Protein : ನೀವು ತೂಕ ಇಳಿಸಿಕೊಳ್ಳಲು ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸ್ತಿದ್ದೀರಾ, ಕಿಡ್ನಿ ಸಮಸ್ಯೆ ಗ್ಯಾರಂಟಿ

ಬೊಜ್ಜಿನಿಂದ ಉಂಟಾಗುವ ಕಾಯಿಲೆಯನ್ನು ತಡೆಯಲು ಜನರು ತೂಕವನ್ನು ಕಳೆದುಕೊಳ್ಳಲು ಮುಂದಾಗುತ್ತಾರೆ. ಈ ಸಮಯದಲ್ಲಿ ಹೆಚ್ಚು ಪ್ರೋಟೀನ್ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ.

Protein : ನೀವು ತೂಕ ಇಳಿಸಿಕೊಳ್ಳಲು ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸ್ತಿದ್ದೀರಾ, ಕಿಡ್ನಿ ಸಮಸ್ಯೆ ಗ್ಯಾರಂಟಿ
ಪ್ರೋಟೀನ್
Follow us
ನಯನಾ ರಾಜೀವ್
|

Updated on: Mar 10, 2023 | 9:00 AM

ಬೊಜ್ಜಿನಿಂದ ಉಂಟಾಗುವ ಕಾಯಿಲೆಯನ್ನು ತಡೆಯಲು ಜನರು ತೂಕವನ್ನು ಕಳೆದುಕೊಳ್ಳಲು ಮುಂದಾಗುತ್ತಾರೆ. ಈ ಸಮಯದಲ್ಲಿ ಹೆಚ್ಚು ಪ್ರೋಟೀನ್ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ತೂಕವನ್ನು ಕಡಿಮೆ ಮಾಡಲು ಕಾರ್ಬೋಹೈಡ್ರೇಟ್​ ಪ್ರಮಾಣವನ್ನು ಸೀಮಿತಗೊಳಿಸುವ ಮೂಲಕ ಪ್ರೋಟಿನ್ ಆಹಾರವನ್ನು ತೆಗೆದುಕೊಳ್ಳಲು ತಿಳಿಸಲಾಗುತ್ತದೆ. ಇದರಿಂದ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈಗಾಗಲೇ ಕೆಲವು ರೀತಿಯ ಕಿಡ್ನಿ ಸಂಬಂಧಿತ ಕಾಯಿಲೆಗಳಿರುವವರು ತೂಕ ಇಳಿಸಿಕೊಳ್ಳಲು ಪ್ರೋಟೀನ್ ಸೇವಿಸುತ್ತಾರೆ.

ಆಗ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲವು ರೂಪುಗೊಳ್ಳಲು ಪ್ರಾರಂಭವಾಗುತ್ತದೆ. ಅದು ದೇಹದಲ್ಲೇ ಸಂಗ್ರಹಗೊಳ್ಳುತ್ತದೆ. ಆರೋಗ್ಯವಂತ ವ್ಯಕ್ತಿಯು ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸಿದರೆ ಮೂತ್ರಪಿಂಡದ ಕಾಯಿಲೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.

ಜಿಮ್​ಗೆ ಹೋಗುವವರು ಪ್ರೋಟೀನ್ ಪೂರಕಗಳನ್ನು ತೆಗೆದುಕೊಳ್ಳುತ್ತಾರೆ, ಆ ಪ್ರೋಟೀನ್ ಪೂರಕಗಳ ಸಂಯೋಜನೆಯನ್ನು ಒಮ್ಮೆ ಓದಬೇಕು, ನಿತ್ಯ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಮೂತ್ರದಿಂದ ಬಿಡುಗಡೆಯಾಗುವ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಕಿಡ್ನಿ ಮೇಲೆ ಹೊರೆಯಾಗಿ ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗುತ್ತದೆ. ಅದಕ್ಕಾಗಿಯೇ ನಿತ್ಯ 25-50 ಗ್ರಾಂನಷ್ಟು ಮಾತ್ರ ಪ್ರೋಟೀನ್ ಸೇವಿಸಬೇಕು.

ಮತ್ತಷ್ಟು ಓದಿ: Heat Wave: ಬೇಸಿಗೆಯಲ್ಲಿ ನಿಮ್ಮ ಜೀವನಶೈಲಿ ಹೀಗಿರಲಿ : ಡಾ ರವಿಕಿರಣ ಪಟವರ್ಧನ ಶಿರಸಿ

ಚಿಕನ್, ಮೀನು ಮತ್ತು ಮೊಟ್ಟೆಯಲ್ಲಿ ಅನಿಮಲ್ ಪ್ರೋಟೀನ್ ಅಂಶ ಹೇರಳವಾಗಿರುತ್ತವೆ. ಹಾಗಾಗಿ ಈ ವಸ್ತುಗಳ ಅಧಿಕ ಸೇವನೆಯಿಂದ ದೇಹದಲ್ಲಿ ಯೂರಿಕ್ ಆಮ್ಲ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ಯೂರಿಕೆ ಆಮ್ಲ ಹೆಚ್ಚಾದರೆ, ಅದು ಕಿಡ್ನಿ ಸ್ಟೋನಿಗೂ ಕಾರಣವಾಗುತ್ತದೆ. ಹಾಗಾಗಿ ಆಹಾರದಲ್ಲಿ ಪ್ರಾಣಿಜನ್ಯ ಪ್ರೊಟೀನ್ ಗಿಂತ ಸಸ್ಯ ಜನ್ಯ ಪ್ರೋಟೀನ್ ಅಂದರೆ, ಪನೀರ್, ಹಾಲು ಕುಂಬಳಕಾಯಿ ಬೀಜ, ಹಾಲು, ದಾಲ್ ಹೆಚ್ಚು ತಿನ್ನಿ.

ಉಪ್ಪಿನಲ್ಲಿ ಸೋಡಿಯಂ ಹೇರಳವಾಗಿರುತ್ತದೆ. ಇದನ್ನು ಅಧಿಕ ಪ್ರಮಾಣದಲ್ಲಿ ತಿಂದರೆ, ಅದು ಯೂರಿನ್ನಲ್ಲಿ ಕ್ಯಾಲ್ಸಿಯಂ ಸಂಗ್ರಹಕ್ಕೆ ಕಾರಣವಾಗುತ್ತದೆ. ಚಿಪ್ಸ್, ಸಂಸ್ಕರಿತ ಆಹಾರ ಇತ್ಯಾದಿ ವಸ್ತುಗಳಲ್ಲೂ ಉಪ್ಪಿನ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ, ಉಪ್ಪು ಕಡಿಮೆ ತಿನ್ನಿ.

ಪಾಲಕದಲ್ಲಿ ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ವಿಟಮಿನ್, ಮಿನರಲ್ಸ್ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಆದರೆ, ಕಿಡ್ನಿ ಸ್ಟೋನ್ ಇದ್ದರೆ ಪಾಲಕ್ ತಿನ್ನಬೇಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್