ಕೆಲ ಪ್ರಾಚೀನ ಆರೋಗ್ಯ ಸಲಹೆಗಳ ಬಗ್ಗೆ (health tips) ಆಲೋಚಿಸುವುದಾದರೆ ಸಂಸ್ಕೃತದಲ್ಲಿ 14 ಉಲ್ಲೇಖಗಳು ಇವೆ. ಒಂದೆರಡು ಉದಾಹರಣೆ ನೋಡುವುದಾದರೆ 1. ನ ಸ್ನಾನಮ್ ಆಚರೇತ್ ಭುಕ್ತ್ವಾ ಅಂದರೆ -ಆಹಾರದ ನಂತರ ಎಂದಿಗೂ ಸ್ನಾನ ಮಾಡಬೇಡಿ. 2. ಅತಿ ಸರ್ವತ್ರ ವರ್ಜಯೇತ್ ಅಂದರೆ -ಅತಿಯಾಗಿ ಸೇವಿಸುವ ಯಾವುದಾದರೂ, ಅದು ರುಚಿಯಾಗಿಯೇ ಇದ್ದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿರಲಿ ಅದು ದೇಹಕ್ಕೆ ಹಿತವಾಗಿರುತ್ತದೆ. 3. ನಾಸ್ತಿಮೂಲಂ ಅನೌಷಧಂ -ಅಂದರೆ ಯಾವುದೇ ಔಷಧೀಯ ಪ್ರಯೋಜನವಿಲ್ಲದ ಯಾವ ತರಕಾರಿಯೂ ಇಲ್ಲ. ಬನ್ನೀ ಮತ್ತೊಂದಿಷ್ಟು ಆಹಾರ ಆಚಾರ ವಿಚಾರಗಳನ್ನು ತಿಳಿಯೋಣ (overall well being of body, mind and soul).
1 ಅಜೀರಣೀ ಭೋಜನಂ ವಿಷಂ:
ಈ ಹಿಂದೆ ತೆಗೆದುಕೊಂಡ ಊಟವು ಜೀರ್ಣವಾಗದಿದ್ದರೆ ಮತ್ತೆ ಊಟ ಮಾಡುವುದು ವಿಷವನ್ನು ತೆಗೆದುಕೊಳ್ಳುವುದಕ್ಕೆ ಸಮಾನವಾಗಿರುತ್ತದೆ. ಹಸಿವು, ಹಿಂದಿನ ಆಹಾರ ಜೀರ್ಣವಾಗುವ ಒಂದು ಸಂಕೇತ.
2 ಅರ್ಧೋಗಹರಿ ನಿದ್ರಾ:
ಸರಿಯಾದ ನಿದ್ರೆ, ಅರ್ಧದಷ್ಟು ರೋಗಗಳನ್ನು ಗುಣಪಡಿಸುತ್ತದೆ.
3. ಮುದ್ಗಧಾಲಿ ಗಾಧವ್ಯಾಲಿ:
ಎಲ್ಲಾ ದ್ವಿದಳ ಧಾನ್ಯಗಳಲ್ಲಿ ಹೆಸರು ಬೇಳೆ ಉತ್ತಮವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇತರ ದ್ವಿದಳ ಧಾನ್ಯಗಳು ಯಾವುದೋ ಒಂದು ಅಡ್ಡ ಪರಿಣಾಮ ಹೊಂದಿರುತ್ತವೆ.
4. ಬಗ್ನಾಸ್ತಿ ಸಂಧಾನಕರೋ ರಸೋನಹ:
ಬೆಳ್ಳುಳ್ಳಿ ಮುರಿದ ಮೂಳೆಗಳನ್ನು ಸಹ ಸೇರಿಸುತ್ತದೆ.
5. ಅತಿ ಸರ್ವತ್ರ ವರ್ಜಯೇತ್:
ಅತಿಯಾಗಿ ಸೇವಿಸುವ ಯಾವುದಾದರೂ, ಅದು ರುಚಿಯಾಗಿದ್ದರೂ, ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿರಲಿ ಅದು ದೇಹಕ್ಕೆ ಹಿತವಾಗಿರುತ್ತದೆ.
6. ನಾಸ್ತಿಮೂಲಂ ಅನೌಷಧಂ:
ಯಾವುದೇ ಔಷಧೀಯ ಪ್ರಯೋಜನವಿಲ್ಲದ ಯಾವುದೇ ತರಕಾರಿ ಇಲ್ಲ.
7. ನಾ ವೈದ್ಯಃ ಪ್ರಭುರಾಯುಷ:
ಯಾವ ವೈದ್ಯರೂ ನಮ್ಮ ದೀರ್ಘಾಯುಷ್ಯದ ಅಧಿಪತಿ ಅಲ್ಲ. ವೈದ್ಯರಿಗೂ ಮಿತಿಗಳಿವೆ.
8. ಚಿಂತಾ ವ್ಯಾಧಿ ಪ್ರಕಾಶಯ:
ಚಿಂತೆ ಅನಾರೋಗ್ಯವನ್ನು ಉಲ್ಬಣಗೊಳಿಸುತ್ತದೆ.
9. ವ್ಯಾಯಮಾಶ್ಚ ಸನೈಹಿ ಸನೈಹಿ:
ಪ್ರತಿ ದಿನ ವ್ಯಾಯಾಮ ಮಾಡಿ. ಆದ್ರೆ ಯಾವುದೇ ವ್ಯಾಯಾಮವನ್ನು ನಿಧಾನವಾಗಿ ಮಾಡಿ. ವೇಗದ ವ್ಯಾಯಾಮ ದೇಹ ಮತ್ತು ಮನಸ್ಸಿಗೆ ಒಳ್ಳೆಯದಲ್ಲ.
10. ಅಜಾವತ್ ಚರ್ವಣಂ ಕುರ್ಯಾತ್:
ನಿಮ್ಮ ಆಹಾರವನ್ನು ಮೇಕೆಯಂತೆ ಅಗಿಯಿರಿ. ಆತುರದಿಂದ ಆಹಾರವನ್ನು ನುಂಗಬೇಡಿ. ಲಾಲಾರಸ ಜೀರ್ಣಕ್ರಿಯೆಯಲ್ಲಿ ಮೊದಲು ಸಹಾಯಕ್ಕೆ ಬರುತ್ತದೆ.
11. ಸ್ನಾನ ನಾಮ ಮನಃಪ್ರಸಾದನಕಾರಂ ದುಃಸ್ವಪ್ನ ವಿಧವಾಸನಮ್:
ಸ್ನಾನವು ಖಿನ್ನತೆಯನ್ನು ತೆಗೆದುಹಾಕುತ್ತದೆ. ಇದು ಕೆಟ್ಟ ಕನಸುಗಳನ್ನು ದೂರ ಮಾಡುತ್ತದೆ.
12. ನ ಸ್ನಾನಮ್ ಆಚರೇತ್ ಭುಕ್ತ್ವಾ:
ಆಹಾರದ ನಂತರ ಎಂದಿಗೂ ಸ್ನಾನ ಮಾಡಬೇಡಿ.
13. ನಾಸ್ತಿ ಮೇಘಸಮಂ ತೋಯಮ್:
ಶುದ್ಧತೆಯಲ್ಲಿ ಮಳೆನೀರಿಗೆ ಯಾವುದೂ ಸಮವಿಲ್ಲ.
14 ಅಜೀರ್ನೆ ಭೇಷಜಂ ವಾರಿ:
ಅಜೀರ್ಣವನ್ನು ಸರಳ ನೀರು ಕುಡಿಯುವ ಮೂಲಕ ಪರಿಹರಿಸಬಹುದು. (ಸಂಗ್ರಹ- ನಿತ್ಯಸತ್ಯ)
Also Read:
BJP Office Attacked: ತಮಿಳುನಾಡು ಬಿಜೆಪಿ ಕೇಂದ್ರ ಕಚೇರಿ ‘ಕಮಲಾಲಯಂ’ ಮೇಲೆ ಪೆಟ್ರೋಲ್ ಬಾಂಬ್ ದಾಳಿ
Also Read:
Human Age: ಅರವತ್ತಕ್ಕೆ ಅರಳು ಮರಳು ಎನ್ನುವುದು ಏಕೆ? ಏನಿದು 60ರ ಲೆಕ್ಕಾಚಾರ?