Skin Care Tips: ಬೇಸಿಗೆಯಲ್ಲಿ ಚರ್ಮದ ಆರೈಕೆ ಮಾಡುವಾಗ ಈ 5 ತಪ್ಪುಗಳು ಮಾಡದಂತೆ ಗಮನ ಹರಿಸಿ

ಟ್ಯಾನಿಂಗ್, ಸನ್ ಬರ್ನ್ಸ್ ಮತ್ತು ಅಲರ್ಜಿ ಮುಕ್ತವಾದ ಆರೋಗ್ಯಕರ ಚರ್ಮವನ್ನು ಹೊಂದಲು, ಕೆಳಗೆ ತಿಳಿಸಲಾದ ತಪ್ಪುಗಳನ್ನು ಮಾಡಬೇಡಿ.

Skin Care Tips: ಬೇಸಿಗೆಯಲ್ಲಿ ಚರ್ಮದ ಆರೈಕೆ ಮಾಡುವಾಗ ಈ 5 ತಪ್ಪುಗಳು ಮಾಡದಂತೆ ಗಮನ ಹರಿಸಿ
Skin careImage Credit source: BeBeautiful
Follow us
ನಯನಾ ಎಸ್​ಪಿ
|

Updated on: Mar 09, 2023 | 1:14 PM

ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆ, ಡಿಹೈಡ್ರೇಷನ್ (Dehydration)ಮತ್ತು ಶಾಖದ ಕಾರಣದಿಂದಾಗಿ ಚರ್ಮವು ಹೆಚ್ಚಾಗಿ ಒಣಗುತ್ತದೆ. ಬೇಸಿಗೆಯಲ್ಲಿ ನಾವು ತ್ವಚೆಯನ್ನು ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ ಬೆವರುಸಾಲೆ, ಸನ್ ಬರ್ನ್ಸ್, ಟ್ಯಾನಿಂಗ್, ಮೊಡವೆ, ಮತ್ತು ಅಲರ್ಜಿಯಂತಹ ವಿವಿಧ ಪರಿಸ್ಥಿತಿಗಳು ರೂಪುಗೊಳ್ಳುತ್ತವೆ. ಡರ್ಮಟಾಲಜಿಸ್ಟ್‌ಗಳು (Dermatologist) ಸಾಮಾನ್ಯವಾಗಿ ಸನ್‌ಸ್ಕ್ರೀನ್ (Sunscreen) ಅನ್ನು ಬಳಸುವ ಬಗ್ಗೆ ಮಾತನಾಡುತ್ತಾರೆ, ದೀರ್ಘಾವಧಿಯಲ್ಲಿಯೂ ಚರ್ಮದ ಸಮಸ್ಯೆಗಳನ್ನು ತಪ್ಪಿಸಲು ಬೇಸಿಗೆಯಲ್ಲಿ ನಾವು ಚರ್ಮದ ಆರೈಕೆ ಮಾಡಬೇಕು. ಟ್ಯಾನಿಂಗ್, ಸನ್ ಬರ್ನ್ಸ್ ಮತ್ತು ಅಲರ್ಜಿ ಮುಕ್ತವಾದ ಆರೋಗ್ಯಕರ ಚರ್ಮವನ್ನು ಹೊಂದಲು, ಕೆಳಗೆ ತಿಳಿಸಲಾದ ತಪ್ಪುಗಳನ್ನು ಮಾಡಬೇಡಿ.

ಸನ್‌ಸ್ಕ್ರೀನ್ ಅನ್ನು ಬಳಸದೆ ಇರುವುದು

ವರ್ಷಗಳಿಂದ, ತಜ್ಞರು ಸೂರ್ಯನ ಹಾನಿಕಾರಕ UV ಕಿರಣಗಳಿಂದ ರಕ್ಷಣೆ ಪಡೆಯಲು ಜನರಿಗೆ ಸಹಾಯ ಮಾಡಲು ಬ್ರಾಡ್‌ಸ್ಪೆಕ್ಟ್ರಮ್ ಸನ್‌ಸ್ಕ್ರೀನ್‌ಗಳ ಬಳಕೆಯನ್ನು ಪ್ರತಿಪಾದಿಸಿದ್ದಾರೆ. ಅತಿಯಾದ ಸನ್ ಟ್ಯಾನಿಂಗ್ ಮತ್ತು ಕಲೆಗಳು ಚರ್ಮದ ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆಯಿದೆ.

3-4 ಸ್ಟಾರ್ ಇರುವ SPF (ಸನ್ ಪ್ರೊಟೆಕ್ಷನ್ ಫ್ಯಾಕ್ಟರ್) ಜೊತೆಗೆ ಸೂರ್ಯನ UVA ಮತ್ತು UVB ಕಿರಣಗಳಿಂದ ರಕ್ಷಿಸುವ ಬ್ರಾಡ್‌ಸ್ಪೆಕ್ಟ್ರಮ್ ಸನ್‌ಸ್ಕ್ರೀನ್ ಅನ್ನು ಬಳಸಬೇಕು. ಸಂಪೂರ್ಣ ರಕ್ಷಣೆ ಪಡೆಯಲು ಪ್ರತಿ 2-3 ಗಂಟೆಗಳಿಗೊಮ್ಮೆ ನೀವು ಸನ್‌ಸ್ಕ್ರೀನ್ ಅನ್ನು ಪುನಃ ಹಚ್ಚಬೇಕು ಎಂದು ಚರ್ಮರೋಗ ತಜ್ಞರು ಸಲಹೆ ನೀಡುತ್ತಾರೆ.

ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳದೆ ಇರುವುದು:

ಬೇಸಿಗೆಯಲ್ಲಿ ಮಾಯಿಶ್ಚರೈಸಿಂಗ್ ಅಥವಾ ಕ್ರೀಮ್ ಅನ್ನು ಬಳಸುವುದನ್ನು ತಪ್ಪಿಸಬಾರದು. ನೀವು ಎಣ್ಣೆಯುಕ್ತ ಚರ್ಮ ಅಥವಾ ಮೊಡವೆ ಪೀಡಿತ ಚರ್ಮವನ್ನು ಹೊಂದಿದ್ದರೂ ಸಹ, ಮಾಯಿಶ್ಚರೈಸರ್ ಹಚ್ಚುವುದು ಮುಖ್ಯ ಏಕೆಂದರೆ ಇದು ಚರ್ಮದಲ್ಲಿ ನೀರಿನ ಅಂಶವನ್ನು ಲಾಕ್ ಮಾಡುತ್ತದೆ ಮತ್ತು ಅದನ್ನು ಮೃದುವಾಗಿರಿಸುತ್ತದೆ. ತ್ವಚೆಯಲ್ಲಿ ತೇವಾಂಶದ ಕೊರತೆಯಿಂದಲೂ ಹೆಚ್ಚಿನ ಎಣ್ಣೆಯುಕ್ತತೆ ಉಂಟಾಗಬಹುದು. ಚರ್ಮವನ್ನು ಸರಿಯಾಗಿ ಸ್ವಚ್ಛಗೊಳಿಸಿ ತೇವಾಂಶವನ್ನು ಕಾಪಾಡಲು ಹೈಲುರಾನಿಕ್ ಆಮ್ಲ ಮತ್ತು ನಿಯಾಸಿನಾಮೈಡ್ನಂತಹ ಪದಾರ್ಥಗಳನ್ನು ಒಳಗೊಂಡಿರುವ ಹೈಡ್ರೇಟಿಂಗ್ ಮಾಯಿಶ್ಚರೈಸರ್ ಅನ್ನು ಬಳಸುವುದು ಸೂಕ್ತ.

ಭಾರೀ ಮೇಕ್ಅಪ್ ಧರಿಸುವುದು:

ನೀವು ಬಿಸಿಲಿನಲ್ಲಿ ಹೋಗುತ್ತಿದ್ದರೆ, ಭಾರೀ ಮೇಕ್ಅಪ್ ಧರಿಸುವುದು ಚರ್ಮವನ್ನು ಹಾಲು ಮಾಡುತ್ತದೆ. ಫೌಂಡೇಶನ್, ಕನ್ಸೀಲರ್ ಮತ್ತು ಬಹು ಪದರಗಳನ್ನು ಒಳಗೊಂಡ ಭಾರೀ ಮೇಕ್ಅಪ್ ರಂಧ್ರಗಳ ದಟ್ಟಣೆಗೆ ಕಾರಣವಾಗಬಹುದು. ಬದಲಾಗಿ, ನಿಮ್ಮ ಮುಖವನ್ನು ಹಾನಿಕಾರಕ ವಿಕಿರಣದಿಂದ ರಕ್ಷಿಸಲು ಟಿಂಟೆಡ್ ಸನ್‌ಸ್ಕ್ರೀನ್ ಅನ್ನು ಬಳಸಲು ಅನೇಕ ತಜ್ಞರು ಶಿಫಾರಸು ಮಾಡುತ್ತಾರೆ.

ಎಕ್ಸ್‌ಫೋಲಿಯೇಶನ್ ಮಾಡದೇ ಇರುವುದು:

ಎಕ್ಸ್‌ಫೋಲಿಯೇಶನ್ ಎನ್ನುವುದು ಚರ್ಮವು ಒಳಪಡುವ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಸತ್ತ ಚರ್ಮದ ಕೋಶಗಳು ಉದುರಿಹೋಗುತ್ತವೆ ಮತ್ತು ಹೊಸ ಕೋಶಗಳನ್ನು ತಯಾರಿಸಲಾಗುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು ಮುಖ್ಯವಾಗಿದೆ ಏಕೆಂದರೆ ಅವುಗಳ ಸಂಗ್ರಹವು ಮುಚ್ಚಿಹೋದ ರಂಧ್ರಗಳಿಗೆ ಕಾರಣವಾಗಬಹುದು. ಸ್ಯಾಲಿಸಿಲಿಕ್ ಆಸಿಡ್, ಗ್ಲೈಕೋಲಿಕ್ ಆಸಿಡ್, ಮ್ಯಾಂಡೆಲಿಕ್ ಆಸಿಡ್ ಅಥವಾ ಬೆನ್ಝಾಯ್ಲ್ ಪೆರಾಕ್ಸೈಡ್ನಂತಹ ಯಾವುದೇ ಎಫ್ಫೋಲಿಯೇಟಿಂಗ್ ಪದಾರ್ಥಗಳನ್ನು ಬಳಸುವ ಮೊದಲು ತಜ್ಞರ ಸಲಹೆ ಪಡೆಯಿರಿ.

ಇದನ್ನೂ ಓದಿ: ಕ್ಯಾರೆಟ್ ಜ್ಯೂಸ್ ಕುಡಿಯಿರಿ ಈ 5 ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ದೇಹವನ್ನು ಹೈಡ್ರೇಟ್ ಮಾಡಿಕೊಳ್ಳದೆ ಇರುವುದು:

ಬೇಸಿಗೆಯಲ್ಲಿ ಚರ್ಮವನ್ನು ಆರೋಗ್ಯಕರವಾಗಿಡಲು ಜಲಸಂಚಯನ ಅಥವಾ ಹೈಡ್ರೇಟ್ ಆಗಿರುವುದು ಪ್ರಮುಖ ಅಂಶವಾಗಿದೆ. ಹಣ್ಣುಗಳನ್ನು ತಿನ್ನುವುದು ಮತ್ತು ಪ್ರತಿದಿನ 2-3 ಲೀಟರ್ ನೀರನ್ನು ಕುಡಿಯುವುದು ನಿಮ್ಮನ್ನು ಹೈಡೆಟ್ ಆಗಿಸಿ ಆರೋಗ್ಯಕರವಾಗಿರಿಸುತ್ತದೆ. ಹೆಚ್ಚಿನ ನೀರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಶಾಖದ ಹೊಡೆತಗಳನ್ನು ತಡೆಯಬಹುದು.

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ