Health Tips: ರಕ್ತದಲ್ಲಿ ಕಡಿಮೆ ಇರುವ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯಕವಾಗುವ ಜ್ಯೂಸ್​ಗಳು

ನಿಮ್ಮ ಆಹಾರದಲ್ಲಿ ಕಬ್ಬಿಣದ ಪೋಷಕಾಂಶಗಳು ಇಲ್ಲದಿದ್ದರೆ ದೇಹದಲ್ಲಿ ರಕ್ತಹೀನತೆಯ ಕೊರತೆಯ ಎದುರಾಗಲಿದೆ. ಇದರರ್ಥ ಹಿಮೋಗ್ಲೋಬಿನ್ ಕಡಿಮೆ ಇದೆ ಎಂದು. ಅಂತಹ ಪರಿಸ್ಥಿತಿಯಲ್ಲಿ, ಕಬ್ಬಿಣಾಂಶ ಭರಿತ ಪಾನೀಯಗಳನ್ನು ಸೇವಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ.

Rakesh Nayak Manchi
|

Updated on: Apr 02, 2023 | 7:30 AM

Healthy Juices that help in increasing haemoglobin in the blood health tips in kannada

ನಿಮ್ಮ ಆಹಾರದಲ್ಲಿ ಕಬ್ಬಿಣದ ಪೋಷಕಾಂಶಗಳು ಇಲ್ಲದಿದ್ದರೆ ದೇಹದಲ್ಲಿ ರಕ್ತಹೀನತೆಯ ಕೊರತೆಯ ಎದುರಾಗಲಿದೆ. ಇದರರ್ಥ ಹಿಮೋಗ್ಲೋಬಿನ್ ಕಡಿಮೆ ಇದೆ ಎಂದರ್ಥ. ಅಂತಹ ಪರಿಸ್ಥಿತಿಯಲ್ಲಿ, ಕಬ್ಬಿಣಾಂಶ ಭರಿತ ಪಾನೀಯಗಳನ್ನು ಸೇವಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಇದು ರಕ್ತಹೀನತೆಯ ಕೊರತೆಯನ್ನು ನೀಗಿಸುತ್ತದೆ ಮತ್ತು ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ.

1 / 8
Healthy Juices that help in increasing haemoglobin in the blood health tips in kannada

ಹಾಗಿದ್ದರೆ ದಿನಕ್ಕೆ ಎಷ್ಟು ಕಬ್ಬಿಣಣಾಂಶದ ಅಗತ್ಯವಿದೆ? ರಕ್ತಹೀನತೆಯಿಂದ ಬಳಲುತ್ತಿರುವ ಜನರು ಪ್ರತಿದಿನ 100-200 ಮಿ.ಗ್ರಾಂ ಕಬ್ಬಿಣಾಂಶ ದೇಹಕ್ಕೆ ಸೇರಬೇಕು. ಇಲ್ಲಿ ಉಲ್ಲೇಖಿಸಿರುವ ಕೆಲವು ಆರೋಗ್ಯಕರ ಜ್ಯೂಸ್​ಗಳನ್ನು ಸೇವಿಸುವ ಮೂಲಕ ನೀವು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಬಹುದು.

2 / 8
Healthy Juices that help in increasing haemoglobin in the blood health tips in kannada

ಇದಕ್ಕೂ ಮುನ್ನ ಹಿಮೋಗ್ಲೋಬಿನ್ ಕಡಿಮೆಯಾದರೆ ಏನಾಗುತ್ತದೆ ಎಂದು ತಿಳಿಯೋಣ. ದೇಹದಲ್ಲಿ ರಕ್ತದ ಕೊರತೆಯು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ರಕ್ತಹೀನತೆ, ಗ್ಯಾಸ್, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವಂತಹ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಆರೋಗ್ಯ ತಜ್ಞರ ಪ್ರಕಾರ, ಹಿಮೋಗ್ಲೋಬಿನ್ ಹೆಚ್ಚಿಸಲು ಈ 5 ಕಬ್ಬಿಣಾಂಶವಿರುವ ಪಾನೀಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

3 / 8
Healthy Juices that help in increasing haemoglobin in the blood health tips in kannada

ಬೀಟ್ ರೂಟ್ ಜ್ಯೂಸ್: ಬೀಟ್ ರೂಟ್ ನಮ್ಮ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಕಬ್ಬಿಣದ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಬೀಟ್ರೂಟ್ ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಮ್ಯಾಂಗನೀಸ್ನಲ್ಲಿ ಸಮೃದ್ಧವಾಗಿದೆ. ಬೀಟ್ರೂಟ್ ರಸವು ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ. ಇದನ್ನು ಕುಡಿಯುವುದರಿಂದ ಕೆಂಪು ರಕ್ತ ಕಣಗಳು ಹೆಚ್ಚುತ್ತವೆ. ಆಮ್ಲಜನಕದ ಪೂರೈಕೆಯೂ ಉತ್ತಮವಾಗಿದೆ.

4 / 8
Healthy Juices that help in increasing haemoglobin in the blood health tips in kannada

ತರಕಾರಿ ಜ್ಯೂಸ್ : ನಾರಿನಂಶ ಮತ್ತು ಕಬ್ಬಿಣದಂಶವಿರುವ ತರಕಾರಿ ಜ್ಯೂಸ್ ಕೂಡ ಕುಡಿಯಬಹುದು. ಈ ಕಾರಣದಿಂದಾಗಿ ಕಬ್ಬಿಣದ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. 2 ಕಪ್ ಪಾಲಕ್, 1 ಕಪ್ ಸೋರೆಕಾಯಿ, 1/4 ಕಪ್ ಆಮ್ಲಾ, 1 ಟೀಚಮಚ ಜೇನುತುಪ್ಪ ಮತ್ತು 2 ಕಪ್ ತಣ್ಣೀರನ್ನು ಬೆರೆಸಿ ಜ್ಯೂಸ್ ಮಾಡಿ ಮತ್ತು ಪ್ರತಿದಿನ ಸೇವಿಸಬಹುದು.

5 / 8
Healthy Juices that help in increasing haemoglobin in the blood health tips in kannada

ಪಾಲಕ್-ಪುದೀನ ರಸ: ಕಬ್ಬಿಣದ ಕೊರತೆಯನ್ನು ಸರಿದೂಗಿಸಲು ನೀವು ನಿಮ್ಮ ಆಹಾರದಲ್ಲಿ ಪಾಲಕ್ ಮತ್ತು ಪುದೀನ ರಸವನ್ನು ಸೇರಿಸಿಕೊಳ್ಳಬಹುದು. 4 ಕಪ್ ಪಾಲಕ್ ಸೊಪ್ಪಿಗೆ 1 ಕಪ್ ಪುದೀನ ಸೊಪ್ಪು ಮತ್ತು ನೀರು ಸೇರಿಸಿ ಚೆನ್ನಾಗಿ ರುಬ್ಬಿ ಮಿಶ್ರಣವನ್ನು ಫಿಲ್ಟರ್ ಮಾಡಿ 1 ಚಮಚ ನಿಂಬೆ ರಸ, 1 ಚಮಚ ಜೀರಿಗೆ ಪುಡಿ ಹಾಕಿ ಐಸ್ ಕ್ಯೂಬ್ ಸೇರಿಸಿ ಕುಡಿಯಬಹುದು. ಇದು ರಕ್ತವನ್ನು ಹೆಚ್ಚಿಸುವುದು ಮಾತ್ರವಲ್ಲದೆ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.

6 / 8
Healthy Juices that help in increasing haemoglobin in the blood health tips in kannada

ಕಪ್ಪು ದ್ರಾಕ್ಷಿ ರಸ: ಕಪ್ಪು ದ್ರಾಕ್ಷಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುವಲ್ಲಿ ಅದ್ಭುತವಾಗಿ ಪರಿಣಾಮಕಾರಿಯಾಗಿದೆ. ಕಪ್ಪು ದ್ರಾಕ್ಷಿ ರಸವು ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶವೂ ನಿಯಂತ್ರಣದಲ್ಲಿರಲಿದೆ. ಒಂದು ಕಪ್ ಕಪ್ಪು ದ್ರಾಕ್ಷಿಗಳಿಗೆ 1 ಕಪ್ ನೀರು, 1 ಚಮಚ ಜೇನುತುಪ್ಪ, 2 ಚಮಚ ಸಕ್ಕರೆ ಸೇರಿಸಿ ಐಸ್ ಕ್ಯೂಬ್ ಸೇರಿಸಿ ಬ್ಲೆಂಡ್ ಮಾಡಿ ಕುಡಿಯಬಹುದು.

7 / 8
Healthy Juices that help in increasing haemoglobin in the blood health tips in kannada

ಕ್ಯಾರೆಟ್ ಜ್ಯೂಸ್: ಕ್ಯಾರೆಟ್ ಜ್ಯೂಸ್ ತುಂಬಾ ರುಚಿಕರವಾಗಿರುತ್ತದೆ. ಫೋಲಿಕ್ ಆಮ್ಲ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಫೈಬರ್, ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಕೂಡ ದೊಡ್ಡ ಪ್ರಮಾಣದಲ್ಲಿ ಇದರಿಂದ ಸಿಗಲಿದೆ. ಇದು ನಿಮ್ಮ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

8 / 8
Follow us