ಹೋಟೆಲ್​ನಲ್ಲಿ ಸುರಕ್ಷತೆ ಕಾಪಾಡಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ

ಹೊರ ಹೋಗಲು ಇಚ್ಛಿಸುವವರು ಮತ್ತು ಭೇಟಿ ನೀಡಿದ ಸ್ಥಳದಲ್ಲಿಯೇ ತಂಗಲು ಇಷ್ಟಪಡುವವರು ಹೋಟೆಲ್‌ಗಳಲ್ಲಿನ ಸುರಕ್ಷತಾ ನಿಯಮಗಳ ಕುರಿತು ಇನ್ನಷ್ಟು ತಿಳಿದುಕೊಳ್ಳುವುದು ಅಗತ್ಯ.

ಹೋಟೆಲ್​ನಲ್ಲಿ ಸುರಕ್ಷತೆ ಕಾಪಾಡಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ
ಸಂಗ್ರಹ ಚಿತ್ರ

ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವ ಇಂತಹ ಸಮಯದಲ್ಲಿ ಕುಟುಂಬದ ಜೊತೆ ಹೊರಗಡೆ ಸುತ್ತಾಡಲು ಹೋಗುವ ಯೋಜನೆಗಳೇನಾದರು ಇದ್ದರೆ ಅಂತಹವರು ಕೆಲವು ವಾಸ್ತವ ಅಂಶಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯವೆನಿಸಕೊಳ್ಳುತ್ತದೆ. ಹೊರ ಹೋಗಲು ಇಚ್ಛಿಸುವವರು ಮತ್ತು ಭೇಟಿ ನೀಡಿದ ಸ್ಥಳದಲ್ಲಿಯೇ ತಂಗಲು ಇಷ್ಟಪಡುವವರು ಹೋಟೆಲ್‌ಗಳಲ್ಲಿನ ಸುರಕ್ಷತಾ ನಿಯಮಗಳ ಕುರಿತು ಇನ್ನಷ್ಟು ತಿಳಿದುಕೊಳ್ಳುವುದು ಅಗತ್ಯ. ಮೊದಲು ತಂಗಲು ಇಚ್ಛಿಸುವ ಹೋಟೆಲ್​ ಅಥವಾ ಸ್ಥಳದ ಬಗ್ಗೆ ಪೂರ್ವಭಾವಿಯಾಗಿ ಒಂದಷ್ಟು ಮಾಹಿತಿಯನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಇದರ ಜೊತೆಗೆ ಈ ಕೆಳಕಂಡ ಸಲಹೆಗಳನ್ನು ಗಮನಿಸುವುದು ಉತ್ತಮ.

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಿ ಹೊರ ಹೋಗುವಾಗ ಮಾಸ್ಕ್ ಧರಿಸುವುದು ಕಡ್ಡಾಯ ಎನ್ನುವುದನ್ನು ಈಗಾಗಲೇ ಆರೋಗ್ಯ ಸಂಸ್ಥೆಗಳು ಘೋಷಣೆ ಮಾಡಿವೆ. ಅದರಂತೆ ಹೋಟೆಲ್ ನಿರ್ವಾಹಕರು ಈ ಬಗ್ಗೆ ಗಮನ ಹರಿಸಿದ್ದಾರೆ. ಹೀಗಾಗಿ ಹೊರಗಡೆ ತೆರಳುವಾಗ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಕೇವಲ ಹೋಟೆಲ್​ಗೆ ಹೋಗುವಾಗ ಮಾತ್ರ ಮಾಸ್ಕ್ ಧರಿಸವುದಲ್ಲ ಬದಲಿಗೆ ಸ್ನೇಹಿತರು ಮತ್ತು ಕುಟುಂಬದ ಜೊತೆಗೆ ಹೊರ ಹೋಗುವಾಗ ಕೂಡ ಮಾಸ್ಕ್ ಅನ್ನು ಮರೆಯದೇ ಧರಿಸುವುದು ಅಗತ್ಯ.

ನಿಮ್ಮ ಕೈಗಳನ್ನು 15 ರಿಂದ 20 ನಿಮಿಷಕ್ಕೊಮ್ಮೆ ಸ್ಯಾನಿಟೈಸ್ ಮಾಡಿ ಜಾಗತಿಕ ಆರೋಗ್ಯ ಸಂಸ್ಥೆಗಳಾದ ಸಿಡಿಸಿ ಮತ್ತು ಡಬ್ಲ್ಯುಎಚ್‌ಒ ಜಾರಿಗೊಳಿಸಿದ ನಿಯಮಗಳ ಪ್ರಕಾರ ಪ್ರತಿ 15ರಿಂದ 20 ನಿಮಿಷಕ್ಕೊಮ್ಮೆ ಕೈಗಳನ್ನು ಸ್ವಚ್ಛವಾಗಿಡಲು ಸ್ಯಾನಿಟೈಸ್ ಮಾಡಿಕೊಳ್ಳುತ್ತಿರಬೇಕು. ಈ ನಿಟ್ಟಿನಲ್ಲಿ ಹೋಟೆಲ್​ನಲ್ಲಿ ಸ್ಯಾನಿಟೈಸರ್​ಗಳನ್ನು ಅಳವಡಿಸಿರುತ್ತಾರೆ. ಅಲ್ಲದೇ ಪ್ರತಿ ಒಂದು ರೂಮಿಗೂ ಕೂಡ ಪ್ರತ್ಯೇಕ ಸ್ಯಾನಿಟೈಸರ್​ಗಳನ್ನು ಇಟ್ಟಿರುತ್ತಾರೆ. ಆದರೆ ಈ ಬಗ್ಗೆ ಮೊದಲೇ ನೀವು ಹೋಟೆಲ್​ ನಿರ್ವಾಹಕರೊಂದಿಗೆ ಮಾತನಾಡುವುದು ಉತ್ತಮ ಮತ್ತು ಅವಶ್ಯವಾಗಿ ನಿಮ್ಮ ಬ್ಯಾಗ್​ನಲ್ಲಿ ಒಂದು ಸ್ಯಾನಿಟೈಸರ್ ಇಟ್ಟುಕೊಳ್ಳುವುದನ್ನು ಮರೆಯದಿರಿ.

ಕಿಕ್ಕಿರಿದ ಜನರ ನಡುವೆ ಹೋಟೆಲ್​ನ ಬಿಲ್​ ಅಥವಾ ನೊಂದಣಿ ಮಾಡುವುದನ್ನು ತಪ್ಪಿಸಿ ಹೋಟೆಲ್​ನಲ್ಲಿ ತಂಗುವಾಗ ಅಥವಾ ಪ್ರವಾಸದ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ವಿವಿಧ ಭಾಗಗಳಿಂದ ಜನರು ಹೋಟೆಲ್​ಗಳಿಗೆ ಭೇಟಿ ನೀಡುವುದರಿಂದ ಅಪಾಯದ ಪ್ರಮಾಣ ಗಣನೀಯವಾಗಿ ಹೆಚ್ಚು ಇರುತ್ತದೆ. ಹೀಗಾಗಿ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸುವುದು, ಸಾಮಾಜಿಕವಾಗಿ ದೂರವಿರುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯದಿರುವುದು ಮುಂತಾದ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅಗತ್ಯ.

ಹೋಟೆಲ್​ನ ಜಿಮ್​ನಿಂದ ದೂರವಿರಿ ಜಿಮ್​ಗಳನ್ನು ಸಂಪೂರ್ಣವಾಗಿ ಪುನಾರಂಭಿಸಲು ಇನ್ನೂ ಅವಕಾಶ ನೀಡಲಾಗಿಲ್ಲ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಒಂದಾದ ಜಿಮ್​ಗಳಿಂದ ದೂರವಿರುವುದು ಉತ್ತಮ. ಇದಕ್ಕೆ ಪರ್ಯಾಯವಾಗಿ ನಿಮ್ಮ ಕೋಣೆಯಲ್ಲಿಯೇ ವ್ಯಾಯಾಮ ಮಾಡಬಹುದು. ಇನ್ನು ಹೋಟೆಲ್​ ಸಿಬ್ಬಂಧಿಯನ್ನು ಈ ಮೊದಲೇ ವಿಚಾರಿಸಿ ಪ್ರತ್ಯೇಕ ಜಿಮ್ ವ್ಯವಸ್ಥೆ ಅಥವಾ ಯೋಗದಂತಹ ಅಭ್ಯಾಸಕ್ಕೆ ಅವಕಾಸವಿದೆಯೇ ಎನ್ನುವುದನ್ನು ಕೂಡ ಅರಿತುಕೊಳ್ಳಬಹುದು. ಅದರಲ್ಲೂ ಕೊವಿಡ್ 19 ನಂತಹ ಸಾಂಕ್ರಾಮಿಕ ಕಾಯಿಲೆ ಹರಡುವ ಈ ಸಂದರ್ಭದಲ್ಲಿ ಯೋಗಾಭ್ಯಾಸ ಮಾಡುವುದು ಹೆಚ್ಚು ಸೂಕ್ತ.

ಶುಚಿತ್ವದ ಕೆಲಸಕ್ಕೆ ಹೆಚ್ಚು ಒತ್ತಾಯಿಸದಿರಿ ಕೋಣೆಯ ಸ್ವಚ್ಛತೆಗಾಗಿ ಪದೇ ಪದೇ ಕೆಲಸದವರನ್ನು ಕರೆಯುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಿ. ಹೋಟೆಲ್​ಗಳು ಆದಷ್ಟು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುತ್ತದೆ. ಅಲ್ಲದೇ ಕೆಲಸಗಾರರು ವಿವಿಧ ರೂಮ್​ಗಳಿಗೆ ಹೋಗಿ ಕೆಲಸ ಮಾಡುವುದರಿಂದ ಆದಷ್ಟು ಅವರಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತ.

ಮೀಸಲಾತಿ ಮತ್ತು ಪಾವತಿ ಸಾಧ್ಯವಾದಷ್ಟು ಹೋಟೆಲ್​ನ ಮಿಸಲಾತಿ ಮತ್ತು ಹಣದ ಪಾವತಿಯನ್ನು ಆನ್​ಲೈನ್​ನಲ್ಲಿ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳುವುದು ಉತ್ತಮ. ಇನ್ನು ಹೋಟೆಲ್​ಗಳಿಗೆ ಸಂಬಂಧಿಸಿದ ಯಾವುದಾದರು ಆ್ಯಪ್​ ಇದ್ದರೆ ಅವುಗಳನ್ನು ಮುಂಚಿತವಾಗಿ ನಿಮ್ಮ ಮೊಬೈಲ್​ನಲ್ಲಿ ಡೌನ್​ಲೋಡ್​ ಮಾಡಿ ಕಾರ್ಯಗಳ ಬಗ್ಗೆ ಗಮನಿಸುವುದು ಅಗತ್ಯ. ಮುಖ್ಯವಾಗಿ ಕೊವಿಡ್ 19 ಸುರಕ್ಷತಾ ಕ್ರಮಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಇದು ಅವಕಾಶ ನೀಡುತ್ತದೆ. ಹೋಟೆಲ್‌ಗಳು ನೀಡುತ್ತಿರುವ ಸೌಲಭ್ಯಗಳು ಮತ್ತು ಅತಿಥಿಗಳ ಸುರಕ್ಷತೆಯ ಆಧಾರದ ಮೇಲೆ ನಿಮ್ಮ ಬುಕಿಂಗ್ ಅನ್ನು ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೇರವಾಗಿ ಮಾಡಬಹುದು. ಅಲ್ಲದೇ ಆನ್‌ಲೈನ್ ಪಾವತಿಗಳನ್ನು ಸಹ ಮಾಡಬಹುದು. ಆ ಮೂಲಕ ಹೋಟೆಲ್‌ಗಳಲ್ಲಿ ಸುರಕ್ಷಿತವಾಗಿರಿ ಮತ್ತು ಸಾಧ್ಯವಾದಷ್ಟು ಸಾಮಾಜಿಕ ಅಂತರವನ್ನು ಅನುಸರಿಸಲು ಪ್ರಯತ್ನಿಸಿ.

ಹೊರಾಂಗಣ ಅಥವಾ ಕೋಣೆಯಲ್ಲಿಯೇ ರಾತ್ರಿ ಊಟವನ್ನು ಸ್ವೀಕರಿಸಿ ಸಾಮಾನ್ಯವಾಗಿ ಹೊರಾಂಗಣ ಊಟವನ್ನು ಅನುಸರಿಸುವುದು ಅಗತ್ಯ. ಹೋಟೆಲ್​ನ ಗಾರ್ಡನ್ ಅಥವಾ ತೆರೆದ ಪ್ರದೇಶದಲ್ಲಿ ರಾತ್ರಿ ಊಟವನ್ನು ಮಾಡುವುದು ಉತ್ತಮ. ಏಕೆಂದರೆ ಎಸಿ ಇರುವ ಹೋಟೆಲ್​ನ ಒಳಭಾಗದಲ್ಲಿ ಹೆಚ್ಚು ಜನರು ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಅಲ್ಲದೆ ಮುಚ್ಚಿದ ವಾತಾವರಣದಲ್ಲಿ ಊಟ ಸೇವಿಸುವುದು ಅಷ್ಟು ಸಮಂಜಸವಲ್ಲ. ಇನ್ನು ಹೋಟೆಲ್​ನ ರೂಮ್​ನಲ್ಲಿಯೂ ಕೂಡ ಊಟ ಸೇವಿಸಬಹುದಾಗಿದೆ.

ಲಿಫ್ಟ್ ಬದಲು ಮೆಟ್ಟಿಲು ಬಳಸಿ ಲಿಫ್ಟ್​ಗಳನ್ನು ಆಗಾಗೆ ಬಳಸಬಹುದು. ಆದರೆ ಅಲ್ಲಿ ಸರಿಯಾಗಿ ಗಾಳಿ ಇಲ್ಲದಿರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಹೋಟೆಲ್​ನಲ್ಲಿ ಓಡಾಡುವಾಗ ಮೆಟ್ಟಿಲುಗಳು ಅಥವಾ ಎಸ್ಕಲೇಟರ್ ಬಳಸುವುದು ಉತ್ತಮ.

ವ್ಯಾಲೇಟ್ ಪಾರ್ಕಿಂಗ್ ಅನ್ನು ಆದಷ್ಟು ಕಡಿಮೆ ಮಾಡಿ ನಿಮ್ಮ ವಾಹನಗಳನ್ನು ನೀವೆ ಪಾರ್ಕ್​ ಮಾಡುವುದು ಹೆಚ್ಚು ಸೂಕ್ತ ಆ ನಿಟ್ಟಿನಲ್ಲಿ ಸೋಮಾರಿಯಾಗುವುದನ್ನು ಕೂಡ ನಿಲ್ಲಿಸಬಹುದಾಗಿದೆ. ಅಲ್ಲದೇ ಆದಷ್ಟು ಹೋಟೆಲ್​ಗಳಲ್ಲಿ ನಿಮ್ಮ ಕೆಲಸವನ್ನು ನೀವೇ ಮಾಡಲು ಅಭ್ಯಾಸ ಮಾಡಿಕೊಳ್ಳಿ ಇದರಿಂದ ಸೋಂಕು ಹರಡುವಿಕೆಯಿಂದ ದೂರ ಇರಬಹುದು.

ಡಿಐವಿ ಶುಚಿಗೊಳಿಸುವುದನ್ನು ಆರಿಸಿಕೊಳ್ಳಿ ಪ್ರಯಾಣಿಕರ ಸುರಕ್ಷತೆಗಾಗಿ ಇತ್ತೀಚಿನ ದಿನಗಳಲ್ಲಿ ದ್ರವರೂಪದ ಔಷಧಗಳನ್ನು ಮತ್ತು ಸೋಂಕುನಿವಾರಕಗಳನ್ನು ಬಳಸುತ್ತಾರೆ. ಈ ರೀತಿ ಬಳಸುವ ಸ್ಪ್ರೇನಲ್ಲಿ ಸುಮಾರು ಶೇಕಡಾ 84.4 ಆಲ್ಕೋಹಾಲ್ ಇರುತ್ತದೆ. ಡಿಐವಿ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:

Health Tips During Covid Pandemic: ಕೊರೊನಾ ಕಾಲದಲ್ಲಿ ಆರೋಗ್ಯ ರಕ್ಷಣೆಗೆ 9 ಸೂತ್ರಗಳು

(Successful tips for staying in a hotel during Covid Know the details in Kannada)

Click on your DTH Provider to Add TV9 Kannada