ಕೊವಿಡ್ ಸಮಸ್ಯೆಯಿಂದ ಹೊರಬಂದರೂ ಕೂಡಾ ಕೊವಿಡ್ ಲಕ್ಷಣಗಳು ಇನ್ನೂ ಕಂಡು ಬರುತ್ತಿವೆ ಎಂದಾದರೆ ಅದನ್ನು ಲಾಂಗ್ ಕೊವಿಡ್ ಅಥವಾ ದೀರ್ಘ ಕೊವಿಡ್ ಎಂದು ಕರೆಯಲಾಗುತ್ತದೆ. ಕೊವಿಡ್ ಸೋಂಕಿನಿಂದ ಮುಕ್ತರಾದ ಮೇಲೂ ಸುಮಾರು 3-4 ವಾರ ಅಥವಾ ತಿಂಗಳುಗಳವರೆಗೆ ಸೋಂಕಿನ ಲಕ್ಷಣಗಳು ಕಂಡು ಬರುತ್ತವೆ. ದೀರ್ಘ ಕೊವಿಡ್ ಲಕ್ಷಣದ ಕುರಿತಾಗಿ ಹಾಗೂ ಯಾರಲ್ಲಿ ಹೆಚ್ಚು ಕಂಡು ಬರುತ್ತದೆ ಎಂಬುದರ ಕುರಿತಾಗಿ ಸಂಶೋಧನೆಗಳು ನಡೆದಿವೆ. ಅನಾರೋಗ್ಯಕ್ಕೆ ಒಳಗಾದ ಮಯಸ್ಸಾದವರು, ಮಹಿಳೆಯರು, ಐದಕ್ಕಿಂತ ಹೆಚ್ಚಿನ ರೋಗಲಕ್ಷಣ ಹೊಂದಿರುವವರಲ್ಲಿ ದೀರ್ಘ ಕೊವಿಡ್ ಹೆಚ್ಚು ಕಂಡು ಬರುತ್ತದೆ ಎಂಬುದು ತಿಳಿದು ಬಂದಿದೆ.
ಕೆಮ್ಮು, ಉಸಿರಾಟ ಸಮಸ್ಯೆ, ಮೂಗು ಕಟ್ಟುವುದು, ಹೆಚ್ಚಿನ ಆಯಾಸ ಅಥವಾ ಸುಸ್ತು, ತಲೆನೋವು, ಕೀಲು ಅಥವಾ ಸ್ನಾಯು ಸೋವು, ಆತಂಕ ಮತ್ತು ಖಿನ್ನತೆಗಳು ದೀರ್ಘ ಕೊವಿಡ್ ಲಕ್ಷಣಗಳಾಗಿವೆ. ಹಾಗೂ ಮನಸ್ಸನ್ನು ನಿರ್ದಿಷ್ಟವಾಗಿ ಕೇಂದ್ರಿಕರಿಸಲು ಅಡೆತಡೆಗಳು ಉಂಟಾಗುತ್ತವೆ. ಹಾಗಾಗಿ ಕೊವಿಡ್ ಸೋಂಕು ನಿವಾರಣೆಗೆ ಆರೈಕೆ ಮಾಡಿದಷ್ಟೇ ಲಾಂಕ್ ಕೊವಿಡ್ ಲಕ್ಷಣಗಳಿಗೂ ಕೂಡಾ ಚಿಕಿತ್ಸೆ ಮುಖ್ಯ.
ದೀರ್ಘ ಕೊವಿಡ್ ರೋಗಲಕ್ಷಣಗಳನ್ನು ನಿರ್ವಹಿಸಲು ಕೆಲವು ಸಲಹೆಗಳು
ಆಯಾಸ ಸುಸ್ತಿಗೆ ಪರಿಹಾರ
ಅನಗತ್ಯವಾದ ಚಿಂತೆಯನ್ನು ಬಿಟ್ಟುಬಿಡಿ. ಹಾಗೆಯೇ ಮನಸ್ಸಿಗೆ ಖುಷಿ ನೀಡುವ ವಿಚಾರವನ್ನಷ್ಟೇ ಯೋಚಿಸಿ. ಕಠಿಣ ಪರಿಶ್ರಮದಿಂದ ಕೆಲಸ ಮಾಡಬೇಡಿ. ಕೆಲಸದ ಮಧ್ಯೆ ಆಗಾಗ ವಿಶ್ರಾಂತಿ ಪಡೆಯಿರಿ. ಅತಿಯಾದ ಅವಸರದ ಕೆಲಸ ಅಥವಾ ಹೆಚ್ಚಿನ ಭಾರವುಳ್ಳ ಪಾತ್ರೆಗಳನ್ನು ಎತ್ತುವುದು. ಬಿಸಿಲಿನಲ್ಲಿ ಹೆಚ್ಚು ಓಡಾಡುವಂತಹ ಹಾಗೂ ಉಸಿರಾಟಕ್ಕೆ ಕಷ್ಟವಾಗುವಂತಹ ಕೆಲಸಗಳನ್ನು ಮಾಡಬೇಡಿ. ಹೆಚ್ಚು ಮಾನಸಿಕ ಆರೋಗ್ಯದ ಮೇಲೆ ಕಾಳಜಿ ಇರಲಿ. ಜನರೊಂದಿಗೆ ಹೆಚ್ಚು ಮಾತನಾಡಿ. ಖುಷಿಯ ಮಾತುಗಳಿಂದ ಮಾನಸಿಕ ಸ್ಥಿತಿಯನ್ನು ಚೈತ್ಯದಿಂದ ಇರಿಸಿಕೊಳ್ಳಲು ಸಹಾಯಕವಾಗುತ್ತದೆ.
ಯೋಚನೆ ಮತ್ತು ನೆನಪಿನ ಶಕ್ತಿ ಉಳಿಸಿಕೊಳ್ಳಲು ಸಲಹೆ
ನಿಮ್ಮ ಕೆಲಸಕ್ಕೆ ಸಂಬಂಧಿಸಿದ ನೆನಪಿಟ್ಟುಕೊಳ್ಳುವಂತಹ ವಿಷಯಗಳ ಪಟ್ಟಿ ತಯಾರಿಸಿಕೊಳ್ಳಿ. ಹೆಚ್ಚು ಗೊಂದಲಗಳಿಗೆ ಒಳಗಾಗಬೇಡಿ. ಯಾವುದೇ ಒಂದು ವಿಷಯವನ್ನು ಆದಷ್ಟು ಗಮನವಿಟ್ಟು ಆಲಿಸಿ. ಈ ಮೂಲಕ ವಿಷಯ ನಿಮಗೆ ಸರಿಯಾಗಿ ನೆನಪಿರುತ್ತದೆ.
ಕೀಲು ಅಥವಾ ಸ್ನಾಯು ನೋವಿಗೆ ಪರಿಹಾರ
ಯೋಗ ಅಥವಾ ವ್ಯಾಯಾಮವನ್ನು ದಿನನಿತ್ಯದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿ. ಆರೋಗ್ಯದಲ್ಲಿ ಏನೇ ಏರು-ಪೇರಾದರೂ ವೃದ್ಯರ ಸಲಹೆ ಪಡೆಯಿರಿ. ವ್ಯಾಯಾಮ ಮತ್ತು ಯೋಗದ ಕುರಿತಾಗಿಯೂ ವೈದ್ಯರಲ್ಲಿ ಸಲಹೆ ಪಡೆದು ಬಳಿಕ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಉತ್ತಮ.
ಇದನ್ನೂ ಓದಿ:
ದೀರ್ಘಕಾಲಿಕ ಸುರಕ್ಷತೆಯ ಭರವಸೆಯನ್ನು ಕೊರೊನಾ ಲಸಿಕೆ ಒದಗಿಬೇಕು: ಡಾ. ಹರೀಶ್ ಅಯ್ಯರ್
Self Quarantine Tips: ಕೊರೊನಾ ಕಾಲಘಟ್ಟದಲ್ಲಿ ಓದುವ ಹವ್ಯಾಸವನ್ನು ಉತ್ತಮವಾಗಿಸಲು ಅನುಸರಿಸಬೇಕಾದ ಕ್ರಮಗಳು
Published On - 1:12 pm, Mon, 7 June 21