Traveling Tips: ಕೊರೊನಾ ಕಾಲದಲ್ಲಿ ಪ್ರಯಾಣಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಪ್ರಯಾಣದಲ್ಲಿ ತೊಡಗಿರುವಾಗ ಕೊರೊನಾ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚು ಇರುತ್ತದೆ. ಹೀಗಾಗಿಯೇ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಆದರೆ ಹಬ್ಬ ಎಂದು ಬಂದಾಗ ಪ್ರೀತಿ ಪಾತ್ರರ ಜೊತೆ ಕಾಲ ಕಳೆಯುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.

Traveling Tips: ಕೊರೊನಾ ಕಾಲದಲ್ಲಿ ಪ್ರಯಾಣಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
ಪ್ರಾತಿನಿಧಿಕ ಚಿತ್ರ
Follow us
preethi shettigar
|

Updated on: Apr 20, 2021 | 2:15 PM

ಹಬ್ಬ ಹರಿದಿನಗಳೇ ಹೆಚ್ಚು ಇರುವ ಈ ಕಾಲದಲ್ಲಿ ಹೆಚ್ಚಿನವರು ದಿನಬಳಕೆಯ ವಸ್ತಗಳು ಅಥವಾ ಇನ್ನಿತರ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ತರಲು ವಿವಿಧ ನಗರಗಳಿಗೆ ಮತ್ತು ಮಾರುಕಟ್ಟೆಗಳಿಗೆ ಭೇಟಿ ನೀಡುತ್ತಾರೆ. ಈ ರೀತಿ ಪ್ರಯಾಣದಲ್ಲಿ ತೊಡಗಿರುವಾಗ ಕೊರೊನಾ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚು ಇರುತ್ತದೆ. ಹೀಗಾಗಿಯೇ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಆದರೆ ಹಬ್ಬ ಎಂದು ಬಂದಾಗ ಪ್ರೀತಿ ಪಾತ್ರರ ಜೊತೆ ಕಾಲ ಕಳೆಯುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಮನೆಯಿಂದ ಹೊರಗೆ ಹೋಗುವ ಮೊದಲು ಮತ್ತು ಇತರರೊಂದಿಗೆ ಬೆರೆಯುವ ಮೊದಲು ಸುರಕ್ಷತೆ ನಮ್ಮ ಮೊದಲ ಆಧ್ಯತೆಯಾಗಿರಬೇಕು. ಹಾಗಿದ್ದರೆ ನಿಮ್ಮನ್ನು ಮತ್ತು ನಿಮ್ಮ ಮನೆಯವರನ್ನು ಕೊರೊನಾ ಸೋಂಕಿನಿಂದ ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇದನ್ನು ಮಾಡಲೇಬೇಡಿ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ನಿಮ್ಮಲ್ಲಿ ರೋಗಲಕ್ಷಣಗಳಿದ್ದರೆ ಅಥವಾ ಕಳೆದ 14 ದಿನಗಳಲ್ಲಿ ಕೊವಿಡ್ 19 ಲಕ್ಷಣ ಇರುವವರ ಜೊತೆ ಸಂಪರ್ಕದಲ್ಲಿ ಇದ್ದರೆ ಪ್ರಯಾಣವನ್ನು ಕೈ ಬಿಡುವುದು ಒಳಿತು.

ಅನಾರೋಗ್ಯದಿಂದ ಬಳಲುತ್ತಿರುವವರೊಂದಿಗೆ ಪ್ರಯಾಣಿಸಬೇಡಿ.

ಕೊವಿಡ್ 19 ಹೆಚ್ಚಿರುವ ಸ್ಥಳಕ್ಕೆ ಭೇಟಿ ನೀಡುತ್ತಿದ್ದೀರಾ? ಅಲ್ಲಿನ ಪರಿಸ್ಥಿತಿ ಹೇಗಿದೆ? ಎನ್ನುವುದರ ಬಗ್ಗೆ ಮುಂಜಾಗ್ರತೆಯಾಗಿ ತಿಳಿದು ಪ್ರಯಾಣ ಬೆಳೆಸಿ.

ಭೇಟಿ ನೀಡುವ ರಾಜ್ಯದ ಮತ್ತು ಸುತ್ತಮುತ್ತಲ ಪ್ರದೇಶದ ಕೊವಿಡ್ ಪ್ರಕರಣಗಳ ಸ್ಥಿತಿ ಕಳೆದ ಏಳು ದಿನಗಳಲ್ಲಿ ಹೇಗಿದೆ ಎನ್ನುವುದನ್ನು ಪರಿಶೀಲಿಸಿ.

ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ಪೀಡಿತರಿಗೆ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚು, ನೀವು ಕೋವಿಡ್ -19ಗೆ ಒಳಗಾಗಿರುವ ಯಾರೊಂದಿಗಾದರೂ ವಾಸಿಸುತ್ತಿದ್ದರೆ ಎಲ್ಲಿಗೂ ಹೊರಡಬೇಡಿ.  ರೋಗಲಕ್ಷಣಗಳನ್ನು ಹೊಂದಿಲ್ಲದಿದ್ದರೂ ಸಹ, ನೀವು ಪ್ರಯಾಣದಿಂದ ಹಿಂದಿರುಗಿದ ನಂತರ ಪ್ರೀತಿಪಾತ್ರರ ಜೊತೆ ಸ್ವಲ್ಪ ದಿನದ ಮಟ್ಟಿಗೆ ದೂರವೇ ಇರುವುದು ಒಳಿತು.

ಇದನ್ನು ಪಾಲಿಸಿ ನೀವು ಪ್ರಯಾಣಿಸುವ ಮೊದಲು ಹೆಚ್ಚಿನ ಮಾಹಿತಿಗಾಗಿ ರಾಜ್ಯ, ಪ್ರಾದೇಶಿಕ ಮತ್ತು ಸ್ಥಳೀಯ ಸಾರ್ವಜನಿಕ ಆರೋಗ್ಯ ವೆಬ್‌ಸೈಟ್‌ಗಳನ್ನು ಪರಿಶೀಲಿಸಿ.

ನೀವು ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಯೋಚಿಸುತ್ತಿದ್ದರೆ, ಪ್ರವೇಶದ ಅವಶ್ಯಕತೆಗಳು ಮತ್ತು ಪ್ರಯಾಣಿಕರಿಗೆ ಇರುವ ನಿರ್ಬಂಧ, ಪರೀಕ್ಷೆ ಅಥವಾ ಸಂಪರ್ಕ ತಡೆ ಮುಂತಾದ ವಿವರಗಳಿಗಾಗಿ ದೇಶದ ಅಧಿಕೃತ ವಿದೇಶಾಂಗ ವ್ಯವಹಾರಗಳ ವೆಬ್‌ಸೈಟ್ ಅಥವಾ ಆರೋಗ್ಯ ಸಚಿವಾಲಯದ ಮಾಹಿತಿಯನ್ನು ಪರಿಶೀಲಿಸಿ.

ನಿಮ್ಮ ಮುಖ ಮತ್ತು ಮೂಗನ್ನು ಸರಿಯಾಗಿ ಮುಚ್ಚುವ ಮಾಸ್ಕ್ ಧರಿಸಿ ಮತ್ತು ನೀವು ಯಾವುದೇ ವಸ್ತುವನ್ನು ಪ್ರಯಾಣದ ವೇಳೆ ಸ್ಪರ್ಶಿಸಿದ ನಂತರ ನಿಮ್ಮ ಕೈಗಳನ್ನು ಸ್ಯಾನಿಟೈಜರ್ ಹಾಕಿ ಸ್ವಚ್ಛಗೊಳಿಸಿ.

ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 6 ಅಡಿ ಅಂತರ (ಸುಮಾರು 2 ತೋಳುಗಳ ಉದ್ದ) ಕಾಯ್ದುಕೊಳ್ಳುವ ಮೂಲಕ ನಿಕಟ ಸಂಪರ್ಕವನ್ನು ತಪ್ಪಿಸಿ. ಸಾಧ್ಯವಾದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ.

ಅನಾರೋಗ್ಯದಿಂದ ಬಳಲುತ್ತಿರುವ ಯಾರೊಂದಿಗೂ ಸಂಪರ್ಕವನ್ನು ಹೊಂದಬೇಡಿ.

ನಿಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಾಗ ಸ್ಪರ್ಶಿಸುವುದನ್ನು ತಪ್ಪಿಸಿ.

ವಿಮಾನಯಾನ ವಿಮಾನ ಪ್ರಯಾಣವನ್ನು ನೀವು ಬಯಸಿದರೆ ಭದ್ರತಾ ಮಾರ್ಗಗಳು ಮತ್ತು ವಿಮಾನ ನಿಲ್ದಾಣದ ಟರ್ಮಿನಲ್‌ಗಳಲ್ಲಿ ಸಮಯ ಕಳೆಯಬೇಕಾಗಿರುವುದರಿಂದ ಇದರಲ್ಲಿ ಇತರರೊಂದಿಗೆ ನಿಕಟ ಸಂಪರ್ಕಕ್ಕೆ ಬರುವ ಮತ್ತು ಆಗಾಗ ಮೇಲ್ಮೈಗಳನ್ನು ಸ್ಪರ್ಶಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದರೂ, ಹೆಚ್ಚಿನ ವೈರಸ್‌ಗಳು ಮತ್ತು ಇತರ ರೋಗಾಣುಗಳು ವಿಮಾನಗಳಲ್ಲಿ ಸುಲಭವಾಗಿ ಹರಡುವುದಿಲ್ಲ ಏಕೆಂದರೆ ವಿಮಾನದಲ್ಲಿ ಗಾಳಿಯ ಪ್ರಸರಣ ವ್ಯವಸ್ಥೆ ಇದೆ.

ಬಸ್ ಅಥವಾ ರೈಲು ಪ್ರಯಾಣ ಬಸ್ ಅಥವಾ ರೈಲುಗಳ ಪ್ರಯಾಣದಲ್ಲಿ ಅಂತರ ಕಾಯ್ದುಕೊಳ್ಳುವಿಕೆ ಇರುವುದಿಲ್ಲ. ಇದು ಕೊವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ನೀವು ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸಲು ನಿರ್ಧರಿಸಿದರೆ, ಸುರಕ್ಷಿತವಾಗಿರಲು ಮತ್ತು ಸೋಂಕನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಸೂಕ್ತ.

ಕಾರು ಪ್ರಯಾಣ ಕಾರಿನಲ್ಲಿ ಪ್ರಯಾಣ ಬೆಳೆಸುವಾಗ ಏನನ್ನಾದರೂ ಖರೀದಿಸಲು ಅಥವಾ ಪೆಟ್ರೋಲ್ ಬಂಕ್​ನಲ್ಲಿ ಕಾರು ನಿಲ್ಲಿಸುವಾಗ, ಆಹಾರವನ್ನು ಸೇವಿಸಲು ಹೋಟೆಲ್​ಗೆ ಹೋದಾಗ ಅಥವಾ ವಿರಾಮಕ್ಕಾಗಿ ಕಾರ್​ನಿಂದ ಹೊರ ಹೋದಾಗ ಇತರರೊಂದಿಗೆ ನಿಕಟ ಸಂಬಂಧ ಹೊಂದಬೇಕಾಗುತ್ತದೆ ಆಗ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಎಚ್ಚರದಿಂದಿರಿ.

ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತವಾಗಿರುವುದು ಹೇಗೆ? ಸಾರ್ವಜನಿಕ ಸ್ಥಳಗಳಲ್ಲಿ ಯಾವಾಗಲೂ ಮಾಸ್ಕ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇತರರಿಂದ ಕನಿಷ್ಠ 6 ಅಡಿ ಅಂತರವನ್ನು ಕಾಪಾಡಿಕೊಳ್ಳಿ. ಕೊರೊನಾ ಸೋಂಕಿನಿಂದ ದೂರವಿರಲು ಸ್ಯಾನಿಟೈಜರ್​ ಅನ್ನು ಬಳಸಿ ಮತ್ತು ಆಗಾಗ ಕೈ ತೊಳೆಯುವ ಅಭ್ಯಾಸವನ್ನು ರೂಡಿಸಿಕೊಳ್ಳಿ.

ಶೌಚಾಲಯ ಅಥವಾ ವಿಶ್ರಾಂತಿ ಕೊಠಡಿ ಶೌಚಾಯವನ್ನು ಬಳಸಿದ ನಂತರದಲ್ಲಿ ಕನಿಷ್ಠ 20 ಸೆಕೆಂಡ್​ಗಳ ಕಾಲ ಸೋಪು ಮತ್ತು ನೀರಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಿರಿ ಆ ನಂತರದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ. ಒಂದು ವೇಳೆ ಸೋಪು ಮತ್ತು ನೀರು ಇಲ್ಲವಾದಲ್ಲಿ ಸ್ಯಾನಿಟೈಜರ್ (ಶೇಕಡಾ 60 ಆಲ್ಕೋಹಾಲ್) ಬಳಸಿ ಕೈಗಳ ಸುತ್ತಲೂ ಚೆನ್ನಾಗಿ ಉಜ್ಜಿಕೊಳ್ಳಿ ನಂತರ ನೀರಿನಿಂದ ತೊಳೆಯಿರಿ.

ಹೋಟೆಲ್ ಮತ್ತು ವಸತಿಗೃಹ ಹೆಚ್ಚಿನ ಸಲಹೆಗಾಗಿ ಹೋಟೆಲ್ ವೆಬ್​ಸೈಟ್​ ಅನ್ನು ಒಮ್ಮೆ ನೋಡಿ ಮತ್ತು ಅವಕಾಶವಿದ್ದರೆ ಹೋಟೆಲ್​ ಸಿಬ್ಬಂದಿಗೆ ಕರೆ ಮಾಡಿ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆಯಿರಿ.

ಸದ್ಯದ ಪರಿಸ್ಥಿತಿಯನ್ನು ಗಮನಿಸಿದಾಗ ಮನೆಯಲ್ಲಿಯೇ ಆಹಾರವನ್ನು ತಯಾರಿಸಿ ಅವುಗಳನ್ನು ಪ್ರಯಾಣದ ವೇಳೆ ತರುವುದು ಅಗತ್ಯವಾಗಿದ್ದು, ಒಂದು ವೇಳೆ ಆಹಾರವನ್ನು ಮನೆಯಿಂದ ತರಲು ಸಾಧ್ಯವಾಗದೇ ಇದ್ದರೆ ಸಾರ್ವಜನಿಕ ಸ್ಥಳದಲ್ಲಿ ಆಹಾರವನ್ನು ಖರೀದಿಸುವಾಗ ಅಥವಾ ತಿನ್ನುವಾಗ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ: ಹೋಟೆಲ್​ನಲ್ಲಿ ಸುರಕ್ಷತೆ ಕಾಪಾಡಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ 

(Here are the best safety Tips for traveling during covid pandemic)

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ