ಈಗೀಗ ಕ್ಯಾನ್ಸರ್ (Cancer) ರೋಗ ಬಹಳ ಹೆಚ್ಚಾಗುತ್ತಲೇ ಇದೆ. ಜಗತ್ತಿನಾದ್ಯಂತ ಸಾವನ್ನಪ್ಪುವವರ ಪೈಕಿ ಬಹುತೇಕರಿಗೆ ಕ್ಯಾನ್ಸರ್ ರೋಗವೇ ಕಾರಣವಾಗುತ್ತಿದೆ. ಹಾಗಂತ ಕ್ಯಾನ್ಸರ್‌ಗೆ ಔಷಧಿಯೇ ಇಲ್ಲವೆಂದಲ್ಲ. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಿದರೆ ಈ ರೋಗವನ್ನು ಸುಲಭವಾಗಿ ಗುಣಪಡಿಸಬಹುದು. ಕ್ಯಾನ್ಸರ್ ರೋಗಗಳ ಪೈಕಿ ಒಂದಾಗಿರುವ ಹೊಟ್ಟೆಯ ಕ್ಯಾನ್ಸರ್ (Stomach Cancer) ಅನ್ನು ಗ್ಯಾಸ್ಟ್ರಿಕ್ ಕ್ಯಾನ್ಸರ್ (Gastric Cancer) ಎಂದೂ ಕರೆಯುತ್ತಾರೆ. ಇದು ಹೊಟ್ಟೆಯೊಳಗಿನ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದಾಗಿ ರೂಪುಗೊಳ್ಳುವ ಸ್ಥಿತಿಯಾಗಿದೆ.
ಸಾಮಾನ್ಯವಾಗಿ, ಹೊಟ್ಟೆಯ ಅಸಹಜತೆಗಳು ಸಂಪೂರ್ಣ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಗ್ಯಾಸ್ಟ್ರೋಸೊಫೇಜಿಲ್ ಜಂಕ್ಷನ್‌ನಿಂದ ಹೊಟ್ಟೆಯ ಕ್ಯಾನ್ಸರ್ ಪ್ರಾರಂಭವಾಗುವ ಸಾಧ್ಯತೆ ಹೆಚ್ಚು. ಹೊಟ್ಟೆಯ ಕ್ಯಾನ್ಸರ್‌ನಲ್ಲಿ ಅದರ ಕಾರಣ ಮತ್ತು ದೇಹದಲ್ಲಿನ ಕ್ಯಾನ್ಸರ್ ಕೋಶಗಳ ಮತ್ತಷ್ಟು ಬೆಳವಣಿಗೆಗೆ ಸಂಬಂಧಿಸಿದಂತೆ ಆಹಾರವು ನಿರ್ಣಾಯಕ ಪಾತ್ರವನ್ನು ಹೊಂದಿದೆ.
ಫೋರ್ಟಿಸ್ ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿ ವಿಭಾಗದ ಸಹಾಯಕ ಸಲಹೆಗಾರ ಡಾ. ಹರ್ಷಿತ್ ಶಾ ಪ್ರಕಾರ, ಹೊಟ್ಟೆಯ ಕ್ಯಾನ್ಸರ್ ಚಿಕಿತ್ಸೆಯ ನಂತರ ಅಸಹಜ ಹೀರಿಕೊಳ್ಳುವಿಕೆಯಿಂದಾಗಿ, ಉತ್ತಮ ಗುಣಮಟ್ಟದ ಜೀವನವನ್ನು ರೂಢಿಸಿಕೊಳ್ಳಲು ಕೆಲವು ಮಾರ್ಪಾಡುಗಳ ಅಗತ್ಯವಿದೆ. ಹೊಟ್ಟೆಯ ಕ್ಯಾನ್ಸರ್ ಅಪಾಯದ ಮೇಲೆ ಆಹಾರವು ಹೇಗೆ ಪರಿಣಾಮ ಬೀರುತ್ತದೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ನಂತರ ಆಹಾರವು ಹೇಗೆ ಬದಲಾಗಬೇಕು ಎಂಬುದನ್ನು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: World Cancer Day 2023: ಕ್ಯಾನ್ಸರ್ ರೋಗದ ಬಗ್ಗೆ ಇರುವ ಈ ತಪ್ಪು ಕಲ್ಪನೆಗಳನ್ನು ಬಿಟ್ಟುಬಿಡಿ!
ಡಯಟ್ ಹೇಗೆ ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ?:
2. ಜನರು ತಮ್ಮ ಆಹಾರದಿಂದ ಎನ್-ನೈಟ್ರೋಸೊ ಸಂಯುಕ್ತಗಳಿಗೆ ಒಡ್ಡಿಕೊಳ್ಳುತ್ತಾರೆ. ಈ ಎನ್-ನೈಟ್ರೋಸೊ ಸಂಯುಕ್ತಗಳು ನೈಟ್ರೇಟ್‌ಗಳ ಸೇವನೆಯ ನಂತರ ಉತ್ಪತ್ತಿಯಾಗುತ್ತವೆ. ಇವು ತರಕಾರಿಗಳು ಮತ್ತು ಆಲೂಗಡ್ಡೆಗಳಂತಹ ಆಹಾರಗಳ ನೈಸರ್ಗಿಕ ಘಟಕಗಳಾಗಿವೆ. ಕೆಲವು ವಿಧದ ಚೀಸ್ ಮತ್ತು ಸಂಸ್ಕರಿಸಿದ ಮಾಂಸಗಳಲ್ಲಿ ಇವನ್ನು ಆಹಾರ ಸಂಯೋಜಕವಾಗಿ ಬಳಸಲಾಗುತ್ತದೆ.
3. ಹೆಚ್ಚಿನ pH ಪರಿಸರ ಮತ್ತು ಹೆಚ್ಚಿನ ಪ್ರಮಾಣದ ಗ್ಯಾಸ್ಟ್ರಿಕ್ ನೈಟ್ರೈಟ್ ಕೂಡ ಅಪಾಯಕಾರಿ.
4. ಹೊಟ್ಟೆಯ ಕ್ಯಾನ್ಸರ್ ಹೆಚ್ಚು ಕರಿದ ಆಹಾರ, ಸಂಸ್ಕರಿಸಿದ ಮಾಂಸ ಮತ್ತು ಸಮುದ್ರಾಹಾರ, ಮತ್ತು ಆಲ್ಕೋಹಾಲ್ ಮತ್ತು ಕಡಿಮೆ ತರಕಾರಿ, ಹಣ್ಣುಗಳು ಮತ್ತು ಹಾಲುಗಳನ್ನು ಸೇವಿಸುವುದರಿಂದಲೂ ಬರಬಹುದು.
ಹೊಟ್ಟೆಯ ಕ್ಯಾನ್ಸರ್ ಚಿಕಿತ್ಸೆಯ ನಂತರ ಮಾಡಿಕೊಳ್ಳಬೇಕಾದ 3 ಪ್ರಮುಖ ಆಹಾರದ ಬದಲಾವಣೆಗಳೆಂದರೆ,
– ಹೆಚ್ಚಿನ ಪ್ರೋಟೀನ್ ಮತ್ತು ಕೊಬ್ಬಿನಾಂಶವನ್ನು ಒಳಗೊಂಡಿರುವ ಆಹಾರವನ್ನು ಆಗಾಗ ತಿನ್ನುತ್ತಿರಿ. ದಿನಕ್ಕೆ 3 ಬಾರಿ ಊಟ-ತಿಂಡಿ ಮಾಡುವುದಕ್ಕಿಂತ ಅದನ್ನು 6 ಭಾಗಗಳಾಗಿ ವಿಂಗಡಿಸಿಕೊಳ್ಳಿ. ದ್ರವ ಮತ್ತು ಘನ ಪದಾರ್ಥಗಳನ್ನು ಪ್ರತ್ಯೇಕವಾಗಿ ಸೇವಿಸುವುದರಿಂದ ಕರುಳಿನ ಆರೋಗ್ಯದ ಸುಧಾರಣೆಯಾಗುತ್ತದೆ. ಆದಷ್ಟೂ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು. ಅವು ಡಂಪಿಂಗ್ ಸಿಂಡ್ರೋಮ್‌ಗೆ ಕಾರಣವಾಗಬಹುದು.
ಇದನ್ನೂ ಓದಿ: Cancer Awareness: ನಿಮ್ಮ ಈ ಅಭ್ಯಾಸಗಳು ಅನ್ನನಾಳದ ಕ್ಯಾನ್ಸರ್‌ಗೆ ಕಾರಣವಾಗಬಹುದು
– ಡಂಪಿಂಗ್ ಸಿಂಡ್ರೋಮ್ ಸಾಮಾನ್ಯವಾಗಿ ವಾಕರಿಕೆ, ದೌರ್ಬಲ್ಯ, ಬೆವರು, ಮೂರ್ಛೆ, ಮತ್ತು ಶಸ್ತ್ರಚಿಕಿತ್ಸೆಯ ನಂತರದ ಮೊದಲ ಕೆಲವು ವರ್ಷಗಳಲ್ಲಿ ತಿನ್ನುವ ನಂತರ ಅತಿಸಾರಕ್ಕೆ ಕಾರಣವಾಗುತ್ತದೆ. ಕಬ್ಬಿಣ, ವಿಟಮಿನ್ ಬಿ 12, ಎ, ಡಿ, ಇ ಮತ್ತು ಕೆ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕೊಬ್ಬಿನ ಅಸಮರ್ಪಕ ಕ್ರಿಯೆಯ ಪರಿಣಾಮವಾಗಿ ದುರ್ವಾಸನೆಯ ಮಲ ಮತ್ತು ಅತಿಸಾರ ಸಂಭವಿಸಬಹುದು.
– ಹೊಟ್ಟೆಯ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆಯ ನಂತರ ಹೆಚ್ಚು ಪ್ರಚಲಿತದಲ್ಲಿರುವ ಆಹಾರ ಸಮಸ್ಯೆಯೆಂದರೆ ಕಬ್ಬಿಣಾಂಶದ ಕೊರತೆ. ಇದು ರಕ್ತಹೀನತೆಗೆ ಕಾರಣವಾಗುತ್ತದೆ. ಕಬ್ಬಿಣದ ಕೊರತೆಯ ಚಿಕಿತ್ಸೆಯು ಪರಿಸ್ಥಿತಿಯು ಎಷ್ಟು ತೀವ್ರವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ದೇಹದ ಒಟ್ಟಾರೆ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು, ಜೀವಸತ್ವಗಳು ಮತ್ತು ಇತರ ಅಂಶಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸಿ. ಇದು ಹೊಟ್ಟೆಯ ಕ್ಯಾನ್ಸರ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
Published On - 5:36 pm, Thu, 9 February 23