Kannada News Health Tamarind Benefits : Did You Know About These Tamarind Benefits? Health Care Tips in Kannada
Health Care Tips in Kannada : ಅಡುಗೆಯ ರುಚಿಯನ್ನು ಹೆಚ್ಚಿಸುವ ಹುಣಸೆ ಹಣ್ಣು ಗಾಯಕ್ಕೆ ಹೇಗೆ ಪ್ರಯೋಜನಕಾರಿ?
ಭಾರತೀಯ ಅಡುಗೆ ಪದ್ಧತಿಯಲ್ಲಿ ಹುಣಸೆ ಹಣ್ಣಿಗೆ ವಿಶೇಷ ಸ್ಥಾನವಿದೆ. ಹೀಗಾಗಿ ಈ ಹುಣಸೆಹಣ್ಣು ಅಡುಗೆಯ ರುಚಿಯಷ್ಟೇ ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಪೋಷಕಾಂಶಗಳು ಹೇರಳವಾಗಿದ್ದು ಹೃದಯದ ಆರೋಗ್ಯದಿಂದ ಹಿಡಿದು ಗಾಯವನ್ನು ಗುಣಪಡಿಸಲು ಸಹಾಯಕವಾಗಿದೆ. ಈ ಹುಣಸೆಯು ಅಡುಗೆಗೆ ಮಾತ್ರ ಉಪಯುಕ್ತವಾಗಿರದೇ, ಆರೋಗ್ಯದ ಭಾಗವಾಗಿದೆ.
Follow us on
ಅಡುಗೆಯು ಸಂಪೂರ್ಣವಾಗಿರಬೇಕಾದರೆ ಉಪ್ಪು, ಹುಳಿ, ಖಾರ ಈ ಮೂರು ಅಂಶಗಳು ಸಮಪ್ರಮಾಣದಲ್ಲಿ ಸೇರಿರಲೇಬೇಕು. ಹೀಗಾಗಿ ಈ ಹುಳಿ ಹಾಗೂ ಸಿಹಿ ಮಿಶ್ರಿತ ಹುಣಸೆ ಹಣ್ಣನ್ನು ಅಡುಗೆಯ ರುಚಿ ಹೆಚ್ಚಿಸಲು ಬಳಸಲಾಗುತ್ತದೆ. ಈ ಹುಣಸೆಯಲ್ಲಿ ವಿಶೇಷವಾಗಿ ವಿಟಮಿನ್ ಸಿ, ಫ್ಲೇವನಾಯ್ಡ್, ಕ್ಯಾರೋಟಿನ್, ವಿಟಮಿನ್ ಬಿ ಕಾಂಪ್ಲೆಕ್ಸ್ ಹೇರಳವಾಗಿದ್ದು, ಇದರ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಹುಣಸೆ ಹಣ್ಣಿನ ರಸವು ಸಂಧಿನೋವು, ಮೊಣಕಾಲು ನೋವು ಸೇರಿದಂತೆ ನೋವುಗಳನ್ನು ನಿವಾರಿಸುತ್ತದೆ.
ಹುಣಸೆ ಹಣ್ಣು ಗಂಟಲು ನೋವು ಅಥವಾ ಗಂಟಲು ಹುಣ್ಣನ್ನು ಕಡಿಮೆ ಮಾಡುತ್ತದೆ.
ಆಂಟಿವೈರಲ್ ಏಜೆಂಟ್, ಆ್ಯಂಟಿ ಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ. ಹೀಗಾಗಿ ಗಾಯಕ್ಕೆ ಹುಣಸೆ ಹಣ್ಣನ್ನು ಲೇಪಿಸುವುದರಿಂದ ಬಹುಬೇಗ ಗುಣಮುಖವಾಗುತ್ತದೆ.
ಹುಣಸೆ ಹಣ್ಣಿನಲ್ಲಿ ಫೈಬರ್ ಅಂಶವು ಹೇರಳವಾಗಿದ್ದು, ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹುಣಸೆ ಹಣ್ಣು ರಕ್ತ ಕಣಗಳ ಉತ್ಪಾದನೆ ಹೆಚ್ಚಿಸಿ ರಕ್ತಹೀನತೆ ಸಮಸ್ಯೆಯನ್ನು ಗುಣ ಪಡಿಸುತ್ತದೆ.
ಹುಣಸೆ ಹಣ್ಣಿನ ಬೀಜದಲ್ಲಿ ಉರಿಯೂತದ ಗುಣಲಕ್ಷಣಗಳಿದ್ದು, ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸಿ ಮಧುಮೇಹವನ್ನು ನಿಯಂತ್ರಿಸುತ್ತದೆ.
ಹುಣಸೆಹಣ್ಣು ಚರ್ಮದ ಸೋಂಕು ಹಾಗೂ ಯುವಿ ಕಿರಣಗಳಿಂದ ಉಂಟಾಗುವ ಹಾನಿಯನ್ನು ತಡೆದು ಚರ್ಮವನ್ನು ರಕ್ಷಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ