AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cancer Awareness: ನಿಮ್ಮ ಈ ಅಭ್ಯಾಸಗಳು ಅನ್ನನಾಳದ ಕ್ಯಾನ್ಸರ್‌ಗೆ ಕಾರಣವಾಗಬಹುದು

ಸರಳವಾಗಿ ನೋಯುತ್ತಿರುವ ಗಂಟಲು ಮತ್ತು ಕೆಮ್ಮು ಸಾಮಾನ್ಯವಾಗಿ ದೊಡ್ಡ ವಿಷಯವಾಗಿರುವುದಿಲ್ಲ, ಆದರೆ ಇದು ದೀರ್ಘಕಾಲದವರೆಗೆ ಇದ್ದರೆ ನಿರ್ಲಕ್ಷ್ಯಿಸಬೇಡಿ. ನಿಮ್ಮ ಹತ್ತಿರದ ವೈದ್ಯರನ್ನು ಭೇಟಿ ಮಾಡಿ.

Cancer Awareness: ನಿಮ್ಮ ಈ ಅಭ್ಯಾಸಗಳು ಅನ್ನನಾಳದ ಕ್ಯಾನ್ಸರ್‌ಗೆ ಕಾರಣವಾಗಬಹುದು
ಅನ್ನನಾಳದ ಕ್ಯಾನ್ಸರ್ Image Credit source: Cancer Treatment Centers of America
TV9 Web
| Updated By: ಅಕ್ಷತಾ ವರ್ಕಾಡಿ|

Updated on: Feb 06, 2023 | 7:30 AM

Share

ಜಗತ್ತಿನಾದ್ಯಂತ ಇರುವ ಅತ್ಯಂತ ಭಯಾನಕ ಕಾಯಿಲೆಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಮಾನವನ ದೇಹಕ್ಕೆ ಬಾಧಿಸಬಹುದಾದ 20 ಕ್ಕೂ ಹೆಚ್ಚು ರೀತಿಯ ಕ್ಯಾನ್ಸರ್‌ಗಳಿವೆ. ರೋಗನಿರ್ಣಯ ಮತ್ತು ಸರಿಯಾದ ಚಿಕಿತ್ಸೆಯಿಲ್ಲದಿದ್ದರೆ ಈ ಮಾರಣಾಂತಿಕ ರೋಗವು ದೇಹದಲ್ಲಿ ತ್ವರಿತವಾಗಿ ಹರಡಬಹುದು ಮತ್ತು ಸಾವಿಗೂ ಕಾರಣವಾಗಬಹುದು. ವೈದ್ಯಕೀಯ ವಿಜ್ಞಾನದ ಪ್ರಗತಿಯೊಂದಿಗೆ, ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲು ಮತ್ತು ಸಕಾಲಿಕ ಚಿಕಿತ್ಸೆಯಿಂದ ಕ್ಯಾನ್ಸರ್‌ನ್ನು ಗುಣಪಡಿಸುವ ಮೂಲಕ ಜೀವಿತಾವಧಿಯನ್ನು ಹೆಚ್ಚಿಸಲು ವಿವಿಧ ಮಾರ್ಗಗಳಿವೆ. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಅಡ್ವಾನ್ಸ್ ಮೆಡಿಕಲ್ ಆಂಡ್ ಹೆಲ್ತ್ ರಿಸರ್ಚ್ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸುಮಾರು 47,000 ಹೊಸ ಪ್ರಕರಣಗಳು ವರದಿಯಾಗುತ್ತವೆ ಮತ್ತು ವರದಿಯಾದ ಸಾವುಗಳ ಸಂಖ್ಯೆ ಪ್ರತೀ ವರ್ಷ 42,000ಕ್ಕೆ ತಲುಪುತ್ತವೆ ಎಂದು ತಿಳಿಸಿದೆ.

ಗಂಟಲು ಅಥವಾ ಅನ್ನನಾಳದ ಕ್ಯಾನ್ಸರ್ ಎಂದರೇನು?

ಅನ್ನನಾಳದ ಕ್ಯಾನ್ಸರ್ ಅನ್ನನಾಳದ ಒಳಪದರದಲ್ಲಿ ಪ್ರಾರಂಭವಾಗುತ್ತದೆ. ಇದನ್ನು ಮ್ಯೂಕೋಸಾ ಎಂದು ಕರೆಯುತ್ತಾರೆ. ಅನ್ನನಾಳವು ಉದ್ದವಾದ, ಟೊಳ್ಳಾದ ಕೊಳವೆಯಾಗಿದ್ದು, ಅದು ಗಂಟಲಿನಿಂದ ಹೊಟ್ಟೆಗೆ ಚಲಿಸುತ್ತದೆ. ನುಂಗುವ ಆಹಾರವನ್ನು ಗಂಟಲಿನ ಹೊಟ್ಟೆಗೆ ಆಹಾರವನ್ನು ಸಾಗಿಸಲು ಸಹಾಯ ಮಾಡುತ್ತದೆ. ನಿಮ್ಮ ಧ್ವನಿ ಪೆಟ್ಟಿಗೆಯು ನಿಮ್ಮ ಗಂಟಲಿನ ಕೆಳಗೆ ಇರುತ್ತದೆ ಮತ್ತು ಗಂಟಲಿನ ಕ್ಯಾನ್ಸರ್‌ಗೆ ಗುರಿಯಾಗುತ್ತದೆ. ಧ್ವನಿ ಪೆಟ್ಟಿಗೆಯು ಕಾರ್ಟಿಲೆಜ್‌ನಿಂದ ಮಾಡಲ್ಪಟ್ಟಿದೆ ಮತ್ತು ನೀವು ಮಾತನಾಡುವಾಗ ಧ್ವನಿಯನ್ನು ಮಾಡಲು ಕಂಪಿಸುವ ಗಾಯನ ದಾರವನ್ನು ಒಳಗೊಂಡಿದೆ. ಗಂಟಲಿನ ಕ್ಯಾನ್ಸರ್‌ನ ಕೆಲವು ಸಾಮಾನ್ಯ ಲಕ್ಷಣಗಳು ದೀರ್ಘಕಾಲದ ಕೆಮ್ಮು, ಧ್ವನಿಯಲ್ಲಿ ಬದಲಾವಣೆ, ಆಹಾರವನ್ನು ನುಂಗಲು ತೊಂದರೆ, ಕಿವಿ ನೋವು, ವಾಸಿಯಾಗದ ಗಡ್ಡೆ ಅಥವಾ ಹುಣ್ಣು, ನೋಯುತ್ತಿರುವ ಗಂಟಲು ಇವೆಲ್ಲಾ ಈ ಕ್ಯಾನ್ಸರ್‌ನ ಲಕ್ಷಣಗಳಾಗಿವೆ.

ಗಂಟಲು ಕ್ಯಾನ್ಸರ್ ಅಪಾಯದ ಮಟ್ಟವನ್ನು ಹೆಚ್ಚಿಸುವ ದೈನಂದಿನ ಅಭ್ಯಾಸಗಳು:

ಗಂಟಲಿನ ಜೀವಕೋಶಗಳು ಅನುವಂಶಿಕ ರೂಪಾಂತರಗಳನ್ನು ಅಭಿವೃಧ್ಧಿಪಡಿಸುವುದರಿಂದ ಗಂಟಲಿನ ಕ್ಯಾನ್ಸರ್ ಸಂಭವಿಸಿದರೂ, ಅದರ ಕಾರಣಗಳು ಸ್ಪಷ್ಟವಾಗಿಲ್ಲ. ಅದಾಗ್ಯೂ ಅನೆಕ ಅಂಶಗಳು ಗಂಟಲಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ಆರೋಗ್ಯ ತಜ್ಞರು ಗುರುತಿಸಿದ್ದಾರೆ.

ನೀವು ಪ್ರತಿನಿತ್ಯ ಏನು ತಿನ್ನುತ್ತೀರಿ:

ನೀವು ಆರೋಗ್ಯಕರ ಆಹಾರವನ್ನು ಸೇವಿಸುವುದಾಗಿ ಹೇಳಿಕೊಂಡರೂ ಸಹ, ಅನೇಕ ಪದಾರ್ಥಗಳು ಅನ್ನನಾಳದ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಉಂಟುಮಾಡಬಹುದು. ಸೋಡಿಯಂ ಮತ್ತು ಸಂರಕ್ಷಕಗಳನ್ನು ಹೊಂದಿರುವ ಸಂಸ್ಕರಿಸಿದ, ಉಪ್ಪು ಮತ್ತು ಹೆಪ್ಪುಗಟ್ಟಿದ ಆಹಾರವನ್ನು ನಿಯಮಿತವಾಗಿ ಸೇವಿಸಿದರೆ ಕ್ಯಾನ್ಸರ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ತಾಜಾ ಮತ್ತು ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಅಥವಾ ಇತರ ಯಾವುದೇ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಆಹಾರಗಳಲ್ಲಿ ಖನಿಜಗಳು ಮತ್ತು ವಿಟಮಿನ್‌ಗಳು ಅಧಿಕವಾಗಿದ್ದು, ದೇಹದ ಆರೋಗ್ಯಕರ ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ನಿಮ್ಮ ಪಾದಗಳಲ್ಲಿ ಇಂತಹ ಲಕ್ಷಣಗಳಲ್ಲಿ ಕಂಡುಬಂದರೆ ನಿರ್ಲಕ್ಷ್ಯಿಸದಿರಿ

ಕುದಿಸಿದ ನೀರು ಅಥವಾ ಪಾನೀಯಗಳನ್ನು ಕುಡಿಯುವುದು:

ಅನೇಕ ಜನರು ವರ್ಷವಿಡೀ ಬಿಸಿಯಾದ ನೀರನ್ನು ಕುಡಿಯುತ್ತಾರೆ. ಇದಲ್ಲದೆ ಚಹಾ, ಕಾಫಿ, ಹಾಲು ಮತ್ತು ಸೂಪ್‌ನಂತಹ ಬಿಸಿಯಾದ ಪಾನೀಯಗಳನ್ನು ಸೇವನೆ ಮಾಡುತ್ತಾರೆ. ಇವುಗಳು ಗಂಟಲಿನ ಕ್ಯಾನ್ಸರ್‌ನ್ನು ಅಭಿವೃದ್ಧಿ ಪಡಿಸುತ್ತದೆ ಎಂದು ತಿಳಿದುಬಂದಿದೆ. ಆರೋಗ್ಯ ತಜ್ಞರ ಪ್ರಕಾರ ಬಿಸಿನೀರು ಅಥವಾ ಬಿಸಿಪಾನೀಯಗಳನ್ನು ಸೇವಿಸುವುದರಿಂದ ಅನ್ನನಾಳಗಳು ಹಾನಿಗೊಳಗಾಗುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಯಾವಾಗಲೂ ಕೋಣೆಯ ಉಷ್ಣಾಂಶದ ನೀರು ಮತ್ತು ಪಾನೀಯಗಳನ್ನು ಸೇವಿಸಬೇಕು.

ತಂಬಾಕು ಮತ್ತು ಮದ್ಯ ಸೇವನೆ:

ಧೂಮಪಾನದ ಮೂಲಕ ತಂಬಾಕಿನ ಬಳಕೆಯು ಹಲವು ರೀತಿಯ ಕ್ಯಾನ್ಸರ್‌ಗೆ ಕಾರಣವಾಗಬಹುದು. ವೈದ್ಯರು ಹೇಳುವಂತೆ ಧೂಮಪಾನ ಮಾಡುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುತ್ತದೆ. ತಂಬಾಕುಗಳನ್ನು ಜಗಿಯುವುದರಿಂದ ಬಾಯಿ, ಗಂಟಲು ಕ್ಯಾನ್ಸರ್ ಉಂಟಾಗುತ್ತದೆ. ಮದ್ಯ ಸೇವನೆಯು ಗಂಟಲಿನ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಬೊಜ್ಜು:

ಸೋಮಾರಿತನ, ಸಾಕಷ್ಟು ನಡೆಯದಿರುವುದು, ಆರೋಗ್ಯಕರ ಮತ್ತು ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಮತ್ತು ಚೆನ್ನಾಗಿ ನಿದ್ದೆ ಮಾಡದಿರುವುದು ಈ ರೀತಿಯ ದೈನಂದಿನ ಅಭ್ಯಾಸವು ಬೊಜ್ಜು ಮತ್ತು ಅಧಿಕ ತೂಕಕ್ಕೆ ಕಾರಣವಾಗಬಹುದು. ಇದು ಕ್ಯಾನ್ಸರ್ ಸೇರಿದಂತೆ ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು.

ವ್ಯಾಯಾಮ ಮಾಡದಿರುವುದು:

ನೀವು ಪ್ರತಿದಿನ ವ್ಯಾಯಾಮ ಮಾಡದಿದ್ದರೆ, ನೀವು ಆಲಸ್ಯಕ್ಕೆ ಗುರಿಯಾಗುತ್ತೀರಿ ಮತ್ತು ಮಾನಸಿಕವಾಗಿ ಕುಗ್ಗುತ್ತೀರಿ. ದೈಹಿಕ ಚಟುವಟಿಕೆಯು ನಿಮಗೆ ಸಕ್ರಿಯವಾಗಿರಲು, ಫಿಟ್ ಆಗಿರಲು ಮತ್ತು ರೋಗಮುಕ್ತವಾಗಿರಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ ಮಧ್ಯಮ ಪ್ರಮಾಣದ ದೈನಂದಿನ ವ್ಯಾಯಾಮವು ಅನ್ನನಾಳದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: