ನಿಮ್ಮ ಗಂಟಲಿನಲ್ಲಿ ಗಡ್ಡೆ ಇದ್ದಂತೆ ಭಾಸವಾಗುತ್ತಿದೆಯೇ? ಇದರಿಂದ ನಿಮಗೆ ನುಂಗಲು ಕಷ್ಟವಾಗುತ್ತಿದೆಯೇ? ಬಹುಶಃ ನೀವು ನಿಮ್ಮ ಗಂಟಲಿನಲ್ಲಿ ನೋವು, ಸೆನ್ಸೆಟಿವಿಟಿ, ಒರಟುತನ ಅಥವಾ ಶುಷ್ಕತೆ ಅನುಭವಿಸುತ್ತಿದ್ದೀರಾ? ಹಾಗಿದ್ದಲ್ಲಿ, ನೀವು ಬಹುಶಃ ಗಂಟಲು ನೋವಿನಿಂದ ಬಳಲುತ್ತಿದ್ದೀರಿ. ಮ್ಯೂಕಸ್ ಮೆಂಬರೇನ್ನ (Mucus Membrane) ಸರಳವಾದ ಊತವು ಮೂಲಭೂತವಾಗಿ ಗಂಟಲು ನೋವಿಗೆ (Sore Throat) ಕಾರಣವಾಗಿರುತ್ತದೆ. ಇಂತಹ ಸಮಯದಲ್ಲಿ ಗಾಬರಿಯಾಗದೆ ಬೇಡಿ, ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಸಾಮಗ್ರಿಗಳು (Home Remedies) ನಿಮ್ಮ ಗಂಟಲು ನೋವನ್ನು ಗುಣ ಪಡಿಸುತ್ತದೆ.
ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಗಂಟಲಿನ ನೋವನ್ನು ನಿವಾರಿಸಲು ಜೇನುತುಪ್ಪವು ಸಹಾಯ ಮಾಡುತ್ತದೆ.
ಬೆಚ್ಚಗಿನ ದ್ರವಗಳು ನಿಮ್ಮ ಗಂಟಲನ್ನು ತೇವಗೊಳಿಸಲು ಸಹಾಯ ಮಾಡುತ್ತದೆ ಮತ್ತು ಒಣ ಗಂಟಲು, ಡಿಹೈಡ್ರಾಷನ್ ಇತ್ಯಾದಿಗಳನ್ನು ತಡೆಯುತ್ತದೆ. ನೀವು ಈ ಬಿಸಿ ಪಾನೀಯಗಳನ್ನು ಪ್ರಯತ್ನಿಸಬಹುದು:
ವೀಳ್ಯದೆಲೆಯು ಪುರಾತನ ಮತ್ತು ಸಾಂಪ್ರದಾಯಿಕ ಜಾನಪದ ಔಷಧವಾಗಿದ್ದು ಅದು ನಿಮ್ಮ ಗಂಟಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ವೀಳ್ಯದೆಲೆ ಮತ್ತು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಬಹುದು. ಸ್ಟ್ರೈನ್ ಮಾಡಿ ನಂತರ ಆ ನೀರನ್ನು ಕುಡಿಯಿರಿ. ನಿಮ್ಮ ರುಚಿಗೆ ತಕ್ಕಂತೆ ನೀವು ಜೇನುತುಪ್ಪ ಅಥವಾ ಉಪ್ಪನ್ನು ಸೇರಿಸಬಹುದು.
ಇದನ್ನೂ ಓದಿ: ಬೇಸಿಗೆಯಲ್ಲಿ ಕಿಡ್ನಿಯ ಆರೋಗ್ಯವನ್ನು ಕಾಪಾಡಲು ತಜ್ಞರು ನೀಡಿರುವ ಸಲಹೆ ಇಲ್ಲಿದೆ
ನಿಮ್ಮ ಬಾಯಿಯ ಹಿಂಭಾಗದಲ್ಲಿ (ಹಲ್ಲುಗಳು ಮತ್ತು ಕೆನ್ನೆಗಳ ನಡುವೆ) ಕೆಲವು ಲವಂಗಗಳನ್ನು ಇರಿಸಿಕೊಳ್ಳಿ. ಅವುಗಳಲ್ಲಿರುವ ತೈಲಗಳನ್ನು ಬಿಡುಗಡೆ ಮಾಡಲು ನೀವು ಕಾಲಕಾಲಕ್ಕೆ ಅವುಗಳನ್ನು ಕಚ್ಚಬಹುದು. ಇದರ ಮರಗಟ್ಟುವಿಕೆ ಗುಣಲಕ್ಷಣಗಳು ನೋಯುತ್ತಿರುವ ಗಂಟಲುಗಳಿಗೆ ಹಯ್ ಎನಿಸುತ್ತದೆ. ನೀವು ಒಣ ಕೆಮ್ಮನ್ನು ಹೊಂದಿರುವಾಗಲೂ ಇವು ಉಪಯುಕ್ತವಾಗಿವೆ.