Soaked Rice: ಅಕ್ಕಿಯನ್ನು ನೆನೆಸಿ ಬೇಯಿಸುವುದರಿಂದ ಏನಾಗುತ್ತೆ ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 04, 2024 | 2:17 PM

ಅಕ್ಕಿಯನ್ನು ವಿವಿಧ ರೀತಿಯಲ್ಲಿ ಬೇಯಿಸಬಹುದು. ನಾವು ಅಕ್ಕಿಯನ್ನು ಎರಡು, ಮೂರು ಬಾರಿ ಚೆನ್ನಾಗಿ ತೊಳೆದು ಆ ಬಳಿಕ ಬೇಯಿಸುತ್ತೇವೆ. ಆದರೆ ಇದಕ್ಕಿಂತ ಅಕ್ಕಿಯನ್ನು ನೆನೆಸಿಟ್ಟು ಬೇಯಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಈ ವಿಧಾನದಲ್ಲಿ ಅಕ್ಕಿಯನ್ನು ಬೇಯಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

Soaked Rice: ಅಕ್ಕಿಯನ್ನು ನೆನೆಸಿ ಬೇಯಿಸುವುದರಿಂದ ಏನಾಗುತ್ತೆ ಗೊತ್ತಾ?
Follow us on

ನಾವು ಪ್ರತಿದಿನ ತಿನ್ನುವ ವಸ್ತುಗಳಲ್ಲಿ ಅಕ್ಕಿಯೂ ಒಂದು. ಕನಿಷ್ಠ ಒಂದು ಹೊತ್ತಾದರೂ ನಾವು ಅನ್ನವನ್ನು ಸೇವನೆ ಮಾಡುತ್ತೇವೆ. ಆದರೆ ಅಕ್ಕಿಯನ್ನು ವಿವಿಧ ರೀತಿಯಲ್ಲಿ ಬೇಯಿಸಬಹುದು. ನಾವು ಅಕ್ಕಿಯನ್ನು ಎರಡು, ಮೂರು ಬಾರಿ ಚೆನ್ನಾಗಿ ತೊಳೆದು ಆ ಬಳಿಕ ಬೇಯಿಸುತ್ತೇವೆ. ಆದರೆ ಇದಕ್ಕಿಂತ ಅಕ್ಕಿಯನ್ನು ನೆನೆಸಿಟ್ಟು ಬೇಯಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಈ ವಿಧಾನದಲ್ಲಿ ಅಕ್ಕಿಯನ್ನು ಬೇಯಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಅಕ್ಕಿಯನ್ನು ನೆನೆಸಿ ಬೇಯಿಸಿ ಆ ಬಳಿಕ ಸೇವನೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ನೆನೆಸಿದ ಅಕ್ಕಿಯನ್ನು ಬೇಯಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ತ್ವರಿತವಾಗಿ ಹೆಚ್ಚಾಗುವುದಿಲ್ಲ. ಡಯಾಬಿಟಿಸ್ ಇರುವವರು ಈ ರೀತಿ ಅನ್ನವನ್ನು ಬೇಯಿಸಿ ತಿನ್ನುವುದು ತುಂಬಾ ಒಳ್ಳೆಯದು.

ಅಕ್ಕಿಯನ್ನು ನೆನೆಸಿ ನಂತರ ಬೇಯಿಸುವುದರಿಂದ ಪೋಷಕಾಂಶಗಳು ದೇಹಕ್ಕೆ ಚೆನ್ನಾಗಿ ಪೂರೈಕೆಯಾಗುತ್ತವೆ. ಈ ಆಹಾರವು ನಮ್ಮ ದೈನಂದಿನ ಚಟುವಟಿಕೆಗಳನ್ನು ಸುಲಭವಾಗಿ ಮಾಡಲು ಸಹಾಯ ಮಾಡುತ್ತದೆ. ದೇಹಕ್ಕೆ ಜೀವಸತ್ವಗಳು, ಖನಿಜಗಳು ಸಮೃದ್ಧವಾಗಿ ಸಿಗುತ್ತದೆ.

ಇದನ್ನೂ ಓದಿ: ಬೆಳಗಿನ ವಾಕಿಂಗ್ ನಂತರ ಯಾವ ರೀತಿಯ ಆಹಾರ ಸೇವನೆ ಮಾಡಬೇಕು?

ಅಕ್ಕಿಯನ್ನು ನೆನೆಸಿ ಬೇಯಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಅಜೀರ್ಣ, ಗ್ಯಾಸ್, ಮಲಬದ್ಧತೆ ನಿಯಂತ್ರಣಕ್ಕೆ ಬರುತ್ತದೆ. ನೆನೆಸಿದ ಅಕ್ಕಿ ಬೇಗನೆ ಬೇಯುವುದರಿಂದ ತೊಳೆದು ಮಾಡುವ ವಿಧಾನಕ್ಕಿಂತ ಈ ರೀತಿ ಮಾಡುವುದು ತುಂಬಾ ಉತ್ತಮ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: