
ಹೊಗೆ ಸಂಕೇತಗಳು: ಸಿಗರೇಟ್ ಮತ್ತು ಬೀಡಿ ಸೇವನೆಯು ನಿಮ್ಮ ಜೀವವನ್ನು ಹೇಗೆ ಹೊಗೆಯಾಡಿಸಬಲ್ಲವು, ನಿಮ್ಮ ಆರೋಗ್ಯ ಮತ್ತು ಜೀವಿತಾವಧಿಯ ಮೇಲೆ ಹೇಗೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ಸಾದ್ಯಂತವಾಗಿ ತಿಳಿಯೋಣ. ಕ್ಲುಪ್ತವಾಗಿ ಹೇಳಬೇಕು ಅಂದರೆ ಧೂಮಪಾನಿಗಳು ಸ್ಮೋಕಿಂಗ್ ಮಾಡದವರಿಗಿಂತ 3 ಪಟ್ಟು ಬೇಗನೆ ಸಾಯುತ್ತಾರೆ. ಅಂದರೆ ಸುಮಾರು ಒಂದು ದಶಕದಷ್ಟು ತಮ್ಮ ಅಮೂಲ್ಯ ಜೀವಿತಾವಧಿಯನ್ನು ಕಳೆದುಕೊಳ್ಳುತ್ತಾರೆ. ಅದೃಷ್ಟವಶಾತ್, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಗಾಗ್ಗೆ ಜಾರಿಗೊಳಿಸಿರುವ ಕಠಿಣ ಕಾನೂನುಗಳಿಂದಾಗಿ ಸಿಗರೇಟ್ ಸೇವನೆಯು ಪ್ರಪಂಚದಾದ್ಯಂತ ಕ್ಷೀಣಿಸುತ್ತಿದೆ. ಇನ್ನು ಸ್ಮೋಕರುಗಳಿಗೆ ಹೆಚ್ಚು’ವರಿ’ಯಾಗಿ ಕಾಲಕಾಲಕ್ಕೆ ಹೆಚ್ಚು ಹೆಚ್ಚು ತೆರಿಗೆ ವಿಧಿಸುತ್ತಾ ಬಂದಿರುವುದರಿಂದ ಸಿಗರೇಟ್‌ಗಳ ಬೆಲೆ ನಿರಂತರವಾಗಿ ಏರುಗತಿಯಲ್ಲಿಯೇ ಇದೆ. ಸಿಗರೇಟ್ ಬೆಲೆ ಎಂದಿಗೂ ಕಮ್ಮಿಯಾಗಿಲ್ಲ. ಇದರ ಜೊತೆಗೆ ತಂಬಾಕು ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಯೂ ಕಾರಣೀಭೂತವಾಗಿವಾಗಿದೆ. ಇನ್ನು ಇ-ಸಿಗರೇಟ್‌ಗಳಂತಹ ಕಡಿಮೆ ಹಾನಿಕಾರಕ ಆಯ್ಕೆಗಳು ಸ್ಮೋಕಿಂಗ್ ದುರಭ್ಯಾಸ ಕಡಿಮೆ ಮಾಡಿಕೊಳ್ಳುವುದಕ್ಕೆ ಶಕ್ತ್ಯಾನುಸಾರ ಕೊಡುಗೆ ನೀಡುತ್ತಿದೆ. ಇಲ್ಲೊಂದು ಜಾಣ್ಮೆಯ ನುಡಿ ಹೇಳಬೇಕು ಅಂದರೆ ಜನರು, ವಿಶೇಷವಾಗಿ ಯುವಕರು, ಸಾಮಾನ್ಯವಾಗಿ ಗೆಳೆಯರ ಒತ್ತಡದಿಂದಾಗಿ, ಪರಿಸ್ಥಿತಿಗಳ ಒತ್ತಡದಿಂದಾಗಿ ಧೂಮಪಾನವನ್ನು ಪ್ರಾರಂಭಿಸುತ್ತಾರೆ. ಒಮ್ಮೆ ಆರಂಭಿಸಿದರೆ ನಿಲ್ಲಿಸುವುದು ಕಷ್ಟವಾಗುತ್ತದೆ. ತಂಬಾಕು ಧೂಮಪಾನ ಪ್ರಾರಂಭಿಸಿದ ನಂತರ ಅದನ್ನು ಬಿಟ್ಟುಬಿಡುವುದಕ್ಕೆ ಪ್ರಯತ್ನಿಸುವುದಕ್ಕಿಂತಾ ಎಂದಿಗೂ ಅದನ್ನು ಪ್ರಾರಂಭಿಸದಿರುವುದು ಉತ್ತಮ ಅನಿಸುತ್ತದೆ. ಈ ಹಿನ್ನೆಲೆಯಲ್ಲಿ ಸಿಗರೇಟ್ ಸೇದುವುದಕ್ಕೆ ಸಂಬಂಧಿಸಿದ ಕೆಲವು ಸರಳ ಆದರೆ ಗಂಭೀರ ವಿಷಯಗಳನ್ನು ಈ ಲೇಖನದಲ್ಲಿ ನೋಡೋಣ. ಸಿಗರೇಟ್ ಸೇದುವುದು ಏಕೆ ಹಾನಿಕಾರಕ? ಸಿಗರೇಟ್‌ಗಳಲ್ಲಿ ಬಳಸಲಾಗುವ ತಂಬಾಕು ಮತ್ತು ಇತರ ವಸ್ತುಗಳು ದೇಹಕ್ಕೆ ಹಾನಿಯನ್ನುಂಟುಮಾಡುತ್ತವೆ. ಅನಾರೋಗ್ಯ ಮತ್ತು ಕೊನೆಗೆ...
Published On - 2:23 pm, Thu, 16 May 24