ಬೇಸಿಗೆಯು (Summer) ಮಕ್ಕಳಿಗೆ ರಾಜಾ ಸಮಯವಾದ್ದರಿಂದ ಮಕ್ಕಳು ಬಹಳ ಉತ್ಸುಕರಾಗಿರುತ್ತಾರೆ. ಆಡುವುದು, ಓಡುವುದು ಇವೆಲ್ಲವೂ ಒಂದು ಕೈ ಹೆಚ್ಚೇ ಇರುತ್ತದೆ. ಇದರಿಂದ ಮಕ್ಕಳು ಕೈಗಳ ನೈರ್ಮಲ್ಯದ (Clean Hands) ಬಗ್ಗೆ ಗಮನ ಹರಿಸದಿರಬಹುದು ಮತ್ತು ಆದ್ದರಿಂದ ಸೋಂಕು (Diseases) ತಗಲುವ ಪ್ರಮಾಣ ಹೆಚ್ಚಿರುತ್ತದೆ. ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳು ಹೆಚ್ಚು ಮನೆಯಿಂದ ಹೊರಗೆ ಇರುವುದರಿಂದ, ಮಕ್ಕಳು ನಿರ್ಜಲೀಕರಣ (Dehydration), ಹೀಟ್ ಸ್ಟ್ರೋಕ್ (heat Stroke) ಮತ್ತು ಬೆವರು ಸಾಲೆಯಂತಹ ಶಾಖದ ಕಾಯಿಲೆಗಳ ಅಪಾಯವನ್ನು ಹೊಂದಿರುತ್ತಾರೆ. ಪೋಷಕರು ತಮ್ಮ ಮಕ್ಕಳು ಬೇಸಿಗೆಯಲ್ಲಿ ಏನು ಸೇವಿಸುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸಬೇಕು ಏಕೆಂದರೆ ಪೌಷ್ಟಿಕ ಆಹಾರ ಸೇವಿಸದೇ ಇದ್ದಾರೆ ಮಕ್ಕಳು ಅನಾರೋಗ್ಯದಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ. ಜಂಕ್ ಫುಡ್ ಮತ್ತು ಸಕ್ಕರೆ ತುಂಬಿದ ಉಪಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಚಿಕ್ಕ ಮಕ್ಕಳಲ್ಲಿ ಆಮ್ಲೀಯತೆ ಮತ್ತು ಮಲಬದ್ಧತೆ ಉಂಟಾಗುತ್ತದೆ.
“ಚಳಿಗಾಲದಂತೆಯೇ, ಬೇಸಿಗೆಯ ಋತುವಿನಲ್ಲಿಯೂ ಸಹ ಹಲವಾರು ಆರೋಗ್ಯ ಸಮಸ್ಯೆ ಕಾಡುತ್ತದೆ. ಪೋಷಕರು ಹೆಚ್ಚಿನ ಜಾಗರೂಕರಾಗಿರಬೇಕು ಮತ್ತು ತಮ್ಮ ಮಗುವಿನ ಆರೋಗ್ಯದ ಬಗ್ಗೆ ಗಮನ ಹರಿಸಬೇಕು” ಎಂದು ಖಾರ್ಘರ್‌ನ ಮದರ್‌ಹುಡ್ ಆಸ್ಪತ್ರೆಯ ನಿಯೋನಾಟಾಲಜಿಸ್ಟ್ ಮತ್ತು ಮಕ್ಕಳ ವೈದ್ಯರಾದ ಡಾ ಸುರೇಶ್ ಬಿರಾಜದಾರ್ ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ ಹೇಳಿದ್ದಾರೆ.
ಕಲುಷಿತ ನೀರನ್ನು ಕುಡಿಯುವುದರಿಂದ ನಿಮ್ಮ ಮಗುವಿನ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಇದರಿಂದ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಮಕ್ಕಳು ಟೈಫಾಯಿಡ್, ಅತಿಸಾರ, ಕಾಲರಾ, ಕಾಮಾಲೆ ಮತ್ತು ಭೇದಿಗೆ ಗುರಿಯಾಗುತ್ತಾರೆ. ರಜೆಯಲ್ಲಿ ಮಕ್ಕಳೊಂದಿಗೆ ಪ್ರಯಾಣಿಸುವಾಗ ಪಾಲಕರು ನೀರಿನ ಬಾಟಲಿಗಳನ್ನು ಕೊಂಡೊಯ್ಯಬೇಕು. ಅಲ್ಲದೆ, ಕುಡಿಯುವ ಮೊದಲು ನೀರನ್ನು ಕುದಿಸಲು ಪೋಷಕರು ಮರೆಯಬಾರದು.
ಇದರರ್ಥ ಕಾಂಜಂಕ್ಟಿವಾ ಉರಿಯೂತ. ಇದು ಕೆಂಪು, ತುರಿಕೆ ಮತ್ತು ಕಣ್ಣಿನ ಉರಿಯೂತವನ್ನು ಉಂಟುಮಾಡಬಹುದು. ಹೀಗಾದಲ್ಲಿ ವೈದ್ಯರು ಸೂಚಿಸಿದ ಐ ಡ್ರಾಪ್ಸ್ ಮಾತ್ರ ಹಾಕಿ. ಕಾಂಜಂಕ್ಟಿವಿಟಿಸ್ ಸಾಂಕ್ರಾಮಿಕವಾಗಿರುವುದರಿಂದ ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ ಅಥವಾ ಯಾರೊಂದಿಗೂ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳಬೇಡಿ.
ಬೇಸಿಗೆಯಲ್ಲಿ ಮಕ್ಕಳು ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಇದು ಗಂಟಲಿನ ದಟ್ಟಣೆಗೆ ಕಾರಣವಾಗಬಹುದು. ಈ ಪದಾರ್ಥಗಳನ್ನು ತಿನ್ನುವಲ್ಲಿ ಮಿತವಾಗಿರಲು ಸಲಹೆ ನೀಡಲಾಗುತ್ತದೆ. ಹಾಗಾಗಿ ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ನೀಡುವುದು ಆರೋಗ್ಯಕ್ಕೆ ಉತ್ತಮ.
ಇದು ಮೂತ್ರಪಿಂಡಗಳು, ಮೂತ್ರನಾಳಗಳು, ಮೂತ್ರಕೋಶ ಸೇರಿದಂತೆ ನಿಮ್ಮ ಮೂತ್ರದ ವ್ಯವಸ್ಥೆಯ ಯಾವುದೇ ಭಾಗದಲ್ಲಿ ಸೋಂಕು ಹರಡುವುದು. ಮಗು ಸಾಕಷ್ಟು ನೀರು ಕುಡಿಯದ ಕಾರಣ ಬೇಸಿಗೆಯಲ್ಲಿ ಮಕ್ಕಳಲ್ಲಿ ಯುಟಿಐ ಪ್ರಕರಣಗಳು ಹೆಚ್ಚಾಗಿ ಹೆಚ್ಚಾಗುತ್ತವೆ. ಮಗು ಉತ್ತಮ ವೈಯಕ್ತಿಕ ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸುತ್ತಿದೆಯೇ ಎಂದು ಪೋಷಕರು ನೋಡಿಕೊಳ್ಳಬೇಕು.
ಇದನ್ನೂ ಓದಿ: ಬಿಸಿ ಬಿಸಿ ಚಹಾ, ಕಾಫಿ ಕುಡಿಯುವ ಅಭ್ಯಾಸವಿದೆಯೇ, ಅನ್ನನಾಳದ ಕ್ಯಾನ್ಸರ್ ಬರಬಹುದು
ಕಲುಷಿತ ಆಹಾರ ಅಥವಾ ನೀರಿನಿಂದ ಬೇಸಿಗೆಯಲ್ಲಿ ಇದು ಸಾಮಾನ್ಯ ಅಂಟಿಕೊಳ್ಳುವ ಕಾಯಿಲೆ. ಬೆಚ್ಚಗಿನ ವಾತಾವರಣವು ಆಹಾರವನ್ನು ಕಲುಷಿತಗೊಳಿಸುವ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ. ಮಗು ಹೊಟ್ಟೆ ನೋವು, ವಾಕರಿಕೆ, ಅತಿಸಾರ ಅಥವಾ ವಾಂತಿ ಮುಂತಾದ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಪ್ರದರ್ಶಿಸಬಹುದು. ಆದ್ದರಿಂದ, ರಸ್ತೆ ಬದಿಯ ಆಹಾರ ಅಥವಾ ಬೇಯಿಸದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
ಇದರ ಹೊರತಾಗಿ ಬೇಸಿಗೆಯಲ್ಲಿ ಮಕ್ಕಳು, ನಿರ್ಜಲೀಕರಣ, ಹೀಟ್ ಸ್ಟ್ರೋಕ್, ಬೆವರು ಸಾಲೆಯಂತಹ ರೋಗಗಳನ್ನು ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ.