Self Quarantine Tips: ಕೊರೊನಾ ಕಾಲಘಟ್ಟದಲ್ಲಿ ಓದುವ ಹವ್ಯಾಸವನ್ನು ಉತ್ತಮವಾಗಿಸಲು ಅನುಸರಿಸಬೇಕಾದ ಕ್ರಮಗಳು

ಏಕಾಗ್ರತೆ ಇಲ್ಲದೆ ಅಥವಾ ಗಮನವನ್ನು ಕೇಂದ್ರೀಕರಿಸದೆ ಅಧ್ಯಯನವನ್ನು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನೀವು ಓದಲು ಆಯ್ಕೆ ಮಾಡಿದ ಸಮಯವನ್ನು ಸಂಪೂರ್ಣವಾಗಿ ಬಳಕೆ ಮಾಡಿ ಮತ್ತು ಕೇಂದ್ರೀಕೃತವಾಗಿರಿ.

Self Quarantine Tips: ಕೊರೊನಾ ಕಾಲಘಟ್ಟದಲ್ಲಿ ಓದುವ ಹವ್ಯಾಸವನ್ನು ಉತ್ತಮವಾಗಿಸಲು ಅನುಸರಿಸಬೇಕಾದ ಕ್ರಮಗಳು
ಪ್ರಾತಿನಿಧಿಕ ಚಿತ್ರ
Follow us
preethi shettigar
| Updated By: Skanda

Updated on: Apr 21, 2021 | 2:56 PM

ಕೊರೊನಾ ಸೋಂಕು ದೇಶದೆಲ್ಲೆಡೆ ಹರಡಿರುವ ಈ ಕಾಲಘಟ್ಟದಲ್ಲಿ ಮನೆಯಲ್ಲೇ ಹೆಚ್ಚಿನ ಸಮಯವನ್ನು ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ಸಮಯವನ್ನು ಬಳಸಿಕೊಂಡು ಹೊಸದೊಂದು ಅಭ್ಯಾಸವನ್ನು ಅಳವಡಿಸಿಕೊಳ್ಳುವತ್ತ ದೇಶದ ಯುವಜನತೆ ಮುಂದಾಗಿದೆ. ಈ ಹಿಂದೆ ಹೊಸ ಅಭ್ಯಾಸಗಳು ಎಂದಾದಾಗ ನೃತ್ಯ ಅಥವಾ ಆಟ ಆಡುವುದು ಹೀಗೆ ಹೆಚ್ಚು ಸಮಯ ಕಳೆಯುತ್ತಿದ್ದರು ಆದರೆ ಈಗ ಎಲ್ಲವೂ ಬದಲಾಗಿದೆ. ಹೊಸ ಅಭ್ಯಾಸಗಳ ಪಟ್ಟಿಗೆ ಓದುವ ಅಥವಾ ಅಧ್ಯಯನ ಮಾಡುವ ಪ್ರಕ್ರಿಯೆ ಅನಿವಾರ್ಯವಾಗಿ ಸೇರಿಕೊಂಡಿದೆ. ಹೀಗಾಗಿ ಮನೆಯಲ್ಲೇ ಕುಳಿತು ಮುಂದಿನ ವಿದ್ಯಾಭ್ಯಾಸಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಈ ಕೆಳಕಂಡ ಸಲಹೆಗಳು ಉಪಯುಕ್ತವಾಗಲಿದೆ.

ಗೊಂದಲವನ್ನು ತಪ್ಪಿಸಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳ ಅತಿಯಾದ ಬಳಕೆ ನಿಮ್ಮ ಮನಸ್ಸನ್ನು ವಿಚಲಿತಗೊಳಿಸಬಹುದು. ಹೀಗಾಗಿ ಅಧ್ಯಯನ ಮಾಡಲು ಸಮಯವನ್ನು ನಿಗದಿಪಡಿಸಿ ಮತ್ತು ಆ ಬಗ್ಗೆ ಹೆಚ್ಚು ಗಮನಹರಿಸಿ. ಇನ್ನು ಅಧ್ಯಯನವನ್ನು ಪೂರ್ಣಗೊಳಿಸಿದ ನಂತರದಲ್ಲಿ ಒಂದು ಹೊಸ ಹುರುಪನ್ನು ಸೃಷ್ಟಿಸಿಕೊಳ್ಳಲು ಮಧುರವಾದ ಸಂಗೀತವನ್ನು ಕೇಳಿ, ಜೊತೆಗೆ ಚಿಕ್ಕ ನಿದ್ರೆ ಮಾಡಿ ಅಥವಾ ನೀವು ಇಷ್ಟಪಡುವ ಯಾವುದಾದರೂ ಒಂದು ಕೆಲಸವನ್ನು ಮಾಡಿ.

ಅಧ್ಯಯನ ಮಾಡುವಾಗ ಮನೆಯಲ್ಲಿ ಇತರರಿಗೆ ಮೊದಲೇ ತಿಳಿಸಿ ನೀವು ಅಧ್ಯಯನವನ್ನು ಮಾಡುತ್ತಿದ್ದೀರಿ ಎನ್ನುವುದನ್ನು ನಿಮ್ಮ ಮನೆಯವರಿಗೆ ತಿಳಿಸುವುದು ಬಹಳ ಮುಖ್ಯವೆನಿಸುತ್ತದೆ. ಇದರಿಂದಾಗಿ ಅನಾವಶ್ಯಕವಾಗಿ ಎದುರಾಗುವ ಸಮಸ್ಯೆಯನ್ನು ತಪ್ಪಿಸಬಹುದಾಗಿದೆ.

ಏಕಾಗ್ರತೆ ಏಕಾಗ್ರತೆ ಇಲ್ಲದೆ ಅಥವಾ ಗಮನವನ್ನು ಕೇಂದ್ರೀಕರಿಸದೆ ಅಧ್ಯಯನವನ್ನು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನೀವು ಓದಲು ಆಯ್ಕೆ ಮಾಡಿದ ಸಮಯವನ್ನು ಸಂಪೂರ್ಣವಾಗಿ ಬಳಕೆ ಮಾಡಿ ಮತ್ತು ಕೇಂದ್ರೀಕೃತವಾಗಿರಿ.

ನೀವು ನಿರ್ಧರಿಸಿದ ಅಧ್ಯಯನದ ಸಮಯವನ್ನು ಮೀರಿ ನೀವು ಒಂದು ವೇಳೆ ಕಲಿಕೆಯಲ್ಲಿ ಮುಂದುವರಿದರೆ ಅದು ಅದ್ಭುತವಾದ ಕಾರ್ಯವಾಗಿರುತ್ತದೆ. ಇದರರ್ಥ ನೀವು ಯೋಚಿಸಿದಕ್ಕಿಂತಲೂ ಹೆಚ್ಚಿನದನ್ನು ಸಾಧಿಸಲು ಸಾಧ್ಯ ಎಂಬುದಾಗಿದೆ. ಇನ್ನು ಬೇಸರ ಅಥವಾ ಗಮನಹರಿಸಲು ಸಾಧ್ಯವಾಗದೇ ಇದ್ದಾಗ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಬಹುದು, ತಿಂಡಿ ಸೇವಿಸಬಹುದು ಆ ನಂತರದಲ್ಲಿ ಅಧ್ಯಯನಕ್ಕೆ ಹಿಂತಿರುಗಬಹುದು.

ನಿಮ್ಮ ಪರಿಶ್ರಮಕ್ಕೆ ನೀವೇ ಪ್ರಶಂಸೆ ಪಡೆದುಕೊಳ್ಳಿ ನೀವು ಹೆಚ್ಚು ಶ್ರಮ ವಹಿಸಿ ಅಧ್ಯಯನ ಮಾಡಿದಾಗ, ನಿಮಗೆ ನೀವೇ ಪ್ರಶಂಸೆ ನೀಡಿಕೊಳ್ಳಿ. ಅದರಲ್ಲೂ ಇಡೀ ದೇಶವೇ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವಾಗ ಏಕಾಗ್ರತೆ ವಹಿಸಿ ಓದುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ನಿಮ್ಮ ಇಷ್ಟವಾದ ತಿನಿಸುಗಳನ್ನು ತಿಂಡಿಯನ್ನು ಸೇವಿಸಿ, ನಿಮ್ಮ ನೆಚ್ಚಿನ ವೆಬ್ ಸಿರಿಸ್​ ಅನ್ನು ನೋಡಿ ಹಾಗೂ ನಿದ್ದೆ ಮಾಡಿ ಖುಷಿಯಾಗಿ ಒಂದಷ್ಟು ಕಾಲ ಕಳೆಯಿರಿ.

ಓದುವುದನ್ನು ಮುಂದುವರಿಸಿ ಒಂದು ವೇಳೆ ಮನಸ್ಸಿನ ನೆಮ್ಮದಿಗಾಗಿ ಅಥವಾ ಒತ್ತಡವನ್ನು ನಿವಾರಣೆ ಮಾಡಿಕೊಳ್ಳಲು ನೀವು ಓದುವುದಾದರೆ ಈ ಅಭ್ಯಾಸವನ್ನು ಮುಂದುವರಿಸಿ. ಓದುವಿಕೆ ನಿಮ್ಮ ಶಬ್ದಕೋಶವನ್ನು ಹೆಚ್ಚಿಸುತ್ತದೆ ಮತ್ತು ವ್ಯಾಕರಣವನ್ನು ಉತ್ತಮಗೊಳಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಈ ರೀತಿಯ ಓದುವ ಹವ್ಯಾಸವು ಮನಸ್ಸಿನ ಸ್ಥಿಮಿತತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.

ಗುರಿಯನ್ನು ನಿಗದಿಪಡಿಸಿಕೊಳ್ಳಿ ಸಾಧಿಸಲು ಇಚ್ಛಿಸುವ ಗುರಿಯನ್ನು ನಿಗದಿಪಡಿಸಿಕೊಳ್ಳಿ. ಯಾವುದೇ ಗುರಿಯನ್ನಾದರೂ ಸುಲಭವಾಗಿ ಸಾಧಿಸಲು ಸಾಧ್ಯವಿಲ್ಲ ಇದಕ್ಕಾಗಿ ಪರಿಶ್ರಮಪಡುವುದು ಅಗತ್ಯವಾಗಿದೆ. ಹೀಗಾಗಿ ನಿಮ್ಮ ಆಯ್ಕೆಯ ಬಗ್ಗೆ ಮೊದಲೇ ವಿಶ್ಲೇಷಿಸುವುದು ಅಗತ್ಯ. ಒಂದು ಗುರಿಯನ್ನು ಸಾಧಿಸಿದ ನಂತರದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ ಬಳಿಕ ಇನ್ನೊಂದು ಗುರಿ ಹಿಂದೆ ಹೋಗಿ.

ನಿಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ ದೈಹಿಕವಾಗಿ ಸಕ್ರಿಯರಾಗಿರುವುದು ಮೆದುಳಿನ ಹಿತದೃಷ್ಟಿಯಿಂದ ಪ್ರಮುಖವೆನಿಸುತ್ತದೆ. ಹೀಗಾಗಿ ಒಳಾಂಗಣ ಆಟಗಳನ್ನು ಆಡಿ, ವ್ಯಾಯಾಮವನ್ನು ಮಾಡಿ, ನೃತ್ಯ ಮಾಡಿ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ. ಒಟ್ಟಾರೆ ಯಾವಾಗ ನೀವು ದೈಹಿಕವಾಗಿ ಸದೃಢವಾಗಿರುತ್ತೀರಾ ಆಗ ಹೊಸ ಆಲೋಚನೆಗೆ ಅವಕಾಶ ಇರುತ್ತದೆ.

ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಮಾನಸಿಕ ಆರೋಗ್ಯ. ಹೀಗಾಗಿ ಮಾನಸಿಕ ಆರೋಗ್ಯದ ಸ್ಥಿಮಿತತೆಯನ್ನು ಕಾಪಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಯಾವೊಬ್ಬ ವ್ಯಕ್ತಿ ತಮ್ಮ ಭಾವನೆಗಳ ಮೇಲೆ ಹಿಡಿತವನ್ನು ಇಟ್ಟುಕೊಂಡಿರುತ್ತಾನೋ ಆತ ತನ್ನ ಗುರಿಗಳ ಮೇಲೆ ಹೆಚ್ಚು ಚಿತ್ತವನ್ನು ಹರಿಸಲು ಸಾಧ್ಯವಾಗುತ್ತದೆ.

ಓದುವ ಕೌಶಲ್ಯಕ್ಕೆ ಒತ್ತು ನೀಡಿ ಉತ್ತಮ ವಿದ್ಯಾರ್ಥಿ ಆಗುವ ಕಡೆಗೆ ಹೆಚ್ಚು ಗಮನ ಹರಿಸಿ. ನಿಮ್ಮ ಬರವಣಿಗೆ ಕೌಶಲ್ಯವನ್ನು ಉತ್ತಮಪಡಿಸಿಕೊಳ್ಳಿ ಮತ್ತು ನೀವು ಓದಿರುವುದನ್ನು ಹೆಚ್ಚು ಕಾಲದವರೆಗೆ ನೆನಪಿಟ್ಟುಕೊಳ್ಳಲು ನೋಟ್ಸ್ ಮಾಡಿಕೊಳ್ಳಿ.

ಸಾಮಾಜಿಕ ಸಂಪರ್ಕವನ್ನು ಕಾಯ್ದುಕೊಳ್ಳಿ ನಿಮ್ಮ ಶಾಲಾ ಸ್ನೇಹಿತರ ಜೊತೆ ಮತ್ತು ಇನ್ನಿತರ ಸ್ನೇಹಿತರ ಜೊತೆ ವಿಡಿಯೋ ಕಾಲ್​ ಮೂಲಕ ಅಥವಾ ಇನ್ನಿತರ ಅಪ್ಲೀಕೇಶನ್ ಮೂಲಕ ಸದಾ ಸಂಪರ್ಕದಲ್ಲಿ ಇರಿ. ವಿವಿಧ ವಿಷಯಗಳ ಕುರಿತು ಆರೋಗ್ಯಕರ ಚರ್ಚೆ ನಡೆಸಿ. ಪಠ್ಯದ ವಿಷಯ ಅಥವಾ ಪಠ್ಯೇತರ ವಿಷಯದ ಕುರಿ ಚರ್ಚೆ ನಡೆಸಬಹುದು. ಈ ರೀತಿಯಾಗಿ ಸಂಪರ್ಕ ಹೊಂದುವುದರಿಂದ ಒಂಟಿತನ ದೂರವಾಗುತ್ತದೆ.

ಇದನ್ನೂ ಓದಿ: ಹೋಟೆಲ್​ನಲ್ಲಿ ಸುರಕ್ಷತೆ ಕಾಪಾಡಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್