ, ಎರಡಾ..?

ಜೀವನದಲ್ಲಿ ಸಮಸ್ಯೆಗಳು ಸಹಜ. ಇದನ್ನು ಎದುರಿಸಿ ಮುಂದೆ ಸಾಗುವುದೇ ಬದುಕಿಗೊಂದು ಅರ್ಥ ಸಿಕ್ಕಂತೆ. ಸಾಮಾನ್ಯವಾಗಿ ಬದುಕಿನಲ್ಲಿ ಪ್ರೀತಿ ಪಾತ್ರರನ್ನು ಕಳೆದು ಕೊಂಡಾಗ ಅಥವಾ ಇತರ ಸಾಮಾಜಿಕ ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗುತ್ತಾರೆ. ಕೆಲವರು ಇದರಿಂದ ಬೇಗ ಹೊರಬಂದರೆ, ಇನ್ನು ಕೆಲವರು ಒತ್ತಡದಲ್ಲಿ ಸಿಲುಕಿ ಅನುಭವಿಸುತ್ತಿರುತ್ತಾರೆ. ಈ ವೇಳೆಯಲ್ಲಿ ನಿದ್ರೆ ಮಾತ್ರೆಗಳನ್ನು ಮನೋವೈದ್ಯರೇ ಅಂತಹ ವ್ಯಕ್ತಿಗಳಿಗೆ ನೀಡುತ್ತಾರೆ.

ನಿದ್ರೆ ಮಾತ್ರೆ ಸೇವಿಸುವುದರಿಂದ ಸಮಸ್ಯೆಗಳು ಒಂದಾ, ಎರಡಾ..?
ಮಾತ್ರೆಗಳನ್ನು ಜೀವನ ಪೂರ್ತಿ ತೆಗೆದುಕೊಂಡರೆ ಅಧಿಕ ರಕ್ತದೊತ್ತಡ, ಕಿಡ್ನಿ ಸೇರಿದಂತೆ ಹಲವು ದೈಹಿಕ ಸಮಸ್ಯೆಗಳು ಉದ್ಭವಾಗುತ್ತದೆ.
Follow us
sandhya thejappa
|

Updated on:Nov 30, 2020 | 5:49 PM

ಯಾವಾಗಪ್ಪಾ ಬೆಳಗಾಗುತ್ತೆ ಅನ್ನೋ ಜನರಿಗೆ ನಿದ್ರೆ ಸಮಸ್ಯೆ ಖಂಡಿತಾ ಇರುತ್ತೆ. ಆದರೆ ಈ ಸಮಸ್ಯೆಗೆ ಕಾರಣ ಖಿನ್ನತೆ. ಪ್ರತಿನಿತ್ಯ ನಿದ್ರೆ ಬಾರದೆ ಮನೋವೈದ್ಯ ಸಲಹೆ ಪಡೆದು ಮಾತ್ರೆ ಸೇವಿಸುವವರಿಗೆ ಈ ನಿದ್ರೆಗುಳಿಗೆಗಳಿಂದಾಗುವ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ಇರುವುದಿಲ್ಲ.

ಜೀವನದಲ್ಲಿ ಸಮಸ್ಯೆಗಳು ಸಹಜ. ಇದನ್ನು ಎದುರಿಸಿ ಮುಂದೆ ಸಾಗುವುದರಿಂದ ಬದುಕಿಗೊಂದು ಅರ್ಥ ಸಿಗುತ್ತದೆ. ಜನ ಸಾಮಾನ್ಯವಾಗಿ ವೈಯಕ್ತಿಕ ಸಮಸ್ಯೆಗಳು ಅಥವಾ ಇತರ ಸಾಮಾಜಿಕ ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗುತ್ತಾರೆ. ಇದಕ್ಕೆ ಲೇಟೆಸ್ಟ್​ ಆಗಿ ರಾಜಕೀಯ ಒತ್ತಡವೂ ಸೇರಿದೆ. ಕೆಲವರು ಇದರಿಂದ ಬೇಗ ಹೊರಬಂದರೆ, ಇನ್ನು ಕೆಲವರು ಒತ್ತಡದಲ್ಲಿ ಸಿಲುಕಿ ಯಾತನೆ ಪಡುತ್ತಿರುತ್ತಾರೆ. ಈ ವೇಳೆಯಲ್ಲಿ ಮನೋವೈದ್ಯರೇ ಅಂತಹ ವ್ಯಕ್ತಿಗಳಿಗೆ ನಿದ್ರೆ ಮಾತ್ರೆಗಳನ್ನು ನೀಡುತ್ತಾರೆ.

ನಿದ್ರೆ ಮಾತ್ರೆಗಳಿಂದಾಗುವ ಸಮಸ್ಯೆಗಳೇನು?

ನಿದ್ರೆಯಿಂದ ವಂಚಿತರಾದ ಜನರು ಮನೋವೈದ್ಯರಿಂದ ಮಾತ್ರೆಗಳನ್ನು ಪಡೆಯುತ್ತಾರೆ. ಸೀಮಿತ ಅವಧಿಯ ವರೆಗೆ ಇದನ್ನು ತೆಗೆದುಕೊಂಡರೆ ಜೀವಕ್ಕೆ ಅಪಾಯವಿಲ್ಲ. ಕೆಲವರು ಹೆಚ್ಚು ಕಾಲದವೆರೆಗೆ ತೆಗೆದುಕೊಂಡಾಗ ಬಿಪಿಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿ ಹೆಚ್ಚಾಗುತ್ತದೆ ಎಂದು ಕೆಲ ಅಧ್ಯಯನ ಮೂಲಕ ತಿಳಿದಿದೆ.

ಮಾತ್ರೆಗಳನ್ನು (Sleeping Pills) ಜೀವನ ಪೂರ್ತಿ ತೆಗೆದುಕೊಂಡರೆ ಅಧಿಕ ರಕ್ತದೊತ್ತಡ, ಕಿಡ್ನಿ ಸೇರಿದಂತೆ ಹಲವು ದೈಹಿಕ ಸಮಸ್ಯೆಗಳು ಉದ್ಭವಾಗುತ್ತದೆ. ಕೆಲವರು ಖಿನ್ನತೆಯಿಂದ ಹೊರಬರಲು  ಒಂದೇ ಬಾರಿ ಹತ್ತು ಹದಿನೈದು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. 0.25 ಎಂಜಿ ಡೋಸೇಜ್ ಇರುವ  ಮಾತ್ರೆಗಳನ್ನು ಒಂದೇ ಬಾರಿ ತೆಗೆದುಕೊಂಡಾಗ 2 ರಿಂದ 3 ದಿನಗಳ ಕಾಲ ಆರೋಗ್ಯ ತಪ್ಪುತ್ತಾರೆ. ಆದರೆ ಜೀವಕ್ಕೆ ಆಪಾಯವಿಲ್ಲ. ಜಾಸ್ತಿ ಡೊಸೇಜ್ ಇರುವ ಮಾತ್ರೆಗಳನ್ನು ಸೇವಿಸಿದಾಗ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ  ಎಂದು ಆಪ್ತ ಸಮಾಲೋಚಕಿ ಸೌಜನ್ಯ ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ.

ಮಾತ್ರೆಗಳನ್ನು (Sleeping Tablets) ನಿಲ್ಲಿಸಿದ ಬಳಿಕ ನಿದ್ರೆ ಕೊರತೆ ಮತ್ತೆ ಉಂಟಾದರೆ ಹಿಂದೆ ಪಡೆಯುತ್ತಿದ್ದ ಡೊಸೇಜ್​ಗಿಂತ ಹೆಚ್ಚು ಡೊಸೇಜ್ ಇರುವ ಮಾತ್ರೆಯನ್ನು ವೈದ್ಯರು ನೀಡುತ್ತಾರೆ. ಕೆಲವೊಮ್ಮೆ ಮಕ್ಕಳು ಖಿನ್ನತೆಗೆ ಒಳಗಾದ ಸಂದರ್ಭದಲ್ಲಿ ನಿದ್ರೆ ಮಾತ್ರೆಗಳನ್ನು ನೀಡದೆ, ಅವರಿಗೆ ಕೆಲವೊಂದು ಚಟುವಟಿಕೆಗಳ ಮೂಲಕ ಸಹಜ ಸ್ಥಿತಿಗೆ ತರಲು ಹಲವು ಪ್ರಯತ್ನಗಳು ವೈದ್ಯರಿಂದ ನಡೆಯುತ್ತದೆ ಎಂದರು.

Published On - 3:22 pm, Mon, 30 November 20

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ